ವಾಯೇಜರ್ ನೌಕೆಗಳು ಬದಲಾಯಿಸಿ

ಭೂಕಕ್ಷೆಯ 'ಹೊರವಲಯ'ದಲ್ಲಿರುವ ಗ್ರಹಗಳಾದ ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗಳನ್ನು ಹಾಗೂ ಅವುಗಳ ದೊಡ್ಡ ಪರಿವಾರವನ್ನು ಸ್ವಚಾಲಿತ ಅಂತರಿಕ್ಷ ನೌಕೆಗಳ ನೆರವಿನಿಂದ ಅನ್ವೇಷಿಸಲಾಯಿತು. ಅಮೇರಿಕದ ಈ ಕಾರ್ಯಕ್ರಮಕ್ಕೆ ಸೇರಿದ ವಾಯೇಜರ್ ೧ ಮತ್ತು ೨ ರೋಬೋಟ್ ನೌಕೆಗಳು. ಅದರಲ್ಲೂ ವಾಯೇಜರ್ ೨ ನಡೆಸಿದ 'ಹೊರವಲಯ'ದ ಗ್ರಹಗಳ ಅನ್ವೇಷಣೆ ಅದ್ಬುತವಾದುದು.

ಕೇವಲ ೮೨೫ ಕಿಗ್ರಾಂ ತೂಕದ ಈ ಎರಡಿ ನೌಕೆಗಳೂ ವಿವಿಧ ದಿಕ್ಕುಗಳಲ್ಲಿ ಕೈಕಾಲುಗಳನ್ನು ಚಾಚಿಕೊಂಡ ದೊಡ್ಡ ತಟ್ಟೆಯಂತೆ ಮೊದಲ ನೋಟಕ್ಕೆ ಕಾಣುತ್ತವೆ. ಸೂರ್ಯನಿಗೆ ವಿರುದ್ದ ದಿಕ್ಕಿನಲ್ಲಿ ದೀರ್ಘ ಪಯಣ ಕೈಗೊಂಡ ಈ ನೌಕೆಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ವಿದ್ಯುತ್ತನ್ನು ಒದಗಿಸಲು ಅವುಗಳಲ್ಲಿ ನ್ಯೂಕ್ಲಿಯರ್ ವಿದ್ಯುತ್ ಕೋಶಗಳನ್ನು ಅಳವಡಿಸಲಾಗಿತ್ತು. ಈ ನೌಕೆಗಳ ಕ್ಯಾಮರಗಳು ತೆಗೆದ ಚಿತ್ರಗಳನ್ನು ಹಾಗಾ ಅವುಗಳ ವೈಜ್ಞಾನಿಕ ಉಪಕರಣಗಳು ಸಂಗ್ರಹಿಸಿದ ಮಾಹಿತಿಗಳನ್ನ್ಉ, ಅಷ್ಟೇ ಅಲ್ಲ, ಆ ನೌಕೆಗಳ 'ಆರೋಗ್ಯ'ವನ್ನು ಕುರಿತ ಮಾಹಿತಿಗಳನ್ನು ತಟ್ಟೆ ಆಕಾರದ ಆಂಟಾನಾಗಳು ದೂರದ ಭೂಮಿಗೆ ವರದಿ ಮಾಡುತ್ತಿದ್ದವು.

ಕ್ಷುದ್ರಗ್ರಹಗಳ ಪಟ್ಟಿಯ 'ಒಳ ವಲಯ'ದಲ್ಲಿರುವ ಶುಕ್ರ, ಬುಧ ಇಲ್ಲವೇ ಮಂಗಳ ಗ್ರಹಗಳ ದೂರಕ್ಕೆ ಹೋಲಿಸಿದಲ್ಲಿ 'ಹೊರವಲಯ'ದಲ್ಲಿ ಇರುವ ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ನಮ್ಮಿಂದ ಬಹು ದೂರದಲ್ಲಿವೆ. ಅವುಗಳ ಪೈಕಿ ಗುರು ಮತ್ತು ಶನಿ ಬರಿಗಣ್ಣಿಗೆ ಬೆಳಕಿನ ಚುಕ್ಕೆಗಳಾಗಿ ಕಾಣುತ್ತವೆ. ಯುರೇನಸ್ ಬರಿಗಣ್ಣಿಗೆ ಕಾಣುವುದೇ ಇಲ್ಲ. ಇನ್ನು ಅದರಾಚೆ ಇರುವ ನೆಪ್ಚಾನ್ ಬರಿಗಣ್ಣಿಗೆ ಗೋಚರಿಸುವ ಪ್ರಶ್ನೆಯೇ ಇಲ್ಲ. ಈ ದೂರದ ದೈತ್ಯ ಗ್ರಹಗಳ ಹಾಗೂ ಅವುಗಳ ದೊಡ್ಡ ಉಪಗ್ರಹಗಳ ಪರಿವಾರವನ್ನು ವಿವರವಾಗಿ ಪರಿಚಯ ಮಾಡಿಕೊಳ್ಳಲು ವಾಯೇಜರ್ ೨ ನೌಕೆಗಳನ್ನು ೧೯೭೭ರ ಆಗಸ್ಟ್ ಸೆಪ್ಟೆಂಬರ್ ಗಳಲ್ಲಿ ಅಮೇರಿಕಾದಿಂದ ಉಡಾಯಿಸಲಾಯಿತು.

