ಸದಸ್ಯ:ಚೇತನ ಕುಮಾರ್/ನನ್ನ ಪ್ರಯೋಗಪುಟ ೨
ಜ್ಯೋತಿ ರೌಟ್ ಅವರು ಒಬ್ಬ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ಶಿಕ್ಷಕಿ ಮತ್ತು ಒಡಿಸ್ಸಿ ನೃತ್ಯ ಶೈಲಿಯ ನೃತ್ಯ ಸಂಯೋಜಕಿ. ಜನನ ಜುಲೈ 15, 1965
ಆರಂಭಿಕ ಜೀವನ ಮತ್ತು ಹಿನ್ನೆಲೆ
ಬದಲಾಯಿಸಿಇವರು ಭಾರತದ ಒಡಿಶಾದ ದೂರದ ಜೋಡಾ ಪಟ್ಟಣದಲ್ಲಿ ಬೆಳೆದರು. ಇವರಿಗೆ ನೃತ್ಯದ ಮೇಲೆ ಬಾಲ್ಯದಲ್ಲಿ ಆಸಕ್ತಿ ಪ್ರಾರಂಭವಾಯಿತು, ಇವರು ಬುಡಕಟ್ಟು ಸ್ಥಳೀಯ ಉತ್ಸವ ವಿವಿಧ ನೃತ್ಯ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಇವರು ಸ್ನಾತಕೋತ್ತರ ಪದವಿಯನ್ನು ಒಡಿಶಾದ ಭುವನೇಶ್ವರದಲ್ಲಿರುವ ಸಂಗೀತ ಮತ್ತು ನೃತ್ಯ ಕಾಲೇಜು ಉತ್ಕಲ್ ಸಂಗೀತ ಮಹಾವಿದ್ಯಾಲಯದಿಂದ ಪಡೆದರು ಮತ್ತು ಒಡಿಶಾದ ಸಮರ ಕಲೆಯ ನೃತ್ಯ ಪ್ರಕಾರವಾದ ಚೌ ನೃತ್ಯವನ್ನು ಅಧ್ಯಯನ ಮಾಡಿದ ಮತ್ತು ಪ್ರದರ್ಶಿಸಿದ ಮೊದಲ ಮಹಿಳೆಯರಲ್ಲಿ ಒಬ್ಬರು.
==ವೃತ್ತಿ==
1993 ರಲ್ಲಿ, ಬ್ರಿಟಿಷರ ಆಳ್ವಿಕೆಯಲ್ಲಿ ದೇವ ದಾಸಿ (ದೇವಾಲಯ ನರ್ತಕಿ) ಸಂಪ್ರದಾಯ ಕೊನೆಗೊಂಡ ನಂತರ, ಒಡಿಶಾದ ಪುರಿಯಲ್ಲಿ ಜಗನ್ನಾಥ ದೇವರಿಗೆ ಪ್ರದರ್ಶನ ನೀಡಿದ ಮೊದಲ ನರ್ತಕಿ ಜ್ಯೋತಿ ರೌತ್. 1997 ರಲ್ಲಿ ಕ್ಯಾಲಿಫೋರ್ನಿಯಾ ಮೂಲದ ಒಡಿಸ್ಸಿ ನೃತ್ಯ ಶಾಲೆ ಜ್ಯೋತಿ ಕಲಾ ಮಂದಿರ, ಕಾಲೇಜ್ ಆಫ್ ಇಂಡಿಯನ್ ಕ್ಲಾಸಿಕಲ್ ಆರ್ಟ್ಸ್ ಅನ್ನು ಸ್ಥಾಪಿಸಿದರು, ಇದು ಪ್ರಸ್ತುತ USA,ಯ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿ ನೆಲೆಗೊಂಡಿದೆ. 2012 ರಲ್ಲಿ, ಅವರು ಭಾರತದ ಒಡಿಶಾದ ಲಿಂಗಿಪುರ ಭುವನೇಶ್ವರದಲ್ಲಿ ಶಾಖೆಯನ್ನು ಸ್ಥಾಪಿಸಿದರು.
==ಪ್ರಶಸ್ತಿಗಳು==
1.ಎಥ್ನಿಕ್ ಡ್ಯಾನ್ಸ್ ಫೆಸ್ಟಿವಲ್, ಅತ್ಯುತ್ತಮ ನೃತ್ಯ ಸಂಯೋಜನೆ.ಸ್ಯಾನ್ ಫ್ರಾನ್ಸಿಸ್ಕೋ, 2006 2. ಪ್ರೈಡ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಶಸ್ತಿ 3. ಶ್ರೀ ಕ್ಷೇತ್ರ ಮಹಾರಿ, ಪುರಿ, ಒಡಿಶಾ. 4. ಶ್ರೇಷ್ಠ ಒಡಿಯಾನಿ, ಕಟಕ್, ಒಡಿಶಾ. 5. OSA, USA ನಿಂದ ಕಲಾಶ್ರೀ. 6. ಒಲಿಂಪಿಯಾಡ್ ಒಡಿಶಾ ಅವರಿಂದ ನಿರ್ತ್ಯ ಸಿರೋಮಣಿ. 7.ಮಧುರ್ ಜಾಂಕರ್, ಭುವನೇಶ್ವರ್, ಒಡಿಶಾ ಅವರಿಂದ ನಿರ್ತ್ಯ ಶ್ರೀ ರಾಜ್ಯ ಪ್ರಶಸ್ತಿ. 8.ಒಡಿಶಾ ಡೈರಿಯ "ಒಡಿಶಾ ಲಿವಿಂಗ್ ಲೆಜೆಂಡ್ ಅವಾರ್ಡ್" ಎರಡು ಖಂಡಗಳಲ್ಲಿ ಕಲಾ ಪ್ರಕಾರಕ್ಕೆ ನೀಡಿದ ಕೊಡುಗೆಗಾಗಿ, ಭುವನೇಶ್ವರ, ಒಡಿಶಾ, 2016. ಗುರು ಪಂಕಜ್ ಚರಣ್ ದಾಸ್ ಪ್ರತಿಷ್ಠಾನ, ಒಡಿಶಾ, 2017 ರಿಂದ ಮಹಾರಿ ಪ್ರಶಸ್ತಿ