ಸದಸ್ಯರ ಚರ್ಚೆಪುಟ:Shravya kulal/ನನ್ನ ಪ್ರಯೋಗಪುಟ

ನೋಟುಗಳ ಅನಾಣ್ಯೀಕರಣ ಬದಲಾಯಿಸಿ

ಭಾರತ ಸರ್ಕಾರ ಬುಧವಾರ 9 ನವೆಂಬರ್ 2016 ರಿಂದ ಎಲ್ಲಾ ರೂ..500 ಮತ್ತು ರೂ. 1000 ಬ್ಯಾಂಕ್-ನೋಟುಗಳ ಅನಾಣ್ಯೀಕರಣವನ್ನು ಘೋಷಣೆ ಮಾಡಿದ್ದು, ಭಾರತದಲ್ಲಿ ಕಾನೂನು ಬದ್ಧವಾಗಿ ಮಹಾತ್ಮ ಗಾಂಧಿ ಸರಣಿಯ ರೂ.1000 ಬ್ಯಾಂಕ್ ನೋಟುಗಳ ಮೌಲ್ಯವನ್ನು (ನವೆಂಬರ್ 08,2016 ಮದ್ಯರಾತ್ರಿಯಿಂದ) ರದ್ದುಗಳಿಸುತ್ತಿರುವುದಾಗಿ 8 ನವೆಂಬರ್ 2016 ರಲ್ಲಿ ಘೋಶಿಸಲಾಯಿತು.

ಭಾರತ ಪ್ರಧಾನಿ ನರೇಂದ್ರ ಮೋದಿಯವರು 8:15 ರಾತ್ರಿ ಹೊಸದಿಲ್ಲಿಯಲ್ಲಿ ಈ ಪ್ರಕಟಣೆ ಮಾಡಿದರು. ಅದೇ ದಿನ ಮೋದಿಯವರಿಂದ ರಾಷ್ಟ್ರಕ್ಕೆ ಒಂದು ಅನಿಗದಿತ ನೇರ ಪ್ರಸಾರ ಭಾಷಣದಲ್ಲಿ ಮಹಾತ್ಮ ಗಾಂಧಿ ಸರಣಿಯ ಎಲ್ಲಾ ರೂ. 500 ಮತ್ತು ರೂ. 1000 ಬ್ಯಾಂಕ್ ನೋಟುಗಳ ಪರಿಚಲನೆ ಅಮಾನ್ಯವಾಗಿದೆ ಎಂದು ಘೋಷಿಸಿ ಈ ಪ್ರಕಟಣೆ ಮಾಡಲ್ಪಟ್ಟಿತು. ಹಳೆಯ ಬ್ಯಾಂಕ್ನೋಟುಗಳನ್ನು ಮಹಾತ್ಮ ಗಾಂಧಿ ಹೊಸ ಸರಣಿಯ, ಹೊಸ ರೂ.500 ಮತ್ತು ರೂ. 2000 ಬ್ಯಾಂಕ್ ನೋಟುಗಳ ನೀಡಿಕೆಯ ವಿನಿಮಯವನ್ನು ಘೋಷಿಸಿತು.

ಉದ್ದೇಶ ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆಗೆ ಅಚ್ಚರಿಯ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದೆ. ಇದೇ ಮೊದಲ ಬಾರಿ ಸುದ್ದಿ ವಾಹಿನಿಗಳ ಮೂಲಕ ಅನಿರೀಕ್ಷಿತವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ನಿರ್ಧಾರ ಪ್ರಕಟಿಸಿದ್ದಾರೆ.

https://kn.wikipedia.org/wiki/

Return to the user page of "Shravya kulal/ನನ್ನ ಪ್ರಯೋಗಪುಟ".