'ಇಳಿಮುಖ ಸೀಮಾಂತ ತುಷ್ಟಿಗುಣ ರೇಖಾತ್ಮಕವಾಗಿ ವಿವರಿಸಿ 6 ಅಂಕಕ್ಕೆ ಬರೆಯುವುದು ಹೇಗೆ

ವಿಲಿಯಮ್ ಜೀವನ್ಸ್

 
ವಿಲಿಯಮ್ ಜೀವನ್ಸ್

[] ಎಂಬ ಅರ್ಥಶಾಸ್ತ್ರಜ್ಞನು ಮೌಲ್ಯ ನಿರ್ಣಯದಲ್ಲಿ ಬಳಸಿದ ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮಕ್ಕೆ ಪರಿಪೂರ್ಣವಾದ ವಿಶ್ಲೇಷಣೆಯನ್ನು ನೀಡಿ ಅದ್ದನು ಬೆಳೆಸಿದ ಕೀರ್ತಿ ಆಲ್ಫ್ರೆಡ್ ಮಾರ್ಷಲ್ []

 
ಆಲ್ಫ್ರೆಡ್ ಮಾರ್ಷಲ್

ರವರಿಗೆಸಲ್ಲುತ್ತದೆ.ಈ ನಿಯಮದ ಪ್ರಕಾರ ಒಬ್ಬ ಅನುಭೋಗಿಯ ಒಂದೇ ವಸ್ತುವನ್ನು ಹೆಚ್ಚು ಹೆಚ್ಚಾಗಿ ಅನುಭೋಗಿಸುತ್ತಾ ಹೋದಂತೆ ಅದರಿಂದ ದೊರೆಯುವ ತುಷ್ಟಿಗುಣವು ಕಡಿಮೆಯಾಗತೊಡಗುತ್ತದೆ. ಈ ನಿಯಮವು ಸಾಧಾರಣವಾಗಿ ಪ್ರತಿಯೊಬ್ಬ ಅನುಭೋಗಿಯ ಅನುಭವಕ್ಕೆ ಸಂಬಂಧಿಸಿದುದಾಗಿದೆ ಮಾನವನ ಬಯಕೆಗಳನ್ನು ತೃಪ್ತಿ ಪಡಿಸಿಕೊಳ್ಳುವುದಕ್ಕಾಗಿ ವಸ್ತುಗಳನ್ನು ಅನುಭವಿಸುತ್ತಾನೆ.ಆದರೆ ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ವಸ್ತುವನ್ನು ಒಂದರ ನಂತರ ಇನ್ನೊಂದರಂತೆ ಅನುಭವಿಸುತ್ತಾ ಹೋದರೆ ಆ ವಸ್ತುವಿನ ಸೀಮಾಂತ ಘಟಕಗಳಿಂದ ದೊರೆಯುವ ತುಷ್ಟಿಗುಣವು ಕಡಿಮೆಯಾಗುತ್ತಾ ಹೋಗುತ್ತದೆ.

