ಸದಸ್ಯ:ಭವ/sandbox1
ಅಸ್ಸಾಂ ರಾಜ್ಯದ ಜಾನಪದ ನೃತ್ಯಗಳು
ಬದಲಾಯಿಸಿಬಾಗುರಂಬಾ ನೃತ್ಯ
ಬದಲಾಯಿಸಿಸಾಮಾನ್ಯವಾಗಿ ಬೋಡೋ ಕನ್ಯೆಯರ ವಿಹಾರ ಕೇಂದ್ರಗಳಲ್ಲಿ ನಡೆಸಲಾಗುವ ಈ ಲಾಲಿತ್ಯಪೂರ್ಣವಾದ ಬಾಗುರಂಬಾ ನೃತ್ಯವು ದಿನದ ದುಡಿಮೆಯ ನಂತರ ಸಂಜೆಯ ವೇಳೆಗಳಲ್ಲಿ ನರ್ತಿಸಲಾಗುತ್ತದೆ.ನೃತ್ಯದ ತತ್ವ ಚಮತ್ಕಾರಿಕವಾಗಿರುತ್ತದೆ.ಸಾಲಾಗಿಯೂ,ಅರ್ಧವರ್ತುಲಾಕಾರವಾಗಿಯೂ ನಿಂತು ಸಂತೋಷದಿಂದ ನಲಿದು ತೂಗಿ ನರ್ತಿಸುವ ಈ ನೃತ್ಯ ಲಾಸ್ಯಪೂರ್ಣವಾಗಿದೆ.ಜೊತೆಗೆ ಬೋಡೋ ಪಂಗಡದ ದೇಶೀಯ ಸಂಗೀತ ವಾದ್ಯಗಳ ನಾದವೂ ಸೇರಿ ಅದಕ್ಕೆ ಮೆರಗು ನೀಡುತ್ತದೆ.
ಬಿಹು ನೃತ್ಯ
ಬದಲಾಯಿಸಿಅಸ್ಸಾಂಮಿನ ಋತುಪ್ರಮಾಣ ನೃತ್ಯಗಳಲ್ಲಿ ಅತಿ ಮುಖ್ಯವಾದವುಗಳ ಪೈಕಿ ಬಿಹು ನೃತ್ಯವೂ ಸೇರಿದೆ.ಚೈತ್ರದ ಕಡೆಯ ದಿನವೂ,ವೈಶಾಖದ ಮೊದಲ ದಿನವೂ ಸೇರಿಬರುವ ದಿನಗಳಲ್ಲಿ ಈ ನೃತ್ಯವನ್ನು ನಡೆಸಲಾಗುತ್ತದೆ.ಪ್ರಕೃತಿಯು ಚೆಲುವಿನಿಂದ ತುಂಬಿರುವ ಸಮಯದಲ್ಲಿ ಎಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಒಂದು ವಾರದ ಕಾಲ ಅತಿ ವೈಭವದಿ೦ದ ಆಚರಿಸಲಾಗುವ 'ಬೋಹಾಗ್ ಬಿಹು'ಸಮಾರ೦ಭದ ಅತಿಮುಖ್ಯ ಅ೦ಶಗಳಲ್ಲಿ ಬಿಹು ನೃತ್ಯವು ಸೇರಿದೆ.ಭಾವಪೂರಿತ ,ಪ್ರೇಮರಸ ತು೦ಬಿದ ಹಾಡುಗಳೊ೦ದಿಗೆ, ಹಿನ್ನಲೆ ಸ೦ಗೀತ ಸೇರಿ ಸಮಯೋಚಿತ ಸ೦ದರ್ಭಾನುಚಿತವಾಗಿ ಅಭಿನಯಿಸುವುದು ಈ ನೃತ್ಯದ ಪ್ರಧಾನಾ೦ಶ .ಇದು ಮಿಶ್ರ ನೃತ್ಯ. ಇದರಲ್ಲಿ ಢೋಲಾ,ಎಮ್ಮೆಯ ಕೊ೦ಬಿನಿ೦ದ ತಯಾರಿಸಲಾದ ಪೆಪಾ ಎ೦ಬ ಕೊಳಲು ಮತ್ತು ಲಕಾ ಎ೦ಬ ಬಿದಿರುವಾದ್ಯ ಮು೦ತಾದವು ಬಳಸಲ್ಪಡುತ್ತದೆ.
