ಸದಸ್ಯ:ಅನುಷ.ಆನಂದsandbox5

ಭೂಪಾಲ್ ಅನಿಲ ಕಾರ್ಖಾನೆಯ ದುರಂತ

ಬದಲಾಯಿಸಿ

ಯೂನಿಯನ್ ಕಾರ್ಬೈಡ್ ಕಾರ್ಖಾನೆ ಭೂಪಾಲ್ ನ ಬರ್ ಸಿಯಾ ರಸ್ತೆ,ಕಾಲಿ ಪರೇಡ್ ನಲ್ಲಿದೆ.ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಯ ಸಹಾಯದಿಂದ ಈ ಕಾರ್ಖಾನೆ ಸ್ಥಾಪಿತವಾಯ್ತು.ಭೂಪಾಲ್ ನ ಈ ಕಾರ್ಖಾನೆಯಲ್ಲಿ ಗ್ಯಾಸ್ ಸ್ಟೋರೇಜ್ ಟ್ಯಾಂಕ್ ಒಂದರಲ್ಲಿ ಯಾಂತ್ರಿಕ ಅಡಚಣೆಯಿಂದಾಗಿ ಸ್ವಲ್ಪ ನೀರು ಸೇರಿಕೊಂಡಿತು. ಅನಿಲದ ಒತ್ತಡ ಮತ್ತು ತಾಪದ ಕಾರಣದಿಂದಾಗಿ ಟ್ಯಾಂಕ್ ಒಡೆದು ಹೋಗುವ ಭಯ ಉತ್ಪನ್ನವಾಯಿತು.ಆದ್ದರಿಂದ ಅಲ್ಲಿನ ಅಧಿಕಾರಿಗಳು ಅನಿಲವನ್ನು ಸೋರಿಬಿಡುವ ನಿರ್ಣಯ ತೆಗೆದುಕೊಂಡರು.ಕಾಸ್ಟಿಕ್ ಸೋಡಸ್ಕಬರ್ ಮೂಲಕ ಇದನ್ನು ಹೊರಬಿಟ್ಟರೆ ಅನಿಲದ ವಿಷ ನಿಷ್ಕ್ರಿಯವಾಗುತ್ತದೆಂದು ತೀರ್ಮಾನಿಸಿ ಅವರು ಅನಿಲವನ್ನು ಹೊರಬಿಡುವ ಕಾರ್ಯ ಆರಂಭಿಸಿದರು. ಆದರೆ ಸ್ಕಬರ್ ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ.ಮೀಥೈಲ್ ಐಸೋಸಯನೈಟ್ ಅನಿಲವನ್ನು ಚಿಮಣಿಯ ಮೂಲಕ ಹೊರಬಿಡಲಾಗಿತ್ತು. ಚಳಿಗಾಲದ ರಾತ್ರಿಯಾದುದರಿಂದ ಅನಿಲ ಮೇಲಕ್ಕೆ ಹೋಗಿ ಗಾಳಿಯಲ್ಲಿ ವಿಲೀನವಾಗುವುದಕ್ಕೆ ಬದಲಾಗಿ ದಟ್ಟವಾದ ಹೊಗೆಯ ರೂಪತಾಳಿ ಭಾರದಿಂದ ಕೆಳಗಿಳಿದು ಮೃತ್ಯು ದೇವತೆಯಾಗಿ ಪರಿಣಮಿಸಿತು. ಅನಿಲದ ದಟ್ಟಣೆ ಹೆಚ್ಚಿ ಆರು ಅಡಿ ಮೇಲಿದ್ದ ಸುರಕ್ಷತೆಯ ಕಪಾಟವನ್ನು ಮುರಿದು ೧೫೦ ಅಡಿ ಎತ್ತರದ ಗ್ಯಾಸ್ ಪೈಪ್ ನಿಂದ ಅನಿಲ ಹೊರಬೀಳತೊಡಗಿತು.