ಸದಸ್ಯ:ಡಾ.ಎಂ ದೇವಮಣಿ/ನನ್ನ ಪ್ರಯೋಗಪುಟ
ಕೆಂದಳಿಲು/ ಕೆಂಪು ಅಳಿಲು ( ಭಾರತದ ದೈತ್ಯಅಳಿಲು )
ಅಳಿವಿನ ಅಂಚಿನಲ್ಲಿರುವ ಮಲಬಾರ್ ದೈತ್ಯ ಅಳಿಲು ಎಂದು ಕರೆಸಿಕೊಳ್ಳುವ ಈ Indian giant Squirrel[೧] ಅನ್ನು ಕನ್ನಡಿಗರು ಕೆಂಪು ಅಳಿಲು, ಕೆಂಜಳಿಲು, ಕೆಂದಳಿಲು ಹಾಗೂ ನೀಳ ಬಾಲದ ಬಣ್ಣದ ಅಳಿಲು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಕಂದು, ಕೆಂಪು ,ಕಪ್ಪು ಬಣ್ಣಗಳಿಂದ ಕೂಡಿದ, ಮಿನುಗು ಕಣ್ಣುಗಳು,ನುಣುಪು ತುಪ್ಪಳದ ,ತನ್ನ ದೇಹಕ್ಕಿಂತ ಎರಡು ಪಟ್ಟು ಉದ್ದನೆಯ ಬಾಲವುಳ್ಳ ಈ ಅಳಿಲು ನೋಡಲು ಬಹಳ ಆಕರ್ಷಣೀಯವಾಗಿದ್ದು , ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಾಣಸಿಗುತ್ತದೆ. ಕರ್ನಾಟಕದ ಭದ್ರಾ ಅಭಯಾರಣ್ಯ ನಾಗರಹೊಳೆ ಪಶ್ಚಿಮಘಟ್ಟಗಳಲ್ಲಿ ಕಂಡುಬರುತ್ತದೆ. ಒಂದು ಮರದಿಂದ ಮತ್ತೊಂದು ಮರಕ್ಕೆ ಸುಮಾರು ಇಪ್ಪತ್ತು ಅಡಿಗಳಷ್ಟು ದೂರದವರೆಗೆ ಜಿಗಿಯುವ ಸಾಮರ್ಥ್ಯವಿರುವ ವಿಶೇಷವಾದ ಅಳಿಲಿದು. ಸಸ್ಯಹಾರಿ ಜೀವಿ ಎಂದು ಕರೆಸಿಕೊಳ್ಳುವ ಈ ಅಳಿಲು ಮರದ ಎಲೆಗಳ ಚಿಗುರು ,ಮೊಗ್ಗು ,ಹೂವು, ನಾಯಿಕೊಡೆ, ಮುಖ್ಯವಾಗಿ ಮರದ ಹಣ್ಣುಗಳನ್ನು ತಿನ್ನುತ್ತದೆ. ಕೆಲವೊಮ್ಮೆ ಪಕ್ಷಿಗಳ ಮೊಟ್ಟೆಗಳನ್ನು , ಕೀಟಗಳನ್ನು ತಿನ್ನುತ್ತದೆ. ದಟ್ಟ ಹಸಿರು ಕಾನನಗಳಲ್ಲಿ ಅತಿ ಎತ್ತರದ ಮರಗಳಲ್ಲಿ ವಾಸಮಾಡುವ ಅಳಿಲು ಮರದ ಪೊಟರೆಗಳಲ್ಲಿ ,ಕೆಲವೊಮ್ಮೆ ಮರದ ಕೊಂಬೆಗಳಲ್ಲಿ ಮರದ ಎಲೆಗಳು ಹಾಗೂ ತೊಗಟೆಗಳನ್ನು ಬಳಸಿ ಗೂಡು ಕಟ್ಟುತ್ತದೆ. ಒಂಟಿಯಾಗಿ ಅಲೆಯುವ ಈ ಅಳಿಲು ಒಂದಕ್ಕಿಂತ ಹೆಚ್ಚು ಗೂಡುಗಳನ್ನು ಕಟ್ಟುತ್ತದೆ. ಒಂದು ಗೂಡಿನಲ್ಲಿ ತನ್ನ ಮರಿಗಳ ಆರೈಕೆ ಮಾಡಿದರೆ ಉಳಿದ ಗೂಡುಗಳಲ್ಲಿ ಸಾಮಾನ್ಯವಾಗಿ ನಿದ್ರಿಸುತ್ತದೆ .ಈ ಅಳಿಲು ಮೂರರಿಂದ ಆರು ತಿಂಗಳವರೆಗೆ ವರ್ಷಕ್ಕೆ ಎರಡು ಬಾರಿ ಮಾರ್ಚ್,ಏಪ್ರಿಲ್ ,ಸೆಪ್ಟಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ.
ಉಲ್ಲೇಖ