ಸದಸ್ಯ:ಐಸಿರಿ ಪಿ/ನನ್ನ ಪ್ರಯೋಗಪುಟ2
ಕ್ರಿಶನ್ ಕಾಂತ್ ಸೈನಿ
ಬದಲಾಯಿಸಿವಿಂಗ್ ಕಮಾಂಡರ್ ಕ್ರಿಶನ್ ಕಾಂತ್ ಸೈನಿ, AVSM, VrC, VM (26 ಅಕ್ಟೋಬರ್ 1931 - 14 ಅಕ್ಟೋಬರ್ 2018) ಅವರು 104 ಸ್ಕ್ವಾಡ್ರನ್‌ನ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪೈಲಟ್ ಆಗಿದ್ದು, ಹೆಲಿಕಾಪ್ಟರ್ ಏವಿಯಾನಿಕ್ಸ್‌ನಲ್ಲಿ ವಿಶ್ವದ ಅತಿ ಎತ್ತರದ ಭೂಪ್ರದೇಶ ಕರ್ಕೋರಂ ಶ್ರೇಣಿಯ 6858 ಮೀ (22,500 ಅಡಿ)ಮೇಲೆ, 8 ಮೇ 1969 ರಂದು, ಚೀತಾ ಹೆಲಿಕಾಪ್ಟರ್ ಅನ್ನು ಯಶಸ್ವಿ ಭೂಸ್ಪರ್ಶ ಮಾಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದರು.
ಸೈನಿ ಭಾರತೀಯ ವಾಯುಪಡೆಯ ಪ್ರತಿಷ್ಠಿತ ಅಧಿಕಾರಿಯೂ ಆಗಿದ್ದರು. ಶೌರ್ಯ ಮತ್ತು ಅರ್ಹ ಸೇವೆಗಾಗಿ ಅಲಂಕರಿಸಲ್ಪಟ್ಟರು. 1962ರ ಸಿನೋ-ಇಂಡಿಯನ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳಲ್ಲಿನ ಶೌರ್ಯಕ್ಕಾಗಿ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಪ್ರತಿಷ್ಠಿತ ವೀರ ಚಕ್ರವನ್ನು ಪಡೆದರು. ಅವರು ತಮ್ಮ ಹೆಲಿಕಾಪ್ಟರ್‌ನಲ್ಲಿ ಚೀನೀ ಪಡೆಗಳಿಂದ ದಶ ದಿಕ್ಕುಗಳಲ್ಲಿ ಪ್ರತಿಕೂಲವಾದ ಬೆಂಕಿಯ ದಾಳಿಯ ನಡುವೆ ವೀರಾವೇಶದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ನಡೆಸಿದರು. ಕಾರ್ಯಾಚರಣೆಯಲ್ಲಿ ಗುಂಡು ತಗುಲಿ ತಾತ್ಕಾಲಿಕವಾಗಿ ಕುರುಡನಾಗಿದ್ದರೂ, ತಮ್ಮ ಕಾರ್ಯವನ್ನು ಶೌರ್ಯದಿಂದ ನಿರ್ವಹಿಸಿದರು. ಈ ಅತ್ಯುನ್ನತ ಕಾರ್ಯಕ್ಕಾಗಿ ವೀರ ಚಕ್ರವನ್ನು ಪಡೆದರು. ವಿಂಗ್ ಕಮಾಂಡರ್ ಸೈನಿ ನಂತರದಲ್ಲಿ ಅವರ ಶೌರ್ಯಕ್ಕಾಗಿ ವಾಯುಸೇನ ಪದಕ ಮತ್ತು ಸಾರ್ಥಕ ಸೇವೆಗಾಗಿ ಅತಿ ವಿಶಿಷ್ಟ ಸೇವಾ ಪದಕವನ್ನು ಪಡೆದರು.
ನಂತರ ಅವರನ್ನು ಪವನ್ ಹನ್ಸ್‌ನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಯಿತು, ಆ ಅವಧಿಯಲ್ಲಿ ಅವರು ಹೆಲಿಕಾಪ್ಟರ್‌ಗಳ ಗುಣಮಟ್ಟದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರು.
ಸೈನಿ 14 ಅಕ್ಟೋಬರ್ 2018 ರಂದು 86 ನೇ ವಯಸ್ಸಿನಲ್ಲಿ ನಿಧನರಾದರು.