ಒಂದೇ ಗಂಟೆಯಲ್ಲಿ ಟ್ಯಾಂಕ್ ಖಾಲಿಯಾಯಿತು.ಪ್ರಾಣಾಂತಕ ಅನಿಲ ಎಲ್ಲೆಡೆ ಹರಡತೊಡಗಿತು.ಹಾಳಿ ಇಶಾನ್ಯದ ಕಡೆ ಬೀಸುತ್ತಿದ್ದುದರಿಂದ ನೈರುತ್ಯದ ಕಡೆಗೆ ಓಡುತ್ತಿದ್ದ ಕೆಲಸಗಾರರಿಗೆ ಕಡಿಮೆ ಹಾನಿಯಾಯಿತು. ಸ್ಟೇಷನ್ ಕಡೆಗೆ ಮತ್ತು ರಸ್ತೆಯ ಕಡೆಗೆ ಓಡಿದ ಜನರು ದಾರಿಯಲ್ಲೇ ಪ್ರಾಣ ಕಳೆದುಕೊಂಡರು.ಗಾಬರಿಯ ಕಾರಣದಿಂದಾಗಿ ಅಪಾಯದ ಸೈರನ್ ಸಹ ಯಾರೂ ಮೊಳಗಿಸಲಿಲ್ಲವಾದ್ದರಿಂದ ಆ ರಾತ್ರಿ ೪-೫ ಗಂಟೆಯ ಮಧ್ಯೆ ಯಾರು ನಿದ್ರೆಯಲ್ಲಿದ್ದರೋ ಚಿರನಿದ್ರೆಯನ್ನೇ ಮಾಡಿದರು. ಯಾರ ಕಣ್ಣಿಗೆ ಗ್ಯಾಸ್ ಚುಚ್ಚಿ ಎಚ್ಚರವಾಯಿತೋ ಅವರಿಗೆ ಏನೆಂದು ಅರ್ಥವಾಗಲಿಲ್ಲ ಮತ್ತು ಸದ್ದು ಗದ್ದಲ ಕೇಳಿ ಯಾರು ಮನೆಯಿಂದ ಹೊರ ಬಿದ್ದರೋ ಅವರು ಕುರುಡರಾದರು;ಕಾರಣ ಎಲ್ಲಿಯೋ ಡಿಕ್ಕಿ ಹೊಡೆದು ಬೀಳುತ್ತಿದ್ದರು.ಪಶುಪಕ್ಷಿಗಳದೂ ಅದೇ ಪರಿಸ್ಥಿತಿಯಾಯಿತು. ಕಟ್ಟಿಹಾಕಲ್ಪಟ್ಟಿದ್ದ ಪಶುಗಳು ಸ್ಥಳದಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟವು. ಅನಿಲ ಸೋರಿದ ಸಮಾಚಾರ ಕೇಳಿ ಜನರು ದೂರ ಓಡಿದರು.ನಾನಾ ವಾಹನಗಳಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಮುಂದೆ ಸಾಗಿ ಹೋದರು. ಅದು ಭೀಕರ ನರಸಂಹಾರದ ದೃಶ್ಯವಾಗಿತ್ತು.ಭೂಪಾಲ್ ನ ಅನೇಕ ರಸ್ತೆಗಳು ರುದ್ರಭೂಮಿಯಾದವು. ಕಣ್ಣುಗಳಲ್ಲಿ ಉರಿ ಮತ್ತು ಎದೆಯಲ್ಲಿ ಭಯಾನಕ ನೋವು ಮತ್ತು ಅಶಾಂತಿಯನ್ನು ಹೊತ್ತು ಸ್ತ್ರಿ,ಪುರುಷರು ಓಡಾಡುತ್ತಿದ್ದರು;ಮಕ್ಕಳು ಪ್ರಾಣ ಬಿಡುತ್ತಿದ್ದರು. ರಸ್ತೆಯಲ್ಲಿ ಹಾಗೂ ಮನೆಗಳಲ್ಲಿ ಶವಗಳು ರಾಶಿ ಬಿದ್ದವು. ಸುಮಾರು ೩ ಸಾವಿರ ಜನರ ಪ್ರಾಣಹರಣವಾಯಿತು.