ಸದಸ್ಯ:ಪರಾಶರ ಐನಕೈ/ನನ್ನ ಪ್ರಯೋಗಪುಟ2

ಗ್ಯಾರಿ ಓಲ್ಡ್ಮನ್

ಬದಲಾಯಿಸಿ

ಹಾಲಿವುಡ್ ನಟ, ಚಲನಚಿತ್ರ ನಿರ್ಮಾಪಕ, ಸಂಗೀತಗಾರ. ನ್ಯೂ ಕ್ರಾಸ್ ಲಂಡನ್ ನಲ್ಲಿ ಮಾರ್ಚ್ 21, 1958 ರಲ್ಲಿ ಜನಿಸಿದರು. (ವಯಸ್ಸು 60). 1979 ರಿಂದ ಇಲ್ಲಿಯ ತನಕ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದಾರೆ. ಇವರು ರಂಗಭೂಮಿ ಚಲನಚಿತ್ರ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಓರ್ವ ಇಂಗ್ಲೀಷ್ ನಟ. ತನ್ನ ಬುದ್ದಿ ಮತ್ತು ಅಭಿವ್ಯಕ್ತಿಗೆ ಹಾಗು ವಿಶಿಷ್ಟ ನಟನಾ ಶೈಲಿಯಿಂದ ಹೆಸರುವಾಸಿಯಾದ ಓಲ್ಡ್ಮನ್ ಅವರ ಪೀಳಿಗೆಯ ಶ್ರೇಷ್ಠ ನಟನೆಂದು ಪರಿಗಣಿಸಲಾದವರು. ಅವರು ಅಕಾಡೆಮಿ ಪ್ರಶಸ್ತಿ, ಮೂರು ಪ್ರಶಸ್ತಿಗಳು, ಎರಡು ವಿಮರ್ಶಕರ ಆಯ್ಕೆ ಪ್ರಶಸ್ತಿಗಳು, ಗೋಲ್ಡನ್ ಗ್ಲೊಬ್ ಪ್ರಶಸ್ತಿ, ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ, ಎಮ್ಮಿ ಪ್ರಶಸ್ತಿ ಮತ್ತು ಪಾಲ್ ಡಿ ಒರ್ಗೆ ನಾಮ ನಿರ್ದೇಶನಗೊಂಡಿದ್ದಾರೆ. 2011 ರಲ್ಲಿ ಎಂಪೈರ್ ಓದುಗರು ಅವರನ್ನು ಎಂಪೈರ್ ಐಕಾನ್ ಪ್ರಶಸ್ತಿಗೆ ಬಾಜನರಾಗುವಂತೆ ಮಾಡಿದರು. ಓಲ್ಡ್ಮನ್ ಟ್ರೂ ರೊಮಾನ್ಸ್(1993), ದಿ ಫಿಫ್ತ್ ಎಲಿಮೆಂಟ್(1997), ಏರ್ ಫೋರ್ಸ್ ಒನ್(1997) ಮತ್ತು ದಿ ಕಂಟೆಂಡರ್(2000) ಮುಂತದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಧ ಪ್ರೊಫೆಶನಲ್(1994) ಸಿನಿಮಾದ ಮಹಾನ್ ಖಳನಾಯಕರಲ್ಲಿ ಒಬ್ಬನಾಗಿದ್ದಾರೆ. ಅವರು ಇಮ್ಮಾರ್ಟಲ್ ಬೆಲಡ್ (1994) ನಲ್ಲಿ ಲುಡ್ವಿಗ್ ವ್ಯಾನ್ ಬೀಥೊವೆನ್ ಅವರ ಮೆಚ್ಚುಗೆಯ ಓದುವಿಕೆಯನ್ನು ನೀಡಿದರು. 21ನೇ ಶತಮಾನದಲ್ಲಿ ಹ್ಯಾರಿ ಪಾಟರ್ ಸರಣಿಗಳಲ್ಲಿ ಸಿರಿಯಸ್ ಬ್ಲ್ಯಾಕ್, ದಿ ಡಾರ್ಕ್ ನೈಟ್ ಟ್ರೈಲಜಿಯಲ್ಲಿ ಜೇಮ್ಸ್ ಗಾರ್ಡನ್, ಕುಂಗ್ ಫೂ ಪಾಂಡ 2 ನಲ್ಲಿ ಲಾಂಗ್ ಶೆನ್ ಆಗಿ, ಟಿಂಕರ್ ಟೈಲರ್ ಸೋಲ್ಜರ್ ಸ್ಪೈ ನಲ್ಲಿ ಜಾರ್ಜ್ ಸ್ಮಿಲಿ, ಪ್ಲಾನೆಟ್ ಆಫ್ ದಿ ಏಪ್ಸ್ ನಲ್ಲಿ ಡ್ರೇಫಸ್ ಮತ್ತು ಡಾರ್ಕೆಸ್ಟ್ ಅವರ್ನ್ ನಲ್ಲಿ ವಿನ್ಸ್ಟನ್ ಚರ್ಚಿಲ್( ಇದು ಅವರಿಗೆ ಆಸ್ಕರ್ ಗರಿಯನ್ನು ತಂದು ಕೊಟ್ಟಿತು). ಅವರು ನಟಿಸಿದ ಚಿತ್ರಗಳು $ 10.9 ಶತಕೋಟಿಯಷ್ಟು ಹಣವನ್ನು ಗಳಿಸಿವೆ.ಚಲನಚಿತ್ರದ ಅಭಿನಯದ ಹೊರಗೆ , ಓಲ್ಡ್ಮನ್ ನೀಲ್ ಬೈ ಮೌತ್ (1997) ಬರೆದರು. ಹಾಗೆಯೆ ನಿರ್ದೇಶಿಸಿದರು ಕೂಡ. ಫಾಲನ್ ಏಂಜೆಲ್ಸ್, ಟ್ರೇಸಿ ಟೇಕ್ಸ್ ಆನ್.. ಮತ್ತು ಫ್ರೆಂಡ್ಸ್ ನಂತಹ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣೀಸಿಕೊಂಡಿದ್ದಾರೆ. ಡೇವಿಡ್ ಬೋವಿ, ಗನ್ಸ್ ಎನ್ಡ್ ರೋಸಸ್ ಮತ್ತು ಆನಿ ಲೆನಾಕ್ಸ್ ಸಂಗೀತ ವೀಡಿಯೋಗಳಲ್ಲಿ ಕಾಣಿಸಿಕೊಂಡರು. ಮತ್ತು ಕಾಲ್ ಆಫ್ ಡ್ಯೂಟಿ ವಿಡಿಯೋ ಗೇಮ್ ಸರಣಿಯಲ್ಲಿ ವಿಕ್ಟರ್ ರೆಝ್ನೂವ್ ಅವರ ಧ್ವನಿಯನ್ನು ನೀಡಿದರು.[]