ವ್ಯಾಖ್ಯಾನ

ಬದಲಾಯಿಸಿ
ಮಾರ್ಷಲ್ ಮಾತುಗಳಲ್ಲಿ "ಒಬ್ಬ ವ್ಯಕ್ತಿಯ ಬಳಿ ಇರುವ ವಸ್ತುವಿನ ಸಂಗ್ರಹಕ್ಕೆ ಮತ್ತು ಒಂದೊಂದು ವಸ್ತುವೂ ಸೇರಿದಂತೆ  ಅವನಿಗೆ ನಿರ್ದಿಷ್ಟವಾದ ಒಂದು ವಸ್ತುವಿನ ಸಂಗ್ರಹದಿಂದ ಸಿಗುವ ಹೆಚ್ಚುವರಿ  ಪ್ರಯೋಜನವು ಇಳಿಮುಖವಾಗುತ್ತದೆ".
ಉದಾಹರಣೆಗೆ  ಒಬ್ಬ ಅನುಭೋಗಿಯ ಒಂದಾದ  ನಂತರ ಇನ್ನೊಂದು ಕಿತ್ತಳೆ ಹಣ್ಣನ್ನು ತಿನ್ನುತ್ತಿದ್ದಾನೆ ಎಂದು ಭಾವಿಸೋಣ. ಅವನಿಗೆ ಮೊದಲನೆಯ ಹಣ್ಣಿನಿಂದ ಅತ್ಯಂತ ಹೆಚ್ಚಿನ  ತುಷ್ಟಿಗುಣ[] ದೊರೆಯುತ್ತದೆ. ಎರಡನೆಯ ಹಣ್ಣನ್ನು ಅನುಭವಿಸುವಾಗ ಅವನ  ಆಸೆಯ ತೀವ್ರತೆ ಸ್ವಲ್ಪ ಕಡಿಮೆಯಾಗಬಹುದು.ಆದ್ದರಿಂದ ಎರಡನೆಯ ಹಣ್ಣಿನಿಂದ ದೊರೆಯುವ ತುಷ್ಟಿಗುಣವು  ಮೊದಲನೆಯದಕ್ಕಿಂತ ಕಡಿಮೆ ಇರುತ್ತದೆ. ಮೂರನೆಯ ಹಣ್ಣನ್ನು   ಅನುಭೋಗಿಸುವುದಾದರೆ ಅದರಿಂದ ಸಿಗುವ ತುಷ್ಟಿಗುಣವೇ ಇನ್ನೂ  ಕಡಿಮೆಯಾಗುತ್ತದೆ .ನಾಲ್ಕನೆಯ ಹಣ್ಣಿನ  ಅನುಭವವು ಮೂರಯದಕ್ಕಿಂತ ಕಡಿಮೆ ತುಷ್ಟಿಗುಣವನ್ನು ನೀಡುತ್ತದೆ. ಹೀಗೆ  ಅನುಭೋಗಿಯ ಒಂದಾದ ಮೇಲೊಂದರಂತೆ ಕಿತ್ತಳೆ ಹಣ್ಣು ತಿಂದಾಗ  ಆದ್ದರಿಂದ ದೊರೆಯುವ ಸೀಮಾಂತ ತುಷ್ಟಿಗುಣ[] ಕಡಿಮೆಯಾಗುತ್ತ ಹೋಗುತ್ತದೆ.  ಕೆಲವು ಹಣ್ಣುಗಳನ್ನು ಅನುಭವಿಸಿದ ನಂತರ ಅವನು ಸಂಪೂರ್ಣ ತೃಪ್ತಿ ಸ್ಥಿತಿಯನ್ನು ತಲುಪುತ್ತಾನೆ. ಅವನು ಸೇವಿಸಿದ ಕೊನೆಯ ಹಣ್ಣಿನಿಂದ ಅವನಿಗೆ ಹೆಚ್ಚುವರಿ ತೃಪ್ತಿಯು   ಇದು ಶೂನ್ಯ ಸೀಮಾಂತ ತುಷ್ಟಿಗುಣದ ಸ್ಥಿತಿ. ಈ ಸ್ಥಿತಿಯಲ್ಲಿ ಅನುಭೋಗಿಯ ಪಡೆಯುತ್ತಿರುವ ಒಟ್ಟು ತುಷ್ಟಿಗುಣವು   ಗರಿಷ್ಠ ವಾಗಿರುತ್ತದೆ   . ಇದು ಅನುಭೋಗಿಯ ಸಮತೋಲನದ  ಮಟ್ಟ.  ಅನಂತರವೂ ಅವನು ಹಣ್ಣುಗಳನ್ನು  ಅನುಭವಿಸಿದರೆ ಅವನಿಗೆ  ತೃಪ್ತಿಯ ಬದಲು  ಅತೃಪ್ತಿ ಉಂಟಾಗುತ್ತದೆ  ಆಗ ಸೀಮಾಂತ ತುಷ್ಟಿಗುಣವು []   ಋಣಾತ್ಮಕ ವಾಗಿರುತ್ತದೆ  ಮತ್ತು ಒಟ್ಟು ತುಷ್ಟಿಗುಣ ಇಳಿಮುಖವಾಗುತ್ತದೆ. ಇದಕ್ಕೆ  ತುಷ್ಟಿಗುಣ ಹೀನತೆ ಎನ್ನುತ್ತೇವೆ.

ಉದಾಹರಣೆ

ಬದಲಾಯಿಸಿ
ಈ ಕೆಳಗಿನ ಪಟ್ಟಿಯ ಮೂಲಕ ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮವನ್ನು  ಅರ್ಥ ಮಾಡಿಕೊಳೋಣ.
ಅನುಭವಿಸಿದ ಕಿತ್ತಳೆ ಹಣ್ಣುಗಳು ಒಟ್ಟು ತುಷ್ಟಿಗುಣ ಸೀಮಾಂತ ತುಷ್ಟಿಗುಣ
೧೫ ೧೫
೨೮ ೧೩
೩೮ ೧೦
೪೪
೪೫
೪೫
೪೦ -೫
೩೨ -೮
 
