ಸದಸ್ಯ:ಭವ/ನನ್ನ ಪ್ರಯೋಗಪುಟ2

ಮಣಿಪುರಿ ನೃತ್ಯ ಪದ್ಧತಿ ಬದಲಾಯಿಸಿ

ಭಾರತ ದೇಶದ ಪೂರ್ವದಲ್ಲಿ ಅಸ್ಸಾಂ ಮತ್ತು ಭಾರತ,ಬರ್ಮಾ ಗಡಿಗಳ ಮಧ್ಯೆ ಇರುವ ಮಣಿಪುರ ಪ್ರಾಂತ್ಯದಲ್ಲಿ ನರ್ತಿಸಲಾಗುವ ನೃತ್ಯ ಪದ‍್ಧತಿಗೆ ಮಣಿಪುರಿ ಎನ್ನುತ್ತಾರೆ.ಮಣಿಪುರದ ಜನರ ನಾಡಿಗಳಲ್ಲಿ ಸಂಗೀತ ನೃತ್ಯಗಳು ತನಗೆ ತಾನೇ ಪ್ರವಹಿಸುತ್ತಿದೆಯೇನೋ ಎನ್ನುವಷ್ಟು ಈ ಕಲೆಗಳು ಮಣಿಪುರ ಜನಜೀವನದ ಅವಿಭಾಜ್ಯ ಅಂಗವಾಗಿದೆ.ಮೊದಲಿಗೆ ಪ್ರಕೃತಿಯಿಂದ ಸ್ಫೂರ್ತಿಗೊಂಡು ನರ್ತಿಸುತದ್ದ ನೃತ್ಯಗಳು ಕ್ರಮವಾಗಿ ಶಿವ ಪಾರ್ವತಿಯರ ಆರಾಧನೆಗೆ ನಂತರ ವೈಷ್ಣವ ಪಂಥದ ಧರ್ಮ ಪ್ರಚಾರಕ್ಕೆ ತೊಡಗಿದುದು ಭಾರತದ ಎಲ್ಲೆಡೆಯೂ ನಡೆದು ಬಂದ ರೀತಿ.ಮೈಥಿಗಳು ಮತ್ತು ವಿಷ್ಣುಪ್ರಿಯರು ಎಂಬ ಎರಡು ಪಂಗಡುಗಳು ಮಣಿಪುರದಲ್ಲಿ ದೈವಭಕ್ತಿಯಿಂದ ಹಲವಾರು ನೃತ್ಯಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಮೊಯಿರಂಗ ಪ್ರಭಾ ಎಂಬ ಪುರಾಣ ಕಥೆಯೊಂದರಂತೆ ಶಿವ ಪಾರ್ವತಿಯರು ಕಂಬ ಮತ್ತು ತೊಯಿಬಿ ಎಂಬುವವರಾಗಿ ಹುಟ್ಟಿ,ಪ್ರಣಯದಲ್ಲಿ ಸಿಲುಕಿ ನಂತರ ಮರಣಕ್ಕೀಡಾದ ಸಂಗತಿಯನ್ನು ಲೈಹರೋಬ ಎಂಬ ನೃತ್ಯಪದ್ಧತಿಯಲ್ಲಿ ಇಂದಿಗೂ ನರ್ತಿಸುತ್ತಾರೆ. ಕ್ರಿ.ಶ. ೧೫೪ನೇ ಇಸವಿಯಲ್ಲಿ ತಾಮ್ರ ಪತ್ರ ಒಂರರಲ್ಲಿ ರಾಜ ಕೋವೈ ತಂಪಕ ಎಂಬುವವ ಮಣಿಪುರದ ಪೂಂಗ್ ಎಂಬ ಮೃದಂಗವನ್ನು,ತಾಳವನ್ನು ಉಪಯೋಗಿಸಲು ಪ್ರವರ್ತಿಸಿದನೆಂದಿದೆ.

ಅಭ್ಯಾಸ ಕ್ರಮ ಬದಲಾಯಿಸಿ

ನೋಡಲು ಲಾವಣ್ಯಮಯವಾಗಿ ಕಂಡರೂ,ಶಾಸ್ತ್ರೀಯತೆಗೆ ಹೆಚ್ಚು ಗಮನ ಕೊಡುತ್ತವೆ ಮಣಿಪುರಿ ರಾಸನೃತ್ಯಗಳು.ಮುಖಾಭಿನಯವಿಲ್ಲದಿರುವುದರಿಂದ ಮೈ ಬಳಸುವ ರೀತಿಯಲ್ಲಿ ಅನೇಕ ಭಾವನೆಗಳನ್ನು ಹೊರತರುತ್ತಾರೆ ಈ ನರ್ತಕಿಯರು.

ಭಾಗ್ಯಚಂದ್ರ ರಚಿಸಿದ ಗೋವಿಂದ ಲೀಲಾ ವಿಲಾಸದಲ್ಲಿ ಬರುವ ಹಸ್ತಮುದ್ರೆಗಳನ್ನು ಉಪಯೋಗಿಸುತ್ತಾರೆ.ರಾಸ ನೃತ್ಯದ ನೃತ್ತ ಭಾಗಗಳನ್ನು ಚಾಲಿ ಎಂದು ಕರೆಯುತ್ತಾರೆ.ಐದು ರೀತಿಯ ಭಂಗಿ ಫರೇಂಗ್ ಎಂಬ ಬಾಗುವಿಕೆ,ಚಲನೆ,ಭಂಗಿಗಳನ್ನು ಅಭ್ಯಾಸ ಮಾಡುತ್ತಾರೆ.

