ಸದಸ್ಯ:ವೆಂಕಟೇಶೋ/sandbox
ಮ್ಯಾಗ್ನೀಷಿಯಂ ಪವಾಡ
ಬದಲಾಯಿಸಿಮ್ಯಾಗ್ನೀಷಿಯಂ ಪವಾಡ
- ಮ್ಯಾಗ್ನೀಷಿಯಂ ಎಂಬುದು ಕಬ್ಬಿಣ ಇತ್ಯಾದಿ ಇತರ ಲೋಹಗಳಂತೆ ಒಂದು ಲೋಹವಾಗಿದ್ದು, ಮಾನವ ದೇಹದಲ್ಲಿ ಮುನ್ನೂರು ಕಿಣ್ವಗಳ ಸಂಶ್ಲೇಷಣೆಯಲ್ಲಿ ಪ್ರಧಾನ ಘಟಕವಾಗಿರುತ್ತದೆ. ಇದರಿಂದ ಮ್ಯಾಗ್ನೀಷಿಯಂ ಮಾನವ ದೇಹದಲ್ಲಿ ಎಷ್ಟು ಪ್ರಮುಖವಾದ ಖನಿಜಾಂಶವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಜೀವಕೋಶಗಳಲ್ಲಿ ಮ್ಯಾಗ್ನೀಷಿಯಂ ಪಾತ್ರ
- ಸಾಂಪ್ರದಾಯಿಕ ವೈದ್ಯವಿಜ್ಞಾನಿಗಳು ಮತ್ತು ಆಹಾರತಜ್ಞರು ಆಹಾರದಲ್ಲಿ ಸುಣ್ಣಾಂಶವಿರಬೇಕೆಂದು ಅತಿ ಹೆಚ್ಚು ಪ್ರತಿಪಾದಿಸುತ್ತಾರೆ. ಇದೊಂದು ದಾರುಣ ನ್ಯೂನತೆಯಾಗಿದೆ. ಸುಣ್ಣಾಂಶವು ಆರೋಗ್ಯಕ್ಕೆ ಬಹಳ ಪ್ರಮುಖವಾದ ಘಟಕವಾಗಿದ್ದರೂ, ಅದರಲ್ಲಿ ಒಂದು ಗುಪ್ತವಾದ ಅಪಾಯ ಅಡಗಿದೆ. ಅದು ನಮ್ಮನ್ನು ನಾವು ಅಂದುಕೊಂಡದ್ದಕ್ಕಿಂತಲೂ ಬಹಳ ಬೇಗನೆ ಸಮಾಧಿಗೆ ಕಳುಹಿಸಿ ಬಿಡುತ್ತದೆ. ಏಕೆಂದರೆ ಅವರೆಲ್ಲರೂ ಮ್ಯಾಗ್ನೀಷಿಯಂ ಅನ್ನು ಪ್ರಚಾರಮಾಡಬೇಕಿತ್ತು. ಮ್ಯಾಗ್ನೀಷಿಯಂ ಕೊರತೆಯು ಹೃತ್ಸ್ನಾಯು ಮಟ್ಟದಲ್ಲಿ ಸೋಡಿಯಂ ಮತ್ತು ಸುಣ್ಣಾಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಒಂದು ಸಮಸ್ಯೆಯೇ ಸರಿ. ಏಕೆಂದರೆ ಕಿರೀಟಧಮನಿಯ ಸುಣ್ಣಾಂಶವು ಸನ್ನಿಹಿತ ಹೃದ್ರೋಗದ ಮುನ್ಸೂಚಕವಾಗಿರುತ್ತದೆ. ಮ್ಯಾಗ್ನೀಷಿಯಂ ಕೊರತೆಯು ಹೆಚ್ಚುತ್ತಿರುವ ಸಂದರ್ಭದಲ್ಲಿ ಸುಣ್ಣಾಂಶವು ದೇಹಶಾಸ್ತ್ರೀಯ ದೃಷ್ಟಿಯಿಂದ ಹೆಚ್ಚು ವಿಷವಾಗಿ ಪರಿಣಮಿಸುತ್ತದೆ.
