ಸದಸ್ಯ:ಭವ/sandbox2
ಅಂತರಜಾಲ ಎಂಬ ಮಹಾಜಾಲ
ಬದಲಾಯಿಸಿಅಂತರಜಾಲ ವ್ಯಸನವು ಈಗ ವಿಶ್ವಾದ್ಯಂತ ಹರಡಿದೆ.ಅಮೆರಿಕದ ಅಧ್ಯಯನವೊಂದರ ಪ್ರಕಾರ,ಅಂತರಜಾಲ ವ್ಯಸನಿಗಳು ಹಾಗೂ ಹೆರೋಯಿನ್ ಮಾದಕವಸ್ತುವಿನ ವ್ಯಸನಿಗಳ ಮಿದುಳಿನ ಸ್ಕ್ಯಾನ್ ಚಿತ್ರಣಗಳು ಒಂದೇರೀತಿಯದಾಗಿರುತ್ತದೆ.ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್,ಈ ಸಮಸ್ಯೆಯನ್ನು ಮೊಟ್ಟಮೊದಲಿಗೆ ಗುರುತಿಸಿತು.ಅಲ್ಲಿನ ಶಿಕ್ಷಣ ಸಚಿವಾಲಯವು 'ಅಂತರಜಾಲ-ವರ್ಜನ ಶಿಬಿರ'ಗಳನ್ನು ಪ್ರಾರಂಭಿಸಿ ಅಂತರಜಾಲ-ವ್ಯಸನಿ ಮಕ್ಕಳು ಅಲ್ಲಿ ಹೆಚ್ಚು ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಾಗುವ ಯೋಜನೆಯನ್ನು ರೂಪಿಸಿತು.ಅತಿರೇಕದ ಇಂಟರ್ನೆಟ್ ಬಳಕೆಯಿಂದ,ತನ್ಮೂಲಕ ಆ ಭ್ರಾಮಕ ಪ್ರಪಂಚದಿಂದ ಮಕ್ಕಳನ್ನು ಹೊರತರುವುದು ಹಾಗೂ ತಮ್ಮ ವಯೋಮಾನದ ಇನ್ನಿತ್ತರ ಮಕ್ಕಳೊಂದಿಗೆ ಅವರು ವಾಸ್ತವಿಕ ಸಂಪರ್ಕ-ಒಡನಾಟವನ್ನು ಹೊಂದುವುದಕ್ಕೆ ಅನುವುಮಾಡಿಕೊಡುವುದು,ಮಾನವಿಕ ಸಂಬಂಧಗಳ ಪ್ರಾಮುಖ್ಯವನ್ನು ಅವರಿಗೆ ಮನವರಿಕೆ ಮಾಡಿಸುವುದು ಈ ಯೋಜನೆಯ ಮೂಲೋದ್ದೇಶ. ಜಪಾನ್ ಸರ್ಕಾರ ಹೇಳುವಂತೆ ಈ ಶಿಬಿರಗಳು ಬಹಳ ಯಶಸ್ವಿಯಾಗಿವೆ.
ತಂತ್ರಜ್ಞಾನ ಬಳಕೆಯಲ್ಲಿ ಮುಂದುವರಿದಿರುವ ಮತ್ತೊಂದು ದೇಶವಾದ ದಕ್ಷಿಣ ಕೊರಿಯಾ ಕೂಡ ಈ ಅಂತರಜಾಲ ವ್ಯಸನವನ್ನು ಒಂದು ಸಾರ್ವತ್ರಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಿದ್ದು.'ಐ ವಿಲ್' ಎಂಬ ಅನೇಕ ಕೇಂದ್ರಗಳನ್ನು ಸಿಯೋಲ್ ನಲ್ಲಿ ಸ್ಥಾಪಿಸಿದೆ.ಅಂತರಜಾಲ ಮತ್ತು ಸ್ಮಾರ್ಟ್ ಫೋನ್ ಗೀಳು ಹಚ್ಚಿಕೊಂಡಿರುವ ೨೪ರ ವಯೋಮಾನದೊಳಗಿನ ವ್ಯಸನಿಗಳಿಗೆ ಮೀಸಲಾದ ಈ ವ್ಯಸನಮುಕ್ತ ಕೇಂದ್ರಗಳಿಗೆ ಮೀಸಲಾದ ಈ ವ್ಯಸನದ ವ್ಯಸನದ ವ್ಯತಿರಿಕ್ತ ಪರಿಣಾಮದ ಅರಿವು,ಮಾಹಿತಿ,ಆಪ್ತಸಲಹೆ,ಶಿಕ್ಷಣ ಮತ್ತು ಪರ್ಯಾಯ ಚಟುವಟಿಕೆಗಳನ್ನು ಒದಗಿಸಲಾಗುತ್ತದೆ ಎಂಬುದು ಗಮನಾರ್ಹ ಸಂಗತಿ.