ಇಳಿಮುಖ ಸೀಮಾಂತ ತುಷ್ಟಿಗುಣದ ನಿಯಮ
ಮೇಲಿನ ಪಟ್ಟಿಯಲ್ಲಿ ನಿರೂಪಿತವಾಗಿರುವಂತೆ  ಮೊದಲನೆಯ ಕಿತ್ತಳೆ ಹಣ್ಣಿನಿಂದ ಅನುಭೋಗಿಗೆ ೧೫  ಘಟಕಗಳ  ತುಷ್ಟಿಗುಣ  ಸಿಗುತ್ತದೆ. ಐದನೆಯ  ಹಣ್ಣಿನವರೆಗೂ  ಇದು  ಇಳಿಮುಖದರದಲ್ಲಿ  ಏರುತ್ತಾ ಹೋಗುತ್ತದೆ.  ಆರನೆಯ ಹಣ್ಣನ್ನು ಅನುಭವಿಸಿದಾಗ ಅವನಿಗೆ ಐದನೆಯ ಹಣ್ಣಿನಿಂದ ದೊರೆಯುವಷ್ಟು   ತುಷ್ಟಿಗುಣ ದೊರೆಯುತ್ತಿದೆ. ಅಂದರೆ ಇಲ್ಲಿ ಸೀಮಾಂತ ತುಷ್ಟಿಗುಣ  ಸೊನ್ನೆಯಾಗಿದೆ.ಏಳನೆಯ ಹಣ್ಣನ್ನು ಸೇವಿಸಿದಾಗ ಅವನು ಒಟ್ಟು  ತುಷ್ಟಿಗುಣವು ಕಡಿಮೆಯಾಗುತ್ತದೆ ಮತ್ತು ಸೀಮಾಂತ ತುಷ್ಟಿಗುಣ ೫  ಘಟಕಗಳಷ್ಟು ಋಣಾತ್ಮಕವಾಗಿದೆ. ಎಂಟನೇಯ ಹಣ್ಣಿನ   ಅನುಭೋಗದಿಂದ ಸೀಮಾಂತ ತುಷ್ಟಿಗುಣವು ೮  ಘಟ್ಟಗಳ ಎಷ್ಟು ನಕಾರಾತ್ಮಕ ವಾಗಿರುವುದರಿಂದ   ಒಟ್ಟು ತುಷ್ಟಿಗುಣವು ಏಳನೆಯ ಹಣ್ಣಿನಿಂದ ದೊರೆತು  ದಿಕ್ಕಿಂತಲೂ ಕಡಿಮೆಯಾಗಿದೆ.


ಮೇಲೆ ಕೊಟ್ಟಿರುವ ರೇಖಾಚಿತ್ರದಲ್ಲಿ OX ತಲಾಕ್ಷರದಲ್ಲಿ ಅನುಭವಿಸಿದ ಹಣ್ಣುಗಳ ಸಂಖ್ಯೆಯನ್ನುOY ಲಂಬಾಕ್ಷದಲ್ಲಿ ಸೀಮಾಂತ ತುಷ್ಟಿಗುಣವನ್ನು ತೋರಿಸಿದೆ.ಈ ರೇಖೆಯು ಇಳಿಮುಖ ಸೀಮಾಂತ ತುಷ್ಟಿಗುಣದ ರೇಖೆಯಾಗಿದೆ. ಇದು ಕೆಳಮುಖವಾಗಿ ಬಾಗಿದೆ. ಪ್ರತಿಯೊಂದು ಹೆಚ್ಚುವರಿ ಹಣ್ಣನ್ನು ಸೇವಿಸಿದಂತೆಯು ಸೀಮಾಂತ ತುಷ್ಟಿ ಗುಣವು ಕಡಿಮೆಯಾಗುತ್ತ ಬರುವುದು ,ರೇಖಾಚಿತ್ರದಿಂದ ಸ್ವಷ್ಟವಾಗಿ ವ್ಯಕ್ತವಾಗುತ್ತದೆ. ಆರನೆಯ ಹಣ್ಣಿನ ಅನುಭವದಲ್ಲಿ ತುಷ್ಟಿಗಣವು ಸೊನ್ನೆಯಾಗಿದೆ. ಇದು ಗರಿಷ್ಠ ತೃಪ್ತಿಯ ಸ್ಥಿತಿ. ಏಳನೆಯ ಮತ್ತು ಎಂಟನೆಯ ಹಣ್ಣುಗಳನ್ನು ಸೇವಿಸಿದಾಗ ತುಷ್ಟಿಗುಣವು ನಾಶವಾಗುವುದನ್ನು ಕಾಣಬಹುದು.