ಆರಂಭಿಕ ಜೀವನ

ಬದಲಾಯಿಸಿ
ಗ್ಯಾರಿ ಓಲ್ಡ್ಮನ್ ನ್ಯೂ ಕ್ರಾಸ್ ಲಂಡನ್ ನಲ್ಲಿ, ಓರ್ವ ಮಾಜಿ ನಾವಿಕ ಹಾಗು ವೆಲ್ಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಲಿಯೊನಾರ್ಡ್ ಬೆರ್ಟಾಮ್ ಓಲ್ಡ್ಮನ್ ರ ಮಗನಾಗಿ ಜನಿಸಿದರು. ತಾಯಿ ಕ್ಯಾಥ್ಲೀನ್. ಗ್ಯಾರಿ 7 ವರ್ಷದವರಾಗಿದ್ದಾಗ ತಂದೆ ಕುಟುಂಬವನ್ನು ತೊರೆದು ಮದ್ಯವ್ಯಸನಿಯಾಗಿ ಅಲೆಯತೊಡಗಿದರು. ಓಲ್ಡ್ಮನ್ ಡೆಪ್ಟ್ಫೋರ್ಡ್ ನಲ್ಲಿ ವೆಸ್ಟ್ ಗ್ರೀನ್‍ವಿಚ್ ಸ್ಕೂಲ್ ಸೇರಿದರು. 16 ನೇ ವಯಸ್ಸಿನಲ್ಲಿಯೇ ಅಂಗಡಿಯಲ್ಲಿ ಕೆಲಸ ಮಾಡುವುದರ ಸಲುವಾಗಿ ಶಾಲೆಯಿಂದ ಹೊರನಡೆದರು. ಚಿಕ್ಕ ವಯಸ್ಸಿನಲ್ಲಿಯೇ ಅವರು ಪಿಯಾನೊ ವಾದಕರಾಗಿದ್ದರು. ನಂತರ ಗಾಯಕರಾಗಿದ್ದರು ಆದರೆ 1971 ರಲ್ಲಿ ರೇಜಿಂಗ್ ಮೂನ್ ಚಿತ್ರದಲ್ಲಿ ಮಾಲ್ಕಮ್ ಮೆಕ್ಡೋವೆಲ್ ರ ಅಭಿನಯವನ್ನು ನೋಡಿದ ನಂತರ ನಟನಾ ವೃತ್ತಿಜೀವನವನ್ನು ಮುಂದುವರಿಸಲು ಅವರ ಸಂಗೀತ ಆಕಾಂಕ್ಷೆಗಳನ್ನು ಕೈಬಿಟ್ಟರು. 1995 ರಲ್ಲಿ ಚಾರ್ಲಿ ರೋಸ್ ಅವರೊಂದಿಗೆ ನಡೆದ ಸಂದರ್ಶನವೊಂದರಲ್ಲಿ ಓಲ್ಡ್ಮನ್ ಹೇಳಿದರು: “ಮಾಲ್ಕಮ್ ನನ್ನನ್ನು ಬಂಧಿಸಿದ್ದಾರೆ ಅಷ್ಟು ಅವರ ಪ್ರಭಾವ ನನ್ನ ಮೇಲಾಗಿದೆ”.[]


ನಟನಾ ವೃತ್ತಿ

ಬದಲಾಯಿಸಿ

ತರಬೇತಿ

ಬದಲಾಯಿಸಿ
  ಓಲ್ಡ್ಮನ್ 1970 ರ ದಶಕದ ಮಧ್ಯಬಾಗದಲ್ಲಿ ಗ್ರೀನ್ವಿಚ್‍ನಲ್ಲಿ ಯಂಗ್ ಪೀಪಲ್ಸ್ ಥಿಯೇಟರ್ನೊಂದಿಗೆ ಅಧ್ಯಯನ ಮಾಡಿದರು. ಜೋಡಣೆ ಕಾರ್ಯಗಳಲ್ಲಿ ಕೆಲಸ ಮಾಡುತ್ತಿದ್ದಾಗ ಕಾರ್ಯಾಚರಣಾ ರಂಗಮಂದಿರದಲ್ಲಿ ಪೋರ್ಟರ್ ಆಗಿ, ಬೂಟುಗಳನ್ನು ಮಾಡಲಾರಂಭಿಸಿದರು. ನಂತರ ಅವರು ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ ಗೆ ಅರ್ಜಿಯನ್ನು ಸಲ್ಲಿಸಿದರು. ಒಂದು ಬರಿ ವಿಫಲರಾಗಿ ನಂತರ ಮತ್ತೆ ಅರ್ಜಿ ಸಲ್ಲಿಸಿ ಯಶಸ್ವಿಯಾದರು. ನಂತರ ಆಗ್ನೇಯ ಲಂಡನ್ನಿನ  ಸಿಡ್ಕುಪ್ನಲ್ಲಿದ್ದ ರೋಸ್ ಬ್ರೂಫೋರ್ಡ್ ಕಾಲೇಜಿಗೆ ಹಾಜರಾಗಿ ಅಲ್ಲಿಯ ವಿದ್ಯಾರ್ಥಿ ವೇತನವನ್ನು ಗೆದ್ದರು. ಅಲ್ಲಿಯೇ 1979 ರಲ್ಲಿ ನಟನೆಯಲ್ಲಿ ಬಿ.ಎ ಪದವಿಯನ್ನು ಪಡೆದರು. ಓಲ್ಡ್ಮನ್ ತಮ್ಮನ್ನು ತಾವು ಅಲ್ಲಿದ್ದ ಸಂದರ್ಭದಲ್ಲಿ “ನಾಚಿಕೆಯಿಲ್ಲದ ಆದರೆ ಪರಿಶ್ರಮಿ ಕೆಲಸಗಾರ” ಎಂದು ವರ್ಣಿಸಿಕೊಳ್ಳುತ್ತಾರೆ. ಅಲ್ಲಿ ಅವರು ಶೇಕ್ಸ್ಪಿಯರ್ ನ ಎ ಮಿಡ್ಸಮ್ಮರ್ ನೈಟ್ಸ್ ಡ್ರೀಮ್ನಲ್ಲಿನ ಪಕ್ ಪಾತ್ರಗಳನ್ನು ನಿರ್ವಹಿಸಿದ್ದಾರೆ.[]

