ಸದಸ್ಯ:ವಿಪ್ರಭ/ನನ್ನ ಪ್ರಯೋಗಪುಟ

ಡಾ ಮನೋರಮಾ ಬಿ ಎನ್ : ಕಲಾಸಂಶೋಧಕರು/ಭರತನಾಟ್ಯ-ಯಕ್ಷಗಾನ-ರೂಪಕಗಳ ಕಲಾವಿದರು, ನೃತ್ಯವಿಮರ್ಶಕರು, ಸಂಶೋಧಕ ಬರೆಹಗಾರರು, ನೂಪುರ ಭ್ರಮರಿ ನೃತ್ಯ ಸಂಶೋಧನಾ ನಿಯತಕಾಲಿಕೆಯ ಮತ್ತು ಪ್ರತಿಷ್ಠಾನದ ಸಂಸ್ಥಾಪಕರು ಸಂಪಾದಕರು. ಸ್ವತಃ ನೃತ್ಯಸಂಬಂಧಿತ ಅನೇಕ ವಿಶಿಷ್ಟ ಸಾಹಿತ್ಯಕೃತಿಗಳನ್ನು ಬರೆದಿರುವ ಕವಿಯೂ ಹೌದು. ನಾಟ್ಯಾಯನ, ನಾಯಿಕಾಂತರಂಗದ ಸಹಿತ ಅನೇಕ ಮೌಲಿಕ ನೃತ್ಯಪುಸ್ತಕಗಳ ಪ್ರಕಾಶಕರೂ ಹೌದು. ಇವರ ಪ್ರಮುಖ ಪ್ರಕಟಿತ ಕೃತಿಗಳು : 'ಮುದ್ರಾರ್ಣವ' , 'ನೃತ್ಯಮಾರ್ಗಮುಕುರ', 'ಮಹಾಮುನಿಭರತ', 'ನಂದಿಕೇಶ್ವರ', 'ಭರತನಾಟ್ಯಬೋಧಿನಿ', ಮತ್ತು ಹಲವು ಸಂಶೋಧನಾ ಲೇಖನಗಳು. ಸಂಪಾದಿತ ಕೃತಿಗಳು: ನಾರಾಯಣದರ್ಶನ(ಸಂ) 'ನೂಪುರಾಗಮ', ಅನೇಕ ಪ್ರಶಸ್ತಿ ಸನ್ಮಾನ ಪುರಸ್ಕೃತರು. ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ನಾಡಿನ ಉದ್ದಗಲಕ್ಕೂ ನೃತ್ಯಕ್ಷೇತ್ರಕಾರ್ಯಗಳಿಗೆ ಸಂಚರಿಸಿದ್ದಾರೆ. ಕರ್ನಾಟಕ ಮತ್ತು ಭಾರತಸರ್ಕಾರದ ಫೆಲೋಶಿಪ್ ಗಳನ್ನು ಪಡೆದಿರುವ ಇವರು ನಟ್ಟುವಾಂಗ ಮತ್ತು ಕೊರವಂಜಿ ನೃತ್ಯಸಾಹಿತ್ಯಗಳ ಬಗ್ಗೆಯೂ ಆಳವಾದ ಅಧ್ಯಯನ ನಡೆಸಿ ಮಂಡಿಸಿದ್ದಾರೆ. ಇವರ ಮುಂದಾಳತ್ವದಲ್ಲಿ ಹಾಗೂ ಆಯೋಜಕತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೃತ್ಯಸಂಶೋಧನ ಸಮ್ಮೇಳನ, ಅನೇಕ ಕಾರ್ಯಾಗಾರ, ನೃತ್ಯ ಮತ್ತು ಯಕ್ಷಗಾನ ವಿಚಾರಸಂಕಿರಣಗಳು ಜರುಗುತ್ತಲೇ ಬಂದಿವೆ. ನಾಟ್ಯಶಾಸ್ತ್ರ, ಅಲಂಕಾರ ಶಾಸ್ತ್ರ, ನಾಯಿಕಾಭೇಧ, ನೃತ್ಯಸಂಶೋಧನೆ ಮತ್ತು ನಟ್ಟುವಾಂಗ, ಸಾಂಸ್ಕೃತಿಕ ಪತ್ರಿಕೋದ್ಯಮ ಮುಂತಾಗಿ ಅನೇಕ ನೃತ್ಯ ಕೋರ್ಸ್ ಗಳನ್ನು ನಡೆಸುತ್ತಾ ಬಂದಿದ್ದಾರೆ.

ಆಸಕ್ತರು ಈ ಜಾಲತಾಣಗಳಿಗೆ ಭೇಟಿ ಕೊಡಬಹುದು.

www.noopurabhramari.com www.noopuradancejournal.org