'ಮ್ಯಾಗ್ನೀಷಿಯಂ ಪವಾಡ' ಎಂಬ ತಮ್ಮ ಪುಸ್ತಕದಲ್ಲಿ ಡಾ|ಡೀನ್ ಎಂಬಾಕೆ ಈ ಅಂಶವನ್ನು ಸ್ಪಷ್ಟವಾಗಿ ಹೀಗೆ ದಾಖಲಿಸುತ್ತಾರೆ--'ನಿಮ್ಮ ದೇಹದಲ್ಲಿ ಮ್ಗ್ಯಾಗ್ನೀಷಿಯಂ/ಸುಣ್ಣಾಂಶ ಅಸಮತೋಲನವು ಹೇಗೆ ಉಂಟಾಗಬಹುದು ಎಂಬುದನ್ನು ತಿಳಿದುಕೊಳ್ಳಲು ಅಡಿಗೆ ಮನೆಯಲ್ಲಿ ಈ ಒಂದು ಪ್ರಯೋಗವನ್ನು ಮಾಡಿನೋಡಿ. ಒಂದು ಸುಣ್ಣಾಂಶ ಗುಳಿಗೆಯನ್ನು ಪುಡಿ ಮಾಡಿ ಒಂದು ಔನ್ಸ್ ನೀರಿನಲ್ಲಿ ಹಾಕಿ ಕಲಕಿ. ಎಷ್ಟು ಕರಗುತ್ತದೆ ಎಂಬುದನ್ನು ಗಮನಿಸಿ. ನಂತರ ಅದೇ ಸುಣ್ಣಾಂಶವು ಅರೆಬರೆ ಕರಗಿದ ನೀರಿನಲ್ಲಿ ಒಂದು ಮ್ಯಾಗ್ನೀಷಿಯಂ ಗುಳಿಗೆಯನ್ನು ಪುಡಿ ಮಾಡಿ ಆ ನೀರಿನಲ್ಲಿ ಹಾಕಿ,ನಿಧಾನವಾಗಿ ಕಲಕಿ. ಆಗ ಅದುವರೆಗೂ ನೀರಿನಲ್ಲಿ ಕರಗದೇ ಹಾಗೇ ಉಳಿದ ಸುಣ್ಣಾಂಶವೂ ಕರಗುತ್ತದೆ. ಇದೇ ವಿದ್ಯಮಾನವು ಮಾನವನ ರಕ್ತಪರಿಚಲನೆ, ಹೃದಯ, ಮೆದುಳು, ಮೂತ್ರಾಂಗ ಮತ್ತು ಎಲ್ಲ ಅಂಗಾಂಶಗಳಲ್ಲೂ ಘಟಿಸುತ್ತದೆ. ಸುಣ್ಣಾಂಶವನ್ನು ಕರಗಿಸಿಕೊಳ್ಳುವಷ್ಟು ಸಮರ್ಪಕ ಪ್ರಮಾಣದ ಮ್ಯಾಗ್ನೀಷಿಯಂ ಇಲ್ಲದಿದ್ದರೆ, ಸುಣ್ಣಾಂಶ-ಆಧಿಕ್ಯತೆಯ ಸ್ನಾಯು ಚಳುಕು, ತಂತುಸ್ನಾಯುಯಾತನೆ, ಮುನ್ನಾಳ ಪೆಡಸಣೆ (hardening of the arteries), ಕೊರಕಲು ಹಲ್ಲುಗಳ ಸಮಸ್ಯೆಗಳು ಉಂಟಾಗಬಹುದು. ಮೂತ್ರಾಂಗಗಳಲ್ಲಿ ಮತ್ತೊಂದು ವಿಭಿನ್ನ ದೃಶ್ಯವು ಎದುರಾಗಬಹುದು. ಮೂತ್ರಾಂಗಗಳಲ್ಲಿ ಅತಿ ಹೆಚ್ಚು ಸುಣ್ಣಾಂಶವಿದ್ದು, ಅದನ್ನು ಕರಗಿಸಿಕೊಳ್ಳುವಷ್ಟು ಸಮರ್ಪಕ ಪ್ರಮಾಣದ ಮ್ಯಾಗ್ನೀಷಿಯಂ ಇಲ್ಲದಿದ್ದರೆ, ಮೂತ್ರಕೋಶದಲ್ಲಿ ಕಲ್ಲುಗಳುಂಟಾಗಬಹುದು.'
- ಸ್ನಾಯುಗಳ ಕ್ರಿಯೆಯನ್ನು ನಿಯಂತ್ರಿಸುವಲ್ಲಿ ಮ್ಯಾಗ್ನೀಷಿಯಂ ಮತ್ತು ಸುಣ್ಣಾಂಶಗಳು ಸಹೋದ್ಯೋಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತವೆ. ಆದರೆ ಯಾವಾಗ ಸುಣ್ಣಾಂಶದ ಕ್ರಿಯೆಗಳನ್ನು ನಿಯಂತ್ರಿಸುವಷ್ಚು ಸಮರ್ಪಕ ಪ್ರಮಾಣದ ಮ್ಯಾಗ್ನೀಷಿಯಂ ಇರುವುದಿಲ್ಲವೋ, ಆಗ ಸುಣ್ಣಾಂಶವು ಒಂದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಮ್ಯಾಗ್ನೀಷಿಯಂ ಕೊರತೆಗೆ ಸಾಪೇಕ್ಷವಾಗಿ ಸುಣ್ಣಾಂಶವು ಅಧಿಕವಾಗಿದ್ದಾಗ, ಇಡೀ ದೇಹದ ಎಲ್ಲ ಅಂಗಾಂಶಗಳಲ್ಲಿ ಸುಣ್ಣಾಂಶವು ನಿಧಾನ ವಿಷವಾಗಿ ಪರಿಣಮಿಸುತ್ತದೆ. ಸೂಕ್ಷ್ಮ ಖನಿಜಾಂಶಗಳ (trace minerals) ಆಧಿಕ್ಯತೆ ಅಥವಾ ಕೊರತೆಯು ಮತ್ತೊಂದು ಮೂಲಾಂಶದ ಅನುಪಾತದ ಮೇಲೆ ಅವಲಂಬಿತವಾಗಿರುತ್ತದೆ. ಸುಣ್ಣಾಂಶೀಕರಣದ ವಿಷಯದಲ್ಲಿ (ಅಂದರೆ ಸುಣ್ಣಾಂಶದ ಅನಪೇಕ್ಷಿತ ಸಂಚಯನ ಅಥವಾ ಹರಳುಗಟ್ಟುವಿಕೆ ಇತ್ಯಾದಿ.) ಸಹಾ ಇದು ಅನ್ವಯಿಸುತ್ತದೆ. ಮ್ಯಾಗ್ನೀಷಿಯಂನ ಅನುಪಾತಕ್ಕೆ ಅನುಗುಣವಾಗಿ ಇರಬೇಕಾದಷ್ಟು ಪ್ರಮಾಣಕ್ಕಿಂತಲೂ ಹೆಚ್ಚು ಸುಣ್ಣಾಂಶವು ಇದ್ದರೆ ಅದು ಕಲ್ಲು ಮತ್ತು ಸ್ಪರ್ (spur)ಗಳ ರಚನೆಗೆ ಕಾರಣವಾಗುತ್ತದೆ.