ಕಲ್ಪನೆಗಳು

ಬದಲಾಯಿಸಿ

ಈ ನಿಯಮವು ಕೆಲವು ಸಾಮಾನ್ಯ ಕಲ್ಪನೆಗಳ ಮೇಲೆ ನಿಂತಿದೆ .ಈ ಕಲ್ಪನೆಗಳಲ್ಲಿ ಮಾತ್ರ ಇದು ನಿಜವಾಗುತ್ತದೆ ಆದ್ದರಿಂದ ಇವುಗಳನ್ನು ಈ ನಿಯಮದ ಮಿತಿಗಳು ಎಂತಲೂ ಕರೆಯಬಹುದು

1.ವಸ್ತುವಿನ ಅನುಭವವು ನಿರಂತರವಾಗಿ  ನಡೆಯುತ್ತದೆ ಎಂಬ ಕಲ್ಪನೆಯನ್ನು ಈ ನಿಯಮ  ಆಶ್ರಯಿಸಿದೆ. ಅಂದರೆ ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ವಸ್ತುಗಳ ಅನುಭವವು ನಡೆಯಬೇಕು,ಆಗಮಾತ್ರ ಸೀಮಾಂತ ತುಷ್ಟಿಗುಣ ಇಳಿಮುಖವಾಗಲು ಸಾಧ್ಯ.ಒಂದು ಹಣ್ಣನ್ನು ಬೆಳಗ್ಗೆ ,ಎರಡನೇ ಹಣ್ಣನ್ನು ಮಧ್ಯಾಹ್ನ. ಮೂರನೆಯ ಹಣ್ಣನ್ನು ಸಂಜೆ ಮತ್ತು ನಾಲ್ಕನೆಯ ಹಣ್ಣನ್ನು ರಾತ್ರಿ ಸೇವಿಸಿದರೆ ತುಷ್ಟಿಗುಣ ಗರಿಷ್ಠ ಇಳಿಮುಖವಾಗುವ ಬದಲು ಹೆಚ್ಚಾಗುತ್ತಾ ಹೋಗುತ್ತದೆ.

2. ಪ್ರಮಾಣಿತ ಗಾತ್ರದ ಘಟಕಗಳನ್ನು ಅನುಭವಿಸಿದಾಗ ಈ ನಿಯಮವು ಸತ್ಯವಾಗುತ್ತದೆ. ಉದಾಹರಣೆಗೆ ಒಂದು ತಂಬಿಗೆಯ ಮೂಲಕ ನೀರನ್ನು ಕುಡಿಯುತ್ತಾ ಹೋದಂತೆ ಅದರ ತುಷ್ಟಿಗುಣ ಇಳಿಮುಖವಾಗುತ್ತದೆ. ಅದಕ್ಕೆ ಬದಲಾಗಿ ನೀರನ್ನು ಚಮಚದ ಮೂಲಕ ಹುಂಡಿನ ರೂಪದಲ್ಲಿ ಕುಡಿಯತೊಡಗಿದರೆ ತುಷ್ಟಿಗುಣ ಇಳಿಯುವ ಬದಲು ಹೆಚ್ಚಾಗುತ್ತದೆ.

3. ಅನುಭೋಗಿಸುವ ವಸ್ತುವಿನ ಹೆಚ್ಚುವರಿ ಘಟಕಗಳನ್ನು ಒಂದೇ ದರ್ಜೆಯವಾಗಿ ರುತ್ತವೆ ಎಂಬ ಕಲ್ಪನೆಯ ಮೇಲೆ ಈ ನಿಯಮ ನಿಂತಿದೆ ಉದಾಹರಣೆಗೆ ಮೊದಲು ಒಂದು ಹುಳಿಯಾದ ಸೇಬು ಹಣ್ಣನ್ನು ತಿಂದು ನಂತರ ಸಿಹಿಯಾದ ಸೇಬುಹಣ್ಣನ್ನು ತಿಂದರೆ ಸೀಮಾಂತ ತುಷ್ಟಿಗುಣ ಕಡಿಮೆಯಾಗುವ ಬದಲು ಜಾಸ್ತಿ ಆಗುವುದರಲ್ಲಿ ಆಶ್ಚರ್ಯವಿಲ್ಲ.

4. ಅನುಭೋಗಿಗಳ ಆದಾಯ, ಅಭಿರುಚಿ ಮತ್ತು ಒಲವುಗಳು ಸ್ಥಿರವಾಗಿರುತ್ತದೆ ಎಂಬುದು ಈ ನಿಯಮದ ಇನ್ನೊಂದು ಕಲ್ಪನೆ. ಈ ಸಂಗತಿಗಳಲ್ಲಿ ಬದಲಾವಣೆಗಳಾದಾಗ ಈ ನಿಯಮ ನಿಜವಾಗುವುದಿಲ್ಲ.

5. ಅನುಭೋಗಿಯ ವಿಚಾರ ಶಕ್ತಿಯುಳ್ಳವನ್ನಾಗಿ ವಸ್ತುಗಳನ್ನು ಕೊಂಡುಕೊಳ್ಳುತ್ತಾನೆ ಎಂದು ಈ ನಿಯಮವು ಕಲ್ಪಿಸಿಕೊಳ್ಳುತ್ತದೆ. ಆದ್ದರಿಂದ ಸಾಮಾನ್ಯ ಅನುಭೋಗಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಬುದ್ಧಿಗೆ ಬ್ರಹ್ಮನೇ ಗೊಂಡವರು ಹುಚ್ಚರು ಮೊದಲಾದ ಅಸಾಮಾನ್ಯ ಅನುಭೋಗಿಗಳಿಗೆ ಇದು ಅನ್ವಯವಾಗುವುದಿಲ್ಲ.

6. ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿರುವವರಿಗೆ ಈ ನಿಯಮವು ಅನ್ವಯಿಸುವುದಿಲ್ಲ. ಉದಾಹರಣೆಗೆ ವಿವಿಧ ರೀತಿಯ ಸ್ಟ್ಯಾಂಪುಗಳು ,ನಾಣ್ಯಗಳು ಮತ್ತು ಚಿತ್ರಗಳನ್ನು ಸಂಗ್ರಹಿಸುವ ಅವರಿಗೆ ಎಷ್ಟು ಸಂಗ್ರಹಿಸಿದರು ಸಾಕೆನಿಸದಿರಬಹುದು.

ಟೀಕೆಗಳು

ಬದಲಾಯಿಸಿ

ಮೇಲೆ ವಿವರಿಸಿದ ಮಿತಿಗಳ ಜೊತೆಗೆ ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮವು ಕೆಲವು ಪ್ರಭಲ ಟೀಕೆಗಳಿಗೂ ಒಳಗಾಗಿದೆ.

1.ತುಷ್ಟಿಗುಣವನ್ನು ಅಳೆಯುವುದು ಸಾಧ್ಯ ಎಂದು ಈ ನಿಯಮವು ಭಾವಿಸುತ್ತದೆ. ಆದರೆ ತುಷ್ಟಿಗುಣ ಬಹು ಮಾನಸಿಕ ಅಂಶವಾಗಿರುವುದರಿಂದ ಅದನ್ನು ಅಳೆಯುವುದು ಸಾಧ್ಯವಿಲ್ಲ ಎಂದು ಹಿಕ್ಸ್ ಮತ್ತು ಅಲೆನ್ ಇದನ್ನು ಟೀಕಿಸಿದ್ದಾರೆ.

2. ಹಣದ ತುಷ್ಟಿಗುಣ ಸ್ಥಿರವಾಗಿರುತ್ತದೆ ಎಂಬುದು ಈ ನಿಯಮದ ಒಂದು ಕಲ್ಪನೆಯಾಗಿದೆ. ಆದರೆ ವಾಸ್ತವವಾಗಿ ಇದು ಸರಿಯಾದದ್ದಲ್ಲ ಹಣದ ಸಂಗ್ರಹಣೆ ಕಡಿಮೆಯಾದಂತೆ ತುಷ್ಟಿಗುಣ ಹೆಚ್ಚಾಗುತ್ತದೆ.

3. ಈ ನಿಯಮಕ್ಕೆ ವೈಜ್ಞಾನಿಕವಾದ ತಳಹದಿಯೇ ಇಲ್ಲವೆಂದು ಇದನ್ನು ಟೀಕಿಸಲಾಗಿದೆ. ಅನುಭೋಗಿಯ ಒಂದೇ ವಸ್ತುವಿನ ಹೆಚ್ಚುವರಿ ಘಟಕಗಳನ್ನು ನಿರಂತರವಾಗಿ ಸೇವಿಸುತ್ತ ಹೋಗುತ್ತಾನೆ ಎಂಬುದು ಹಾಸ್ಯಾಸ್ಪದವಾದದ್ದು. ವಸ್ತುವಿನ ಬೆಲೆ ,ಆದ್ದರಿಂದ ದೊರೆಯಬಹುದಾದ ತೃಪ್ತಿ, ಬದಲಿ ವಸ್ತುಗಳ ಲಭ್ಯತೆ ಇತ್ಯಾದಿ ಸಂಗತಿಗಳಲ್ಲವನ್ನು ಗಣನೆಗೆ ತೆಗೆದುಕೊಂಡು ಅನುಭೋಗಿಯು ಹಲವಾರು ವಸ್ತುಗಳನ್ನು ಅನುಭವಿಸುತ್ತಾನೆ.

4. ಅನುಭೋಗಿಯ ಒಂದೇ ವಸ್ತುವಿನ ಅನುಭವದ ಕಡೆಗೆ ಲಕ್ಷನೀಡುತ್ತಾನೆ ಎಂಬುದು ಈ ನಿಯಮದ ಮತ್ತೊಂದು ದೋಷ. ವಾಸ್ತವವಾಗಿ ಅನುಭೋಗಿಯ ಹಲವಾರು ವಸ್ತುಗಳನ್ನು ಅನುಭವಿಸುತ್ತಾನೆ.

