ಸದಸ್ಯರ ಚರ್ಚೆಪುಟ:Swathi k reddy/sandbox
ಜೀವನ
ಬದಲಾಯಿಸಿ೧೯೯೦ರ ನವೆಂಬರ್ ೩೦ರಂದು ನಾರ್ವೆಯ ತೊನ್ಸ್ ಬರ್ಗ್ನ ನಲ್ಲಿ ಕಾರ್ಲ್ ಸನ್ ಜನನ. ತಂದೆ ಹೆನ್ರಿಕ್ ಅಲ್ಬರ್ಟ್ ಮತ್ತು ತಾಯಿ ಸಿಗ್ರನ್ ಒಯಿನ್ ಇಬ್ಬರೂ ಇಂಜಿನಿಯರರು.
ಹೆನ್ರಿಕ್ ಮಗನಿಗೆ ಐದನೆಯ ವಯಸ್ಸಿನಲ್ಲಿ ಚೆಸ್ ರೂಢಿಸಿದರು.ಮೊದಲು ಕಾರ್ಲ್ ಸನಿಗೆ ಚೆಸ್ ಅಷ್ಟೊಂದು ಇಷ್ಟ ವಿರಲಿಲ್ಲ . ಆದರೆ ಕಠಿಣ ನಡೆನಳನ್ನು ಬಿಡಿಸುವಲ್ಲಿ ಪ್ರಯತ್ನ ಮುಂದುವರಿಸಿದಂತೆ ಆಸಕ್ತಿ ಹೆಚ್ಚುತ್ತ ಹೋಯಿತು. ಬೆಂಟ್ ಲಾರ್ಸೆನರ 'ಫೈಂಡ್ ದಿ ಪ್ಲ್ಯಾ ನ್ ' ಚೆಸ್ ಪುಸ್ತಕ ಓದಿದ ಬಳಿಕವಂತೂ ದಿನ ಕನಿಷ್ಠ ನಲ್ಕು ಬಾರಿ ಚೆಸ್ ಬೋರ್ಡ್ ಮುಂದೆ ಕೂಡಲಾರಂಭಿಸಿದರು.
ಕಾರ್ಲ್ ಸನ್ ಹಿನ್ನೆಲೆ ಕೆದಕಿದಾಗ ಕುತೂಹಲಕರ ಸಂಗತಿಗೆ ಸಿಗುತ್ತವೆ. ಚೆಸ್ ಆಟಗಾರರು ಚುರುಕು ಬುದ್ಧಿಯುಳ್ಳವರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದೇ ರೀತಿ ಕಾರ್ಲ್ ಸನ್ ಚಿಕ್ಕಂದಿನಿಂದಲೂ ಅತ್ಯಂತ ಬುದ್ಧಿವಂತ.
ಶಾಲೆ ಬಿಟ್ಟಿದ್ದೇಕೆಂದು ಕೇಳಿದರೆ "ಅಲ್ಲಿ ಹೇಳುತ್ತಿರುವ ವಿಷಯಗಳಲ್ಲಾ ನನಗೆ ಗೊತ್ತಿದೆ. ಅದು ಅತ್ಯಂತ ಸರಳ " ಎಂದು ಉತ್ತರಿಸುತ್ತಾರೆ ಕಾರ್ಲ್ ಸನ್ . ಇದು ಬೊಗಳೆ ಮಾತಲ್ಲ ಸತ್ಯ ಎಂಬುದಕ್ಕೆ ತನ್ನ ಹದಿಮೂರನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಗೌರವಕ್ಕೆ ಪಾತ್ರರಾಗಿ ಈ ಪ್ರಶಸ್ತಿಗೆ ಬಾಜನರಾದ ಜಗತ್ತಿನ ಮೊದಲ ಆಟಗಾರ ಎಂಬ ಕೀರ್ತಿ ಪಡೆದಿರುವುದೆ ಸಾಕ್ಷಿ.