- ಸುಣ್ಣಾಂಶದೊಡನೆ ಮ್ಯಾಗ್ನೀಷಿಯಂ ಅನ್ನು ಸೇವಿಸದಿದ್ದರೆ ಅಥವಾ ಸೇವಿಸಿದ ಮ್ಯಾಗ್ನೀಷಿಯಂ ಸರಿಯಾಗಿ ಆರೋಗಣೆಯಾಗದಿದ್ದರೆ, ಅದರಿಂದ ಒಳಿತಿಗಿಂತಲೂ ಹೆಚ್ಚು ಕೆಡುಕುಂಟಾಗುತ್ತದೆ. ರಕ್ತದಲ್ಲಿ ಉಳಿದ ಸುಣ್ಣಾಂಶವು ದೇಹದಲ್ಲಿ ಯಾವ ಭಾಗದಲ್ಲಿ ಬೇಕಾದರೂ ಸಂಚಯನಗೊಳ್ಳಬಹುದು. ಉದಾಹರಣೆಗೆ, ಮೂಳೆಗಳ ಮೇಲೆ ಅಥವಾ ಕೀಲುಗಳಲ್ಲಿ ಸಂಚಯನಗೊಂಡರೆ ಅದು ಕೀಲುಗಳ ಉರಿಯೂತವನ್ನು ಅನುಕರಿಸುತ್ತದೆ. ಹೃದಯದಲ್ಲಿ ಸುಣ್ಣಾಂಶವು ಸಂಚಯನಗೊಂಡರೆ ಅದು ಮುನ್ನಾಳ ಹಾನಿತಗಳನ್ನು (arterial lesions) ಅನುಕರಿಸುತ್ತದೆ. ಸುಣ್ಣಾಂಶೀಕರಣ ಅಥವಾ ಸುಣ್ಣಾಂಶ ವಿಷೀಯತೆಯು ಹೃದ್ರೋಗ, ಕ್ಯಾನ್ಸರ್, ಸುಕ್ಕು ಚರ್ಮ, ಮೂತ್ರಕೋಶದ ಕಲ್ಲುಗಳು, ಅಸ್ಥಿರಂಧ್ರತೆ, ದಂತಸಮಸ್ಯೆಗಳು, ಕಣ್ಪೊರೆ ಮತ್ತಿತರ ಆರೋಗ್ಯ ಸಮಸ್ಯೆಗಳಾಗಿ ಪ್ರಕಟಗೊಳ್ಳಬಹುದು. ಸುಣ್ಣಾಂಶವು ಕೀಲುಗಳಲ್ಲಿ ಸಂಚಯನಗೊಂಡರೆ ಅದನ್ನು ಕೀಲೂತ (arthritis) ಎಂದು ಕರೆಯಲಾಗುತ್ತದೆ. ಅದೇ ಸುಣ್ಣಾಂಶ ರಕ್ತನಾಳಗಳಲ್ಲಿ ಸಂಚಯನಗೊಂಡರೆ ಮುನ್ನಾಳ ಪೆಡಸಣೆ (hardening of the arteries); ಹೃದಯದಲ್ಲಿ ಸಂಚಯನಗೊಂಡರೆ ಹೃದ್ರೋಗ, ಮೆದುಳಿನಲ್ಲಿ ಸಂಚಯನಗೊಡರೆ ವಾರ್ಧಕ್ಯದ ಅರಳುಮರಳುತನ ಎಂದೆನಿಸಿಕೊಳ್ಳುತ್ತದೆ.