5. ಅನುಭೋಗಿಯ ಆದಾಯ ಅಭಿವೃದ್ಧಿ ಮತ್ತು ಒಲವುಗಳಲ್ಲಿ ಬದಲಾವಣೆಗಳಾಗುವುದಿಲ್ಲ ಎಂಬ ಇದರ ಕಲ್ಪನೆ ಅಸಂಗತವಾದದ್ದು.

ನಿಯಮದ ಮಹತ್ವ

ಬದಲಾಯಿಸಿ
ಬೇರೆ ಎಲ್ಲ ನಿಯಮಗಳಂತೆ ಇಳಿಮುಖ ಸೀಮಾಂತ  ತುಷ್ಟಿಗುಣ ನಿಯಮವು ಒಂದು ಪ್ರವೃತ್ತಿಯ ಹೇಳಿಕೆಯಾಗಿದೆ. ಇತರ ಆಚರಣೆಯು ಹಲವು ಸಂಗತಿಗಳನ್ನು ಅಳವಡಿಸಿದೆ. ಈ ಸಂಗತಿಗಳು ಈಡೇರಿದಾಗ ಮಾತ್ರ ಈ ನಿಯಮವು ಸತ್ಯವಾಗುತ್ತದೆ. ಈ ಮಿತಿಗಳ ನಡುವೆಯೂ ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮವು ಬಹಳ ಮಹತ್ವವನ್ನು ಪಡೆದಿದೆ


1. ಈ ನಿಯಮವು ಅರ್ಥಶಾಸ್ತ್ರ[]ದಲ್ಲಿ ಹಲವಾರು ನಿಯಮಗಳಿಗೆ ತಳಹದಿಯಾಗಿದೆ. ಉದಾಹರಣೆಗೆ ಸಮ ಸಿಮಾಂತ ತುಷ್ಟಿಗುಣ ನಿಯಮವು ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮ ದಿಂದ ನೇರವಾಗಿ ಪ್ರೇರಣೆ ಪಡೆದಿದೆ. ತಾನು ಖರ್ಚು ಮಾಡುವ ಹಣದಿಂದ ಗಿರಿಷ್ಠ ತೃಪ್ತಿಯನ್ನು ಪಡೆಯಲು ಅನುಭೋಗಿಯ ಪ್ರಯತ್ನಿಸುತ್ತಾನೆ ಎಂಬುದು ಸಮಸ್ಯೆ ಮಾಂತ ದೋಸ್ತಿಗಳ ನಿಯಮವೂ ತಿಳಿಸುತ್ತದೆ. ಅನುಭೋಗಿಯ ವಿವೇಕಯುತವಾಗಿ ಹಣವನ್ನು ಖರ್ಚು ಮಾಡಿ ತೃಪ್ತಿಯನ್ನು ಗರಿಷ್ಠವಾಗಿಸಿಕೊಳ್ಳಲು ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮ ಮಾರ್ಗದರ್ಶನ ನೀಡುತ್ತದೆ.

2. ಬೇಡಿಕೆಯ ನಿಯಮವು ಈ ನಿಯಮದ ಮೇಲೆ ನಿಂತಿದೆ. ಬೆಲೆ ಮತ್ತು ಬೇಡಿಕೆಯ ನಡುವೆ ವ್ಯತಿರಿಕ್ತ ಸಂಬಂಧವಿದೆ ಎಂಬುದನ್ನು ಬೇಡಿಕೆ ನಿಯಮವು ವ್ಯಕ್ತಪಡಿಸುತ್ತದೆ. ಆದರೆ ಬೆಲೆ ಹೆಚ್ಚಾಗಿದ್ದಾಗ ಬೇಡಿಕೆ ಕಡಿಮೆಯಾಗುತ್ತದೆ ಮತ್ತು ಬೆಲೆ ಕಡಿಮೆಯಾದಾಗ ಬೇಡಿಕೆ ಜಾಸ್ತಿ ಆಗುತ್ತದೆ. ಬೆಲೆಯೂ ಕಡಿಮೆ ಇದ್ದಾಗ ಅನುಭವಿಗೆ ವಸ್ತುವಿನಿಂದ ದೊರೆಯುವ ದೃಷ್ಟಿಗಳು ಹೆಚ್ಚಾಗಿರುವುದರಿಂದ ಅವನು ಜಾಸ್ತಿ ಪ್ರಮಾಣದ ವಸ್ತುಗಳನ್ನು ಕೊಳ್ಳಲು ಇಷ್ಟಪಡುತ್ತಾನೆ ಎಂಬುದು ಇಳಿಮುಖ ಸೀಮಾಂತ ತುಷ್ಟಿಗುಣದ ನಿಯಮವು ಸ್ಪಷ್ಟಪಡಿಸುತ್ತದೆ.

