ಸದಸ್ಯ:ಶೋಭ.ಎಸ್.ಎಂ/sandbox
ತಾರಸಿ ಉದ್ಯಾನ
ಬದಲಾಯಿಸಿಕಟ್ಟಡದ ಮೇಲೆ ಬೆಳೆಸುವ ತೋಟಕ್ಕೆ 'ತಾರಸಿ ಉದ್ಯಾನ' ಎನ್ನುತ್ತೇವೆ. ತಾರಸಿ ಉದ್ಯಾನಕ್ಕೆ 'ಹಸಿರು ಛಾವಣಿ', 'ಸಾವಯವ ಉದ್ಯಾನ', ಸಜೀವ ಗೋಡೆಗಳು (Living Walls), ಮಣ್ಣುರಹಿತ ಕೃಷಿ ಎನ್ನುತ್ತಾರೆ. ತಾರಸಿ ಉದ್ಯಾನವು ಕೇವಲ ಕಟ್ಟಡದ ಸೌಂದರ್ಯವನ್ನು ವೃದ್ಧಿಸುವುದಷ್ಟೇ ಅಲ್ಲದೆ ನಮಗೆ ಬೇಕಾದ ತರಕಾರಿಗಳು, ಉಷ್ಣನಿಯಂತ್ರಣ, ಚಿಕ್ಕಪುಟ್ಟ ಜೀವಿಗಳ ವಾಸಸ್ಥಾನವಾಗಿಯೂ ಬಹಳ ಉಪಯುಕ್ತವಾಗಿದೆ.
ತಾರಸಿ ಉದ್ಯಾನವನ್ನು ಸಾಮಾನ್ಯವಾಗಿ ಹಸಿರು ಛಾವಣಿ, ಜಲಕೃಷಿ, ವಾಯುಕೃಷಿ ಮುಂತಾದ ವಿಧಾನಗಳಿಂದ ಮಾಡಬಹುದು.
ಇತಿಹಾಸ
ಬದಲಾಯಿಸಿಅನಾದಿ ಕಾಲದಿಂದಲೂ ಮಾನವನು ಕಟ್ಟಡಗಳ ಮೇಲೆ ಉದ್ಯಾನಗಳನ್ನು ನಿರ್ಮಿಸುತ್ತಿದ್ದಾನೆ. ಪ್ರಾಚೀನ ಮೆಸೆಪುಟೋಮಿಯಾದ ಜುಗ್ಗಾರ್ಟ್ಸ್ ನ( ಕ್ರಿ.ಪೂ ೪ನೇ ಶತಮಾನದಿಂದ ಕ್ರಿ.ಪೂ ೬೦೦) ಛಾವಣಿಗಳಲ್ಲಿ ಪೊದೆಗಳನ್ನು ಹಾಗೂ ಸಸ್ಯಗಳನ್ನು ಬೆಳೆಸುತ್ತಿದ್ದರು[೧].ಬ್ಯಾಬಿಲೋನಿಯಾದ 'ತೂಗು ತೋಟಗಳು ( Hanging Gardens) ತಾರಸಿ ಉದ್ಯಾನಕ್ಕೆ ಒಂದು ಉತ್ತಮ ಉದಾಹರಣೆ.
ತಾರಸಿ ಉದ್ಯಾನದ ಉಪಯೋಗಗಳು
ಬದಲಾಯಿಸಿತಾರಸಿ ಉದ್ಯಾನಗಳು ಹಲವು ರೀತಿಯಲ್ಲಿ ಉಪಯುಕ್ತವಾಗಿವೆ.[೨]
- ಕಟ್ಟಡದ ಸೌಂದರ್ಯವಧನೆ: ಹಸಿರು ಛಾವಣಿಗಳು ಮತ್ತು ತಾರಸಿ ಉದ್ಯಾನಗಳು ಮನೆಯನ್ನು ಸುಂದರವನ್ನಾಗಿರಿಸುತ್ತವೆ[೩]ಎ
ಮನೆಯ ತಾರಸಿ, ಸಜ್ಜಾಗಳಲ್ಲಿ ಸಸ್ಯಗಳನ್ನು ಬೆಳೆಸಿದರೆ ಮನೆಯು ಸುಂದರವಾಗಿ ಕಾಣುವುದಷ್ಟೇ ಅಲ್ಲದೆ ತಂಪಾಗಿಡುತ್ತವೆ. ಮನೆಯ ಬಾಲ್ಕನಿಗಳಲ್ಲಿ ಕುಂಡಗಳಲ್ಲಿ ಅಲಂಕಾರಿಕ ಸಸ್ಯಗಳು, ಹೂಗಿಡಗಳನ್ನು ಬೆಳೆಸಬಹುದು.