ವಾಸ್ತವದಲ್ಲಿ ಮೂಳೆಗಳ ಸಾಂದ್ರತೆಯನ್ನು ನಿಯಂತ್ರಿಸುವ ಅಂಶವೆಂದರೆ ಮ್ಯಾಗ್ನೀಷಿಯಂ, ಸುಣ್ಣಾಂಶವು ಅಸ್ಥಿ-ಸಾಂದ್ರತೆಯನ್ನು ನಿರ್ಧರಿಸುವುದಿಲ್ಲ. ಮ್ಯಾಗ್ನೀಷಿಯಂ ಸುಣ್ಣಾಂಶವನ್ನು ಮೂಳೆಗೆ ಸೇರಿಸುತ್ತದೆ. ಮ್ಯಾಗ್ನೀಷಿಯಂ ಕೊರತೆಯು ಮೂಳೆಗಳಲ್ಲಿರುವ ಸುಣ್ಣಾಂಶದ ನಷ್ಟವನ್ನು ಉಂಟುಮಾಡುತ್ತದೆ. ಪ್ರಪಂಚದಲ್ಲಿ ತುಂಬಾ ಕಡಿಮೆ ಆರೋಗ್ಯ ತಜ್ಞರು ಮ್ಯಾಗ್ನೀಷಿಯಂ ಎಂಬ ಔಷಧದ ಬಗ್ಗೆ ತಿಳಿದುಕೊಂಡಿದ್ದಾರೆ. ಆದ್ದರಿಂದ ಸುಣ್ಣಾಂಶ ಚಿಕಿತ್ಸೆಯನ್ನು ಕೈಬಿಟ್ಟು, ಮ್ಯಾಗ್ನೀಷಿಯಂ ಚಿಕಿತ್ಸೆಯನ್ನು ಹೇಗೆ ಆರಂಭಿಸುವುದೆಂದು ಅವರಿಗೆ ಗೊತ್ತಿಲ್ಲ. ಕ್ಷೀರೋದ್ಯಮಗಳಂತಹ ಡೈರಿ ಉದ್ಯಮಿಗಳು ಸುಣ್ಣಾಂಶದ ತುಂಬಾ ಪ್ರಚಾರವನ್ನು ಮಾಡಿವೆ. ಇದರಿಂದ ಜನರು ಸುಣ್ಣಾಂಶವನ್ನು ಹೆಚ್ಚು ಬಳಸುತ್ತಿರುವುದರಿಂದ ಮಿಲಿಯಗಟ್ಟಳೆ ಜನರು ಅನಾರೋಗ್ಯದಿಂದ ಮರಣ ಹೊಂದುತ್ತಿದ್ದಾರೆ. ಆದ್ದರಿಂದ ಹೆಚ್ಚು ದೀರ್ಘಕಾಲ ಬದುಕಬೇಕೆನ್ನುವ ವ್ಯಕ್ತಿಗಳು ಮ್ಯಾಗ್ನೀಷಿಯಂ ಮಹತ್ವದ ಬಗ್ಗೆ ಹೆಚ್ಚು ಗಮನ ಕೊಟ್ಟು, ಅದನ್ನು ಕ್ಲೋರೈಡ್ ರೂಪದಲ್ಲಿ ಸೇವಿಸುವ ಮೂಲಕ ಬಲಿಷ್ಠ ಮತ್ತು ದೀರ್ಘಕಾಲೀನ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ. ಮ್ಯಾಗ್ನೀಷಿಯಂ ಕ್ಲೋರೈಡ್ ಬಹಳ ಸುಲಭವಾಗಿ ದೇಹಗತವಾಗಬಹುದಾದ ಮ್ಯಾಗ್ನೀಷಿಯಂ ರೂಪವಾಗಿದ್ದು, ಅದನ್ನು ಬಾಯಿಯ ಮೂಲಕ, ಚರ್ಮಾಂತರವಾಗಿ, ಅಥವಾ ಹಿನ್ನಾಳದೆಡೆಯ ತೊಟಕುಗಳಾಗಿ (intravenous drips) ಬಳಸಬಹುದು. ಶ್ವಾಸಕೋಶಕ್ಕೆ ನೇರವಾಗಿ ಸಿಂಚನ ಮಾಡಿಕೊಳ್ಳಬಹುದು. ಸುಣ್ಣಾಂಶವು ಸ್ನಾಯುಸಂಕುಚನವನ್ನು ಪ್ರಚೋದಿಸಿದರೆ, ಮ್ಯಾಗ್ನೀಷಿಯಂ ಆ ಸಂಕುಚನ ಪ್ರಕ್ರಿಯೆಯನ್ನು ಸಮತೋಲನದಲ್ಲಿಡುತ್ತದೆ. ಸುಣ್ಣಾಂಶವು ಸ್ನಾಯುಗಳನ್ನು ಬಿಗಿಗೊಳಿಸುತ್ತದೆ, ಮ್ಯಾಗ್ನೀಷಿಯಂ ಸಡಿಲಗೊಳಿಸುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಮ್ಯಾಗ್ನೀಷಿಯಂ ಇಲ್ಲದಿದ್ದರೆ, ಆಗ ಸ್ನಾಯುಗಳು ಬಿಗಿಯಾಗಿ ಉಳಿದುಬಿಡುತ್ತವೆ ಮತ್ತು ವರ್ಷಾಂತರಗಳಲ್ಲಿ ಸ್ನಾಯು-ಚಳುಕು (muscle