ನಮಸ್ಕಾರ; ನಿಮ್ಮ ಲೇಖನದಲ್ಲಿ ಮಾಹಿತಿಗಳು ಹೆಚ್ಚಾಗಿ ಇರುವುದು ಸಂತೋಷವಾದ ವಿಷಯ. ನಿಮ್ಮ ವಾಕ್ಯ ರಚನೆಯು ಆದಷ್ಟು ಕನ್ನಡದ ಶೈಲಿಯಲ್ಲೇ ಇರುವುದು ಕಂಡುಬರುತ್ತದೆ. ಆದರೆ, ನಿಮ್ಮ ಲೇಖನದಲ್ಲಿ ಕೆಲವು ಸೂಕ್ಷ್ಮವಾದ ದೋಷಗಳು ಕಂಡುಬರುತ್ತದೆ. ನಿಮ್ಮ ಲೇಖನವು ಕೆಲವು ಅಕ್ಷರ ದೋಷಗಳನ್ನು ಒಳಗೊಂಡಿದೆ. ಉದಾಹರಣೆಗೆ; ಒಂದು ಕಡೆ "ಎಂಜಿನಿಯರ್" ಎಂದು ಬಳಸಿ ಮತ್ತೊಂದು ಕಡೆಗೆ "ಇಂಜಿನಿಯರ್" ಎಂದು ಬಳಸಿರುವಿರಿ, "ಎಚ್" ಎಂದು ಬಳಸ ಬೇಕಾದಲ್ಲಿ "ಹೆಛ್" ಎಂದು ಬಳಸಿರುವಿರಿ ಹಾಗೂ "ವಿಶ್ವೇಶ್ವರಯ್ಯ" ಎಂಬ ನಾಮದ ಬಳಕೆಯನ್ನು "ವಿಸ್ವೇಶ್ವರಯ್ಯ" ಎಂದು ಮಾಡಿರುವಿರಿ. ಹೀಗೆ ಕೆಲವು ಅಲ್ಪ ಪ್ರಮಾಣಗಳ ದೋಷಗಳನ್ನು ನೀವು ಪರಿಗಣಿಸಿ ನಿಮ್ಮ ಲೇಖನಕ್ಕೆ ಅನ್ವಯಿಸಿದಲ್ಲಿ ನಿಮ್ಮ ಲೇಖನವು ಮತ್ತಷ್ಟು ಪ್ರಕಾಶಮಾನವಾಗಿ ಕಂಡುಬರುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ಲೇಖನವು ಮತ್ತಷ್ಟು ಯಶಸ್ಸಿನೊಂದಿಗೆ 'ವಿಕಿಪೀಡಿಯ' ಮಾಧ್ಯಮದ ಮೂಲಕವಾಗಿ, ವಿಶ್ವದಾದ್ಯಂತ ವಿಜ್ರಂಬಿಸಲು ನನ್ನ ಶುಭಾಶಯಗಳು. ಧನ್ಯವಾದಗಳು.

Return to the user page of "Kavya sri.k/sandbox".