ಸದಸ್ಯ:ಭವ/ನನ್ನ ಪ್ರಯೋಗಪುಟ
ಸ್ತ್ರೀ ಶೋಷಣೆ
ಬದಲಾಯಿಸಿನಮ್ಮ ಸಮಾಜದಲ್ಲಿ ಸ್ತ್ರೀಯರ ಶೋಷಣೆ ನಿರಂತರ ನಡೆದಿರುವುದು.ಸಂವಿಧಾನದಲ್ಲಿ ಸ್ತ್ರೀಯರಿಗೆ ಮತ್ತು ಪುರುಷರಿಗೆ ಸಮಾನ ಹಕ್ಕುಗಳು ಇವೆ.ಆದರೆ,ಸಮಾಜದಲ್ಲಿ ಸ್ತ್ರೀಯರಿಗೆ ಸಮಾನ ಸ್ಥಾನ ಎಲ್ಲಿದೆ?ಸ್ತ್ರೀ ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಹಿಂದಿರುವಳು.ಆಕೆಗೆ ಆರ್ಥಿಕ ಸ್ವಾತಂತ್ರ್ಯತೆ ಕಡಿಮೆ.ಸ್ತ್ರೀ ಪುರುಷ ಪ್ರಧಾನ ಸಮಾಜದಲ್ಲಿ ಹಿಂದೆ ಬಿದ್ದಿರುವಳು.ಅವಳು ಪುರುಷರ ಗುಲಾಮರಾಗಿರುವಳು.ಅವಳು ಶೋಷಣೆಗೆ ಒಳಗಾಗಿರುವಳು.ಸ್ತ್ರೀಯರಲ್ಲಿ ಅನಕ್ಷರತೆ ಹೆಚ್ಚು.ಪತಿ ಇಲ್ಲದ ಸ್ತ್ರೀ ಸಮಾಜದಲ್ಲಿ ನಿರ್ಗತಿಕಳಾಗಿರುವಳು.ಅವಳಿಗೆ ಮುಂದೆ ಬರುವ ಅವಕಾಶಗಳು ಕಡಿಮೆ.
ಪುರುಷರ ಮತ್ತು ಸ್ತ್ರೀಯರ ಸಂಖ್ಯೆ ಸಮವಾಗಿದೆ.ಆದರೆ ಲೋಕಸಭೆಯಲ್ಲಿ ಮತ್ತು ಶಾಸನ ಸಭೆಗಳಲ್ಲಿ ಆಕೆಗೆ ಸಾಕಷ‍್ಟು ಪ್ರಾತಿನಿಧ್ಯವಿಲ್ಲಿ.ಹೆಣ್ಣಿಗೆ ಅವಕಾಶ ದೊರೆತರೆ ಮುಂದೆ ಬರುವಳು ಎಂಬುದು ಸ್ವಾರ್ಥ ಸಮಾಜಕರ ಧೋರಣೆಯಾಗಿದೆ.ಅಡಿಗೆ ಮನೆಯೇ ಹೆಣ್ಣಿನ ಅವಾಸಸ‍್ಥಾನವಾಗಿ ಬಿಟ್ಟಿದೆ.ಹೆಣ್ಣು ಅಲ್ಲಿಂದ ಹೊರಬಂದು ತನ್ನ ಮನೋಭೂಮಿಕೆಯನ್ನು ವಿಶಾಲಗೊಳಿಸಿಕೊಳ್ಳಬೇಕು.ಅದರೊಂದಿಗೆ ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರಬೇಕು.ಸ್ತ್ರೀಯರನ್ನು ಸಮಾಜದಲ್ಲಿ ತುಚ‍್ಛವಾಗಿ ಕಾಣಲಾಗುತ್ತಿದೆ.ಆಕೆಯನ್ನು ಮಾರಾಟದ ವಸ್ತುವನ್ನಾಗಿ ನೋಡಲಾಗುತ್ತಿದೆ.ಇದಕ್ಕೆ ವರದಕ್ಷಿಣೆ ಪ್ರಧಾನವಾಗಿದೆ.ವಿದ್ಯಾವಂತ ಸಮಾಜಕರೇ ಈ ದುಷ್ಟ ಪದ್ಧತಿಗೆ ಸ್ಪೂರ್ತಿಪ್ರಾಯರಾಗಿದ್ದಾರೆ.ಎಷ್ಟೋ ಹುಡುಗಿಯರು ವರದಕ್ಷಿಣೆ ಕೊಡಲು ಸಾಧ್ಯವಾಗದೆ ಮದುವೆ ಆಗದೇ ಉಳಿದಿರುವರು.ಆದ ಕಾರಣ ಹೆಣ್ಣು ಮಕ್ಕಳು ಕುಟುಂಬದಲ್ಲಿ ಭಾರವಾಗಿದ್ದಾರೆ.ಮದುವೆ ಆದ ನಂತರವೂ ಈ ಸಮಾಜದಲ್ಲಿ ಹೆಣ್ಣಿನ ಜೀವನ ನರಕಪ್ರಾಯವಾಗಿರುತ್ತದೆ.