ಮುಂದಿನ ಎರಡು ವರ್ಷಗಳಲ್ಲಿ ಈ ಎರಡು ನೌಕೆಗಳೂ ಮಂಗಳ ಹಾಗೂ ಗು ಗ್ರಹಗಳ ನಡಿವಿನ ಕ್ಷುದ್ರ ಗ್ರಹಗಳ ಪಟ್ಟೆಯನ್ನು (ಆಸ್ಟರಾಯ್ಡ) ದಾಟಿದವು. ಆ ಪೈಕಿ ವಾಯೇಜರ್-೧ ೧೯೭೯ರ ಮಾರ್ಚ್ ನಲ್ಲಿ ಗುರು ಗ್ರಹವನ್ನಿ ಸಮೀಪಿಸಿತು. ಅನಂತರ ಅದು ಗುರು ಗ್ರಹದ ಸ್ವರೂಪವನ್ನು ಕುರಿತ ಸ್ಪಷ್ಟ ವರ್ಣಚಿತ್ರಗಳನ್ನು ಭೂಮಿಗೆ ರವಾನಿಸುವುದರೊಂದಿಗೇ ಆ ದೈತ್ಯ ಗ್ರಹಕ್ಕೆ ತೆಳುವಾದ ಉಂಗರವೊಂದು ಇರುವುದನ್ನು ಗುರುತಿಸಿತು.

ಜೊತೆಗೆ ಭೂಮಿಯ ಮೇಲಿನ ದೊಡ್ಡ ದೋರದರ್ಶಕಗಳಿಗೂ ಕೇವಲ ಬೆಳಕಿನ ಚುಕ್ಕಿಗಳಾಗಿ ಕಾಣುವ ಗುರು ಗ್ರಹದ ನಾಲ್ಕು ದೊಡ್ಡ ಉಪಗ್ರಹಗಳಾದ ಅಯೋ, ಯುರೋಪ, ಗ್ಯಾನಿಮೈಡ್ ಹಾಗೂ ಕ್ಯಾಲಿಸ್ಟೋಗಳ ಸ್ವರೂಪವನ್ನು ಪರಿಚಯಿಸಿತು. ಅದುವರೆಗೂ ಮಾನವನಿಗೆ ಕಾಣದಿದ್ದ ಗುರುಗ್ರಹದ ಮತ್ತೆ ಕೆಲವು ಉಪಗ್ರಹಗಳನ್ನೂ ವಾಯೇಜರ್-೧ ನೌಕೆ ಗುರುತಿಸಿತು. ನಂತರ ೧೯೭೯ರ ಜುಲೈನಲ್ಲಿ ಗುರುಗ್ರಹದತ್ತ ಬಂದ ವಾಯೇಜರ್-೨ ಆ ಮೊದಲು ತಿಳಿದು ಬಂದಿದ್ದ ಕೆಲವು ವಿಷಯಗಳನ್ನು ಖಚಿತಪಡಿಸಿತಷ್ಟೇ ಅಲ್ಲ ಮತ್ತಷ್ಟು ಹೊಸ ವಿಷಯಗಳನ್ನೂ ತಿಳಿಸಿಕೊಟ್ಟಿತು.

