ಮೈಸೂರು ಅರಮನೆ 'ಅಂಬಾ ವಿಲಾಸ್ ಅರಮನೆ ಅಥವಾ ಮೈಸೂರರಮನೆ'

ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ" ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ ವೊಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು.ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ; ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು.

ಚರಿತ್ರೆ

ಮೈಸೂರು ಸಂಸ್ಥಾನ ೧೩೯೯ ರಿಂದ ೧೯೪೭ ರಲ್ಲ ಭಾರತದ ಸ್ವಾತಂತ್ರ್ಯದ ವರೆಗೂ 'ವೊಡೆಯರ್ ವಂಶದ ಅರಸ'ರಿಂದ ಆಳಲ್ಪಟ್ಟಿತು (ಮಧ್ಯದಲ್ಲಿ ಸ್ವಲ್ಪ ಕಾಲ ಹೈದರ್ ಅಲಿ ಮತ್ತುಟೀಪು ಸುಲ್ತಾನರ ಆಡಳಿತವನ್ನು ಬಿಟ್ಟು). ಒಡೆಯರ್ ಅರಸರು ೧೪ ನೆಯ ಶತಮಾನದಲ್ಲಿಯೇ ಇಲ್ಲಿ ಒಂದು ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ ೧೬೩೮ ರಲ್ಲಿ ಸಿಡಿಲು ಹೊಡೆದು ಭಾಗಶಃ ಹಾಳಾಯಿತು. ಆಗ ಇದನ್ನು ರಿಪೇರಿ ಮಾಡಿ ವಿಸ್ತರಿಸಲಾಗಿತ್ತು. ಆದರೆ ೧೮ ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ ೧೭೯೩ ರಲ್ಲಿ ಟೀಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಲಾಯಿತು. ೧೮ಂ೩ ರಲ್ಲಿ ಇನ್ನೊಂದು ಅರಮನೆಯನ್ನು ಅದರ ಸ್ಥಳದಲ್ಲಿ ಕಟ್ಟಿಸಲಾಯಿತು. ಈ ಅರಮನೆ ಸಹ ೧೮೯೭ ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಯಿತು. ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಹೆನ್ರಿ ಇರ್ವಿನ್ ಅವರನ್ನು ನೇಮಿಸಿದರು. ವಿವಿಧ ರೀತಿಯ ವಾಸ್ತುಕಲೆಗಳನ್ನು ಸೇರಿಸಿ ಅರಮನೆಯನ್ನು ಕಟ್ಟಲು ಅವರಿಗೆ ತಿಳಿಸಲಾಯಿತು. ಅರಮನೆ ೧೯೧೨ ರಲ್ಲಿ ಸಂಪೂರ್ಣವಾಯಿ ಅರಮನೆ ಯನ್ನು ಯರೆ--122.179.89.38 ೦೯:೧೭, ೯ ಮಾರ್ಚ್ ೨೦೧೩ (UTC)ಚಸಸ್ಫ಼್ಫ಼್ಸ್ಫ಼್ಸ್ಫ಼್ಸ್ ವಾಸ್ತುಶಿಲ್ಪ

ಅರಮನೆಯ ವಾಸ್ತುಕಲೆಯ ಶೈಲಿಯನ್ನು ಸಾಮಾನ್ಯವಾಗಿ "ಇಂಡೋ-ಸರಾಸೆನಿಕ್" ಶೈಲಿ ಎಂದು ವರ್ಣಿಸಲಾಗುತ್ತದೆ. ಮುಖ್ಯವಾಗಿ ಹಿಂದೂ, ಮುಸ್ಲಿಮ್, ಮತ್ತು ಗೋಥಿಕ್ ಶೈಲಿಯ ವಾಸ್ತುಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ. ಕಲ್ಲಿನಲ್ಲಿ ಕಟ್ಟಲಾಗಿರುವ ಅರಮನೆಯಲ್ಲಿ ಮೂರು ಮಹಡಿಗಳಿದ್ದು, ಕೆಂಪು ಅಮೃತಶಿಲೆಯ ಗುಂಬಗಳು ಹಾಗೂ ೧೪೫ ಅಡಿ ಎತ್ತರದ ಐದು ಮಹಡಿಗಳುಳ್ಳ ಗೋಪುರವನ್ನು ಅರಮನೆ ಹೊಂದಿದೆ. ಅರಮನೆಯ ಸುತ್ತಲೂ ದೊಡ್ಡ ಉದ್ಯಾನವಿದೆ. ಬಂಗಾರದ ಗುಡಿಯಂತಿದೆ. ದೇವಸ್ಥಾನಗಳು