- ಹಸಿರು ಛಾವಣಿಗಳು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಂಡು ವಾಯುಮಾಲಿನ್ಯವನ್ನು ತಡೆಗಟ್ಟುತ್ತವೆ
ಹಸಿರು ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಆಹಾರವನ್ನು ತಯಾರಿಸುತ್ತವೆ. ಈ ಕ್ರಿಯೆಯಲ್ಲಿ ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸ್ಯಡ್ ಅನ್ನು ಬಳಸಿಕೊಂಡು ಆಮ್ಲಜನಕವನ್ನು ಬಿಡುಗಡೆಮಾಡುತ್ತವೆ.
- ತಾರಸಿ ಉದ್ಯಾನಗಳು ಮನೆಯನ್ನು ಬೇಸಿಗೆ ಕಾಲದಲ್ಲಿ ತಂಪಾಗಿರಿಸುತ್ತವೆ.
ಸಸ್ಯಗಳು ಬೆಳೆಯಲು ನೀರನ್ನು ಬೇರಿನಲ್ಲಿ ಹಿಡಿದಿಟ್ಟುಕೊಳ್ಳುವುದರಿಂದ ತಾರಸಿಯು ತಂಪಾಗಿರುತ್ತದೆ. ಸೂರ್ಯನ ಬಿಸಿಲು ನೇರವಾಗಿ ತಾರಸಿಯ ಮೇಲೆ ಬೀಳುವುದಿಲ್ಲ. ಈ ಎಲ್ಲಾ ಕಾರಣಗಳಿಂದ ತಾರಸಿ ಉದ್ಯಾನ ಇರುವ ಮನೆಯು ಬೇಸಿಗೆ ಕಾಲದಲ್ಲಿ ತಂಪಾಗಿರುತ್ತದೆ.
- ಮನೆಗೆಅವಶ್ಯಕವಾಗಿರುವ ಸೊಪ್ಪು ಹಾಗೂ ತರಕಾರಿಗಳನ್ನು ಬೆಳೆಸಬಹುದು
ತಾರಸಿ ಉದ್ಯಾನದಲ್ಲಿ, ಮನೆಯ ಬಾಲ್ಕನಿಗಳಲ್ಲಿ ಕುಂಡಗಳನ್ನಿಟ್ಟು ಮನೆಗೆ ಬೇಕಅದ ಸೊಪ್ಪುಗಳು ಹಾಗೂ ತರಕಾರಿಗಳನ್ನು ಬೆಳೆಯಬಹುದು. ಇದರಿಂದ ಸಾವಯವ- ಯಾವುದೇ ರಾಸಾಯನಿಕವನ್ನು ಬಳಸದೆ ಬೆಳೆದ- ತರಕಾರಿಗಳನ್ನು ಬಳಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು
- ತಾರಸಿ ಉದ್ಯಾನಗಳು' ಹಸಿರುಮನೆ ಪರಿಣಾಮ' ಕ್ರಿಯೆಯಿಂದ ಪರಿಸರದಲ್ಲಿ ತಾಪಮಾನವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿವೆ
- ಅಣಬೆಕೃಷಿಯ ಮೂಲಕ ಹಣ ಸಂಪಾದನೆಗೂ ದಾರಿಯಾಗುತ್ತದೆ[೪]