ಸದಸ್ಯ:ವೈಷ್ಣವಿ/sandbox
ಮಳೆಗಾಲದಲ್ಲಿ ಕಂಡು ಬರುವ ಮೂತ್ರಪಿಂಡದ ಕಾಯಿಲೆಗಳು
ಮಳೆಗಾಲದಲ್ಲಿ ಕಾಯಿಲೆಗಳು ಹೆಚ್ಚುವಂತೆ, ಮೂತ್ರಪಿಂಡಗಳ ಸೋಂಕು ಕೂಡ ಹೆಚ್ಚಾಗುತ್ತದೆ. ಹಾಗಾಗಿ ಮೂತ್ರಪಿಂಡಗಳ ಕಾಯಿಲೆಗೆ ಕಾರಣವಾಗಬಹುದಾದ ಸಾಮಾನ್ಯ ಕಾರಣಗಳು ಯಾವುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಅವಶ್ಯಕ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಕೆಲವು ಸಾಮಾನ್ಯ ಕಾಯಿಲೆಗಳ ಪಟ್ಟಿಯನ್ನು ಈ ಲೇಖನದಲ್ಲಿ ಕೊಡಲಾಗಿದೆ, ಈ ಕಾಯಿಲೆಗಳು ಉಲ್ಬಣಿಸುವುದರಿಂದ ಮೂತ್ರಪಿಂಡಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಮಕ್ಕಳು, ಮಹಿಳೆಯರು ಮತ್ತು ವ್ರದ್ಧ ವ್ಯಕ್ತಿಗಳಲ್ಲಿ ಕಂಡು ಬರುವ ಮಲೇರಿಯಾ, ಲೆಪ್ಟೊಸ್ಪ್ರರೋಸಿಸ್, ಡೆಂಗಿ, ಸ್ಕ್ರಬ್ ಥ್ರಪಸ್ ಕಾಯಿಲಗೆಳು ಮೂತ್ರಜನಕಾಂಗದ ಸೋಂಕು ಮತ್ತು ಮೂತ್ರಪಿಂಡದ ಕಾಯಿಲೆ ಕಾಣಿಸಿಕೊಳ್ಳಲು ಇರುವ ಬಹು ಮುಖ್ಯ ಕಾರಣಗಳು ಮಲೇರಿಯಾ, ಲೆಪ್ಟೊಸ್ಪ್ರರೋಸಿಸ್, ಡೆಂಗಿ, ಸ್ಕ್ರಬ್ ಥ್ರಪಸ್ ಕಾಯಿಲಗೆಳಿಂದ ಬಳಲುತ್ತಿರುವ ಸುಮಾರು ೪೧.೧% ರೋಗಿಗಳು ತೀವ್ರ ರೂಪದ ಮೂತ್ರಪಿಂಡದ ಕಾಯಿಲೆಯಿಂದ ಭಾದಿತರಾಗಿರುವುದು ಕಂಡು ಬಂದಿದೆ. ಇದಕ್ಕೆ ಆರೋಗ್ಯಶಾಲಿ ಮೂತ್ರಪಿಂಡದ ಅವಶ್ಯಕತೆ ಇದೆ. ಮೂತ್ರಪಿಂಡಗಳು ಅಂದರೆ ನಮ್ಮ ಶರೀರದ ಹಿಂಭಾಗದಲ್ಲಿ ಬೆನ್ನುಮೂಳೆಯ ಎರಡು ಬದಿಯಲ್ಲಿ ಇರುವ ಒಂದು ಜತೆ ಅಂಗಗಳು. ಅವು ಮುಖ್ಯವಾಗಿ ಮೂರು ಬಗೆಯ ಚಟುವಟಿಕೆಗಳನ್ನು ನಡೆಸುತ್ತವೆ. ೧. ಶರೀರದಲ್ಲಿ ನೀರಿನ ಪ್ರಮಾಣವನ್ನು ಸಮಸ್ಥಿತಯಲ್ಲಿ ಇಟ್ಟುಕೊಳ್ಳುವುದು ೨. ದೇಹದ ಖನಿಜಾಂಶವನ್ನು ಸಮಸ್ಥಿತಿಯಲ್ಲಿ ಇರಿಸುವುದು ಮತ್ತು ತ್ಯಾಜ ಅಂಶಗಳನ್ನು ಶರೀರದಿಂದ ಹೊರಹಾಕುವುದು ೩. ಹಾಮೋನು ಉತ್ಪತ್ತಿ ಮಾಡುವುದು