ವಿಶ್ವನಾಥ್ ಆನಂದ್ ಅವರ ವಯಸ್ಸಿನ ಅರ್ಧದಷ್ಟು ವಯಸ್ಸು ಹೊಂದಿರುವ ಕಾರ್ಲ್ ಸನ್ ಸದ್ಯ ಜಗತ್ತಿನ ನಂಬರ್ ಒನ್ ಆಟಗಾರರೆನಿಸಿದರು .ಬಾಬಿ ಬಿಷರ್ ನಂತರ ಈ ಸ್ಥಾನಕೇರಿದ ಅತ್ಯಂತ ಕಿರಿಯ ಆಟಗಾರ.ಎಲೋ ರೇಟಿಂಗ್ ನಲ್ಲಿ ೨೮೭೨ ಎಲೋ ರೇಟಿಂಗ್ ಪಡೆಯುವ ಮೂಲಕ ಗ್ಯಾರಿ ಕಾಸ್ವರೋವ್ ಅವರ ದಾಖಲೆಯನ್ನು ಮುರಿದರು. ೧೯ನೇ ವಯಸ್ಸಿನಲ್ಲಿ ಕಾರ್ಲ್ ಸನ್ ವಿಶ್ವದ ನಂ.೧ ಆಟನಗಾರರೆನಿಸಿದರು
ಕಾರ್ಲ್ ಸನ್ ಸಾಮಾನ್ಯ ಚೆಸ್ ಆಡುವಾಗ ಯೋಚಿಸುತ್ತಾ ಗಂಟೆಗಟ್ಟಲೆ ಚೆಸ್ ಬೋರ್ಡ್ ಮುಂದೆ ಕುಳಿತುಳ್ಳುವುದಿಲ್ಲ . ದೊಡ್ಡ ನಡೆ ಅಂದರೆ ೧ ಗಂಟೆ ೩೦ ನಿಮಿಷ ಅಥವಾ ೨ ಗಂಟೆ ಕಾಲ ಚೆಸ್ ಬೋರ್ಡ್ ಮುಂದೆ ಕುಳಿತುಕೊಳ್ಳು ವುದಿಲ್ಲ
. ಅದರ ಬದಲು ಟೀವಿ ನೋಡುತ್ತಲೋ ಅಥವಾ ಇನ್ನೇನಾದರೂ ಮಾಡುತ್ತಲೋ ಕಾಲ ಕಳೆಯುತ್ತಾರಂತೆ.ಮುಖ್ಯವಾಗಿ ಕಾರ್ಲ್ ಸನ್ ಅವರಲ್ಲಿ ತಾಳ್ಮೆ ಕಡಿಮೆ. ಶಾಲೆಗೆ ಹೋಗು ಎಂದರೆ ಮನೆಯ ವರಾಂಡದಲ್ಲೇ ಕುಳಿತುಕೊಂಡು ಅಕ್ಕಂದಿರನ್ನೇ ಗೇಲಿ ಮಾದಡುತ್ತಿದ್ದ ಕಾರ್ಲ್ ಸನ್ ನಿಯಂತ್ರಿಸಲು ಅವರ ತಂದೆ ಹೆನ್ರಿಕ್ ಹರ ಸಾಹಸ ಪಡುತ್ತಿದ್ದರು.
ಕಾರ್ಲ್ ಸನ್ ೧೨ನೇ ವಯಸ್ಸಿನಲ್ಲಿದ್ದಾಗ ಅವರ ತಂದೆ ಕಾರನ್ನು ಮಾರಿ ಒಂದು ವರ್ಷ ಮನೆಯನ್ನು ಬಾಡಿಗೆಗೆ ಕೊಟ್ಟು ದೇಶ ಸಂಚಾರ ಮಾಡಿದ ಸ್ಂದರ್ಭದಲ್ಲಿ ಕಾರ್ಲ್ ಸನ್ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಚೆಸ್ ಚಾಂಪಿಯನ್-ಷಿಪ್-ನಲ್ಲಿ ಪಾಲ್ಗೊಂಡರು. ಇದರಿಂದ ಅನುಭವ ಪಡೆದ ಕಾರ್ಲ್ ಸನ್ ಅದೇ ವರ್ಷ ಗ್ಯಾರಿ ಕಾಸ್ಟರೋವ್ ಅವರೊಂದಿಗೆ ಮೊದಲ ಬಾರಿಗೆ ಪಂದ್ಯವನ್ನಾಡಿದರು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.ಈ ಪಂದ್ಯ ಮುಗಿದು ಐದು ವರ್ಷ ಕಳೆದ ನಂತರ ಕ್ಯಾಸ್ಟರೋವ್ ಜತೆ ಸೇರಿದರು .
ಚೆಸ್ ಅಟಗಾರನೊಬ್ಬ ಮಾಡೆಲಿಂಗ್-ನಲ್ಲಿ ಕೆಲಸ ಮಾಡಿದ್ದು ಅಪರೂಪ ಆದರೆ ಕಾರ್ಲ್ ಸನ್ ನಟಿ ಲೀವ್ ಟೇಲರ್ ಅವರೊಂದಿಗೆ ಮಾಡೆಲಿಂಗ್-ನಲ್ಲಿ ತೊಡಗಿಲೊಂಡರು. ಇದೇ ವೇಳೆ ಜಿ-ಸ್ಟ್ರಾರ್ ರಾ ಉತ್ಪನ್ನಗಳ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದರು.