3. ಉತ್ಪಾದನೆಯಲ್ಲಿ ಇಳಿಮುಖ ಪ್ರತಿಫಲ ನಿಯಮವು ಈ ನಿಯಮದಿಂದಲೇ ಹೊರಹೊಮ್ಮಿದೆ.

4. ಸರ್ಕಾರದ ಪ್ರಗತಿಪರ ತೆರಿಗೆ[] ನೀತಿಯು ಸೀಮಾಂತ ತುಷ್ಟಿಗುಣ ನಿಯಮದಿಂದ ಮಾರ್ಗದರ್ಶನ ಪಡೆದಿದೆ. ಶ್ರೀಮಂತರ ಬಳಿ ಹೆಚ್ಚಿನ ಮೊತ್ತದ ಹಣ ವಿರುವುದರಿಂದ ಅವರಿಗೆ ಹಣದಿಂದ ದೊರೆಯುವ ಕಡಿಮೆ ಇರುತ್ತದೆ ಆದ್ದರಿಂದ ಸರ್ಕಾರವು ಅವರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತದೆ. ಅದೇ ರೀತಿ ಬಡವರ ಬಳಿ ಕಡಿಮೆ ಹಣ ವಿರುವುದರಿಂದ ಅವರಿಗೆ ಹಣದಿಂದ ದೊರೆಯುವ ತುಷ್ಟಿಗುಣ ಅಧಿಕವಾಗಿರುತ್ತದೆ ಆದ್ದರಿಂದ ಸರ್ಕಾರವು ಅವರ ಮೇಲೆ ಕಡಿಮೆ ದರದ ತೆರಿಗೆಯನ್ನು ಹಾಕುತ್ತದೆ.

5. ಮೌಲ್ಯದ ವಿರೋಧಾಭಾಸಕ್ಕೆ [] ಈ ನಿಯಮವು ಪರಿಪೂರ್ಣವಾದ ವಿವರಣೆಯನ್ನು ನೀಡುತ್ತದೆ. ನೀರಿಗೆ ಅತಿಹೆಚ್ಚಿನ ತುಷ್ಟಿಗುಣ ಇದೆ. ಆದರೆ ಅದರ ಬೆಲೆ ಸೊನ್ನೆ. ಇದಕ್ಕೆ ವಿರುದ್ಧವಾಗಿ ವಜ್ರಕ್ಕೆ ಅಷ್ಟು ತುಷ್ಟಿಗುಣವಿಲ್ಲ ಆದರೆ ಅದರ ಬೆಲೆ ಬಹಳ ಹೆಚ್ಚು. ಇದೇ ಮೌಲ್ಯದ ವಿರೋಧಾಭಾಸ. ಆದರೆ ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮ ಇದಕ್ಕೆ ಸಮರ್ಪಕವಾದ ಉತ್ತರ ನೀಡುತ್ತದೆ. ಪ್ರತಿಯೊಂದು ವಸ್ತುವಿನ ಬೆಲೆಯು ಅದರ ಸೀಮಾಂತ ತುಷ್ಟಿಗುಣ ದಿಂದ ನಿರ್ಧಾರವಾಗುತ್ತದೆ. ನೀರಿನ ಸೀಮಾಂತ ತುಷ್ಟಿಗುಣ ಶೂನ್ಯ ವಾಗಿರುವುದರಿಂದ ಆದರೆ ಬೆಳೆ ಸೊನ್ನೆಯಾಗಿದೆ. ವಜ್ರದ ಸೀಮಾಂತ ತುಷ್ಟಿಗುಣ ಅಧಿಕವಾಗಿರುವುದರಿಂದ ಅದರ ಬೆಲೆ ಹೆಚ್ಚಾಗಿದೆ.

6. ಸಮಾಜವಾದಿ ಸಿದ್ಧಾಂತಕ್ಕೆ ಈ ನಿಯಮವು ಮಾರ್ಗದರ್ಶಿಯಾಗಿದೆ. ಶ್ರೀಮಂತರು ಕಳೆದುಕೊಳ್ಳುವ ಸಂಪತ್ತಿನ ತುಷ್ಟಿಗುಣ ಬಡವರ ಗಳಿಸುವುದಕ್ಕಿಂತ ಕಡಿಮೆ ಇರುತ್ತದೆ. ಆದ್ದರಿಂದ ಬಡವರು ಪರಿವಾರ ಸಂಪತ್ತಿನ ವಿತರಣೆಯಾಗಬೇಕು ಎಂಬ ಸಮಾಜವಾದಿಗಳ ನಿಲುವು ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮದ ಮೇಲೆ ನಿಂತಿದೆ.

