ಸದಸ್ಯ:ಆಯಿಶಾ ಶಾರಿಯ ಎ/sandbox
ಅರೆವಾಹಕಗಳು-------
ಲೋಹಗಳು ಒಳ್ಳೆಯ ವಿದ್ಯುದ್ವಾಹಕಳೆಂದು ನಾವು ತಿಳಿದಿರುವಿರಿ. ಗಾಜು, ಪ್ಲಾಸ್ಟಿಕ್, ಪಿಂಗಾಣಿ ಮುಂತಾದ ವಸ್ತುಗಳು ನಿರೋಧಕಗಳು. ಜರ್ಮೇನಿಯಮ್ ಮತ್ತು ಸಿಲಿಕಾನ್ ನಂತಹ ಕೆಲವು ವಸ್ತುಗಳು ಒಳ್ಳೆಯ ವಾಹಕಗಳೂ ಅಲ್ಲ ಮತ್ತು ನಿರೋಧಕಗಳೂ ಅಲ್ಲ. ಅವುಗಳ ವಾಹಕತೆಯು ವಾಹಕಗಳ ಮತ್ತು ನಿರೋಧಕಗಳ ನಡುವೆ ಇರುತ್ತದೆ. ಇಂತಹ ವಸ್ತುಗಳನ್ನು ಅರೆವಾಹಕಗಳೆಂದು ಕರೆಯುತ್ತಾರೆ.
ಅರೆವಾಹಕಗಳ ವಾಹಕತೆ: ಸಿಲಿಕಾನ್ ಮತ್ತು ಜರ್ಮೇನಿಯಮ್ ಪರಮಾಣುಗಳ ಅತಿಹೊರಗಿನ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ ಇರುವುದು ನಿಮಗೆ ತಿಳಿದಿದೆ. ಈ ಎಲ್ಲ ಇಲೆಕ್ಟ್ರಾನುಗಳು ಕೋವೇಲೆಂಟ್ ಬಂಧಗಳಿಗೆ ಒಳಪಟ್ಟಿರುವುದರಿಂದ ಸ್ವತಂತ್ರವಾಗಿಲ್ಲ. ಆದ್ದರಿಂದ ಈ ಧಾತುಗಳು ನಿರೋಧಕಗಳಂತೆ ವರ್ತಿಸಬೇಕು. ಆದರೂ, ಇಂತಹ ಸಂದರ್ಭಗಳಲ್ಲಿ, ಬೆಳಕು ಅಥವಾ ಶಾಖದಂತಹ ಶಕ್ತಿಯ ಅಲ್ಪಪ್ರಮಾಣವು ಕೋವೇಲೆಂಟ್ ಬಂಧಗಳನ್ನು ಒಡೆದು ಇಲೆಕ್ಟ್ರಾನುಗಳು ಪರಮಾಣುಗಳಿಂದ ವಿಯೋಜಿಸಲ್ಪಡುತ್ತವೆ. ತಾಪದ ಹೆಚ್ಚಳದೊಂದಿಗೆ ಇವುಗಳ ಸ್ಂಖ್ಯೆಯೂ ಹೆಚ್ಚುತ್ತದೆ. ಈ ಕಾರಣದಿಂದ ಇವು ವಾಹಕತ್ವವನ್ನು ತೋರಿಸುತ್ತವೆ.
ಒಂದು ಕೋವೇಲೆಂಟ್ ಬಂಧದಿಂದ ಒಂದು ಇಲೆಕ್ಟ್ರಾನನ್ನು ಬೇರ್ಪಡಿಸಿದಾಗ, ಧನಾವೇಶಕ್ಕೆ ಸಮನಾದ್ ಖಾಲಿ ಅವಕಾಶವೇರ್ಪಡುತ್ತದೆ. ನೆರೆಯ್ ಪರಮಾಣುನಿಂದ ಒಂದು ಇಲೆಕ್ಟ್ರಾನು ಈ ಖಾಲಿ ಅವಕಾಶಕ್ಕೆ ಬಿದ್ದು, ನೆರೆಯ ಪರಮಾಣುವಿನಲ್ಲಿ ಖಾಲಿ ಅವಕಾಶವೇರ್ಪಡಬಹುದು. ಈ ರೀತಿ ಖಾಲಿ ಅವಕಾಶವು ಚಲಿಸಬಲ್ಲದು ಮತ್ತು ಒಂದು ಅಧಿಕ ಆವೇಶ ವಾಹಕವಾಗಿ ಕೆಲಸ ಮಾಡಬಲ್ಲದು. ಇದನ್ನು ರಂಧ್ರ ಎನ್ನುತ್ತಾರೆ. ಅರೆವಾಹಕಗಳ ವಿಧಗಳು: ಒಂದು ಶುದ್ಧ ಅರೆವಾಹಕದಲ್ಲಿ ರಂಧ್ರಗಳೂ ಮತ್ತು ಇಲೆಕ್ಟ್ರಾನ್ ಗಳೂ ಸಮಾನ ಸಂಖ್ಯೆಯಲ್ಲಿರುತ್ತವೆ. ಇದರಿಂದುಂಟಾಗುವ ವಾಹಕತೆಯನ್ನು ಸಹಜ ವಾಹಕತೆ ಎನ್ನುತ್ತಾರೆ. ಶುದ್ಧ ಅರೆವಾಹಕಗಳು ಸಹಜ ಅರೆವಾಹಕಗಳು. ಅರೆವಾಹಕಗಳ ವಾಹಕತೆಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆರಕೆ (ಇತರೆ ಧಾತುಗಳನ್ನು ಸೇರಿಸಿ) ಮಾವಿ ಹೆಚ್ಚಿಸಬಹುದು. ಈ ಬೆರಕೆಗಳಿಗೆ ವೋಪೆಂಟ್ ಎಂದು ಹೆಸರು. ಇದರಿಂದ ಲಭಿಸುವ ಅರೆವಾಹಕವನ್ನು ಅಸಹಜ ಅರೆವಾಹಕವೆಂದೂ ಕರೆಯುತ್ತಾರೆ. ಈ ಸಂದರ್ಭದ ವಾಹಕತೆಯನ್ನು ಅಸಹಜವಾಹಕತೆ ಎನ್ನುತ್ತಾರೆ. ಅಸಹಜ ಅರೆವಾಹಕಗಳನ್ನು ಅವುಗಳಲ್ಲಿರುವ ಬೆರಕೆಗಳ ಆಧಾರದ ಮೇಲೆ ಎರಡು ಬಗೆಯವುಗಳಾಗಿ ವರ್ಗೀಕರಿಸಲಾಗುತ್ತದೆ. ಈ ಬಗೆಗಳು (ಎ) ಎನ್ ರೀತಿಯ ಅರೆವಾಹಕಗಳು ಮತ್ತು (ಬಿ) ಪಿ ರೀತಿಯ ಅರೆವಾಹಕಗಳು ಇವುಗಳನ್ನು ಡೈಯೋಡ್ ಮತ್ತು ಟ್ರಾನ್ಸಿಸ್ಟರ್ ಗಳ ತಯಾರಿಕೆಯಲ್ಲಿ ಬಳಸುತ್ತಾರೆ.