ಸದಸ್ಯರ ಚರ್ಚೆಪುಟ:Sampath125/sandbox
ಫರ್ಡಿನೆಂಡ್ ಕಿಟೆಲ್
ಫರ್ಡಿನೆಂಡ್ ಕಿಟೆಲರು (೧೮೩೨-೧೯೦೩)ಕನ್ನಡವನ್ನು ಶ್ರೀಮಂತಗೊಳಿಸಿದ, ಅಗ್ರಗಣ್ಯ ಕ್ರೈಸ್ತ ಮಿಶಿನರಿಗಳಲ್ಲಿ ಪ್ರಾತಃಸ್ಮರಣೀಯರು. ಹತ್ತೊಂಬತ್ತೆನೆಯ ಶತಮಾನದಲ್ಲಿ ತಮ್ಮ ತಾಯ್ನಾಡಾದ ಜರ್ಮನಿಯಿಂದ ಬಾಸೆಲ್ ಮಿಶನ್ ಮೂಲಕ ನಾಡಿಗೆ ಪೂಜ್ಯರು ಎಂದು ಕನ್ನಡ ಭಾಷೆಯನ್ನು ತನ್ನ ಭಾಷೆಯನ್ನಾಗಿ ಸ್ವೀಕರಿಸಿ, ಕನ್ನಡದಲ್ಲಿ ಸರ್ವಸಂಗ್ರಾಹಕ ವಿವರಣಾತ್ಮಕ ಶಬ್ಧಕೋಶ, ಸಾಹಿತ್ಯ ರಚನೆ, ಪಠ್ಯಪುಸ್ತಕ ನಿರ್ಮಾಣ, ವ್ಯಾಕರಣ ಗ್ರಂಥಗಳು ಗ್ರಂಥ ಸಂಪಾದನೆ, ಛಂದಸ್ಸು ಇತರೆ ಹಲವಾರು ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಗೈದರು.
ಫರ್ಡಿನೆಂಡ್ ಕಿಟೆಲರ ಪರಿಚಯ:- ಜರ್ಮನಿಯ ರಾಸ್ವರ್ ಹಾಫ್ ಎಂಬ ಊರಲ್ಲಿ ೧೮೩೨ರ ಎಪ್ರಿಲ್ ತಿಂಗಳ ೮ರಂದು ಫರ್ಡಿನಾಂಡ್ ಹುಟ್ಟಿದರೆಂದು ಆರಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ರಾಬಾರ್ಟ ದಾಖಲಿಸಿದ್ದಾರೆ. ಫೆರ್ಡಿನೆಂಡರ ತಂದೆ ಗಾಟಫ್ರೀಟ್ ಕ್ರಿಶ್ಚಿಯನ್ ಕಿಟಲ್, ತಾಯಿ ತಯೊಡೊವ್ ಹೆಲೆನ ಹಾವರ್ಟ್ ಗಾಟಫ್ರೀಟ್.
ಫರ್ಡಿನೆಂಡರ ಶಾಲಾ ಶಿಕ್ಷಣ ನಡೆದದ್ದು ತನ್ನ ಅಜ್ಜನ ಊರಾದ ಆರಿಕನಲ್ಲಿ. ಆ ಬಳಿಕ ಅವರು ಸ್ವಿಸಲ್ಯಾಂಡಿನ ಬಾಸೆಲ್ ನಗರದ ಮಿಶನ್ ಸಂಸ್ಥೆಯನ್ನು ೧೮೫೦ರಲ್ಲಿ ಸೇರಿ ೧೮೫೩ ಅಲ್ಲಿನ ಶಿಕ್ಷಣ ಮುಗಿಸಿ ಅದೇ ವರ್ಷ ಅಕ್ಟೋಬರ್ ೧೬ರಂದು ಗುರುದೀಕ್ಷೆ ಪಡೆದುಕೊಂಡರು.ಆ ಬಳಿಕ ಒಂದು ವಾರದೊಳಗೆ ಅವರನ್ನು ಭಾರತಕ್ಕೆ ಕಳುಹಿಸಲಾಯಿತು. ಪ್ರಯಾಣಮಾಡಿ ೧೮೫೪ರ ಅಕ್ಟೋಬರ್ ೨೦ರಂದು ಮಂಗಳೂರನ್ನು ತಲುಪಿದರು. ಆ ಬಳಿಕ ಧಾರವಾಡಕ್ಕೆ ಬಂದರು.
