ಸದಸ್ಯ:ಅಂ ಶಂ ಚಂದ್ರಮೌಳಿ/ನನ್ನ ಪ್ರಯೋಗಪುಟ

ಜ್ಯೋತಿ ಪ್ರಕಾಶ ನಿರಾಲಾ ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ, ಅಶೋಕ ಚಕ್ರ (೧೫ ನವೆಂಬರ್ ೧೯೮೬ - ೧೮ ನವೆಂಬರ್ ೨೦೧೭) ಗರುಡ್ ಕಮಾಂಡೋ ದಳದ ಸದಸ್ಯರಾಗಿದ್ದರು. ಅವರಿಗೆ ಮರಣೋತ್ತರವಾಗಿ ೨೦೧೮ ರ ಜನವರಿಯಲ್ಲಿ ಭಾರತದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಅಲಂಕಾರವಾದ ಅಶೋಕ ಚಕ್ರ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಸುಹಾಸ್ ಬಿಸ್ವಾಸ್ ಮತ್ತು ರಾಕೇಶ್ ಶರ್ಮಾ ರವರುಗಳ ನಂತರ ನೆಲಯುದ್ಧಕ್ಕಾಗಿ ಪ್ರಶಸ್ತಿಯನ್ನು ಪಡೆದ ಮೊದಲ ಏರ್ಮ್ಯಾನ್ ಮತ್ತು ಒಟ್ಟಾರೆಯಾಗಿ ಪಡೆದ ಮೂರನೇ ವ್ಯಕ್ತಿ ನಿರಾಲಾ. ಆರಂಭಿಕ ಮತ್ತು ವೈಯಕ್ತಿಕ ಜೀವನ ನಿರಾಲಾ ಬಿಹಾರದ ರೋಹ್ತಾಸ್ ಜಿಲ್ಲೆಯ ಬದ್ಲಾಡಿ ಗ್ರಾಮದ ನಿವಾಸಿಯಾಗಿದ್ದರು. ಅವರು ೧೫ ನವೆಂಬರ್, ೧೯೮೬ ರಂದು ಯಾದವ್ ಕುಟುಂಬದಲ್ಲಿ ತೇಜ್ ನಾರಾಯಣ ಸಿಂಗ್ ಯಾದವ್ ಮತ್ತು ಮಾಲ್ತಿ ದೇವಿಗೆ ಜನಿಸಿದರು. ಜ್ಯೋತಿ ಪ್ರಕಾಶ್ ನಿರಾಲಾ ಅವರು ಸುಷ್ಮಾ ನಂದ ಯಾದವ್ ಅವರನ್ನು ೨೦೧೦ ರಲ್ಲಿ ವಿವಾಹವಾದರು ಮತ್ತು ಅವರಿಗೆ ಜಿಜ್ಞಾಸಾ ಕುಮಾರಿ ಎಂಬ ಮಗಳಿದ್ದಾಳೆ. ಸೇನೆಯಲ್ಲಿ ಸೇವೆ ನಿರಾಲಾ ಅವರು ೨೦೦೫ ರಲ್ಲಿ ಭಾರತೀಯ ವಾಯುಪಡೆಯ ಗರುಡ್ ಕಮಾಂಡೋ ದಳಕ್ಕೆ ಸೇರಿದರು. ಅವರ ಘಟಕವನ್ನು ೧೩ ರಾಷ್ಟ್ರೀಯ ರೈಫಲ್ಸ್ಗೆ ನಿಯೋಜಿಸಲಾಯಿತು ಮತ್ತು ಆಪರೇಷನ್ ರಕ್ಷಕ್ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯುಕ್ತಿಗೊಳಿಸಲಾಯಿತು. ಅಶೋಕ ಚಕ್ರ ತಾಂತ್ರಿಕ ಗುಪ್ತಚಾರಿಕೆಯ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಚಂದರ್ಗರ್ ಗ್ರಾಮದಲ್ಲಿ ಎದುರಾಳಿಯ ಗರುಡ್ ತುಕಡಿ ಮತ್ತು ೧೩ ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ಆಕ್ರಮಣವನ್ನು ಪ್ರಾರಂಭಿಸಿದವು. ಉಗ್ರರು ಅಡಗಿರುವ ಶಂಕಿತ ಮನೆಯನ್ನು ಅವರ ತುಕಡಿಯು ರಹಸ್ಯವಾಗಿ ಸಮೀಪಿಸಿತು ಮತ್ತು ಹತ್ತಿರದಿಂದಲೇ ದಾಳಿ ನಡೆಸಿತು. ಹಗುರವಾದ ಮೆಷಿನ್ ಗನ್ನೊಂದಿಗೆ ಶಸ್ತ್ರಸಜ್ಜಿತವಾದ ನಿರಾಲಾ, ಅಡಗುತಾಣದ ಸಮೀಪದಲ್ಲಿ ತನ್ನನ್ನು ತಾನು ಇರಿಸಿಕೊಂಡರು, ಎಲ್ಲಾ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಡಿತಗೊಳಿಸಿದರು. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಆರು ಉಗ್ರರು ಗುಂಡು ಹಾರಿಸಿ ಗ್ರೆನೇಡ್ಗಳನ್ನು ಎಸೆದರು. ನಿರಾಲಾ ಪ್ರತಿದಾಳಿ ನಡೆಸಿ ಎರಡು 'ಎ' ವರ್ಗದ ಉಗ್ರರನ್ನು ಹೊಡೆದುರುಳಿಸಿದರು ಮತ್ತು ಇಬ್ಬರನ್ನು ಗಾಯಗೊಳಿಸಿದರು. ಆ ದಾಳಿಯ ವಿನಿಮಯದಲ್ಲಿ, ನಿರಾಲಾರವರು ಸಣ್ಣ ಗುಂಡಿನ ದಾಳಿಗೆ ಒಳಗಾಗಿದ್ದರು ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ ಸಹ ಗುಂಡು ಹಾರಿಸುತ್ತಲೇ ಇದ್ದರು. ಎಲ್ಲಾ ಆರು ಉಗ್ರರು ಹತರಾದ ಮಾರಕ ದಾಳಿಯಲ್ಲಿ ಉಂಟಾದ ಮಾರಣಾಂತಿಕ ಗಾಯಗಳಿಗೆ ನಿರಾಲಾ ನಂತರ ಮರಣಹೊಂದಿದರು. ಸೇವೆ ಮತ್ತು ಉಗ್ರಗಾಮಿಗಳ ವಿರುದ್ಧ ಹೋರಾಡುವಲ್ಲಿ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ೨೦೧೮ ರ ಜನವರಿ ೨೬ ರಂದು ನಿರಾಲಾರವರಿಗೆ ಅಶೋಕ ಚಕ್ರ ಪ್ರಶಸ್ತಿಯಿಂದ ಗೌರವಿಸಲಾಯಿತು. ಲಕ್ಷರ್-ಎ-ತೈಬಾದ ಸ್ಥಳೀಯ ನಾಯಕತ್ವವನ್ನು ತೊಡೆದುಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಾರ್ಯಾಚರಣೆ ವೇಳೆ ಹತರಾದ ಉಗ್ರರಲ್ಲಿ ಒಬ್ಬರು ೨೦೦೮ ರ ಮುಂಬೈ ದಾಳಿಯ ಪ್ರಮುಖ ಯೋಜಕ ಲಷ್ಕರ್-ಎ-ತೊಯ್ಬಾ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ ಅವರ ಸೋದರಳಿಯ.