ಇತ್ತೀಚಿನ ಕೆಲಸ

ಬದಲಾಯಿಸಿ
  2015 ರಲ್ಲಿ ಚೈಲ್ಡ್ 44 ಚಿತ್ರದಲ್ಲಿ ನೊವೊಮಿ ರಾಪೇಸ್ ಮತ್ತು ಜೋಯಲ್ ಕಿನ್ನಮಾನ್ ರೊಂದಿಗೆ ನಟಿಸಿದ್ದಾರೆ ಮತ್ತು ಡಿಟೋಲ್ ಮಾಂಟಿಯಲ್ ನಿರ್ದೇಶಿಸಿದ ಅಮೇರಿಕನ್ ಥ್ರಿಲ್ಲರ್ ಮ್ಯಾನ್ ಡೌನ್ ನಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು. 2016 ರಲ್ಲಿ ಕ್ರಿಮಿನಲ್ ಚಿತ್ರದಲ್ಲಿ ಸಿ.ಐ.ಎ ಮುಖ್ಯಸ್ಥರಾಗಿ ಏರಿಯಲ್ ವೊಮರನ್ ನಿರ್ದೇಶನದ ಅಡಿಯಲ್ಲಿ ನಟಿಸಿದರು. ಆಸಾ ಬಡರ್ಫೀಲ್ಡ್ನೊಂದಿಗೆ ದಿ ಸ್ಪೇಸ್ ಬಿಟ್ವೀನ್ ಅಸ್ ನಲ್ಲಿಯೂ ಅವರು ನಟಿಸಿದ್ದಾರೆ. ಇದು ಫೆಬ್ರುವರಿ 2017 ರಂದು ಬಿಡುಗಡೆಯಾಯಿತು. 2017 ರಲ್ಲಿ ದಿ ಹಿಟ್ಮ್ಯಾನ್ಸ್ ಬಾಡಿಗಾರ್ಡ್‍ನಲ್ಲಿ ಸ್ಯಾಮುಯೆಲ್ ಎಲ್ ಜಾಕ್ಸನ್, ರಯಾನ್ ರೆನಾಲ್ಡ್ ಮತ್ತು ಸಲ್ಮಾ ಹಯೇಕ್ ರೊಂದಿಗೆ ಖಳನಾಯಕರಾಗಿ ನಟಿಸಿದರು. ಅತ್ಯುತ್ತಮ ಅಭಿನಯಕ್ಕಾಗಿ ಅಕಾಡೆಮಿ ಪ್ರಶಸ್ತಿ , ಅತ್ಯುತ್ತಮ ನಟ- ಗೋಲ್ಡನ್ ಗ್ಲೋಬ್ ಪ್ರಶಸ್ತಿ- ಮೋಶನ್ ಪಿಕ್ಚರ್ಸ್ ಡ್ರಾಮಾ, ಕ್ರಿಟಿಕ್ಸ್ ಚಾಯ್ಸ್  ಮೂವಿ ಅವಾರ್ಡ್ ಸೇರಿದಂತೆ ಈ ಸಾಧನೆಗಾಗಿ ಯು.ಎಸ್.ಎ ಮತ್ತು ಯು.ಕೆ ಗಳಲ್ಲಿ ಧನಾತ್ಮಕ ಸೂಚನೆಯನ್ನು ನೀಡಿದ್ದಾರೆ. ಅತ್ಯುತ್ತಮ ನಟ, ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ. ಮತ್ತು ಅತ್ಯುತ್ತಮ ನಟ  ಪ್ರಶಸ್ತಿ.ಸಧ್ಯ ಓಲ್ಡ್ಮನ್  ಗೆರಾರ್ಡ್ ಬಟ್ಲರ್, ಬಿಲ್ಲಿ ಬಾಬ್ ಥಾನ್ರ್ಟನ್ ಮತ್ತು ಲಿಂಡಾ ಕಾರ್ಡೆಲ್ಲಿನಿ ಅವರೊಂದಿಗೆ ಹಂಟರ್ ಕಿಲ್ಲರ್ ನಲ್ಲಿ ಅಭಿನಯಿಸುತ್ತಿದ್ದಾರೆ. 2018 ರಲ್ಲಿ ಓಲ್ಡ್ಮನ್ ಮೈಕೆಲ್ ಗೋಯಿ ನಿರ್ದೇಶನದ ಭಯಾನಕ ಥ್ರಿಲ್ಲರ್ ಮೇರಿ ಯಲ್ಲಿ ನಟಿಸಿದ್ದಾರೆ. ಜಾನ್ ಲೇ ಕ್ಯಾರೆ ಅವರ ಸ್ಮೈಲೀಸ್ ಪೀಪಲ್ ನ ರೂಪಾಂತರದಲ್ಲಿ ಕೂಡ ಇವರು ನಟಿಸಲು ಸಿದ್ಧರಿದ್ದಾರೆ. ಓಮ್ ಬೆವನ್, ಎರಿಕ್ ಫೆಲ್ನರ್ ಮತ್ತು ಡೌಗ್ಲಾಸ್ ಅರ್ಬನ್ಸ್ಕಿ ನಿರ್ಮಾಣ ಮಾಡುತ್ತಿದ್ದಾರೆ.[]