cramp) ತಲೆದೋರುತ್ತದೆ. ಈ ರೀತಿ ಆಗುವುದು ವ್ಯಕ್ತಿ ತುಂಬಾ ಹೆಚ್ಚು ಸುಣ್ಣಾಂಶವನ್ನು ಹೊಂದಿದ್ದಾಗ ಅಥವಾ ತುಂಬಾ ಕಡಿಮೆ ಮ್ಯಾಗ್ನೀಷಿಯಂ ಅನ್ನು ಹೊಂದಿದ್ದಾಗ. ತುಂಬಾ ಹೆಚ್ಚು ಸುಣ್ಣಾಂಶವು ಹೃದಯದ ಸ್ನಾಯುಗಳನ್ನು ಬಿಗಿಗೊಳಿಸಿ ಚಳುಕು ಹಿಡಿಯುವಂತೆ (spasm) ಮಾಡುತ್ತದೆ ಮತ್ತು ಆ ಸ್ನಾಯುಗಳು ಸಡಿಲಗೊಳ್ಳಲಾರವು, ಏಕೆಂದರೆ ಹಾಗೆ ಮಾಡುವ ಮ್ಯಾಗ್ನೀಷಿಯಂನ ಕೊರತೆಯಿರುತ್ತದೆ. ಇದೇ ಹೃದಯಾಘಾತ. ಸ್ವಲ್ಪ ಮ್ಯಾಗ್ನೀಷಿಯಂ ಸೇವನೆಯನ್ನು ಮಾಡಿದರೆ, ಹೃದಯವು ನಿಧಾನವಾಗಿ ತನ್ನ ಸಹಜತೆಗೆ ಮರಳುತ್ತದೆ, ಅದುವರೆಗೂ ಅದಕ್ಕೆ ಯಾವುದೇ ಗಂಭೀರವಾದ ಹಾನಿ ಆಗದಿದ್ದ ಪಕ್ಷ. ಮ್ಯಾಗ್ನೀಷಿಯಂ ಜತೆಗೆ ಅಯೋಡಿನ್ ಮತ್ತು ಸೆಲೆನಿಯಂ ಅನ್ನು ಸೇರಿಸಿದರೆ, ಪುನಃಚೇತರಿಕೆ ಮತ್ತು ಸಣ್ಣ ಪ್ರಮಾಣದ ಅಂಗಾಂಶ ಪುನರುಜ್ಜೀವನ್ನು ಬೆಂಬಲಿಸುವ ಆದರ್ಶ ಫಾರ್ಮ್ಯುಲಾ ನಮಗೆ ಸಿಕ್ಕಂತಾಗುತ್ತದೆ.
ಪ್ರಾಚೀನ ಕಾಲದಲ್ಲಿ ಮ್ಯಾಗ್ನೀಷಿಯಂ ಮಹತ್ವವನ್ನು ಚನ್ನಾಗಿಯೇ ಅರ್ಥಮಾಡಿಕೊಂಡಿದ್ದ ನಮ್ಮ ಹಿರಿಯರು ಎಪ್ಸಂ ಲವಣದ ರೂಪದಲ್ಲಿ ಅದನ್ನು ಬಳಸುತ್ತಿದ್ದರು.ಈಗಲೂ ಎಪ್ಸಂ ಲವಣ ಸ್ನಾನ ತುಂಬಾ ಜನಪ್ರಿಯವಾಗಿದೆ. ಮ್ಯಾಗ್ನೀಷಿಯಂ ಕೊರತೆ ಎಷ್ಟು ತೀವ್ರವಾಗಿರುತ್ತದೋ ಅಷ್ಟು ಹಿತಕರವಾದ ಅನುಭವವುಂಟಾಗುತ್ತದೆ.
ಮ್ಯಾಗ್ನೀಷಿಯಂ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು
ಮ್ಯಾಗ್ನೀಷಿಯಂ ಕೊರತೆಯಿಂದ ಉಂಟಾಗಬಹುದಾದ ಅಥವಾ ವಿಷಮಿಸಬಹುದಾದ ಆರೋಗ್ಯ ಸಮಸ್ಯೆಗಳನ್ನು ಕ್ಯಾರೊಲಿನ್ ಡೀನ್ ಎಂಬ ಸಂಶೋಧಕರು ಈ ಕೆಳಗಿನಂತೆ ತಮ್ಮ ಜಾಲತಾಣದಲ್ಲಿ ಪಟ್ಟಿ ಮಾಡುತ್ತಾರೆ-- 1. ಆತಂಕ ಮತ್ತು ಭೀತಿ ದಾಳಿ-ಮ್ಯಾಗ್ನೀಷಿಯಂ ಸಾಮಾನ್ಯವಾಗಿ ಮೂತ್ರಾಂಗವಚದಿಂದ ಉತ್ಪಾದನೆಯಾಗುವ ಒತ್ತಡದ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡುತ್ತದೆ. ಮ್ಯಾಗ್ನೀಷಿಯಂ ಕೊರತೆಯಿಂದ ವ್ಯಕ್ತಿಗಳು ಅಕಾರಣ ಭೀತಿಗೆ ಒಳಗಾಗುತ್ತಾರೆ. 