ಉಲ್ಲೇಖಗಳು

ಬದಲಾಯಿಸಿ



ಹೆಚ್ಚಿನ ಓದುವಿಕೆಗೆ

  • ಎಚ್. ಆರ್, ಕೃಷ್ಣಯ್ಯ ಗೌಡ. ಆಧುನಿಕ ಅರ್ಥಶಾಸ್ತ್ರ.
  • ಎ.ಸ್, ಶರಣಪ್ಪ. ಆರ್ಥಿಕ ಸಿದ್ಧಾಂತ.
  • Case, Karl E.; Fair, Ray C. (1999). Principles of Economics (5th ed.). Prentice-Hall.


ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮ

ಬದಲಾಯಿಸಿ

NotEs 2409:4071:2393:A862:4EB9:2C2F:A72D:F225 ೧೪:೦೬, ೨೧ ಸೆಪ್ಟೆಂಬರ್ ೨೦೨೨ (UTC)

ತುಷ್ಟಿಗುಣ ಎಂದರೇನು ತುಷ್ಟಿಗುಣ ಪ್ರಕಾರ ತುಷ್ಟಿಗುಣ ವಿಶ್ಲೇಷಣೆ ಇಳಿಮುಖ ಸೀಮಾಂತ ತುಷ್ಟಿಗುಣ

ಬದಲಾಯಿಸಿ

ತುಷ್ಟಿಗುಣ ಎಂದರೇನು ತುಷ್ಟಿಗುಣ ಪ್ರಕಾರ ತುಷ್ಟಿಗುಣ ವಿಶ್ಲೇಷಣೆ ಇಳಿಮುಖ ಸೀಮಾಂತ ತುಷ್ಟಿಗುಣ 2401:4900:32AA:632:E8F1:8D54:6131:B90F ೧೮:೧೨, ೪ ನವೆಂಬರ್ ೨೦೨೩ (IST)Reply

ಅರ್ಥಶಾಸ್ತ್ರ.

ಬದಲಾಯಿಸಿ

ಇಳಿ ಸೀಮಂತ ಶಶಿ ಗೌಡ ನಿಯಮ ಮಹತ್ವ ಮತ್ತು ಅಂಗೈಕ ಪಿಡಿಎಫ್ ಅಸೈನ್ ಮೆಂಟ್ 2409:408C:838A:6134:6086:9A7B:2CE2:BF6C ೧೯:೧೨, ೪ ನವೆಂಬರ್ ೨೦೨೩ (IST)Reply

ಇಳಿಮುಖ ಸೀಮಾಂತ ತುಷ್ಟಿಗುಣ ಅನ್ವಯವಾಗುವ ಯಾವುದಾದರೂ 2 ದೈನಂದಿನ ಉದಾಹರಣೆ ವಿವರಿಸಿ

ಬದಲಾಯಿಸಿ

ಇಳಿಮುಖ ಸೀಮಾಂತ ತುಷ್ಟಿಗುಣ ಅನ್ವಯವಾಗುವ ಯಾವುದಾದರೂ 2 ದೈನಂದಿನ ಉದಾಹರಣೆ ವಿವರಿಸಿ 2401:4900:3361:1BE3:50BE:F84:4A62:6ECA ೨೦:೪೭, ೫ ಜನವರಿ ೨೦೨೪ (IST)Reply

ಇಳಿಮುಖ ಸೀಮಾಂತ ತುಷ್ಟಿಗುಣ ಅನ್ವಯವಾಗುವ ಯಾವುದಾದರೂ 2 ದೈನಂದಿನ ಉದಾಹರಣೆ ವಿವರಿಸಿ

ಬದಲಾಯಿಸಿ

ಇಳಿಮುಖ ಸೀಮಾಂತ ತುಷ್ಟಿಗುಣ ಅನ್ವುಯವಾಗುವ ಯಾವುದಾದರೂ 2 ದೈನಂದಿನ ಉದಾಹರಣೆ ವಿವರಿಸಿ 45.127.56.228 ೧೬:೫೫, ೭ ಜನವರಿ ೨೦೨೪ (IST)Reply

ಇಳಿಮುಖ ಸೀಮಾಂತ ತುಷ್ಟಿಗುಣ ಅನ್ವಯವಾಗುವ ಯಾವುದಾದರೂ 2 ದೈನಂದಿನ ಉದಾಹರಣೆ ವಿವರಿಸಿ

ಬದಲಾಯಿಸಿ

ಇಳಿಮುಖ ಸೀಮಾಂತ ತುಷ್ಟಿಗುಣ ಅನ್ವಯವಾಗುವ ಯಾವುದಾದರೂ 2 ದೈನಂದಿನ ಉದಾಹರಣೆ ವಿವರಿಸಿ 2409:408C:ADB6:3B6C:0:0:F20A:2E03 ೨೧:೧೮, ೧೦ ನವೆಂಬರ್ ೨೦೨೪ (IST)Reply

Return to the user page of "Naveen harsha s/ನನ್ನ ಪ್ರಯೋಗಪುಟ".