ಸಂವಹನ ಅರ್ಥ : ಸಂವಹನ ಎಂದರೆ ಮಾಹಿತಿ, ಅಭಿಪ್ರಾಯ ಭಾವನೆಗಳು ಹಾಗೂ ವಿಚಾರಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ತಿಳಿಸುವ ಕಲೆಯಂತಲೇ ಎನ್ನಬಹುದು. ಸಂವಹನವು ವ್ಯಕ್ತಿ ವ್ಯಕ್ತಿಗಳ ನಡುವೆ ನಡೆಯುವ ಅರ್ಥಪೂರ್ಣ ವಿಚಾರ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೇಯಾಗಿದೆ. ಸಂವಹನ ಕ್ರಿಯೇಯಿಂದ ಒಬ್ಬ ವ್ಯಕ್ತಿ ಬೇರೊಬ್ಬ ವ್ಯಕ್ತಿಯಿಂದ ತನಗೆ ತಿಳಿಯದ ವಿಷಯಗಳನ್ನು ಕೇಳಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ದಿನಗಳಲ್ಲಿ ಸಂವಹನದ ಅಗತ್ಯತೆ ಬಹಳ ಇದೆ. ಕಾರಣ ಸಂವಹನ ಕ್ರಿಯೇ ನಾವು ಮಾಡದಿದ್ದಲ್ಲಿ ನಮಗೆ ಬೇರೊಬ್ಬ ವ್ಯಕ್ತಿಯ ಪರಿಚಯ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಂವಹನದ ಪ್ರಾಮುಖ್ಯತೆಗಳೆಂದರೆ

  • ಮುಖ್ಯವಾಗಿ ವ್ಯವಹಾರಗಳಲ್ಲಿ ವ್ಯವಹಾರಗಳು ಸುಲಭ ರೀತಿಯಲ್ಲಿ ನಡೆಯಲು ಸಂವಹನದ ಅಗತ್ಯತೆ ಬಹಳ ಇದೆ.
  • ವ್ಯವಹಾರಗಳಲ್ಲಿ ಪರಿಣಾಮಕಾರಿ ನಿರ್ಧಾರ ಕೈಗೊಳ್ಳು ಒಳ್ಳೆಯ ಸಂವಹನದ ಅಗತ್ಯತೆ ಇರುತ್ತದೆ. ಕಾರಣ ಒಳ್ಳೆಯ ತೀರ್ಮಾಣಗಳನ್ನು ವ್ಯವಹಾರದಲ್ಲಿ ಕೈಗೊಳ್ಳುವುದರಿಂದ ವ್ಯವಹಾರಕ್ಕೆ ಬೆನ್ನೆಲುಬಾಗಿ ಸಹಾಯವಾಗುತ್ತದೆ. ಉತ್ತಮ ನಿರ್ಧಾರ ಸಂವಹನದ ಫಲಿತಾಂಶವಾಗಿದೆ.
  • ಮುಖ್ಯವಾಗಿ ವ್ಯವಹಾರದಲ್ಲಿ ನಿರ್ವಹಣ ದಕ್ಷತೆಗೆ ಸಂವಹನವು ಅತ್ಯಗತ್ಯ ವ್ಯವಹಾರ ಕಾರ್ಯಗಳು ನಡೆಯಲು ಒಂದು ಉತ್ತಮ ಸಂವಹನ ಅವಶ್ಯಕವಾಗಿರುತ್ತದೆ.
  • ಸಹಕಾರ : ವ್ಯಕ್ತಿಗಳ ಮತ್ತು ಸಮೂಹಗಳ ಮಧ್ಯೆ ನಿರ್ವಾಹಣೆ ನೌಕರರ ಮಧ್ಯೆ ಮಾಹಿತಿ ವಿನಿಮಯ ಇಲ್ಲದಿದ್ದರೆ ಅಥವಾ ಸಂವಹನ ಕ್ರಿಯೇ ಇಲ್ಲದಿದ್ದರೆ ವ್ಯವಹಾರಗಳಲ್ಲಿ ಸಹಕಾರ ಸಾಧ್ಯವಿಲ್ಲ. ಸಂವಹನವು ಔದ್ಯೋಗಿಕ ಶಾಂತಿಯನ್ನು ಉತ್ತಮ ಪಡಿಸುವುದಲ್ಲದೆ ವ್ಯವಹಾರಗಳಲ್ಲಿ ಉತ್ಪಾದನೆಯನ್ನು ಗರಿಷ್ಟಗೊಳಿಸುತ್ತದೆ.

ಹೀಗೆ ಹಲವಾರು ರೀತಿಯಲ್ಲಿ ಸಂವಹನದ ಅವಶ್ಯಕತೆಗಳು ಬಲು ಇರುತ್ತವೆ. ವಿಷಯ ವೈಶಿಷ್ಟ : ಇಂದಿನ ಜಗತ್ತಿನಲ್ಲಿ ಯಾವುದೇ ಒಬ್ಬ ವ್ಯಕ್ತಿ ಸಂವಹನ ನಡೆಸದೇ ಯಾವ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ. ಆದ ಕಾರಣ ಸಂವಹಣವು ಮಾನವನ ಪ್ರತಿಯೊಂದು ಕಾರ್ಯಗಳಲ್ಲಿ ಅತೀ ಮುಖ್ಯ ಪಾತ್ರ ವಹಿಸುತ್ತದೆ.

Start a discussion about ಸದಸ್ಯ:Relviya noeonha/sandbox

Start a discussion
Return to the user page of "Relviya noeonha/sandbox".