ಸದಸ್ಯರ ಚರ್ಚೆಪುಟ:Priyadarshini100/sandbox
ರೈತರ ಆಚರಣೆಗಳು- ಚರಗ ಚೆಲ್ಲುವುದು
ಬದಲಾಯಿಸಿಬೆಳೆಗಳಿಗೆ ಅಂಟುವ ಪೀಡೆ ಪರಿಹಾರಾರ್ಥವಾಗಿ, ರೋಗ ನಿವಾರಣಾರ್ಥವಾಗಿ ಚರಗ ಚಲ್ಲುವ ಆಚರಣೆ ವ್ಯವಸಾಯಗಾರರಲ್ಲಿ ದಟ್ಟವಾಗಿ ನೆಲೆಯೂರಿದೆ. ಚರಗ ಪದವನ್ನು ಕೇಳಿದಾಕ್ಷಣ ಸಾಮಾನ್ಯವಾಗಿ ಪ್ರಾಣಿಬಲಿಯ ನಂತರದ ರಕ್ತದ ಅನ್ನ ಹಾಗೂ ತಂಗಳು ಅಡುಗೆ ಪದಾರ್ಥಗಳಿಂದ ಮಾಡಿದ ಮಿಶ್ರಣ ನೆನಪಿಗೆ ಬರುತ್ತದೆ. ಪ್ರಾಣಿಬಲಿಯನ್ನು ನೀಡಿ ಮಾಡಿದ ಚರಗವು ಸಮಗ್ರವಾಗಿ ಊರಿನ ಕ್ಷೇಮವನ್ನು ಕಾಪಾಡುತ್ತದೆ ಎಂದು ಭಾವಿಸುವುದಾದರೆ, ಪ್ರತಿ ರೈತ ತನ್ನ ಹೊಲಗದ್ದೆಗಳಿಗೆ ಚಲ್ಲುವ ಚರಗ ಅವನ ಆರಂಬವನ್ನು ರಕ್ಷಿಸುತ್ತದೆ.
ಕೆಲವು ಪ್ರದೇಶಗಳಲ್ಲಿ ಚರಗದ ಕುಡಿಕೆಯೊಂದನ್ನು ಮನೆಯಲ್ಲಿ ಸದಾ ಇಟ್ಟುಕೊಂಡಿರುತ್ತಾರೆ. ಬೆಳೆಗಳಿಗೆ ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಮುದ್ದೆ, ಅನ್ನ ಇಂತಹ ಯಾವುದಾದರೂ ಅಡಿಗೆಯನ್ನು ನೀರಿಗೆ ತೆಳ್ಳಗೆ ಕಲಸಿಕೊಂಡು ಹೊಲದ ಸುತ್ತ ಚಲ್ಲುತ್ತಾರೆ. ಹಾಗೆ ಮಾಡುವುದರಿಂದ ಬೆಳೆಗಳಿಗೆ ಅಪಾಯಕಾರಿಯಾಗುವ ಹುಳು-ಹುಪ್ಪಟೆಗಳ ನಿವಾರಣೆ ಮತ್ತು ಪೀಡೆ ಪರಿಹಾರ ಮಾಡಿದಂತಾಗುತ್ತದೆ ಎಂಬ ಭಾವನೆ ರೈತಾಪಿಗಳಲ್ಲಿದೆ. ಎಲೆ ತೋಟ, ಬಾಳೆ ತೋಟಗಳಿಗಂತೂ ನಿಯಮಿತವಾಗಿ ಚರಗ ಚಲ್ಲುವುದನ್ನು ಕಾಣಬಹುದು, ಈ ಕ್ರಿಯೆ ಕ್ರಮಬದ್ಧವಾಗಿ ನಡೆಯುತ್ತದೆ.
