ಸದಸ್ಯ:ಪ್ರಶಸ್ತಿ/sandbox1
ಭೂಉಷ್ಣ ಶಕ್ತಿ
ಬದಲಾಯಿಸಿಭೂಮಿಯಲ್ಲಿ ಉಷ್ಣಾಂಶದ ರೂಪದಲ್ಲಿ ಅಡಗಿರುವ ಶಕ್ತಿಯೇ ಭೂಉಷ್ಣ ಶಕ್ತಿ(Geothermal Energy).ಭೂಮಿಯ ಒಳಗಿರೋ ವಸ್ತುಗಳ ವಿಕಿರಣಕ್ಷಯ(radioactive decay)ಯಿಂದ ಉಷ್ಣಶಕ್ತಿಯ ಉತ್ಪಾದನೆಯಾಗುತ್ತದೆ. ಭೂಮಿಯ ಒಳಪದರದಿಂದ ಹೊರಪದರಗಳತ್ತ ವಾಹಕತೆ/ಈಸುಕೆ(conduction)ಯ ಮೂಲಕ ನಿರಂತರವಾಗಿ ಉಷ್ಣಾಂಶದ ವರ್ಗಾವಣೆಯಾಗುತ್ತಿರುವುದರಿಂದ ಭೂಮಿಯ ಆಳಕ್ಕೆ ಇಳಿಯುತ್ತಿದ್ದಂತೆ ಉಷ್ಣಾಂಶವೂ ಹೆಚ್ಚುತ್ತಾ ಹೋಗುತ್ತದೆ.Geothermal Energy ಎನ್ನುವ ಪದವು ಗ್ರೀಕಿನ γη (ge)= ಭೂಮಿ, and θερμος (thermos)=ಶಾಖ ಎಂಬ ಪದಗಳಿಂದ ವ್ಯುತ್ಪತ್ತಿಯಾಗಿದೆ.
ಇತಿಹಾಸ
ಬದಲಾಯಿಸಿಪೂರ್ವ ಶಿಲಾಯುಗದ ಕಾಲದಿಂದಲೇ ಬಿಸಿನೀರಿನ ಬುಗ್ಗೆಗಳ ನೀರನ್ನು ಸ್ನಾನಕ್ಕೆ ಬಳಸಲಾಗುತ್ತಿತ್ತೆಂಬ ಉಲ್ಲೇಖಗಳಿವೆ.ಚೀನಾದ ಲಿಸಾನ್ ಬೆಟ್ಟದಲ್ಲಿ ಕ್ವಿನ್ ರಾಜವಂಶಸ್ಥರು ಕ್ರಿ.ಪೂ ಮೂರನೇ ಶತಮಾನದಲ್ಲೇ ಕಟ್ಟಿದ್ದೆನ್ನಲಾದ ಸ್ನಾನಕೊಳ ಇಲ್ಲಿಯವರೆಗೆ ಸಿಕ್ಕ ಅತೀ ಪುರಾತನ ಬಿಸಿನೀರಿನ ಸ್ನಾನಕೊಳ.ಕ್ರಿ.ಶ ಒಂದನೇ ಶತಮಾನದಲ್ಲಿ ಇಂಗ್ಲೆಂಡಿನ ಅಕ್ವೆ ಸೋಲಿಸ್ [೧] ಅನ್ನು ಆಕ್ರಮಿಸಿದ ರೋಮನ್ನರು ಅಲ್ಲಿದ್ದ ಬಿಸಿನೀರಿನ ಬುಗ್ಗೆಗಳನ್ನು ಸಾರ್ವಜನಿಕ ಸ್ನಾನದ ಕೊಳಗಳಿಗಾಗಿ ಉಪಯೋಗಿಸಿದರು.ಆ ಸ್ನಾನದಕೊಳಗಳ ಪ್ರವೇಶಕ್ಕೆ ವಿಧಿಸಲಾಗುತ್ತಿದ್ದ ಶುಲ್ಕ ಭೂಉಷ್ಣಶಕ್ತಿಯ ಮೊದಲ ವಾಣಿಜ್ಯ ಬಳಕೆ ಎಂದು ಹೇಳಲಾಗುತ್ತದೆ. ೧೪ನೇ ಶತಮಾನದಲ್ಲಿಯೇ ಫ್ರಾನ್ಸಿನ ಕಾಡೆಸ್ ಐಗಸ್ನಲ್ಲಿ ಉಷ್ಣ ಶಕ್ತಿಯನ್ನು ಬಳಸಿ ಇಡೀ ಜಿಲ್ಲೆಯನ್ನು ಬೆಚ್ಚಗಿಡುವಷ್ಟು ದೊಡ್ಡ ಮಟ್ಟದ ವ್ಯವಸ್ಥೆ ಕಾರ್ಯಾರಂಭ ಮಾಡಿತ್ತು.ಇದು ಇಷ್ಟು ದೊಡ್ಡ ಮಟ್ಟದಲ್ಲಿ ಭೂಉಷ್ಣ ಶಕ್ತಿಯನ್ನು ಬಳಸಿದ ಮೊದಲ ಉದಾಹರಣೆ.೧೮೨೭ರಲ್ಲಿ ಇಟಲಿಯ ಲಾರ್ಡೆರೆಲ್ಲೋವಿನಲ್ಲಿ ಜ್ವಾಲಾಮುಖಿಗಳಿಂದ ಬೋರಿಕ್ ಆಸಿಡ್ಡನ್ನು(boric acid) ತೆಗೆಯಲು ನಡೆದ ಪ್ರಯತ್ನ ಭೂಉಷ್ಣಾಂಶದ ಮೊದಲ ಕೈಗಾರಿಕಾ ಬಳಕೆಯೆಂದು ಹೇಳಬಹುದು.