ಕಿಟಲರಿಗೆ ಹೀಬ್ರೂ,ಗ್ರೀಕ್, ಲ್ಯಾಟಿನ್, ಫ್ರೆಂಚ್ ಹಾಗೂ ಇಂಗ್ಲೀಷನಲ್ಲಿ ಪ್ರಾವೀಣ್ಯತೆ ಇತ್ತು. ಅದೇ ಮಟ್ಟದಲ್ಲಿ ಸ್ಥಳೀಯ ಜನ ಭಾಷೆಯಾದ ಕನ್ನಡವನ್ನು ಕಲೆಯಬೇಕೆಂಬ ಆಸೆ ಉಂಟಾಯಿತು. ಆ ಕಾರಣಕ್ಕಾಗಿ ಮಂಗಳೂರಿಗೆ ಹೋದರು ಅಲ್ಲಿ ಅತ್ಯುತ್ಸಾಹದಿಂದ ಕನ್ನಡ ಅದ್ಯಯನ ಆರಂಭಿಸಿದರು. ಕನ್ನಡದ ಜೊತೆ ಜೊತೆಯಲ್ಲಿ ಸಂಸ್ಕ್ರತ, ತುಳು, ಮಲಯಾಳಂ ಭಾಷೆಗಳನ್ನು ಪರಿಚಯಿಸಿಕೊಂಡರು.೧೮೬೦ ನವೆಂಬರದಲ್ಲಿ ಪೌಲಿನ್ ಈತ್ ಎಂಬ ಜರ್ಮನ ಕನ್ಯೆಯೊಡನೆ ಕಿಟೆಲರ ವಿವಾಹವಾಯಿತು. ನಂತರ ನಾಲ್ಕು ವರ್ಷಗಳಲ್ಲಿಯೇ ಪತ್ನಿಯನ್ನು ಕಳೆದುಕೊಂಡರು. ನಂತರ ೧೮೬೬ರಲ್ಲಿ ತಮ್ಮ ಅಗಲಿದ ಪತ್ನಿಯ ತಂಗಿಯಾದ ಜೂಲಿಯನ್ನು ಮದುವೆಯಾದರು.
ಕಿಟಲರ ಚಿರಸ್ಮರಣೀಯ ಕೃತಿಯಾದ ಕನ್ನಡ-ಇಂಗ್ಲೀಷ ಡಿಕ್ಷನರಿಯನ್ನು ಅಂದ ಭಾರತದಲ್ಲೆ ಯಾರು ಗಮನಿಸದಿದ್ದರೂ ಜರ್ಮನಿಯ ಮ್ಯಬಂಗನ್ ವಿಶ್ವವಿದ್ಯಾನಿಲಯ ಗಮನಿಸಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಕೃತಾರ್ಥಗೊಂಡಿತು. ಕನ್ನಡದ ಕಾರ್ಯಕ್ಕೆ ಸಂದ ಪ್ರಪ್ರಥಮ ಡಾಕ್ಟರೇಟ್ ಪದವಿಯಿದು.
ಕಿಟಲರ ಕೊನೆಯ ಗ್ರಂಥವಾದ " A Grammer of the Kannada Language" (೧೯೦೩)ಯನ್ನು ತನ್ನ ಕೈಸೇರಿದ ಕೆಲವೇ ದಿನಗಳಲ್ಲಿ ಡಿಸೆಂಬರ್ ೧೯, ೧೯೦೩ ರಂದು ತಮ್ಮ ಮಡದಿ ಮಕ್ಕಳ ಸಮ್ಮುಖದಲ್ಲಿ ೭೭ನೆಯ ವಯಸ್ಸಿನಲ್ಲಿ ಕಿಟಲರ ಜೀವಾತಮ ಪರಮಾತ್ಮನಲ್ಲಿ ಐಕ್ಯವಾಯಿತು.
Start a discussion about ಸದಸ್ಯ:Sampath125/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Sampath125/sandbox.