ಸದಸ್ಯರ ಚರ್ಚೆಪುಟ:Shamith shriyan/sandbox

ಹಣಕಾಸು ಎಂದರೆ ಸಂಪತ್ತಿನ ನಿರ್ವಹಣೆಯ ವಿಜ್ಞಾನ.[೧] ಹಣಕಾಸಿನ ಸಾಮಾನ್ಯ ಕ್ಷೇತ್ರಗಳೆಂದರೆ ವಾಣಿಜ್ಯದ ಹಣಕಾಸು , ವೈಯಕ್ತಿಕ ಹಣಕಾಸು , ಮತ್ತು ಸಾರ್ವಜನಿಕ ಹಣಕಾಸು .[೨] ಹಣಕಾಸಿನಲ್ಲಿ ಹಣದ ಉಳಿತಾಯ ಮತ್ತು ಕೆಲವೊಮ್ಮೆ ಹಣದ ಸಾಲ ನೀಡುವಿಕೆಯೂ ಸೇರಿರುತ್ತವೆ. ಸಮಯ, ಹಣ ಮತ್ತು ಅಪಾಯಗಳ ಪರಿಕಲ್ಪನೆ ಮತ್ತು ಅವುಗಳ ಪರಸ್ಪರ ಸಂಬಂಧದ ಅಧ್ಯಯನವನ್ನು ಹಣಕಾಸು ಒಳಗೊಂಡಿದೆ. ಹಣವನ್ನು ಹೇಗೆ ಖರ್ಚು ಮಾಡುವುದು ಮತ್ತು ಬಜೆಟ್ ಮಾಡುವುದು ಎಂಬುದನ್ನು ಅದು ಒಳಗೊಂಡಿರುತ್ತದೆ.


ವ್ಯಕ್ತಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬ್ಯಾಂಕಿನಲ್ಲಿ ಹಣವನ್ನು ಇರಿಸುವುದರೊಂದಿಗೆ ಹಣಕಾಸಿನ ಮೂಲಭೂತವಾದ ಕೆಲಸ ನಡೆಯುತ್ತದೆ. ಬ್ಯಾಂಕು ನಂತರ ಹಣವನ್ನು ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಬಳಕೆಗಾಗಿ ಇಲ್ಲವೇ ಹೂಡಿಕೆಗಾಗಿ ಸಾಲ ಕೊಡುತ್ತದೆ ಮತ್ತು ಸಾಲಗಳಿಗೆ ಬಡ್ಡಿ ಹಾಕುತ್ತದೆ.


