ಸದಸ್ಯರ ಚರ್ಚೆಪುಟ:Nuthan123/sandbox
ಸರೋಜಿನಿ ನಾಯ್ಡು
ಸರೋಜಿನಿ ನಾಯ್ಡು “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದಾರೆ. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಯತ್ರಿ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್‍ನ ಮೊದಲನೆಯ ಮಹಿಳಾ ಅಧ್ಯಕ್ಷರಾದವರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದವರು. “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದಾರೆ. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಯತ್ರಿ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್‍ನ ಮೊದಲನೆಯ ಮಹಿಳಾ ಅಧ್ಯಕ್ಷರಾದವರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದವರು.
ಜನನ, ಜೀವನ
ಸರೋಜಿನಿ ನಾಯ್ಡು (ಜನನ: ೧೩ನೇ ಫೆಬ್ರುವರಿ ೧೮೭೯- ಮರಣ: ೨ನೇ ಮಾರ್ಚ್ ೧೯೪೯.) ಇವರ ತಂದೆ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದ ಅಗೋರೆನಾಥ್
ಚಟ್ಟೋಪಾಧ್ಯರು ಮತ್ತು ತಾಯಿ ಬಂಗಾಳಿ ಕವಿಯಿತ್ರಿಯಾದ ಬರಾಡ ಸುಂದರಿ ದೇವಿ. ಸರೋಜಿನಿ ನಾಯ್ಡುರವರು ಅವರ ತಂದೆ-ತಾಯಿಯರ ಎಂಟು ಮಕ್ಕಳಲ್ಲಿ ಮೊದಲನೆಯವಾಗಿದ್ದರು. ಇವರ ಒಬ್ಬ ಸಹೋದರನಾದ ಬಿರೇಂದ್ರನಾಥ್ ಚಳುವಳಿಗಾರರಾಗಿದ್ದವರು ಮತ್ತೊಬ್ಬ ಸಹೋದರ ಹರಿನಾಥ್ ಕವಿ, ನಾಟಕಗಾರ ಮತ್ತು ನಟನೆಯನ್ನು ಮಾಡುತ್ತಿದ್ದವರು.
ಸರೋಜಿನಿ ನಾಯ್ಡುರವರು ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು. ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ
ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತಾನಾಡುತ್ತಿದ್ದರು. ಇವರು ಹನ್ನೆರಡನೇ ವಯಸ್ಸಿನಲ್ಲಿಯೇ ಮದ್ರಾಸ್ ವಿಶ್ವವಿದ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆ ಯಲ್ಲಿ ಮೇಲ್ದರ್ಜೆಯಲ್ಲಿ ಪಾಸಾಗಿ
ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಪಡೆದರು. ಇವರ ತಂದೆ ಇವರು ಗಣಿತ ತಜ್ಞೆ
(ಮ್ಯಾಥಮ್ಯಾಟೀಷಿಯನ್) ಅಥವಾ ವಿಜ್ಞಾನಿಯಾಗಲಿ ಎಂದು ಬಯಸಿದ್ದರು ಆದರೆ ಸರೋಜಿನಿಯವರು ಕವಿಯಿತ್ರಿಯಾಗಲು ಇಷ್ಟಪಟ್ಟಿದ್ದರು.
Start a discussion about ಸದಸ್ಯ:Nuthan123/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Nuthan123/sandbox.