2. ಆಸ್ತ್ಮಾ-ಮ್ಯಾಗ್ನೀಷಿಯಂ ಕೊರತೆಯ ಸನ್ನಿವೇಶದಲ್ಲಿ ಶ್ವಾಸನಾಳಗಳ ಉರಿಯೂತವನ್ನು ಹೆಚ್ಚಿಸುವ ಹಿಸ್ಟಮೈನ್ ಉತ್ಪಾದನೆಯಲ್ಲಿ ಹೆಚ್ಚಳ ಉಂಟಾಗುತ್ತದೆ ಮತ್ತು ಶ್ವಾಸನಾಳದ ಸೆಳೆತ ಜಾಸ್ತಿಯಾಗುತ್ತದೆ. 3. ರಕ್ತದ ಕರಣಿಗಟ್ಟುವಿಕೆ-ರಕ್ತದ ಕರಣಿ ಕಟ್ಟುವಿಕೆಯನ್ನು ತಡೆಯುವಲ್ಲಿ ಮತ್ತು ರಕ್ತವನ್ನು ತೆಳುವಾಗಿ ಇಡುವಲ್ಲಿ ಮ್ಯಾಗ್ನೀಷಿಯಂ ಆಸ್ಪಿರಿನ್ನಿನಂತೆ, ಆದರೆ ಅದರ ಅಡ್ಡ ಪರಿಣಾಮಗಳಿಲ್ಲದೆ, ಕಾರ್ಯ ನಿರ್ವಹಿಸುತ್ತದೆ. 4. ಉದರಸಂಬಂಧೀ ರೋಗಗಳು-ಮ್ಯಾಗ್ನೀಷಿಯಂ ಕೊರತೆಯು ಕರುಳಿನ ಚಲನೆಯನ್ನು ಮಂದಗೊಳಿಸುತ್ತದೆ. ಇದರಿಂದ ಮಲಬದ್ಧತೆ, ಪೋಷಕಾಂಶಗಳ ಅವಪಚನೀಯತೆ ಮತ್ತು ದೇಹ ನಂಜುಗೊಳ್ಳುವಿಕೆ ಉಂಟಾಗುತ್ತದೆ. ಕಾಲಿಟಿಸ್ ಎಂಬ ಕರುಳಿನ ಉರಿಯೂತವೂ ಸಹಾ ಉಂಟಾಗಬಹುದು. 5. ಸಿಸ್ಟಿಟಿಸ್-ಮೂತ್ರಚೀಲದ ಸೆಳೆತ (bladder spasm) ಮ್ಯಾಗ್ನೀಷಿಯಂ ಕೊರತೆಯಿಂದ ಅಧಿಕಗೊಳ್ಳುತ್ತದೆ. 6. ಖಿನ್ನತೆ-ಮನಸ್ಸಿಗೆ ಹರ್ಷ ಮತ್ತು ಉಲ್ಲಾಸದ ಅನುಭವವನ್ನುಂಟುಮಾಡುವ ಸೆರೋಟೊನಿನ್ ಎಂಬ ಹಾರ್ಮೋನ್ ಮ್ಯಾಗ್ನೀಷಿಯಂ ಅವಲಂಬಿತವಾಗಿದೆ. ಮ್ಯಾಗ್ನೀಷಿಯಂ ಕೊರತೆಯುಳ್ಳ ಮೆದುಳು ಮಾನಸಿಕ ರೋಗಕ್ಕೆ ಸಮಾನವಾದ ಲಕ್ಷಣಗಳನ್ನು ಉಂಟುಮಾಡುವ ಅಲರ್ಜಿಕಾರಕಗಳು ಮತ್ತು ಹೊರಗಿನ ಕಣಗಳ ದಾಳಿಗೆ ಬಹಳ ಸುಲಭವಾಗಿ ಒಳಗಾಗುತ್ತದೆ. 7. ನಿರ್ವೀಷೀಕರಣ-ಅಲ್ಯೂಮಿನಿಯಂ ಮತ್ತು ಸೀಸದಂತಹ ಭಾರಲೋಹಗಳನ್ನು ಮತ್ತಿತರ ವಿಷ ಪದಾರ್ಥಗಳನ್ನು ದೇಹದಿಂದ ನಿವಾರಿಸಿಕೊಳ್ಳುವಲ್ಲಿ ಮ್ಯಾಗ್ನೀಷಿಯಂ ಸಹಕಾರಿ. 8. ಡಯಾಬಿಟಿಸ್-ಮ್ಯಾಗ್ನೀಷಿಯಂ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯಕವಾದ ಇನ್ಸುಲಿನ್ ಎಂಬ ಹಾರ್ಮೋನಿನ ಸ್ರವನವನ್ನು ಅಧಿಕಗೊಳಿಸುತ್ತದೆ. ಜೀವಕೋಶಗಳು ಇನ್ಸುಲಿನ್ನಿಗೆ ಸಂವೇದನಶೀಲವಾಗುವಂತೆ ಮಾಡುತ್ತದೆ. ಮ್ಯಾಗ್ನೀಷಿಯಂ ಕೊರತೆ ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. 9. ದಣಿವು-ಮ್ಯಾಗ್ನೀಷಿಯಂ ಮಾನವ ದೇಹದಲ್ಲಿ ಮುನ್ನೂರ ಇಪ್ಪತ್ತೈದು ಕಿಣ್ವಗಳ ರಚನೆಗೆ ಅತ್ಯವಶ್ಯಕವಾಗಿದೆ. ಆದ್ದರಿಂದ ಮ್ಯಾಗ್ನೀಷಿಯಂ ಕೊರತೆ ಹೆಚ್ಚು ಆಯಾಸ ಉಂಟಾಗುವಂತೆ ಮಾಡುತ್ತದೆ. 