ಭಾರತದ ಪ್ರಮುಖ ಮಾನಸಿಕ ಆರೋಗ್ಯ ಸಂಸ್ಥೆಯಾಗಿರುವ 'ನಿಮ್ಹಾನ್ಸ್' ಕೂಡ ಅಂತರಜಾಲ ವ್ಯಸನ ಮುಕ್ತ ಕೇಂದ್ರವೊಂದನ್ನು ಆರಂಭಿಸಿದ್ದು ,ತಂತ್ರಜ್ಞಾನವನ್ನು ಹೇಗೆ ಸೀಮಿತ ಪರಿಧಿಯೊಳಗೆ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗುತ್ತದೆ.ಇಂಥದೇ ಕೇಂದ್ರಗಳು ಭಾರತದ ಇನ್ನೂ ಕೆಲವು ನಗರಗಳಲ್ಲಿ ಪ್ರಾರಂಭಿಸಲ್ಪಟ್ಟಿವೆ.ಅಂತರಜಾಲ ವ್ಯಸನಿಗಳ ಸಂಖ್ಯೆ ಹೆಚ್ಚುವ ಸೂಚನೆಗಳು ಹೊಮ್ಮಿರುವ ಹಿನ್ನಲೆಯಲ್ಲಿ,ದೇಶದ ಉದ್ದಗಲಕ್ಕೂಇಂಥ ಕೇಂದ್ರಗಳನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ತೆರೆದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವಲ್ಲಿ ಅದು ಪೂರಕವಾದೀತು.
ವಿಶ್ವದಲ್ಲೇ ಅತಿಹೆಚ್ಚಿನ ಯುವಸಮೂಹವನ್ನು ಹೊಂದಿದ ದೇಶ ಎಂಬ ಹೆಗ್ಗಳಿಕೆ ಭಾರತದ್ದು.ಆದರೆ,ಯುವಜನತೆಯಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸದಿದ್ದಲ್ಲಿ ಈ ಹೆಗ್ಗಳಿಕೆಗೇನೂ ಅರ್ಥವಿರುವುದಿಲ್ಲ.ನಮ್ಮ ಸಂಸ್ಕೃತಿಯ ಹೆಗ್ಗುರುತು ಆಗಿರುವ 'ಉತ್ತಮ ಕುಟುಂಬ ವ್ಯವಸ್ಥೆ'ಯೇ ಈ ಸಮಸ್ಯೆಗೆ ಪರಿಹಾರವನ್ನು ನೀಡಬಲ್ಲದು.ಆದರೆ ಅದಕ್ಕೂಮೊದಲು 'ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್' ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು;ಏಕೆಂದರೆ,ಇಂದಿಗೂ ನಮ್ಮಲ್ಲಿ ಹೆಚ್ಚಿನವರಿಗೆ ಇದೊಂದು ನಿಜವಾದ ಸಮಸ್ಯೆ ಎಂದೇ ಅನಿಸಿಲ್ಲ.
ಭಾರತವು ಈ ಸಮಸ್ಯೆಯೊಂದಿಗೆ ಸೆಣೆಸಬೇಕೆಂದರೆ ಒಂದು ಸಮರ್ಪಕ ವ್ಯವಸ್ಥೆಯ ಅವಶ್ಯಕತೆ ಇದೆ.ದೂರಸಂಪಕ,ಮಾನವ ಸಂಪನ್ಮೂಲ,ಆರೋಗ್ಯ ಹಾಗೂ ಆಯುಷ್ ಇಲಾಖೆಗಳು ಪರಸ್ಪರ ಕೈಜೋಡಿಸಿ ಇದಕ್ಕೊಂದು ಪರಿಹಾರೋಪಾಯವನ್ನು ಕಂಡುಕೊಳ್ಳುವುದಕ್ಕೆ ಈಗ ಸಂದರ್ಭ ಒದಗಿಬಂದಿದೆ.ಏಕೆಂದರೆ ಪರಿಸ್ಥಿತಿಯು ಇನ್ನೂ ವಿಕೋಪಕ್ಕೆ ಹೋಗಿಲ್ಲ.ಸಿಂಗಾಪುರದ ಸರ್ಕಾರ ರಚಿಸಿದ ಮಾದರಿಯಲ್ಲೇ ರಾಷ್ಟ್ರಮಟ್ಟದ ವ್ಯಸನ-ವರ್ಜನ ಸೇವೆಯೊಂದನ್ನು ಭಾರತದಲ್ಲಿ ಪ್ರಾರಂಭಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಚಿಂತನೆ ನಡೆಸಬೇಕು.ಸಂಪರ್ಕಜಾಲ ದಿನೇದಿನೆ ಹಬ್ಬುತ್ತಿರುವ ಈ ಕಾಲದಲ್ಲಿ,ಯಾರೊಬ್ಬರೂ ಅಂತರಜಾಲ ಬಳಕೆಯಿಂದ ಹಿಂದೆ ಸರಿಯುವುದು ಕಷ್ಟವೇ ಸರಿ.ಆದರೆ,'ಪರದೆ-ವ್ಯಸನ' ಲಕ್ಷಣಗಳು ಹಾಗೂ ಅದರ ನಿವಾರಣೋಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವುಮೂಡಿಸುವ ಕಾರ್ಯಕ್ರಮಗಳು ಸಮರೋಪಾದಿಯಲ್ಲಿ ರೂಪುಗೊಳ್ಳಬೇಕಿವೆ.