ನೇರಬಳಕೆ
ಬದಲಾಯಿಸಿ೨೦೧೫ರಲ್ಲಿ ಭೂಉಷ್ಣಾಂಶವನ್ನು ನೇರವಾಗಿ ಬಳಸಿದ ದೇಶಗಳ ವಿವರ, ಮಿಲಿಯನ್ ವ್ಯಾಟ್ಗಳಲ್ಲಿ(MW) [೨]
ದೇಶ | ೨೦೧೫ ರ ಬಳಕೆ(ಮಿಲಿಯನ್ ವ್ಯಾಟ್ಗಳಲ್ಲಿ) |
---|---|
ಅಮೇರಿಕಾ | ೧೭೪೧೫.೯೧ |
ಫಿಲಿಫೈನ್ಸ್ | ೩.೩೦ |
ಇಂಡೋನೇಷ್ಯ | ೨.೩೦ |
ಮೆಕ್ಸಿಕೋ | ೧೫೫.೮೨ |
ಇಟಲಿ | ೧೦೧೪.೦೦ |
ಜಪಾನ್ | ೨೧೮೬.೧೭ |
ಇರಾನ್ | ೮೧.೫೦ |
ಎಲ್ ಸಾಲ್ವಡಾರ್ | ೩.೩೬ |
ನ್ಯೂಜಿಲ್ಯಾಂಡ್ | ೪೮೭.೪೫ |
ಐಸ್ ಲ್ಯಾಂಡ್ | ೨೦೪೦.೦೦ |
ಕೀನ್ಯಾ | ೨೨.೪೦ |
ಕೋಸ್ಟಾರಿಕಾ | ೧.೦೦ |
ರಷ್ಯಾ | ೩೦೮.೨೦ |
ಟರ್ಕಿ | ೨೮೮೬.೩೦ |
ಪಪವಾ ನ್ಯೂ ಗಿನಿ | ೦.೧೦ |
ಗ್ವಾಟೆಮಾಲ | ೨.೩೧ |
ಪೋರ್ಚುಗಲ್ | ೩೫.೨೦ |
ಚೀನಾ | ೧೭೮೭೦.೦೦ |
ಫ್ರಾನ್ಸ್ | ೨೩೪೬.೯೦ |
ಇಥಿಯೋಪಿಯಾ | ೨.೯೦ |
ಜರ್ಮನಿ | ೨೮೪೮.೬೦ |
ಆಸ್ಟ್ರಿಯಾ | ೯೦೩.೪೦ |
ಆಸ್ಟ್ರೇಲಿಯಾ | ೧೬.೦೯ |
ಥಾಯ್ ಲ್ಯಾಂಡ್ | ೧೨೮.೫೧ |
ವಿದ್ಯುತ್ ಶಕ್ತಿಯಾಗಿ ಬಳಕೆ
ಬದಲಾಯಿಸಿಅಂತರರಾಷ್ಟ್ರೀಯ ಭೂಉಷ್ಣ ಸಂಘ International Geothermal Association (IGA) ನ ವರದಿಯ ಪ್ರಕಾರ ೨೪ ದೇಶಗಳು ೨೦೧೦ರಲ್ಲಿ ಭೂಉಷ್ಣಶಕ್ತಿಯನ್ನು ಬಳಸಿ ೬೭,೨೪೬ ಗಿಗಾ ವ್ಯಾಟನಷ್ಟು ವಿದುತ್ತನ್ನು ತಯಾರಿಸಿದವು .ಇದು ೨೦೧೫ಕ್ಕಿಂತ ೨೦% ಹೆಚ್ಚಳ ಕಂಡಿದೆ.IGA ಪ್ರಕಾರ ಇದು ಇನ್ನೂ ೧೮೫೦೦ ರಷ್ಟು ಹೆಚ್ಚಳ ಕಾಣೋ ಸಾಧ್ಯತೆಯಿದೆ.
ಭೂಮಿಯ ಫಲಕಗಳು ಒಂದನ್ನೊಂದು ಸಂಧಿಸೋ ಸ್ಥಳಗಳಲ್ಲಿನ ಭೂಉಷ್ಣದ ತಾಪಮಾನ ಉಳಿದ ಸ್ಥಳಗಳಿಗಿಂತ ಹೆಚ್ಚಿರುವುದರಿಂದ ಭೂಉಷ್ಣದಿಂದ ವಿದ್ಯುತ್ ಶಕ್ತಿಯನ್ನು ತಯಾರಿಸೋ ಕೇಂದ್ರಗಳನ್ನು ಸಾಮಾನ್ಯವಾಗಿ ಆ ಸ್ಥಳಗಳಲ್ಲಿ ನಿರ್ಮಿಸಲಾಗುತ್ತದೆ.
ವಿಧಗಳು
ಬದಲಾಯಿಸಿ- ದ್ರವ ಮೇಲ್ಮೆಯ ವ್ಯವಸ್ಥೆಗಳು(Liquid dominated systems)
- ಉಷ್ಣ ಶಕ್ತಿ(Thermal energy)
- ಸುಧಾರಿತ ಭೂಉಷ್ಣ ಶಕ್ತಿ(Enhanced Geothermal Energy)