ಕಾರ್ಪೋರಲ್ ಜ್ಯೋತಿ ಪ್ರಕಾಶ ನಿರಾಲಾ

ಅಶೋಕ ಚಕ್ರ

ಜನನ ೧೫ ನವೆಂಬರ್, ೧೯೮೬ ರೋಹ್ತಾಸ್ ಜಿಲ್ಲೆ, ಬಿಹಾರ ನಿಧನ ೧೮ ನವೆಂಬರ್ ೨೦೦೭ (೩೧ ರ ವರ್ಷದಲ್ಲಿ) ಬಂಡಿಪೋರಾ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರ ದೇಶನಿಷ್ಠೆ ಭಾರತ ಸೇವೆ/ಶಾಖೆ ಭಾರತೀಯ ವಾಯುಪಡೆ ಸೇವೆಯ ವರ್ಷಗಳು ೨೦೦೫-೨೦೧೭ ಶ್ರೇಣಿ ಕಾರ್ಪೋರಲ್ ಸೇವಾ ಸಂಖ್ಯೆ ೯೧೮೨೦೩ ಘಟಕ ರಾಷ್ಟ್ರೀಯ ರೈಫಲ್ಸ್ (ನಿಯೋಜಿತ) ಗರುಡ್ ಕಮಾಂಡೋ ದಳ ಪ್ರಶಸ್ತಿಗಳು ಅಶೋಕ ಚಕ್ರ