ಇತರೆ ಉದ್ಯಮಗಳು

ಬದಲಾಯಿಸಿ

ಚಲನಚಿತ್ರ ನಿರ್ಮಾಣ

ಬದಲಾಯಿಸಿ
    1997 ರಲ್ಲಿ ಓಲ್ಡ್ಮನ್ ನಿರ್ಮಿಸಿ, ನಿರ್ದೇಶಿಸಿದ ನೀಲ್ ಬೈ ಮೌತ್ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಇದು ಅವರ ಬಾಲ್ಯವನ್ನು ಭಾಗಶಃ ಆವರಿಸಿತ್ತು. ಈ ಚಿತ್ರ ಅತ್ಯುತ್ತಮ ಬ್ರಿಟೀಷ್ ಚಲನಚಿತ್ರ ಎಂದು ಅಲೆಕ್ಸಾಂಡರ್ ಕೊರ್ಡಾ ಪ್ರಶಸ್ತಿಯನ್ನು ಬಾಚಿಕೊಂಡಿತು. ಅತ್ಯುತ್ತಮ ಚಿತ್ರಕಥೆಗಾಗಿ ಪ್ರಶಸ್ತಿ. ಚಾನಲ್ 4 ನಿರ್ದೇಶಕರ ಪ್ರಶಸ್ತಿ, ಎಂಪೈರ್ ಪ್ರಶಸ್ತಿ. 1999 ರಲ್ಲಿ ಬ್ರಿಟೀಷ್ ಅಕಾಡೆಮಿ ಆಫ್ ಫಿಲ್ಮ್ ಆಂಡ್ ಟೆಲಿವಿಷನ್ ಆಟ್ರ್ಸ್ ಇದನ್ನು 20 ನೇಯ ಶತಮಾನದ ನೂರು ಉತ್ತಮ ಬ್ರಿಟೀಷ್ ಚಿತ್ರಗಳಲ್ಲಿ ಒಂದು ಎಂದು ಘೋಷಿಸಿತು. ಅಲ್ಲದೇ ಈ ಚಿತ್ರ ಟೈಂ ಔಟ್ ನಿಂದ ಅತ್ಯುತ್ತಮ 100 ಅತ್ಯುತ್ತಮ ಬ್ರಿಟೀಷ್ ಚಿತ್ರಗಳಲ್ಲಿ 21 ನೇ ಸ್ಥಾನವನ್ನು ಪಡೆದುಕೊಂಡಿದೆ.