ಶೌರ್ಯ ಪ್ರಶಸ್ತಿ ಉಲ್ಲೇಖ
ಬದಲಾಯಿಸಿವಿಂಗ್ ಕಮಾಂಡರ್ ಸೈನಿಯ ಶೌರ್ಯ ಪ್ರಶಸ್ತಿಯ ಉಲ್ಲೇಖವು ಈ ಕೆಳಗಿನಂತಿದೆ
ಬದಲಾಯಿಸಿ"ಫ್ಲೈಟ್ ಲೆಫ್ಟಿನೆಂಟ್ ಕ್ರಿಶನ್ ಕಾಂತ್ ಸೈನಿ ಅವರು ಅಕ್ಟೋಬರ್ 1960 ರಿಂದ NEFA ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನವೆಂಬರ್ 18, 1962 ರಂದು, ಅವರು ತಮ್ಮ ಸಹ-ಪೈಲಟ್ ಜೊತೆಗೆ ವಾಲಾಂಗ್ ಪ್ರದೇಶದಲ್ಲಿ ಯುದ್ಧದಿಂದ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳಾಂತರಿಸುತ್ತಿದ್ದರು. ಶತ್ರುಗಳಿಂದ ಮುಕ್ತವಾದ, ಶತ್ರುಗಳ ಗಡಿ ರೇಖೆಯ ಬಳಿ ಇರುವ ಹೆಲಿಪ್ಯಾಡ್ ಹತ್ತಿರ ಹೆಲಿಕಾಪ್ಟರ್ ಅನ್ನು ಇಳಿಯಲು ಅವರಿಗೆ ಸೂಚಿಸಲಾಯಿತು. ಶತ್ರು ಪಡೆಗಳಿಂದ ದೂರವಿದೆ ಎಂದು ವರದಿಯಾದ ಶತ್ರು ರೇಖೆಗೆ, ಅವರು ಹೆಲಿಪ್ಯಾಡ್ ಮೇಲೆ ಬಂದಾಗ, ಚೀನಾದ ಪಡೆಗಳು ಹಲವು ದಿಕ್ಕುಗಳಿಂದ ಗುಂಡು ಹಾರಿಸಿದರು, ಅವರ ಹೆಲಿಕಾಪ್ಟರ್ ಹಲವಾರು ಸ್ಥಳಗಳಲ್ಲಿ ಹಾನಿಗೊಳಗಾಯಿತು. ಹೆಲಿಕಾಪ್ಟರ್ ನ ಮುಖ್ಯ ರಿಡಕ್ಟರ್ ಹಾನಿಗೊಳಗಾಗಿ, ಅದರ ತೈಲವು ಅತಿ ರಭಸವಾಗಿ ಚಿಮ್ಮಿ, ಅವರನ್ನು ತಾತ್ಕಾಲಿಕವಾಗಿ ಕುರುಡರನ್ನಾಗಿಸಿತು. ಅವರ ಬಲ ಪಾದಕ್ಕೆ ಸ್ಪ್ಲಿಂಟರ್‌ನಿಂದ ಬಲವಾದ ಪೆಟ್ಟು ಬಿದ್ದು, ತೀವ್ರವಾಗಿ ರಕ್ತಸ್ರಾವವಾಗ ತೊಡಗಿತು. ಬಹಳ ದೃಢನಿಶ್ಚಯ, ಮನೋ ನಿಗ್ರಹ ಮತ್ತು ಕೌಶಲ್ಯದಿಂದ ಅವರು ಶತ್ರುಗಳ ಗುಂಡಿನಿಂದ ಹೆಚ್ಚಿನ ಹಾನಿಯನ್ನು ತಪ್ಪಿಸಲು ಹೆಲಿಕಾಪ್ಟರ್ ಅನ್ನು ನೆಲಮಟ್ಟಕ್ಕೆ ಧುಮುಕಿಸಿದರು. ಹೆಲಿಕಾಪ್ಟರ್, ಸಹ-ಪೈಲಟ್ ಮತ್ತು ಪ್ರಯಾಣಿಕರ ಜೀವಗಳನ್ನು ಉಳಿಸಿದರು. ಸ್ವತಃ ಗಂಭೀರವಾಗಿ ಗಾಯಗೊಂಡಿದ್ದರೂ, ಹಾನಿಗೊಳಗಾದ ಹೈಡ್ರಾಲಿಕ್ ಸಿಸ್ಟಮ್ ನ ಹೊರತಾಗಿಯೂ, ಅವರು ಕೌಶಲ್ಯದಿಂದ ವಿಮಾನವನ್ನು ಹೆಲಿಕಾಪ್ಟರ್ ಬೇಸ್ ಗೆ ತಂದರು.
ಫ್ಲೈಟ್ ಲೆಫ್ಟಿನೆಂಟ್ ಸೈನಿ ಅವರು ಧೈರ್ಯ, ದೃಢತೆ ಮತ್ತು ಉನ್ನತ ಶ್ರೇಣಿಯ ವೃತ್ತಿಪರ ಕೌಶಲ್ಯವನ್ನು ಪ್ರದರ್ಶಿಸಿದರು.