10. ಹೃದ್ರೋಗ-ಹೃದ್ರೋಗವುಳ್ಳ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಮ್ಯಾಗ್ನೀಷಿಯಂ ಕೊರತೆ ಕಂಡುಬರುತ್ತದೆ. ಹಠಾತ್ ಹೃತ್ಸ್ನಾಯು ಸ್ತರಕ್ತತೆ (myocardial infarction) ಮತ್ತು ಹೃದಯದ ಅಲಯಬದ್ಧತೆ (cardiac arrhythmia) ಯಂತಹ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಆಸ್ಪತ್ರೆಗಳಲ್ಲಿ ಮ್ಯಾಗ್ನೀಷಿಯಂ ಅನ್ನು ನೀಡಲಾಗುತ್ತದೆ. ದೇಹದ ಇತರ ಎಲ್ಲ ಸ್ನಾಯುಗಳಂತೆ ಹೃದಯದ ಸ್ನಾಯುಗಳಿಗೂ ಸಹಾ ಉತ್ತಮ ಕಾರ್ಯನಿರ್ವಹಣೆಗೆ ಮ್ಯಾಗ್ನೀಷಿಯಂ ಬೇಕು. ಆಂಜಿನಾ ಅಥವಾ ಎದೆನೋವಿಗೆ ಚಿಕಿತ್ಸೆ ನೀಡುವಾಗಲೂ ಮ್ಯಾಗ್ನೀಷಿಯಂ ಅನ್ನು ಬಳಸಲಾಗುತ್ತದೆ. 11. ಅತ್ಯೊತ್ತಡ-ಮ್ಯಾಗ್ನೀಷಿಯಂ ಕೊರತೆಯ ಸನ್ನಿವೇಶಗಳಲ್ಲಿ ರಕ್ತನಾಳಗಳ ಸೆಳೆತ (spasm of the blood vessels) ಮತ್ತು ಕೊಲೆಸ್ಟೆರಾಲ್ ಹೆಚ್ಚಳ ಉಂಟಾಗುತ್ತದೆ. ಇವೆರಡರ ಕಾರಣದಿಂದ ರಕ್ತದ ಅಧಿಕ ಒತ್ತಡ ಉಂಟಾಗುತ್ತದೆ. 12. ಮಿತಶರ್ಕರಕ್ತತೆ-ಮ್ಯಾಗ್ನೀಷಿಯಂ ಇನ್ಸುಲಿನ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಮ್ಯಾಗ್ನೀಷಿಯಂ ಕೊರತೆಯ ಸಂದರ್ಭದಲ್ಲಿ ರಕ್ತದ ಸಕ್ಕರೆಯ ಪ್ರಮಾಣದಲ್ಲಿ ಅತ್ಯಧಿಕ ಕುಸಿತ ಉಂಟಾಗುತ್ತದೆ. ಇದಕ್ಕೆ ಮಿತಶರ್ಕರಕ್ತತೆ (hypoglycemia) ಎಂದು ಕರೆಯಲಾಗುತ್ತದೆ. 13. ನಿದ್ರಾಹೀನತೆ-ಸಾಕಷ್ಟು ಪ್ರಮಾಣದಲ್ಲಿ ಮ್ಯಾಗ್ನೀಷಿಯಂನ ಲಭ್ಯತೆ ಇಲ್ಲದಿದ್ದರೆ, ನಿದ್ರಾ-ಪ್ರಚೋದಕ ರಸದೂತವಾದ ಮೆಲಟೊನಿನ್ ಎಂಬ ಹಾರ್ಮೋನ್ ಸರಿಯಾಗಿ ಉತ್ಪಾದನೆಯಾಗುವುದಿಲ್ಲ. 14. ಮೂತ್ರಾಂಗ ರೋಗಗಳು-ಮ್ಯಾಗ್ನೀಷಿಯಂ ಕೊರತೆಯು ಗಂಜಿಗಡಸುತನದ ಮೂತ್ರಾಂಗ ವೈಫಲ್ಯಕ್ಕೆ (atherosclerotic kidney failure) ಕಾರಣವಾಗುತ್ತದೆ. ಮೂತ್ರಾಂಗ ಕಸಿಗೆ ಒಳಗಾದ ರೋಗಿಗಳಲ್ಲಿ ಮ್ಯಾಗ್ನೀಷಿಯಂ ಕೊರತೆಯು ಅಸಹಜ ಕೊಲೆಸ್ಟೆರಾಲಿನ ಮಟ್ಟ ಮತ್ತು ಶರ್ಕರಕ್ತತೆಯ ನಿಯಂತ್ರಣದ ಸಮಸ್ಯೆಯು ಉಲ್ಬಣಗೊಳ್ಳಲು ಕಾರಣವಾಗುತ್ತದೆ. 15. ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗುವ ಯಕೃತ್ತಿನ ರೋಗಗಳು-ಯಕೃತ್ತಿನ ಕಸಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಮ್ಯಾಗ್ನೀಷಿಯಂ ಕೊರತೆ ಕಂಡುಬರುತ್ತದೆ. ಹೀಗೆ ಅನೇಕ ರೀತಿಗಳಲ್ಲಿ ಮ್ಯಾಗ್ನೀಷಿಯಂ ಕೊರತೆ ವ್ಯಕ್ತಿಗಳ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಕರ್ನಾಟಕದಲ್ಲಿ ಮ್ಯಾಗ್ನೀಷಿಯಂ ಔಷಧಗಳ ಲಭ್ಯತೆ
ಇಷ್ಟೆಲ್ಲಾ ಉಪಯುಕ್ತವಾದ ಮ್ಯಾಗ್ನೀಷಿಯಂ ನಮ್ಮ ಕರ್ನಾಟಕದ ಔಷಧದ ಅಂಗಡಿಗಳಲ್ಲಿ ಸಿಗುವುದೇ ಇಲ್ಲ. ಕರ್ನಾಟಕದ ಔಷಧದ ಅಂಗಡಿಗಳಲ್ಲಿ ಕ್ಯಾಲ್ಷಿಯಂಯುಕ್ತ ಮಾತ್ರೆಗಳು ಧಾರಾಳವಾಗಿ ಸಿಗುತ್ತವೆ. ಆದರೆ ಯಾವುದೇ ಕಾರಣಕ್ಕೂ ಮ್ಯಾಗ್ನೀಷಿಯಂ ಮಾತ್ರೆಗಳು ಮಾತ್ರ ಸಿಗುವುದಿಲ್ಲ. ಆದರೆ ಹೃದಯಸಂಬಂಧೀ ತುರ್ತು-ಚಿಕಿತ್ಸೆಗಳ ಸಂದರ್ಭದಲ್ಲಿ ಮ್ಯಾಗ್ನೀಷಿಯಂ ಸಲ್ಫೇಟ್ ಇಂಜೆಕ್ಷನ್ ಅನ್ನು ಧಾರಾಳವಾಗಿ ವೈದ್ಯರು ಮಾತ್ರ ಬಳಸುತ್ತಾರೆ. ಮಿಕ್ಕನಾದಂತೆ ರೋಗಿಗಳು ಮ್ಯಾಗ್ನೀಷಿಯಂ ಸಲ್ಫೇಟಿನ ಮತ್ತೊಂದು ರೂಪವಾದ ಎಪ್ಸಂ ಲವಣಕ್ಕೆ ಮೋರೆ ಹೋಗಬೇಕಾಗಿದೆ. ಆದರೆ ಇವುಗಳನ್ನು ಕೇವಲ ಬಾಹ್ಯವಾಗಿ ಮಾತ್ರ ಬಳಸುವುದು (ಉದಾಹರಣೆಗೆ, ನೀರಿನಲ್ಲಿ ಕರಗಿಸಿ ಮೈಗೆ ಸವರಿಕೊಳ್ಳುವುದು ಅಥವಾ ಅಂತಹ ನೀರಿನ ತೊಟ್ಟಿಯಲ್ಲಿ ಮಲಗುವುದು_____ಇದರಿಂದ ಮ್ಯಾಗ್ನೀಷಿಯಂ ಚರ್ಮ ಮುಖೇಣ ಹೀರಿಕೊಳ್ಳಲ್ಪಟ್ಟು, ದೇಹದ ಅನೇಕ ಜೀವರಸಾಯನಿಕ ಕ್ರಿಯೆಗಳು ತಹಬಂದಿಗೆ ಬಂದು ರಕ್ತದ ಸಕ್ಕರೆಯ ಮಟ್ಟದ ಸುಧಾರಣೆಗೆ ನೆರವಾಗುತ್ತದೆ.) ಅನಿವಾರ್ಯವಾಗಿದೆ. ಏಕೆಂದರೆ ಆ ಪೊಟ್ಟಣಗಳ ಮೇಲೆ ಆ ಎಪ್ಸಂ ಲವಣ ಎಷ್ಟು ಶುದ್ಧ ಎಂಬುದರ ಬಗ್ಗೆ ಉಲ್ಲೇಖವಿರುವುದಿಲ್ಲ.
ಅಷ್ಟೇ ಅಲ್ಲ, ಯಾವ ವೈದ್ಯರೂ ಕೆಂಪು ರಕ್ತಕಣಗಳಲ್ಲಿರುವ ಮ್ಯಾಗ್ನೀಷಿಯಂ ಪ್ರಮಾಣದ ಬಗ್ಗೆ ಅಥವಾ ಪ್ಲಾಸ್ಮಾದಲ್ಲಿರುವ (ಅಂದರೆ ರಕ್ತದ ದ್ರವಾಂಶ) ಮ್ಯಾಗ್ನೀಷಿಯಂ ಪ್ರಮಾಣದ ಬಗ್ಗೆ ಪರೀಕ್ಷೆಗಳನ್ನು ಶಿಫಾರಸು ಮಾಡುವುದಿಲ್ಲ. ಇದು ವೈದ್ಯರಲ್ಲಿರುವ ಅಜ್ಞಾನವೋ ಅಥವಾ ಉದ್ದೇಶಪೂರ್ವಕ ಅವಗಣನೆ ಮತ್ತು ವೈದ್ಯಕೀಯ ಮಾಫಿಯಾದ ಒಂದು ಕರಾಳಮುಖವೋ ಗೊತ್ತಿಲ್ಲ.