ಸಾಮಾನ್ಯವಾಗಿ ಹೀಗೆ ಚರಗ ಚೆಲುವುದು ಇಬ್ಬರ ಕೆಲಸ. ಮುಂದಿರುವ ನ ವ್ಯಕ್ತಿ ಒಂದು ಕೈಯಲ್ಲಿ ಬೆಂಡುಗೊಳ್ಳಿ ಮತ್ತೊಂದು ಕೈಯಲ್ಲಿ ಕುಡುಗೋಲು ಹಿಡಿದು ಹೊರಟರೆ, ಹಿಂದಿನವನು ಚರಗದ ಕುಡಿಕೆ ಹಿಡಿದು ಅದನ್ನು ಚಲ್ಲುತ್ತಾ ‘ಹೋಲಿಗ್ಯ ಹೋಲಿಗ್ಯ ಎಂದು ಉದ್ಘರಿಸುತ್ತಾನೆ. ಹೋಲಿಗ್ಯ ಎಂಬ ಕೂಗು ಎಲ್ಲಿಯವರೆಗೆ ಕೇಳಿಸುತ್ತದೆಯೋ ಅಷ್ಟು ವ್ಯಾಪ್ತಿಯ ಬೆಳೆಗಳಿಗೆ ಒಳ್ಳೆಯದಾಗುತ್ತದೆ ಎಂದು ನಂಬಿಕೆ. ಒಂದು ಸುತ್ತು ಚರಗ ಚಲ್ಲಿದ ಮೇಲೆ ಮುಂದಿದ್ದವನು ಕುಡುಗೋಲಿನಿಂದ ಬಾಳೆಯ ಗಿಡವೊಂದನ್ನು ಕಡಿದು ಹಾಕು ಬೆಂಡುಗೊಳ್ಳಿಯನ್ನು ಬಿಸಾಕುತ್ತಾನೆ.
ಒಕ್ಕಣೆ ಮಾಡುವ ಸಂದರ್ಭದಲ್ಲಿ ಒಕ್ಕುವ ಕಣದಲ್ಲಂತೂ ಚರಗದ ಕುಡಿಕೆ ಸದಾ ತುಂಬಿರುತ್ತದೆ. ಪ್ರತಿ ಹಂತದಲ್ಲೂ ಬೆಳಿಗ್ಗೆ, ಸಂಜೆ ಚರಗ ಚಲ್ಲಿಯೇ ಕೆಲಸ ಆರಂಭವಾಗುವುದು. ಚರಗ ಚೆಲ್ಲುವ ಈ ಆಚರಣೆಯಿಂದ ಲೌಕಿಕ ಉಪಯೋಗವೂ ಇದೆ. ಚರಗದಲ್ಲಿರುವ ರಕ್ತ, ಅನ್ನದಗುಳು, ಮುದ್ದೆ ಚೂರು ಮುಂತಾದ ಆಹಾರದ ಪದಾರ್ಥಗಳನ್ನು ತಿನ್ನಲು ಬರುವ ಹಕ್ಕಿಗಳು ಅಲ್ಲಿರುವ ಆಹಾರವನು ತಿಮ್ದು ಮುಗಿಸಿದ ನಂತರ ಅಲಿಯೇ ಕಣ್ಣಿಗೆ ಬೀಳುವ ಹುಳುಗಳನ್ನು ತಿಂದು ಹಾಕುತ್ತವೆ. ಹಾಗಾಗಿ ಚರಗ ಚೆಲ್ಲುವುದು ಕೀಟ ನಿವಾರಣೆ ಮಾಡುವ ಸರಳ ವಿಧಾನವೂ ಆಗಿದೆ. ಔಡಲ ಗಿಡಗಳಿಗೆ, ಹೆಸರು ಗಿಡಗಳಿಗೆ ಹತ್ತಿದ ಹುಳಗಳನ್ನು ಚರಗ ಹಾಕಿ ಪಕ್ಷಿಗಳನ್ನು ಆಕರ್ಷಿಸಿ ನಿವಾರಣೆ ಮಾಡಿಕೊಂಡ ಉದಾಹರಣೆಗಳೂ ಸಾಕಷ್ಟು ಸಿಗುತ್ತವೆ.