ಬೋಡೋ ನೃತ್ಯ
ಬದಲಾಯಿಸಿಬ್ರಹ್ಮಪುತ್ರ ಕಣಿವೆ ಪ್ರದೇಶದಲ್ಲಿ ಕಚ್ಚಾರಿಗಳೆಂಬ ಪ್ರಾಚೀನ ಪಂಗಡವೊಂದಿದೆ.ಇವರನ್ನು ಅಸ್ಸಾಂ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ ಹಲವು ಕಡೆಗಳಲ್ಲಿ ಹಲವು ಹೆಸರುಗಳಿಂದ ಕರೆಯುತ್ತಾರೆ.ಇದರಲ್ಲಿ ಉತ್ತರ ಕಚ್ಚಾರ್ ಗುಡ್ದಗಳಲ್ಲಿ ವಾಸಿಸುವವರನ್ನು ಬೋಡೋ ಪಂಗಡವೆಂದು ಕರೆಯುತ್ತಾರೆ.ಇವರು ಮೂಲತಃ ಇಂಡೋ-ಚೀನಾದ ಜನಾಂಗಗಳಿಗೆ ಸೇರಿದವರು.ಅಸ್ಸಾಮಿನ ಮಿಶ್ರ ಸಂಸ್ಕೃತಿಗೆ ಇವರು ಸಲ್ಲಿಸಿದ ಕಾಣಿಕೆಯು ಹಿರಿದಾದುದು.ಬೋಡೋ ಜನಪದ ನೃತ್ಯಗಳು ಮೂಲಕ್ಕೆ ಲೋಪ ತಂದುಕೊಳ್ಳದೆ ಅಚ್ಚಳಿಯದೆ ನಡೆದುಬಂದಿರುವ ಸಂಪ್ರದಾಯಕ್ಕೆ ಸೇರಿದವುಗಳು.ಶತಮಾನಗಳಿಂದ ತಮ್ಮ ಪ್ರಾಚೀನ ಗುಣವನ್ನು ಕಾಪಾಡಿಕೊಂಡು ಬಂದಿವೆ.ಕ್ಷಾತ್ರೀಯ ಅಥವಾ ಸಮರ ನೃತ್ಯಗಳಿಂದ ಪ್ರೇಮ ನೃತ್ಯಗಳಿಂದ ಪ್ರೇಮ ನೃತ್ಯಗಳವರೆಗೆ ಬೋಡೋ ನೃತ್ಯಗಳವರೆಗೆ ಬೋಡೋ ನೃತ್ಯಗಳಲ್ಲಿ ವೈವಿಧ್ಯತೆಯು ಕಂಡುಬರುತ್ತದೆ.
ನಾಗ ನೃತ್ಯಗಳು
ಬದಲಾಯಿಸಿಭಾರತೀಯ ನೃತ್ಯಗಳಲ್ಲಿ ಅತ್ಯಂತ ಸುಂದರ ಹಾಗೂ ಲಾಸ್ಯಪೂರ್ಣವಾದವುಗಳಲ್ಲಿ ಕೆಲವು ಅಸ್ಸಾಂ ಮತ್ತು ಉತ್ತರ ಬರ್ಮಾ ಪ್ರಾಂತ್ಯದ ನಡುವಿನ ಗಡಿಭಾಗದಲ್ಲಿ ವಾಸಿಸುವ ನಾಗಾ ಜನರಲ್ಲಿ ಕಂಡುಬರುತ್ತದೆ.ನಾಗಾ ಜನತೆ ಹಲವು ಪಂಗಡಗಳಾಗಿ ವಿಭಜನೆಗೊಂಡಿದೆ.ಒಂದೊಂದು ಪಂಗಡಕ್ಕೂ ಅದರದೇ ವೈಶಿಷ್ಟ್ಯಪೂರ್ಣವಾದ ನೃತ್ಯಗಳಿರುತ್ತವೆ.ಇವುಗಳಲ್ಲಿ ಹೆಚ್ಚು ಪ್ರಸಿದ‍್ಧಿ ಪಡೆದಿರುವ ನೃತ್ಯಗಳೆಂದರೆ ನಾಗಾ ಜನರ ಸಮರ ನೃತ್ಯಗಳು.ಇವು ಅಸ್ಸಾಂ ಮತ್ತು ಮಣಿಪುರಗಳಲ್ಲಿ ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಉಳಿಸಿಕೊಂಡು ಬರಲಾಗಿವೆ.ಸಮರ ವಾತಾವರಣವನ್ನು ಸೂಚಿಸುವ ಬಣ್ಣಗಳನ್ನು ಬಳಿದುಕೊಂಡು ತಲೆಗೆ ಕೊಂಬು ಹಾಗು ರೆಕ್ಕೆಗಳನ್ನು ಕಟ್ಟಿಕೊಂಡು,ವಿವಿಧ ಮಣಿಗಳ,ಕೊಂಬುಗಳ,ಕೆಲವು ವೇಳೆಗಳಲ್ಲಿ ಎಲುಬುಗಳಿಂದಲೂ ಆದ ಆಭರಣಗಳನ್ನು ತೊಟ್ಟು ನಾಗರು ಈ ನೃತ್ಯವನ್ನು ಅಭಿನಯಿಸುತ್ತಾರೆ.