ಬಳಿಕ ಈ ಎರಡು ನೌಕೆಗಳೂ ಕೋಟ್ಯಾಂತರ ಕಿಲೋಮೀಟರ್ ದೂರ ಅಂತರಿಕ್ಷದಲ್ಲಿ ಕ್ರಮಿಸಿ ೧೯೮೦ರ ನವೆಂಬರ್ ಹಾಗೂ ೧೯೮೧ರ ಆಗಸ್ಟ್ ಗಳಲ್ಲಿ ಶನಿಗ್ರಹವನ್ನು ಸಮೀಪಿಸಿದವು. ಅವಿ ನೀಡಿದ ಆ ಗ್ರಹದ ವಿವರಗಳಿಗಿಂತ ಹೆಚ್ಚಾಗಿ ಅದನ್ನು ಸುತ್ತುವರೆದಿರುವ ಉಂಗುರಗಳ ಸ್ವರೂಪದ ವಿವರವಾದ ದರ್ಶನ ಎಲ್ಲರನ್ನೂ ಚಕಿತಗೊಳಿಸಿತು. ಈ ರೀತಿ ಕೆಲವೇ ವಿಶಾಲವಾದ ಉಂಗುರಗಳ ಬದಲು ಸಾವಿರಾರು ತೆಳುವಾದ ಉಂಗುರಗಳು ಶನಿಗ್ರಹವನ್ನು ಸುತ್ತುವರೆದಿರುವುದನ್ನು ವಾಯೇಜರ್-೧ ನೌಕೆ ಸ್ಪಷ್ಟವಾಗಿ ಕಂಡ ಅನಂತರ ನಮ್ಮಲ್ಲಿ ಪಠ್ಯ ಪುಸ್ತಕಗಳಪುನರ್ರಚನೆ ಅನಿವಾರ್ಯವಾಯಿತು. ಅನಂತರ ಶನಿಗ್ರಹವನ್ನು ಸಮೀಪಿಸಿದ ವಾಯೇಜರ್-೨ ಮುಖ್ಯವಾಗಿ ಅದರ ಒಂದು ಉಪಗ್ರಹವಾದ 'ಟೈಟಾನ್'ಗೆ ಅನ್ವೇಷನ ನಡೆಸಿತು. ಇದರಿಂದಾಗಿ ಟೈಟಾನ್ ಗೆ ಭೂಮಿಗಿಂತ ಸುಮಾರು ಒಂದುವರೆ ಪಟ್ಟು ದಟ್ಟವಾದ ಮುಖ್ಯವಾಗಿನೈಟ್ರೋಜನ್ ಉಳ್ಳ ವಾತಾವರಣ ಇದೆ ಎಂಬ ಕುತೂಹಲಕಾರಿ ವಿಷಯ ತಿಳಿದು ಬಂತು. ಅಟಂತೂ ವಾಯೇಜರ್ ನೈಕೆಗಳು ನಡೆಸಿದ ಶನಿಯ ಅನ್ವೇಷಣೆಯ ಅಂತ್ಯದಲ್ಲಿ ಆ ಗ್ರಹದ ಒಟ್ಟು ಉಪಗ್ರಹಗಳ ಸಂಖ್ಯೆ ೨೩ಕ್ಕೆ ಏರಿತು.

೧೯೮೬ರ ಜನವರಿಯಲ್ಲಿ ವಾಯೇಜರ್-೨ ಯುರೇನಸ್ ಅನ್ನು ಅನ್ವೇಷಿಸಿದಾಗ ಉರೇನಸ್ ಅನ್ನು ೧೧ ಉಂಗುರಗಳು ಸುತ್ತುವರೆದಿರುವುದೂ ತಿಳಿದು ಬಂತು.

ಸುಮಾರು ಮೂರುವರೆ ವರ್ಷಗಳ ಅನಂತರ ವಾಯೇಜರ್-೨ ತನ್ನ ಅಂತಿಮ ಗುರುಯಾದ ನೆಪ್ಚೂನ್ ಗ್ರಹವನ್ನು ೧೯೮೯ರ ಆಗಸ್ಟ್ ನಲ್ಲಿ ಸಮೀಪಿಸಿ ಆ ಗ್ರಹದ ಸ್ಪಷ್ಟಚಿತ್ರಗಳನ್ನು ಸೌರವ್ಯೂದ ತುದಿಯಿಂದ ಕಳುಹಿಸುವುದರ ಜೊತೆಗೇ ಮೂರು ಉಂಗುರಗಳನ್ನು ಗುರುತಿಸಿತು. ಅಲ್ಲದೇ ಆ ವಿಜಯೀ ನೌಕೆ ಬಳಿಕ ಆ ಗ್ರಹದ ದೊಡ್ಡ ಉಪಗ್ರಹ 'ಟ್ರೈಟನ್' ಅನ್ನು ಅಭ್ಯಸಿಸಿ ಸೌರವ್ಯೂಹದಸಮತಲದಿಂದ ದಕ್ಷಿಣ ದಿಕ್ಕಿನಲ್ಲಿ ಯಾನ ಹೊರಟಿತು.ಈ ರೀತಿ ನಾಲ್ಕು ದೂರ ಗ್ರಹಗಳ ಅನ್ವೇಷಣೆಯನ್ನು ಅದ್ಬುತ ರೀತಿಯಲ್ಲಿ ನಡೆಸಿದ ಏಕೈಕ ನೌಕೆಯೆಂಬ ಗೌರವಕ್ಕೆ ಪಾತ್ರವಾದ ವಾಯೇಜರ್-೨ ತನ್ನ ಸಹಚರ ವಾಯೇಜರ್-೧ ರಂತೆ ಇತರ ನಕ್ಷತ್ರ ಲೋಕಗಳತ್ತ ಇಂದು ಧಾವಿಸುತ್ತಿದೆ. ಅನ್ಯಲೋಕದಲ್ಲಿ ಇರಬಹುದಾದ ಬುದ್ದಿಜೀವಿಗಳಿಗೆ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಲ್ಲಿ ಶುಭ ಸಂದೇಶವನ್ನು ಒಯ್ಯುತ್ತಿರುವುದು ವಾಯೇಜರ್ ನೌಕೆಗಳ ಮತ್ತೊಂದು ವಿಶೇಷ.

Return to the user page of "PREEMA JASMINE FERRAO/sandbox1".