ಐವತ್ತು ಸಾವಿರ ಗಂಡಸರು,ಹೆಂಗಸರು,ಮಕ್ಕಳು ಪ್ರಾಣಾಂತಕ ಕಾಯಿಲೆಯಿಂದ ಇಂದಿಗೂ ನರಳುತ್ತಿದ್ದಾರೆ. ಇದೇ ರೀತಿ ಇನ್ನಿತರ ಕಾರ್ಖಾನೆಗಳಿಂದ ಹೊರಬೀಳುವ ಅನಿಲಗಳಿಂದ,ಹೊಗೆಯಿಂದ ಪರಿಸರ ಹಾಳಾಗುತ್ತಿದೆ. ಅನೇಕ ದುರಂತಗಳು ಸಂಭವಿಸುತ್ತಿವೆ. ೧೯೩೦ನೆಯ ಇಸವಿಯಲ್ಲಿ ಬೆಲ್ಜಿಯಂನಲ್ಲಿ,೧೯೫೨ನೆಯ ಇಸವಿಯಲ್ಲಿ ಲಂಡನ್ ನಲ್ಲಿ ಮತ್ತು ೧೯೮೩ನೆಯ ಇಸವಿಯಲ್ಲಿ ಲಖನೊನಲ್ಲಿ ಅನಿಲ ಸೋರುವಿಕೆಯಿಂದ ನೂರಾರು ಜನರು ಮೂರ್ಛಿತರಾಗಿದ್ದಾರು.೧೯೮೪ನೆಯ ಇಸವಿಯಲ್ಲಿ ಮೆಕ್ಸಿಕೋದಲ್ಲಿ ಅನಿಲ ಸೋರುವಿಕೆಯ ದುರಂತದಲ್ಲಿ ೪೦೦ ಜನ ಪ್ರಾಣಕಳೆದುಕೊಂಡಿದ್ದರು. ವಾಯು ಮಾಲಿನ್ಯ ಉಂಟುಮಾಡುವುದರಲ್ಲಿ ಕ್ಲೋರೈಡ್ ಅನಿಲ ಪ್ರಮುಖ ಸ್ಥಾನ ಪಡೆದಿದೆ.ಈ ಅನಿಲ ಪದಾರ್ಥ ಅಲ್ಯೂಮಿನಿಯಮ್ ಕಾರ್ಖಾನೆಗಳಲ್ಲಿ ಹೆಚ್ಚು ಬಿಡುಹಡೇಯಾಗುತ್ತದೆ. ಮರಗಿಡಗಳ ಎಲೆಗಳನ್ನೂ ಈ ಅನಿಲ ನಾಶಗೊಳಿಸುತ್ತದೆ.ಇದರ ಜೊತೆಗೆ ಸುಟ್ಟು ಹೋದ ಎಲೆಗಳು ದನಗಳ ಮೇವಿನ ಜೊತೆಯಲ್ಲಿ ಪಶುಗಳ ಹೊಟ್ಟೆ ಸೇರಿ ಹೆಚ್ಚು ಅಪಾಯವನ್ನುಂಟುಮಾಡುವ ಸಂಭವವುಂಟು. ಇಷ್ಟೇ ಅಲ್ಲದೆ ಜೀವನಾಶಕ ವಸ್ತುಗಳಾದ ನಿಕ್ಕಲ್, ಟೈಟೇನಿಯಂ ,ಬೆರಿಲಿಯಂ , ಟಿನ್, ಅರ್ಸೇನಿಕ್ ಗಳ ಘಾತಕ ಪ್ರಭಾವ ಮನುಷ್ಯನ ಆರೋಗ್ಯದ ಮೇಲೆ ಹೆಚ್ಚು ಹೆಚ್ಚು ಉಂಟಾಗುತ್ತದೆ.

 
Bhopal Plant 13