ಚನ್ನಗಿರಿಯ ದುರ೦ತ ಬದಲಾಯಿಸಿ

ದಾವಣಗೆರೆ ಜಿಲ್ಲೆಯ ಚನ್ನಗಿರಿ ಕನಾ‍ಟಕದಲ್ಲೇ - ಬಹುಶ: ದೇಶದಲ್ಲೂ ಆಗಿರಬಹುದು-ಅತಿ ಹೆಚ್ಚು ಕೊಳವೆಬಾವಿಗಳ ಸಾಂದ್ರತೆಯ ಊರು. ಇಲ್ಲಿ ಈಗ ೧೫೦೦-೧೬೦೦ ಆಳದ ವರೆಗೆ ಕೊರೆಯುತ್ತಿದ್ದಾರೆ, ಇಲ್ಲಿ ಕೊಳವೆಬಾವಿಯ ಅತಿ ವ್ಯಾಮೋಹ ಹುಟ್ಟಿಸಿದ್ದು ಅಡಿಕೆ ಬೆಳೆಸುವ ಆಸೆ. 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ಇಲ್ಲಿನ ಒಬ್ಬ ಕೃಷಿಕರ ಬಗ್ಗೆ ಒಂದು ವರದಿ ಪ್ರಕಟಿಸಿದೆ. ಅವರು ೩೫೦ ಕೊಳವೆಬಾವಿ ಕೊರೆಸಿದ್ದಾರಂತೆ. ಅದರಲ್ಲಿ ೧೨ ಮಾತ್ರ 'ನಡೆಯುತ್ತಿದೆಯಂತೆ'. ನೀರಿಗಾಗಿ ೧೦-೧೨ ಕಿಲೋಮೀಟರ್ ದೂರ ಚಿಕ್ಕ ಜಮೀನು ಖರೀದಿಸಿ ಅಲ್ಲಿ ಕೊಳವೆಬಾವಿ ತೋಡಿಸುವವರು ಇಲ್ಲಿದ್ದಾರೆ. ಅಲ್ಲಿಂದ ಭೂಗತ ಪೈಪು ಲೈನಿನ ಮೂಲಕ ನೀರು 'ಆಮದು'. ಈ ಹರಸಾಹಸದ ನಡುವೆ ಇವರು ಸುಸ್ಥಿರತೆ (ದೀರ್ಘಕಾಲ ನೆಲೆ ನಿಲ್ಲುವ) ಚಿಂತನೆಯನ್ನೇ ಮರೆತು ಬಿಟ್ಟಿದ್ದಾರೆ. ಹನಿ ನೀರಾವರಿ ಅಳವಡಿಸಿದರೂ ಈಗ ಇಲ್ಲಿ ಅಡಿಕೆ ತೋಟ ಉಳಿಸಲಾಗುತ್ತಿಲ್ಲ. ಕಳೆದ ವರ್ಷ ಅಂದಾಜು ೧೦,೦೦೦ ಎಕ್ರೆಯ ಅಡಿಕೆ ತೋಟ ಒಣಗಿಹೋಯಿತು. ಚನ್ನಗಿರಿ ಮರುಭೂಮಿಯಾಗಹೊರಟಿರುವುದನ್ನು ತಪ್ಪು ಬೆಳೆಯ ಆಯ್ಕೆಯಿಂದ. ಜನಸಂಖ್ಯೆಯ ಹೆಚ್ಚಳವೂ ನೀರಿನ ಸಮತೋಲನ ತಪ್ಪಿಸಬಲ್ಲುದು. ಹಳ್ಳಿಗಳಲಲ್ಇ ಜನ ಹೆಚ್ಚಾದಾಗ ಕೃಷಿಯೂ ಹೆಚ್ಚುತ್ತದೆ. ನೀರಿನ ಬಳಕೆಯೂ . ಪೇಟೆಗಳಲ್ಲಿ ಹಿಂದೆ ಹತ್ತಿಪ್ಪತ್ತು ಕುಟುಂಬಗಳಿದ್ದ ರಸ್ತೆಯಲ್ಲಿ ಈಗ ಫ್ಲಾಟ್ಗಳು ತಲೆಯೆತ್ತಿ ೨೦೦-೩೦೦ ಕುಟುಂಬಗಳು ನೆಲೆಸುತ್ತಿವೆ. ಬಾವಿ ಇದ್ದಲ್ಲಿ ಕೊಳವೆಬಾವಿ. ಅಷ್ಟೇ ಜಾಗ ಈಗ ಹಿಂದಿಗಿಂತ ಹತ್ತಿಪ್ಪತ್ತು ಪಟ್ಟು ನೀರು ಪೋರೈಸಬೇಕಿದೆ. ಇರುವ ನೀರನ್ನು ಎಚ್ಚರದಿಂದ ಬಳಸಿ, ನಮ್ಮ ಜಲಮೂಲಗಳನ್ನು ರಕ್ಷಿಸಿ, ಮಳೆನೀರನ್ನು ಭೂಮಿಯೊಳಕ್ಕೆ ಇಂಗಿಸಿಕೊಂಡರೆ ಸಮಸ್ಯೆ ಇರದು. ಏಕೆಂದರೆ , ನಮ್ಮೆಲ್ಲಾ ಜನರಿಗೆ ಅವಶ್ಯಕವಾದ ನೀರು ಒದಗಿಸುವಷ್ಟು ಮಳೆ ಸಂಪತ್ತು ಇಲ್ಲಿದೆ. ಸರಿಯಾದ ನಿರ್ವಹಣೆ ಇಲ್ಲದೆ ನಾವಯ ಸೋಲುತ್ತದ್ದೇವೆ, ಅಷ್ಟೇ. ನಗರಗಳಲ್ಲಿ ಅಂಗಳವಿಡೀ ಸಿಮೆಂಟ್ ಹಾಕುವುದರಿಂದ ಮಳೆನೀರು ಇಂಗಲು ಅಡ್ಡಿಯಾಗುತ್ತದೆ. ಚನೈ ನಗರದ ೨೦%ದಷ್ಟಿರುವ ಇಲ್ಲಿನ ಶಿಕ್ಷಣಸಂಸ್ಥೆಗಳ ಜಮೀನನ್ನು ಬಿಟ್ಟರೆ ಉಳಿದೆಡೆಯೆಲ್ಲಾ ಸಿಮೆಂಟ್ ಮಯ. ಇದರಿಂದಾಗಿ ಭೂಗರ್ಭಕ್ಕೆ ಸೇರಬೇಕಾದ ಮಳೆನೀರಿನಂಶ ಎಷ್ಟು ಕಡಮೆಯಾಗುತ್ತದೆ, ಯೋಚಿಸಿ ಅಂಗಡಿ, ವಾಣಿಜ್ಯ ಸಂಕೀರ್ಣಗಳಿದ್ದಲ್ಲಂತೂ ಎಲ್ಲಾ ಮಳೆನೀರು ರಸ್ತೆಗೆ. ==ಇಂಗುಗುಂಡಿ== ಬರೇ ತಡೆಗೋಡೆಯಿಂದ ಫಲ ಕಾಣದಿದ್ದರೆ ನಿಮ್ಮ ಆವರಣದಲ್ಲಿ ಅಲ್ಲಲ್ಲಿ ಇಂಗುಗುಂಡಿ ತೋಡಬಹುದು. ಒಂದೇ ದೊಡ್ಡ ಇಂಗುಗುಂಡಿ ಮಾಡಿ ಎಲ್ಲಾ ನೀರನ್ನು ಅದಕ್ಕೆ ಹರಿಸಬೇಡಿ ಬದಲಿಗೆ , ಎಲ್ಲೆಲ್ಲಿ ಮಳೆ ನಿರು ಹೆಚ್ಚಾಗಿ ಹರಿಯುತ್ತದೋ ಅಲ್ಲಲ್ಲಿ ಚಿಕ್ಕಚಿಕ್ಕ ಗುಂಡಿ ಮಾಡುವುದು ಉತ್ತಮ. ಹರಿದುಬರುವ ನೀರಿನ ಪ್ರಮಾಣಕ್ಕನುಸಾರವಾಗಿ ಗುಂಡಿಯ ಅಳತೆ ಅಂದಾಜಿಸಬಹುದು. ಒಂದು ಕಣ್ಣಂದಾಜಿನಂತೆ ಹೊಂಡ ತೆಗೆಸಿ . ಮುಂದಿನ ಸಲ ಮಳೆ ಬಂದಾಗ ಹೋಗಿನೋಡಿ. ಆಗ ನಿಸರ್ಗವೇ ನಿಮಗೆ ಸಲಹೆ ಕೊಡುತ್ತದೆ. ಆ ಹೊಂಡ ನೀರಿಂಗಿಸಲು ಸಾಕಾಗದಿದ್ದರೆ ಸ್ವಲ್ಪ ಎಡೆ ಬಿಟ್ಟು ಇನ್ನೊಂದು ಗುಂಡಿ ತೋಡಬಹುದು. ಬಿಸಿಲು ಬೀಳುವ ಜಾಗದಲ್ಲಿನ ಗುಂಡಿಯ ಅಗಲ ಹೆಚ್ಚು ಇಡಬೇಡಿ. ಅದರಿಂದಾಗಿ ನೀರನ ಆವಿಯಾಗುವ ಕ್ರಿಯೆ ಏರುತ್ತದೆ- ಅಂದರೆ ಲಾಭದಲ್ಲಿ ನಷ್ಟ. ಎರಡು-ನಾಲ್ಕು ಗಂಟೆಗಳಲ್ಲಿ, ಅರ್ಧ ದಿನದಲ್ಲಿ ಈ ಇಂಗುಗುಂಡಿಯಲ್ಲಿ ನೀರು ಇಂಗುತ್ತದೆ. ಎಂದರೆ ಅದು ಒಳ್ಳೆಯ ಇಂಗುವಿಕೆ ಎನ್ನಬಹುದು. ಜೇಡಿಮಣ್ಣು ಇರುವ ಸ್ಥಳಗಲ್ಲಿ ಇಂಗುಗುಂಡಿ ತೋಡಬೇಡಿ. ಅಂಥಲ್ಲಿ ನೀರು ಇಂಗದು. ತೆರೆದಿಟ್ಟ ಇಂಗುಗುಂಡಿ ಸಾರ್ವಜನಿಕ ಸ್ಥಳಗಳಲ್ಲಿ, ಚಿಕ್ಕ ಮಕ್ಕಳು, ವೃದ್ಧರು ಓಡಾಡುವಲ್ಲಿ ಇದ್ದರೆ ಅಪಾಯಕ್ಕೆ ಆಹ್ವಾನ. ಅಂಥವನ್ನು ಮುಚ್ಚಿಯೂ ನೀರು ಇಂಗುವಂತೆ ಮಾಡಲು ಸಾಧ್ಯ ಕೆಳಗಿನಿಂದ ಗುಂಡಿಯ ಮುಕ್ಕಾಲು ಭಾಗ ದೊಡ್ಡ ಜಲ್ಲಿ ಅದರ ಮೇಲೆ ಕಾಲುಭಾಗ ಮರಳು ಹಾಕಿ. ತುಂಬ ದೊಡ್ಡ ಗುಂಡಿಯಾದರೆ ೫೦-೬೦% ದೊಡ್ಡ (ಎರಡು ಇಟ್ಟಿಗೆಯ ಗಾತ್ರದ) ಕಲ್ಲು, ಅದರ ಮೇಲೆ ತಲಾ ೨೦% ಜಲ್ಲಿ ಮತ್ತು ಮರಳು ತುಂಬಬಹುದು. ನೀರು ಹರಿದಾಗ ಪುನ: ಮಣ್ಣಾಗುಂತಹ ಕಲ್ಲು ಬಳಸಬೇಡಿ.ತೆರೆದ ಕಕ್ಕಸು ಗುಂಡಿ ಇರುವ ಮನೆಗಳವರು ಆ ಗುಂಡಿಯಿಂದ ಇಂಗು ಗುಂಡಿಗೆ ಕನಿಷ್ಠ ೩೦ ಅಡಿಗಳ ಅಂತರ ಬಿಡಬೇಕು. ಇಳಿಜಾರು ಜಾಗದಲ್ಲಿ ಕಕ್ಕಸು ಗುಂಡಿ ಮೇಲೆ ಇದ್ದು ಕಳಗೆ ನೀವು ನೀರಿಂಗಿಸಬೇಕಿದ್ದರೆ ೫೦ ಅಡಿಗಳ ಅಂತರವನ್ನಾದರೂ ಇಡಿ.

Return to the user page of "PREEMA JASMINE FERRAO/sandbox2".