ಈತ ಫುಟ್ಬಾಲ್ ಹಾಗೂ ಬಾಸ್ಕೆಟ್-ಬಾಲ್ ಅಭಿಮಾನಿ ಕೂಡ .ಕಾರ್ಲ್ ಸನ್ ಅವರನ್ನು ಚಿಕ್ಕಂದಿನಿಂದಲೇ ಅದ್ಭುತ ಚೆಸ್ ಪ್ರತಿಭೆ ಎಂದು ಕರೆಯಲಾಗುತ್ತಿದೆ.
ಇದಕ್ಕೆ ಕಾರಣವು ಇದೆ ಎಕೆಂದರೆ ತಾನಾಡಿದ ೧೦೦೦ ಪಂದ್ಯಗಳನ್ನು ನೆನಪಿಸಿಕೊಂಡು ಅವುಗಳ ನಡೆಯನ್ನು ಹೇಳಬಲ್ಲ ಸಾಮರ್ಥ್ಯ ಕಾರ್ಲ್ ಸನ್ ಅವರಿಗೆ ಇದೆ . ಅಲ್ಲದೆ ಎಕಕಾಲದಲ್ಲಿ ೨೦ ಆಟಗಾರರೊಂದಿಗೆ ಆಡಿ ಅವರನ್ನು ಸೋಲಿಸುವ ಸಾಮರ್ಥ್ಯವೂ ಇದೆ . ಇದಕ್ಕೆ ಕಾರಣ ಮುಖ್ಯವಾಗಿ ಅವರ ಆಟದ ಶೈಲಿ.
ಕಾರ್ಲ್ ಸನ್ ಇಲೋ ರೇಟಿಂಗ್ ದಾಖಲೆ
ಬದಲಾಯಿಸಿ- ೨೦೦೬-೧೫ ವರ್ಷ ೩೨ ದಿನದ ವಯಸ್ಸಿನಲ್ಲಿ ೨೬೨೫ ಅಂಕಗಳು ೨೬೦೦ ಇಲೋ ಅಂಕ ಗಿಟ್ಟಿಸಿದ ಅತಿ ಕಿರಿಯ.
- ೨೦೦೭-೧೬ ವರ್ಷ ೨೧೩ ದಿನದ ವಯಸ್ಸಿನಲ್ಲಿ ೨೭೧೦ ಅಂಕಗಳು ೨೭೦೦ ಇಲೋ ಅಂಕ ಗಿಟ್ಟಿಸಿದ ಅತಿ ಕಿರಿಯ.
- ೨೦೦೯-೧೮ ವರ್ಷ ೩೬೬ ದಿನದ ವಯಸ್ಸಿನಲ್ಲಿ ೨೮೦೧ ಅಂಕಗಳು ೨೮೦೦ ಇಲೋ ಅಂಕ ಗಿಟ್ಟಿಸಿದ ಅತಿ ಕಿರಿಯ.
- ೨೦೧೩-೨೨ ವರ್ಷ ವಯಸ್ಸಿನಲ್ಲಿ ೨೮೫೩ಕ್ಕೂ ಹೆಚ್ಚು ಅಂಕಗಳು ೨೮೫೩ ಇಲೋ ಅಂಕ ಗಿಟ್ಟಿಸಿದ ಮೊದಲ ಆಟಗಾರ.
ಕಾರ್ಲ್ ಸನ್ ವಿಶಿಷ್ಟ ದಾಖಲೆಗಳು
ಬದಲಾಯಿಸಿ- ೨೦೧೦ರಲ್ಲಿ ವಿಶ್ವದ ನಂ.೧ ಶ್ರೇಯಾಂಕ ಪಡೆದ ಅತಿ ಕಿರಿಯ ಆಟಗಾರ.
- ವಿಶ್ವ ಚಾಂಪಿಯನ್-ಶಿಪ್ ಜಯಿಸಿದ ಎರಡನೆಯ ಪಾಶ್ಚಿಮಾತ್ಯ ಆಟಗಾರ.
ಕಾರ್ಲ್ ಸನ್ ಗೆದ್ದಿರುವ ಪ್ರಮುಖ ಚೆಸ್ ಟೂರ್ನಿಗಳು
ಬದಲಾಯಿಸಿಬಿಯೆಲ್ ಜಿಎಂ , ನಾನ್ ಜಿಂಗ್ ಪರ್ಲ್ ಸ್ಟ್ರಿಂಗ್ , ಕೋರಸ್ , ಅಂಬರ್ ಬ್ಲೈಂಡ್ ಫೋಲ್ಡ್ , ಗ್ರ್ಯಾನ್ ಸ್ಲಾಮ್ ಚೆಸ್ ಫೈನಲ್ , ವಿಶ್ವ ಚಾಂಪಿಯನ್ ಶಿಪ್ ಟೊರ್ನಿ . --Swathi k reddy ೧೭:೦೯, ೧ ಫೆಬ್ರುವರಿ ೨೦೧೪ (UTC)