ಸಾಲಗಳು ಮರುಮಾರಾಟಕ್ಕೆ ಹೆಚ್ಚಾಗಿ ಸಿದ್ಧಪಡಿಸಲ್ಪಡುತ್ತಿವೆ, ಅಂದರೆ ಬಂಡವಾಳದಾರರು ಸಾಲವನ್ನು (ಋಣವನ್ನು) ಬ್ಯಾಂಕಿನಿಂದ ಅಥವಾ ಸಂಸ್ಥೆಯಿಂದ ನೇರವಾಗಿ ಕೊಳ್ಳುತ್ತಾರೆ. ಬಾಂಡುಗಳು ಬಂಡವಾಳದಾರರಿಗೆ ಸಂಸ್ಥೆಗಳು ನೇರವಾಗಿ ಮಾರುವ ಸಾಲಗಳು, ಬಂಡವಾಳದಾರರು ಸಾಲವನ್ನು ತಡೆಹಿಡಿದು ಬಡ್ಡಿಯನ್ನು ಗಳಿಸಬಹುದು ಅಥವಾ ಸಾಲವನ್ನು ದ್ವಿತೀಯ ಮಾರುಕಟ್ಟೆಯಲ್ಲಿಮಾರಬಹುದು. ಸಾಲ ಕೊಡುವುದರ ಮೂಲಕ ಬ್ಯಾಂಕುಗಳು ಹೂಡಿಕೆಯ ಮುಖ್ಯ ಸಹಾಯಕರಾಗಿವೆ ಆದರೂ ಸಹ ಖಾಸಗಿ ಷೇರುಗಳು, ಮ್ಯುಚುಯಲ್ ಫಂಡುಗಳು, ಹೆಜ್ ಫಂಡುಗಳು ಮತ್ತಿತರ ವ್ಯವಸ್ಥೆಗಳು ಸಾಲದ ವಿಭಿನ್ನ ಪ್ರಕಾರಗಳಲ್ಲಿ ಬಂಡವಾಳ ಹಾಕುವುದರಿಂದ ಪ್ರಾಮುಖ್ಯತೆ ಪಡೆದಿವೆ. ಹೂಡಿಕೆಗಳು ಎಂದು ಕರೆಯಲ್ಪಡುವ ಆರ್ಥಿಕ ಆಸ್ತಿಗಳನ್ನು ಆರ್ಥಿಕ ಅಪಾಯಗಳನ್ನು ನಿಯಂತ್ರಿಸುವ ಸಲುವಾಗಿ ಆರ್ಥಿಕ ಅಪಾಯಗಳ ನಿರ್ವಹಣೆಗೆ ಎಚ್ಚರಿಕೆಯಿಂದ ಗಮನ ನೀಡಿ ಆರ್ಥಿಕವಾಗಿ ನಿರ್ವಹಿಸಲಾಗುತ್ತದೆ. ಬಾಂಡುಗಳಂತಹ ಸಾಲಗಳು ಮತ್ತು ಸಾರ್ವಜನಿಕವಾಗಿ ಮಾರಾಟವಾಗುವ ಸಂಸ್ಥೆಗಳಲ್ಲಿನ ಷೇರುಗಳು ಸೇರಿದಂತೆ ಆರ್ಥಿಕ ಸಾಧನಗಳು ಅನೇಕ ಬಗೆಯ ಸುರಕ್ಷಿತ ಆಸ್ತಿಗಳನ್ನು ಸ್ಟಾಕ್ ಎಕ್ಸ್ ಚೇಂಜ್ ನಂತಹ ಸೆಕ್ಯೂರಿಟಿ ವಿನಿಮಯಕೇಂದ್ರಗಳಲ್ಲಿ ಮಾರಾಟಮಾಡಲು ಸಹಾಯ ಮಾಡುತ್ತವೆ.[dubious – discuss]

ಇಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ? ಬದಲಾಯಿಸಿ

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆಗೆ ಉದ್ಯೋಗಿ ಹಾಗೂ ಉದ್ಯೋಗದಾತ ಸಂಸ್ಥೆ ಹಣ ಸೇರಿಸುವುದು ನಿಮಗೆ ಗೊತ್ತೇ ಇದೆ. ಈಗ ಪಿಎಫ್ ಮಾಹಿತಿ ಎಲ್ಲರಿಗೂ ಆನ್ ಲೈನ್ ನಲ್ಲಿ ಸಂಪೂರ್ಣವಾಗಿ ಲಭ್ಯವಾದ ಮೇಲೆ ನಿಮ್ಮ PF ಖಾತೆಗೆ ಜಮೆಯಾಗಿರುವ ಮೊತ್ತ ಹಾಗೂ ಪಿಎಫ್ ಹಣ ಹಿಂಪಡೆಯುವುದು, ವರ್ಗಾವಣೆ ಮಾಡುವುದು ಇತ್ಯಾದಿ ಕ್ರಿಯೆ ಸುಲಭ ಸಾಧ್ಯವಾಗಿದೆ. ಆದರೆ, ಇಪಿಎಫ್ ಲೆಕ್ಕಾಚಾರ ಹಾಕುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ: ಇಪಿಎಫ್ = ಉದ್ಯೋಗಿ (ಸಂಬಳದ ಶೇ 12 + ತುಟ್ಟಿಭತ್ಯೆ DA) + ಉದ್ಯೋಗ ಸಂಸ್ಥೆ (ಶೇ 12 + DA) ಈ ಮೊದಲು ಉದ್ಯೋಗಿಯ ಮೂಲ ಸಂಬಳ(Basic) ಜೊತೆಗೆ ತುಟ್ಟಿಭತ್ಯೆಯನ್ನು ಸೇರಿಸಲಾಗುತ್ತಿತ್ತು. ಆದರೆ, ಹೊಸ ನಿಯಮದ ಪ್ರಕಾರ ಮೂಲ ಸಂಬಳ + ತುಟ್ಟಿಭತ್ಯೆ + ಇತರೆ ಸವಲತ್ತುಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ಉದಾಹರಣೆಗೆ: ಸುರೇಶ್ ಎಂಬ ಉದ್ಯೋಗಿಯ ಮೂಲ ಸಂಬಳ ಮೊತ್ತ 30,000 ಇದೆ ಎಂದುಕೊಳ್ಳಿ. ಸಾರಿಗೆ ಸವಲತ್ತುಗಳು ತಿಂಗಳಿಗೆ 5,000 ರು ಇದೆ ಹಾಗೂ ವೈದ್ಯಕೀಯ ಭತ್ಯೆ 5,000 ಪ್ರತಿ ತಿಂಗಳಿಗೆ ಸಿಗುತ್ತಿದೆ. ಹಳೆ ನಿಯಮದ ಪ್ರಕಾರ ಇದರ ಮೊತ್ತ 30,000 ರು ಆಗುತ್ತದೆ. 30,000 X 12/100=3,600 ರು ಹೊಸ ನಿಮಯದ ಪ್ರಕಾರ ಸಾರಿಗೆ, ಗೃಹಭತ್ಯೆ, ತುಟ್ಟಿಭತ್ಯೆ ಇತರೆ ಸವಲತ್ತುಗಳನ್ನು ಸೇರಿಸಲಾಗುತ್ತದೆ. ಹಾಗಾಗಿ ಲೆಕ್ಕಾಚಾರ ಹೀಗಿರುತ್ತದೆ. 40,000 X 12/100= 4,8000 ರು ಇಪಿಎಫ್ ಪ್ರಯೋಜನ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆದಾರರಿಗೆ ಮೂರು ಮುಖ್ಯ ಪ್ರಯೋಜನಗಳಿವೆ. ಇಲ್ಲಿ ಉಳಿತಾಯಕ್ಕಾಗಿ ಇಡಲಿರುವ ಮೊತ್ತಕ್ಕೆ ಬಡ್ಡಿ ಲಭಿಸುತ್ತದೆ. ನಿವೃತ್ತಿ ಪಿಂಚಣಿ ಸಿಗುತ್ತದೆ. ವಿಮೆ ಸೌಲಭ್ಯವೂ ಇದರ ಜೊತೆ ಕೂಡಿರುತ್ತದೆ. ಪಿಎಫ್ 2012-13 ರ ಪಿಎಫ್ ಚಂದಾದಾರರಿಗೆ ಶೇ 8.7 ರ ಬಡ್ಡಿದರದಂತೆ ಪಾವತಿ ನೀಡಲು ಕೇಂದ್ರ ಸರ್ಕಾರ ಒಪ್ಪಿಸೆ ಸೂಚಿಸಿದೆ. ಸುಮಾರು 5 ಕೋಟಿಗೂ ಅಧಿಕ EPFO ಚಂದಾದಾರರಿಗೆ ಅನುಕೂಲವಾಗಲಿದೆ. ಇಪಿಎಫ್ ಖಾತೆದಾರರಾದರೆ ತಕ್ಷಣವೇ Employees Pension Scheme 1995 ಹಾಗೂ Employees Deposit Linked Insurance Scheme 1976 (EDLIS) ನ ಸದಸ್ಯರಾಗುತ್ತೀರಿ. ಉಳಿದ ವಿವರ ಹಾಗೂ ಪಿಎಫ್ ವಿಥ್ ಡ್ರಾ ಯಾವಾಗ ಮಾಡಬಹುದು ಎಂಬುದರ

Return to the user page of "Shamith shriyan/sandbox".