ಸದಸ್ಯ:ಅಂ ಶಂ ಚಂದ್ರಮೌಳಿ/ನನ್ನ ಪ್ರಯೋಗಪುಟ೧

ವಿನೋದ್ ಪಾಟ್ನಿ ಏರ್ ಮಾರ್ಷಲ್ ವಿನೋದ್ ಪಾಟ್ನಿ, SYSM, PVSM, AVSM, VrC ರವರು ಭಾರತೀಯ ವಾಯುಪಡೆಯ ಅಧಿಕಾರಿಯಾಗಿ ನಿವೃತ್ತರಾದವರು. ಅವರು ಪ್ರಸ್ತುತ ವಾಯು ಶಕ್ತಿ ಅಧ್ಯಯನ ಕೇಂದ್ರದ ಮಹಾನಿರ್ದೇಶಕರಾಗಿದ್ದಾರೆ. ವೃತ್ತಿ ಪಾಟ್ನಿಯವರನ್ನು ೧೯೬೧ ರಲ್ಲಿ ಭಾರತೀಯ ವಾಯುಪಡೆಯಲ್ಲಿ ನಿಯೋಜಿಸಲಾಯಿತು. ಅವರು ೧೯೬೫ ರ ಯುದ್ಧ ಸಂಘರ್ಷದಲ್ಲಿ ಭಾಗವಹಿಸಿದ್ದಾರೆ. ಅದಕ್ಕಾಗಿ ಅವರಿಗೆ ವೀರ ಚಕ್ರ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲೂ ಭಾಗವಹಿಸಿದ್ದರು. ಅವರು ಹೆಲ್ಪ್ಏಜ್ ಇಂಡಿಯಾದ ಮಾಜಿ ಮಹಾ ನಿರ್ದೇಶಕರು ಸಹ ಆಗಿದ್ದರು.

ವೀರ ಚಕ್ರ ಬಿನ್ನವತ್ತಳೆ ೧೯೬೫ ರ ಭಾರತ ಪಾಕಿಸ್ತಾನದ ಯುದ್ಧದ ಸಮಯದಲ್ಲಿ ಕಾರ್ಯಾಚರಣೆಗಾಗಿ ಏರ್ ಮಾರ್ಷಲ್ ಪಾಟ್ನಿ ಅವರಿಗೆ ವೀರ ಚಕ್ರದೊಂದಿಗೆ ಗೌರವಿಸಲಾಯಿತು. ಅವರ ವೀರ ಚಕ್ರ ಬಿನ್ನವತ್ತಳೆಯು ಈ ಕೆಳಗಿನಂತೆ ಓದುತ್ತದೆ:

ಬಿನ್ನವತ್ತಳೆ

ಫ್ಲೈಟ್ ಲೆಫ್ಟಿನೆಂಟ್ ವಿನೋದ್ ಪಾಟ್ನಿ ಪಾಕಿಸ್ತಾನದ ವಿರುದ್ಧದ ಯುದ್ಧ ಕಾರ್ಯಾಚರಣೆಯ ಸಂದರ್ಭದಲ್ಲಿ ಫ್ಲೈಟ್ ಲೆಫ್ಟಿನೆಂಟ್ ವಿನೋದ್ ಪಾಟ್ನಿ ಅವರು ಮುಂಚೂಣಿಯಲ್ಲಿ ಕಾರ್ಯಾಚರಣಾ ಸ್ಕ್ವಾಡ್ರನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಕಡಿಮೆ ಅವಧಿಯಲ್ಲಿ ೧೬ ಕಾರ್ಯಾಚರಣೆಯ ವಿಮಾನ ವಿಹಾರಗಳನ್ನು ಹಾರಿಸಿದರು. ೧೩ ಸೆಪ್ಟೆಂಬರ್‌, ೧೯೬೫ ರಂದು, ಅವರು ಕಸೂರ್ ಖೇಮ್ ಕರಣ್ ಸೆಕ್ಟರ್ನಲ್ಲಿ ನೆಲದ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು ಮತ್ತು ನಾಲ್ಕು ವಿಮಾನ ವ್ಯೂಹದಲ್ಲಿ ನಂ.೩ ಕ್ರಮಸಂಖ್ಯೆಯಲ್ಲಿ ವಿಮಾನ ಹಾರಿಸಿದ್ದರು. ದಾಳಿಯ ಸಮಯದಲ್ಲಿ, ವ್ಯೂಹವು ಶತ್ರುವಿನ ಬಂದೂಕುಗಳಿಂದ ಭಾರೀ ಮತ್ತು ನಿರ್ಣಾಯಕವಾದ ನೆಲದಾಳಿಯನ್ನು ಎದುರಿಸಿತು. ನಮ್ಮ ಒಂದು ವಿಮಾನವನ್ನು ಹೊಡೆದುರುಳಿಸಲಾಯಿತು. ಇದರಿಂದ ವಿಚಲಿತರಾಗದೆ, ಫ್ಲೈಟ್ ಲೆಫ್ಟಿನೆಂಟ್ ಪಾಟ್ನಿ ಅವರು ವಿವಿಧ ಶತ್ರು ಗುರಿಗಳ ಮೇಲೆ ಐದು ಪರಿಣಾಮಕಾರಿ ದಾಳಿಗಳನ್ನು ಹೊಡೆದರು ಮತ್ತು ೩ ಪ್ಯಾಟನ್ ಟ್ಯಾಂಕ್ಗಳನ್ನು ನಾಶಪಡಿಸಿದರು. ಫ್ಲೈಟ್ ಲೆಫ್ಟಿನೆಂಟ್ ವಿನೋದ್ ಪಾಟ್ನಿ ಪ್ರದರ್ಶಿಸಿದ ಧೈರ್ಯ ಮತ್ತು ಮುತುವರ್ಜಿಯು ಭಾರತೀಯ ವಾಯುಪಡೆಯ ಅತ್ಯುತ್ತಮ ಸಂಪ್ರದಾಯಗಳಲ್ಲಿದೆ.

ಪ್ರಶಸ್ತಿಗಳು ಮತ್ತು ಅಲಂಕಾರಗಳು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ವಾಯುಪಡೆಯೊಂದಿಗಿನ ಅವರ ವೃತ್ತಿಜೀವನದಲ್ಲಿ ಪಾಟ್ನಿ ಅವರಿಗೆ SYSM, PVSM, AVSM ಮತ್ತು VrC ಪ್ರಶಸ್ತಿಗಳೊಂದಿಗೆ ಗೌರವಿಸಲಾಗಿದೆ.

ಸರ್ವೋತ್ತಮ ಯುದ್ಧ ಸೇವಾ ಪದಕ ಪರಮ ವಿಶಿಷ್ಟ ಸೇವಾ ಪದಕ

ಅತಿ ವಿಶಿಷ್ಟ ಸೇವಾ ಪದಕ ವೀರ ಚಕ್ರ ಸಮರ ಸೇವಾ ಪದಕ ಪಶ್ಚಿಮಿ ಸ್ಟಾರ್ ಸಿಯಾಚಿನ್ ಗ್ಲೇಸಿಯರ್ ಪದಕ ರಕ್ಷಾ ಪದಕ ಸಂಗ್ರಾಮ್ ಪದಕ ಸೈನ್ಯ ಸೇವಾ ಪದಕ ಹೈ ಆಲ್ಟಿಟ್ಯೂಡ್ ಸೇವಾ ಪದಕ ವಿದೇಶ್ ಸೇವಾ ಪದಕ ಸ್ವಾತಂತ್ರ್ಯ ಪದಕದ ೫೦ನೇ ವಾರ್ಷಿಕೋತ್ಸವ ಸ್ವಾತಂತ್ರ್ಯ ಪದಕದ 25ನೇ ವಾರ್ಷಿಕೋತ್ಸವ ೩೦ ವರ್ಷಗಳ ಸುದೀರ್ಘ ಸೇವಾ ಪದಕ ೨೦ ವರ್ಷಗಳ ಸುದೀರ್ಘ ಸೇವಾ ಪದಕ ೯ ವರ್ಷಗಳ ಸುದೀರ್ಘ ಸೇವಾ ಪದಕ


