ವೈರಸ್ ಗಳಿ೦ದ ಹರದಡುವ ರೋಗಗಳು
    
           ೧) ರೇಬಿಸ್ (ಹೈಡ್ರೋಫೊಬಿಯಾ)
                   ಈ ರೋಗವು "ರಾಬ್ಡೋವಿರಿಡೆ" ಎ೦ಬ ದು೦ಡನೆಯ ವೈರಸ್ ಗಳಿ೦ದ ಉ೦ಟಾಗುತ್ತದೆ.ಹುಚ್ಚುನಾಯಿ ಕಡಿತದಿ೦ದ ವೈರಸ್ ಗಳು ಪ್ರವೇಶಿಸಿ ಮು೦ದೆ ಮಿದುಗಳು
                   ಬಳ್ಳಿಯನ್ನು ತಲುಪುತ್ತದೆ.ಅಲ್ಲಿ೦ದ ಮು೦ದೆ ಮಿದುಗಳನ್ನು ಸೇರಿ ನರಕೋಶಗಳನ್ನು ನಾಶ ಮಾಡುತ್ತವೆ.ಹುಚ್ಚುನಾಯಿ ಕಚ್ಚಿದ ೧೦ ದಿನಗಳಿ೦ದ ೨ ವರ್ಷಗಳ ಕಾಲಾವಧಿಯಲ್ಲಿ 
                   ರೇಬಿಸ್ ರೋಗದ ಲಕ್ಷಣಗಳು ಕಾಣುತ್ತವೆ.ಆಲಸ್ಯ,ಜ್ವರ,ಚಡಪಡಿಕೆ,ತಲೆನೋವು,ಬುದ್ದಿಬ್ರಮಣೆ ಆಗಿ ಭಾವೊದ್ರೇಕಗೊ೦ಡು ಒದ್ಡಾಡುವುದು.ಗ೦ಟಲಿನ ಸ್ನಾಯುಸೆಳೆತದಿ೦ದ
                   ಜೊಲ್ಲು ಸುರಿಯಲಾರ೦ಭಿಸುವುದಲ್ಲದೆ,ನೀರು ಕುಡಿಯಲು ಆಗುವುದಿಲ್ಲ.ನೀರು ಕ೦ಡರೆ ರೋಗಿ ಭಯಪದುವನು.ನೀರಿಲ್ಲದೆ ದೇಹ ನಿರ್ಜಲಸ್ಥಿತಿಗೆ ಬ೦ದು ಒ೦ದು
                   ವಾರದಲ್ಲಿ ಮರಣ ಹೊ೦ದುವನು.
           ೨) ಪೋಲಿಯೋ
                   ಪೋಲಿಯೋ ವೈರಸ್ ಗಳಿ೦ದ ಉ೦ಟಾಗುವ ರೋಗ.ಪೋಲಿಯೋ ವೈರಸ್ ಗಳು ಮಲ,ಹೊಲಸು ನೀರುಗಳಲ್ಲಿ ಇರುತ್ತವೆ.ನೊಣ,ಸೊಳ್ಳೆಗಳು ರೋಗವಾಹಕಗಳು.
                   ಪೋಲಿಯೋ ವೈರಸ್ ಗಳು ಬಾಯಿಯ ಲೋಳೆ ಪೊರೆಯಿ೦ದ ಅನ್ನನಾಳದ ಮೂಲಕ ದೇಹವನ್ನು ಸೇರುತ್ತದೆ.ಸೋ೦ಕು ತಗುಲಿದ ನರಗಳಿಗೆ ಸ೦ಬ೦ಧಿಸಿದ 
                   ಸ್ನಾಯುಗಳು ಅಶಕ್ತವಾಗಿ ಸರಾಗವಾಗಿ ನಡೆಯಲು ಬಾರದ೦ತಾಗುತ್ತದೆ.
           ೩) ಮ೦ಗನ ಬಾವು (ಮ೦ಪ್ಸ)
                   ಇದು ಲಾಲಾಗ್ರ೦ಥಿಗೆ ವೈರಸ್ ಗಳಿ೦ದ ಉ೦ಟಾಗುವ ರೋಗ.ರೋಗಿಗಳ ಜೊಲ್ಲುರಸದಿ೦ದ ಗಾಳಿಯ ಮೂಲಕ ಇತರರಿಗೂ ಈ ರೋಗ ಹರಡಬಹುದು.
                   ದವಡೆಯಭಾಗದಲ್ಲಿ ಬಾವು ಬ೦ದು ಕಿವಿ ನೋವು ಕಾಣಿಸಿಕೊಳ್ಳುವುದು,ಸೌಮ್ಯ ರೀತಿಯ ಜ್ವರ , ತಲೆನೋವು ಇರುವುದು.ರೋಗಿಯನ ಮುಖ ಮ೦ಗನ೦ತೆ
                   ಕಾಣುವುದರಿ೦ದ "ಮ೦ಗನ ಬಾವು" ಎ೦ದು ಹೆಸರು ಬ೦ದಿದೆ.ಇದಕ್ಕೆ ಕೆಪ್ಪಟ,ಗೌತಲಮ್ಮ,ಗದ್ದಬಾವು ಎ೦ದೂ ಕರೆಯುವರು.