ಧ್ವನಿ ನಟನೆ

ಬದಲಾಯಿಸಿ
   ಸಿಯೆರಾ ಎಂಟರ್ಟೈನ್ಮೆಂಟ್ ನಿರ್ಮಿಸಿದ ದಿ ಲೆಜೆಂಡ್ ಆಫ್ ಸ್ಪೈರೋ ಆಟಗಳ ಸೃಷ್ಟಿಗೆ ಓಲ್ಡ್ಮನ್ ಭಾಗವಹಿಸಿದ್ದರು. ಅವರು ಫೈರ್ ಗಾರ್ಡಿಯನ್, ಇಗ್ನಿಟಸ್ ನ ಧ್ವನಿಯನ್ನು ನೀಡಿದರು. ಕಾಲ್ ಆಫ್ ಡ್ಯೂಟಿ ಆಟದ ಸಾರ್ಜೆಂಟ್ ವಿಕ್ಟರ್ ರೆಝ್ನೂವ್ ಮತ್ತು ವಿಜ್ಞಾನಿ ಡೇನಿಯಲ್ ಕ್ಲಾರ್ಕ್ ಗೆ ಧ್ವನಿ ನೀಡಿದರು. ಮೆಡಲ್ ಆಫ್ ಹಾನರ್: ಅಲೈಡ್ ಅಸಾಲ್ಟ್ ಗೆ ವಿಸ್ತರಣೆಯಲ್ಲಿ ಸಾರ್ಜೆಂಟ್ ಜ್ಯಾಕ್ ಬಾರ್ನೆಸ್ ರ ನಿರೂಪಣೆಯನ್ನೂ ನೀಡಿದ್ದಾರೆ. 2015 ರಲ್ಲಿ ಅವರು ಲೆಗೊ ಡಯಮೆನ್ಷನ್ಸ್ ವೀಡಿಯೊ ಗೇಮ್‍ನಲಿ ಲೆಗೋ ಮಲ್ಟಿವರ್ಸ್ ಅನ್ನು ನಿಯಂತ್ರಿಸಲು ಪ್ರಯತ್ನಿಸುವ ದುಷ್ಟ ಮುಖ್ಯಸ್ಥ ಲಾರ್ಡ್ ವೊರ್ಟೆಕ್ ಗೆ ಧ್ವನಿ ಕೊಟ್ಟರು. ಕ್ರಿಸ್ ರಾಬರ್ಟ್ ವಿನ್ಯಾಸಗೊಳಿಸಿದ ಸಮೂಹ ವಿಡಿಯೊ ಗೇಮ್ ಸ್ಟಾರ್ ಸಿಟಿಸನ್ ನ ಮುಂಬರುವ ಏಕೈಕ ಆಟಗಾರ ಅಭಿಯಾನದಲ್ಲಿ ಅಡ್ಮಿರಲ್ ಅನ್ಸ್ರ್ಟ್ ಬಿಷಪ್ ರನ್ನು ಸಹ ಓಲ್ಡ್ಮನ್ ಚಿತ್ರಿಸಲಿದ್ದಾರೆ.

ಬರವಣಿಗೆ

ಬದಲಾಯಿಸಿ
   2015 ರಲ್ಲಿ ಓಲ್ಡ್ಮನ್ ಮತ್ತು ಅವರ ಮ್ಯಾನೇಜರ್ ಡೌಗ್ಲಾಸ್ ಅರ್ಬನ್ಸ್ಕಿ ಸಿಮೋನ್ ಮತ್ತು ಸ್ಕಸ್ಟರ್, ಅಥರಿಯಾ ಪಬ್ಲಿಷಿಂಗ್ ಲೇಬಲ್ ನ ಅಡಿಯಲ್ಲಿ ಬೆಸ್ಡ್ಲರ್ ಬುಕ್ಸ್ ಫಾರ್ ಬ್ಲಡ್ ರೈಡರ್ಸ್,(ರಕ್ತ ಪಿಶಾಚಿ ಪುಸ್ತಕ ಸರಣಿ) ಯೊಂದಿಗೆ ಒಪ್ಪಂದ ಮಾಡಿಕೊಂಡರು.

ಉಲ್ಲೇಖ

ಬದಲಾಯಿಸಿ
  1. http://www.filmreference.com/film/93/Gary-Oldman.html
  2. https://www.the-numbers.com/person/1330401-Gary-Oldman#tab=acting
  3. https://www.independent.co.uk/news/people/profiles/gary-oldman-the-spy-who-came-in-and-brought-the-cold-with-him-2356597.html
  4. http://reason.com/blog/2014/06/24/legendary-actor-gary-oldman-outs-himself