ಏರ್ ಮಾರ್ಷಲ್

ವಿನೋದ್ ಪಾಟ್ನಿ

SYSM, PVSM, AVSM, VrC

ದೇಶನಿಷ್ಠೆ ಇಂಡಿಯಾ ಭಾರತೀಯ ವಾಯುಪಡೆಯ ಸೇವೆ/ಶಾಖೆ

ಸೇವೆಯ ವರ್ಷಗಳು  ೩೧ ಮೇ ೧೯೬೧ – ೩೧ ಜುಲೈ ೨೦೦೧

ಏರ್ ಮಾರ್ಷಲ್ ಶ್ರೇಣಿ ಸೇವಾ ಸಂಖ್ಯೆ ೬೧೨೫ ನಿರ್ವಹಿಸಿದ ಕಮಾಂಡ್ಗಳು ವೆಸ್ಟರ್ನ್ ಏರ್ ಕಮಾಂಡ್ ಸೆಂಟ್ರಲ್ ಏರ್ ಕಮಾಂಡ್ ಪ್ರಶಸ್ತಿಗಳು ಸರ್ವೋತ್ತಮ ಯುದ್ಧ ಸೇವಾ ಪದಕ ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ವೀರ ಚಕ್ರ

ಅಲಂಕರಿಸಿದ ಮಿಲಿಟರಿ ಹುದ್ದೆಗಳು

ಮುಂಚಿನ ಅಧಿಕಾರಿ ಪೃಥ್ವಿ ಸಿಂಗ್ ಬ್ರಾರ್ ವಾಯುಪಡೆಯ ಸಹ ಮುಖ್ಯಸ್ಥರು 1 ಆಗಸ್ಟ್ 2000 - 31 ಜುಲೈ 2001

ನಂತರದ ಅಧಿಕಾರಿ ಶ್ರೀನಿವಾಸಪುರ ಕೃಷ್ಣಸ್ವಾಮಿ

ಮುಂಚಿನ ಅಧಿಕಾರಿ ವಿನೋದ್ ಕುಮಾರ್ ಭಾಟಿಯಾ

ವಾಯುಪಡೆ ಅಧಿಕಾರಿ ಕಮಾಂಡಿಂಗ್-ಇನ್-ಚೀಫ್, ಸೆಂಟ್ರಲ್ ಏರ್ ಕಮಾಂಡ್ 1 ನವೆಂಬರ್ 1999 - 31 ಜುಲೈ 2000

ನಂತರದ ಅಧಿಕಾರಿ ವಿನೋದ್ ಕುಮಾರ್ ವರ್ಮಾ


ಮುಂಚಿನ ಅಧಿಕಾರಿ ಅನಿಲ್ ಯಶವಂತ್ ಟಿಪ್ನಿಸ್ ವಾಯುಪಡೆ ಅಧಿಕಾರಿ ಕಮಾಂಡಿಂಗ್-ಇನ್-ಚೀಫ್, ವೆಸ್ಟರ್ನ್ ಏರ್ ಕಮಾಂಡ್

೧ ಏಪ್ರಿಲ್ ೧೯೯೭ – ೩೧ ಅಕ್ಟೋಬರ್ ೧೯೯೯	

ನಂತರದ ಅಧಿಕಾರಿ ಶ್ರೀನಿವಾಸಪುರ ಕೃಷ್ಣಸ್ವಾಮಿ


ಮುಂಚಿನ ಅಧಿಕಾರಿ ದೇವ್ ನಾಥ್ ರಾಥೋಡ್ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಸೆಂಟ್ರಲ್ ಏರ್ ಕಮಾಂಡ್ ೧ ಜುಲೈ ೧೯೯೬ - ೩೧ ಮಾರ್ಚ್ ೧೯೯೭

ನಂತರದ ಅಧಿಕಾರಿ ಶ್ರೀನಿವಾಸಪುರ ಕೃಷ್ಣಸ್ವಾಮಿ