ಇದರಲ್ಲಿ ೩ ಲಾಸ್ಯ ರೀತಿಯಲ್ಲೂ ೨ ತಾಂಡವ ರೀತಿಯಲ್ಲಿ ಇವೆ.ಈ ಭಂಗಿ ಫರೇಂಗ್ ಗಳಲ್ಲಿ ಲವಲೇಶವೂ ವ್ಯತ್ಯಾಸ ಬಾರದಂತೆ ಅಭ್ಯಾಸ ಮಾಡುತ್ತಾರೆ. ರಾಸನೃತ್ಯವೂ ಹಲವು ರಾತ್ರಿ ನಡೆಯುತ್ತದೆ.ಮೊದಲು ತಾಳ,ಮೃದಂಗಗಳನ್ನು ನುಡಿಸಿ,ಪ್ರಾರ್ಥನೆಯಿಂದ ಸಾಯಂಕಾಲದ ವೇಳೆ ಕಾರ್ಯಕ್ರಮ ಆರಂಭವಾಗುತ್ತದೆ.ರಾಸನೃತ್ಯ ರಾತ್ರಿಯಿಂದ ಬೆಳಗಿನ ಜಾವದವರೆಗೂ ನಡೆಯುತ್ತದೆ.ಕೃಷ್ಣನ ಅಭಿಸಾರದಿಂದ ತೊಡಗಿ,ರಾಧೆಯ ಅಭಿಸಾರ,ಕೃಷ್ಣನ ನೃತ್ಯ,ಅವನು ಕಾಣದಾಗುವಿಕೆ,ಗೋಪಿಯರ ವಿರಹ ನಂತರ ಅವನ ಪುನರಾಗಮನ,ಪುಷ್ಪಾಂಜಲಿ,ಆರತಿ ಹೀಗೆ ನಡೆಯುತ್ತದೆ ಒಂದು ರಾಸನೃತ್ಯ.

ಲೈಹರೋಬ,ರಾಸನೃತ್ಯಗಳಲ್ಲದೆ ಸಂಕೀರ್ತನ ಎಂಬ ೩ನೆಯ ನೃತ್ಯ ಪದ್ಧತಿಯೊಂದು ಮಣಿಪುರದಲ್ಲಿ ಪ್ರಚಲಿತವಿದೆ.ಚೈತನ್ಯ ಮಹಾ ಪ್ರಭುವಿನಿಂದ ಪ್ರಭಾವಿತವಾದ ವೈಷ್ಣೌ ಧರ್ಮದ ಕೊಡುಗೆ ಇದು.ತಾಳ ಮದ್ದಳೆಗಳೊಡನೆ ದೇವರನ್ನು ಕೀರ್ತಿಸುತ್ತಾ ಎಲ್ಲರೂ ಸೇರಿ ಹಾಡಿ ಕುಣಿವ ಪದ್ಧತಿ ಇದು.ದೇವಾಲಯದ ಉತ್ಸವಗಳಲ್ಲಿ ಮದುವೆ,ನಾಮಕರಣ,ಸಂತೋಷ,ಸಂಭ್ರಮಗಳಲ್ಲಿ ಸಂಕೀರ್ತನಗೈಯುತ್ತಾರೆ.ಇದರಲ್ಲಿ ಎರಡು ಮುಖ್ಯವಾದ ಭಾಗಗಳಿವೆ.ಪೂಂಗ್ಚೋಲನ್ ಮತ್ತು ಕರತಾಳ ಚೋಲನ್.ಪೂಂಗ್ ಎಂಬ ಮೃದಂಗವನ್ನು ಹೆಗಲಿಂದ ಇಳಿಬಿಟ್ಟು ಹೊಡೆಯುತ್ತಾ ನಾನಾ ತಾಳಲಯಗಳನ್ನು ನುಡಿಸುತ್ತಾ ಕಸರತ್ತುಗಳನ್ನು ಸಹ ಮಾಡುವ ರೋಮಾಂಚಕಾರಿ ನರ್ತನವಿದು.ಹಲವರಿಂದ ಹಿಡಿದು ನೂರಾರು ಜನರವರೆಗೆ ಸೇರಿ ನರ್ತಿಸುತ್ತಾರೆ.ಬಿಳಿಯ ದೋತಿ ಪೇಟ ಧರಿಸಿ ಶಲ್ಯವನ್ನು ಹೆಗಲಿಂದ ಪೂಂಗಿನ ಮೇಲೆ ಹಾಯಿಸಿ ನರ್ತಿಸುವ ಬಗೆ ಅತಿ ಸುಂದರ. ಕೈಯಲ್ಲಿ ಕೆಂಪುದಾರದಿಂದ ಮಾಡಿದ ತಾಳಗಳನ್ನು ಹಿಡಿದು ತಟ್ಟುತ್ತಾ,ನರ್ತಿಸುವುದು ಕರತಾಳ ಚೋಲಂ.ನಾನಾಗತಿಗಳನ್ನು ತೋರಿಸಿ ನರ್ತಿಸುತ್ತಾರೆ.ಮೇಲಿನಂತೆಯೇ ಪಂಚೆ,ಶಲ್ಯ,ಪೇಟ ಧರಿಸಿ ಗಂಡಸರುನ ಮಾತ್ರ ಈ ಎರಡು ನೃತ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ.ಇವುಗಳನ್ನು ದೇವರ ಸೇವೆಗೆ ನರ್ತಿಸುವುದು ಸಾಧಾರಣ.