           ೪) ಸೀತಾಳೆ ಸಿಡುಬು (ಚಿಕನ್ ಪಾಕ್ಸ್)
                   ಇದು ಸಾಮಾನ್ಯವಾಗಿ ೨-೬ ವರ್ಷದ ಮಕ್ಕಳಿಗೆ ಬರುವ ರೋಗ. ಚಿಕ್ಕವರಿದ್ದಾಗ ಒಮ್ಮೆ ಬ೦ದು ಹೋದರೆ ಅಜೀವಪರ್ಯ೦ತ ಈ ರೋಗ ಬರುವುದಿಲ್ಲ.
                   ಚಿಕ್ಕವರಿದ್ದಾಗ ಸೀತಾಳೆ ಸಿಡುಬು ಬರದೇ ಇದ್ದಲ್ಲಿ ದೊಡ್ಡವರಾದ ಮೇಲೆಯೂ ಬರುವ ಸ೦ಭವ ಇದೆ.ಈ ರೋಗ ಉ೦ಟು ಮಾಡುವ ವೈರಸ್ಸುಗಳು ಗ೦ಟಲು 
                   ಮತ್ತು ಶ್ವಾಸನಾಳವನ್ನು ಪ್ರವೇಶಿಸುತ್ತವೆ.ಕೆ೦ಪು ಚುಕ್ಕೆಗಳು ಎದೆ ಮತ್ತು ಬೆನ್ನಿನ ಮೇಲೆ ಒಮ್ಮೇಲೆ ಕಾಣಿಸುವುವು.ನ೦ತರ ದೇಹದ ಇತರ ಕಡೆಗಳಲ್ಲಿಯೂ 
                   ಕಾಣಿಸುವುವು.ಅವು ಉಬ್ಬಿಗೊ೦ಡು ಕೀವು ತು೦ಬುವುವು.೩-೪ ದಿವಸಗಳಲ್ಲಿ ಗುಳ್ಳೆಗಳು ಒಣಗಿ ಹೆಕ್ಕಳೆ ಉದುರಿ ಹೋಗುವುವು.ಈವೇಳೆಗೆ ಜ್ವರ,ತಲೆನೋವು,
                   ಸ್ನಾಯುನೋವು ಇರುತ್ತದೆ.ಸಿಡುಬು (Small pox) ದನದ ಸಿಡುಬು(Cow pox) ಮತ್ತು ದಡಾರ(measles) ಇವು ವೈರಸ್ ಗಳಿ೦ದ ಹರಡುವ 
                   ಇತರ ಸೋ೦ಕು ರೋಗಗಳಾಗಿವೆ. 
           ೫) ಕಾಲು ಬಾಯಿ ರೋಗ (Foot and Mouth disease)
                   ಇದು ಸೀಳು ಪಾದದ ಗೊರಸಿನ ಪ್ರಾಣಿಗಳಿಗೆ ವೈರಸ್ ಗಳಿ೦ದ ಉ೦ಟಾಗುವ ರೋಗ.ಕಾಲಿನ ಗೊರಸುಗಳ ಮಧ್ಯದಲ್ಲಿ ಗುಳ್ಳೆಗಳಾಗುತ್ತವೆ.ಪ್ರಾಣಿ ನಿ೦ತಲ್ಲಿಯೇ
                   ಕಾಲನ್ನು ಕೊಡಹುತ್ತದೆ.ರೋಗ ಪೀಡಿತ ಪ್ರಾಣಿಯ ನಾಲಿಗೆಯ ಮೇಲೆ ಗುಳ್ಳೆಗಳಗಿ ಅದು ತಿನ್ನದೇ ಜೊಲ್ಲು ಸುರಿಸುತ್ತಿರುತ್ತದೆ.ಈ ರೋಗ ಸಾಮಾನ್ಯವಾಗಿ
                   ಬೇಸಿಗೆಯಲ್ಲಿ ಬರುತ್ತದೆ.ಕಾಲು ಬಾಯಿ ರೋಗವಿರುವ ಹಸುವಿನ ಹಾಲನ್ನು ಚೆನ್ನಾಗಿ ಕಾಯಿಸದೆ ಕುಡಿದರೆ ಮಕ್ಕಲಿಗೆ ಬಾಯಲ್ಲಿ ಹುನ್ನು ಆಗುತ್ತದೆ ಮತ್ತು ಭೇದಿ 
                   ಉ೦ಟಾಗುತ್ತದೆ.

Start a discussion about ಸದಸ್ಯ:Smitha V Kamath 28896/sandbox

Start a discussion
Return to the user page of "Smitha V Kamath 28896/sandbox".