ಗಂಡನು ಅದಂತವನೇ ಆಗಿದ್ದರೂ ಅವನೊಡನೆ ಸಂಸಾರ ನಡೆಸಬೇಕು.ಕುಡುಕನಾದರಂತೂ ಆಕೆಯ ಪಾಡು ಅಕ್ಷರಶಃ ನರಕ ಸದೃಶ್ಯವಾಗಿರುತ್ತದೆ.ಕುಡಿದು ಆಕೆಯನ್ನು ದನ ಬಡಿದಂತೆ ಬಡಿಯುವುದು ಸಾಮಾನ್ಯ ಸಂಗತಿ.ಹೆಣ್ಣೊಂದು ಕಾಮಭೋಗ ವಸ್ತುವೆಂದು ಅಥವಾ ಮಕ್ಕಳನ್ನು ಹೆರುವ ಯಂತ್ರವೆಂದೂ ಭಾವಿಸುವ ಕ್ರೂರ ಸಮಾಜವಿದು.ಎಲ್ಲವೂ ಪುರುಷ ಪ್ರಧಾನ ರೀತಿ-ನೀತಿಗಳು.ಹೆಂಡತಿ ಸತ್ತರೆ ಗಂಡ ಇನ್ನೊಂದು ಮದುವೆಯಾಗಬಹುದು.ಆದರೆ ಗಂಡ ಸತ್ತರೆ ಹೆಣ್ಣು ಇನ್ನೊಂದು ಮದುವೆಯಾದರೆ ಅದು ಸಮಾಜದಲ್ಲಿ ಪಾಪ ಎಂದು ಪರಿಗಣಿಸುತ್ತಾರೆ.ತಲೆ ಬೋಳಿಸಿಕೊಂಡು ದೇವರ ಮನೆಯಲ್ಲೊ ಅಥವಾ ಅಡುಗೆ ಮನೆಯಲ್ಲೋ ಬಿದ್ದಿರಬೇಕು.ಹೀಗೆ ಪುರುಷರು ಸ್ತ್ರೀಯರನ್ನುಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿರುವರು.ಇದನ್ನೇ ಸ್ತ್ರೀ ಶೋಷಣೆ ಎನ್ನುವುದು.ಇನ್ನೂ ಸ್ತ್ರೀಯರಲ್ಲಿ ಸಂಘಟನೆಯಿಲ್ಲ.ಆದ್ದರಿಂದ ಅವರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.ಸ್ತ್ರೀಯರು ಬೇಗ ಜಾಗೃತರಾಗಿ ತಮ್ಮ ಪಾಲಿನ ಹಕ್ಕಿಗಾಗಿ ಸವಾಲು ಹಾಕಿ ಹೋರಾಟ ನಡೆಸಬೇಕು.
ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಈ ಶೋಷಣೆಯನ್ನು ನಿಲ್ಲಿಸಬೇಕಾದರೆ ನಾವೆಲ್ಲರು ಎಚ್ಚೆದ್ದುಕ್ಕೊಳ್ಳಬೇಕು.ನಮ್ಮ ಆಸುಪಾಸಿನಲ್ಲಿ ಈ ರೀತಿಯ ಶೋಷಣೆಯೇನಾದರು ನಡೆದರೆ ನಾವು ಅದರ ವಿರುದ್ಧ ಹೋರಾಡಬೇಕು.ಹೆಣ್ಣು ಗಂಡು ಈ ಯಾವುದರ ಭೇದಭಾವವಿಲ್ಲದೆ ನಾವು ಮುಂದುವರಿಯಬೇಕು.ನಮ್ಮನ್ನು ಹೆತ್ತ ತಾಯಿ ಹೆಣ್ಣು ,ನಮಗೆ ಆಸರೆಕೊಟ್ಟ ಭೂಮಿತಾಯಿ ಹೆಣ್ಣು ಹಾಗಾಗಿ ನಮ್ಮ ಜೀವನವೇ ಈ ಹೆಣ್ಣಿನ ಋಣದ ಮೇಲೆ ನಿಂತಿದೆ.ಹೆಣ್ಣಿನ ರಕ್ಷಣೆಯಾಗಲೀ....ಶೋಷಣೆಯಲ್ಲ....