ಮಲೇರಿಯಾವು ಸೂಕ್ಷ್ಮಣು ಜೀವಿಗಳ ಮೂಲಕ ಹರಡುತ್ತದೆ. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯು ಕಡಿವುದರ ಮೂಲಕ ಅದು ಹರಡುತ್ತದೆ. ಸುಮಾರು ೬೦% ತೀವ್ರ ಮೂತ್ರಪಿಂಡದ ಹಾನಿಯಾಗುವಿಕೆಯ ಪ್ರಕರಣಗಳಲ್ಲಿ ಅದಕ್ಕೆ ಪ್ಲಾಸ್ಮೋಡಿಯಂ ಫಾಲ್ಸಿಫಾರಂ ಸೂಕ್ಷ್ಮಾಣು ಜೀವಿ ಕಾರಣ ಎಂಬ ಭಾವನೆ ಇದೆ. ಆದರೆ ಇದು ವರದಿಯಾಗಿರುವುದು ೩% ಪ್ರಕರಣಗಳಲ್ಲಿ ಮಾತ್ರ. ಮಲೇರಿಯಾ ಕಾರಣದಿಂದ ಮೂತ್ರಪಿಂಡಗಳಿಗೆ ಹಾಗುವ ಸೋಂಕಿನಲ್ಲಿ ಮೂತ್ರಪಿಂಡಗಳು ಊದಿಕೊಳ್ಳುತ್ತದೆ ಮತ್ತು ಊರಿಯೂತ ಕಂಡುಬರುತ್ತದೆ.ಡೆಂಗ್ಯು ಜ್ವರವು ಪ್ಲಾವ್ರರಸ್ ಎಂದು ಕರೆಯಲಾಗುವ ವ್ರರಸ್ ನಿಂದ ಹರಡುತ್ತದೆ. ಡೆಂಗ್ಯುಗೆ ಕಾರಣವಾಗುವ ವರ್ರಸ್ ಸೊಳ್ಳೆ ಕಡಿತಮೂಲಕ ಮನುಷ್ಯರ ದೇಹವನ್ನು ಸೇರುತ್ತದೆ. ಮೂತ್ರಪಿಂಡ ವಫಲ್ಯವು ಡೆಂಗ್ಯುವಲ್ಲಿ ಕಾಣಿಸಿಕೊಳ್ಳುವ ಬಹುಮುಖ್ಯ ತೊಡಕು, ಸಾಮಾನ್ಯವಾಗಿ ಇದು ಸ್ನಾಯು ನರಗಳ ನಾಶವಾಗುವಿಕೆ, ಅಧಿಕ ರಕ್ತದೊತ್ತಡ ಅಥವಾ ಕೆಂಪು ರಕ್ತಕಣಗಳ ಚಿದ್ರವಾಗುವಿಕೆ ಮತ್ತು ನಾಶವಾಗುವಿಕೆಯನ್ನು ಒಳಗೊಂಡಿರಬಹುದು. ಇಲಿ ಜ್ವರ ಅನ್ನುವುದು ಲೆಪ್ಟೊಸ್ಪ್ರರ ಜೀನಸ್ ಎಂಬ ಸೂಕ್ಷಾಣುವಿನ ಕಾರಣದಿಂದ ಉಂಟಾಗುವ ಕಾಯಿಲೆ. ಸೋಂಕು ಪೀಡಿತ ಇಲಿಗಳ ಮೂಲಕ ಈ ಕಾಯಿಲೆವು ಮನುಷ್ಯರಿಗೆ ಹರಡುತ್ತದೆ. ಮನುಷ್ಯರು ಇಲಿಗಳ ಮೂತ್ರ ಅಥವಾ ಅಂಗಾಂಶಗಳ ಸಂಪಕಕ್ಕೆ ಬಂದಾಗ ಇದು ಅವರಿಗೆ ಹರಡುತ್ತದೆ. ಹಾಗಾಗಿ ನಾವು ಹೆಚ್ಚು ಕಲುಶಿತವಾಗಿರುವ ಆಹಾರ ಮತ್ತು ನೀರಿನಿಂದ ದೂರ ಇರಬೇಕು. ಮತ್ತು ಸ್ವಚ್ಚತೆಯನ್ನು ಕಾಪಾಡಬೇಕು.