ಅರಮನೆಯ ಆವರಣದಲ್ಲಿ ೧೨ ದೇವಸ್ಥಾನಗಳಿವೆ. ೧೪ ನೆಯ ಶತಮಾನದಲ್ಲಿ ಕಟ್ಟಿದ ಕೋಡಿ ಭೈರವನ ದೇವಸ್ಥಾನದಿಂದ ಹಿಡಿದು ೧೯೫೩ ರಲ್ಲಿ ಕಟ್ಟಲಾದ ದೇವಸ್ಥಾನಗಳೂ ಇವೆ. ಇಲ್ಲಿರುವ ದೇವಸ್ಥಾನಗಳಲ್ಲಿ ಪ್ರಸಿದ್ಧವಾದ ಕೆಲವು:

   ಸೋಮೇಶ್ವರನ ದೇವಸ್ಥಾನ
   ಲಕ್ಶ್ಮೀರಮಣ ದೇವಸ್ಥಾನ
   ಆಂಜನೇಯಸ್ವಾಮಿ ದೇವಸ್ಥಾನ
   ಗಣೇಶ ದೇವಸ್ಥಾನ
   ಶ್ವೇತ ವರಾಹ ಸ್ವಾಮಿ ದೇವಸ್ಥಾನ

ಆಕರ್ಷಣೆಗಳು

   "ದಿವಾನ್-ಎ-ಖಾಸ್": ಮುಘಲ್ ಸಾಮ್ರಾಜ್ಯದ ಅರಮನೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿದ್ದ ಕೋಣೆ. ಮೈಸೂರು ಅರಮನೆಯಲ್ಲಿಯೂ ಇದನ್ನು ಬಳಸಲಾಗಿದೆ. ಮುಖ್ಯವಾದ ಅತಿಥಿಗಳು ಬಂದಾಗ ಅವರನ್ನು ರಾಜರು ಎದುರುಗೊಳ್ಳಲು ಉಪಯೋಗಿಸುತ್ತಿದ್ದ ಕೋಣೆ ಇದು.
   "ದರ್ಬಾರ್ ಹಾಲ್": ರಾಜರ ದರ್ಬಾರು ನಡೆಯುತ್ತಿದ್ದ ಶಾಲೆ. ಇಲ್ಲಿಯೇ ಜನರು ರಾಜರನ್ನು ಆಗಾಗ ಕಾಣಬಹುದಾಗಿತ್ತು.
   ಕಲ್ಯಾಣ ಮಂಟಪ
   ಆಯುಧಶಾಲೆ: ರಾಜಮನೆತನದ ಸದಸ್ಯರು ಬಳಸುತ್ತಿದ್ದ ಆಯುಧಗಳನ್ನು ಇಲ್ಲಿ ಇಡಲಾಗಿದೆ. ಇಲ್ಲಿ ಚಾರಿತ್ರಿಕವಾದ ಅನೇಕ ಆಯುಧಗಳನ್ನು ಕಾಣಬಹುದು. ೧೪ ನೆಯ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಗ್ರನಖ ಮೊದಲಾದ ಆಯುಧಗಳಿಂದ ಹಿಡಿದು ೨ಂ ನೆಯ ಶತಮಾನದ ಪಿಸ್ತೂಲುಗಳು, ಬಂದೂಕುಗಳು ಮೊದಲಾದವನ್ನು ಇಲ್ಲಿ ಕಾಣಬಹುದು. ಮುಖ್ಯವಾಗಿ, ವೊಡೆಯರ್ ವಂಶದ ಪ್ರಸಿದ್ಧ ಅರಸು ರಣಧೀರ ಕಂಠೀರವ ಉಪಯೋಗಿಸಿದ್ದ ಖಡ್ಗಗಳಲ್ಲಿ ಒಂದಾದ "ವಜ್ರಮುಷ್ಟಿ", ಹಾಗೂ ಟೀಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಕೆಲವನ್ನು ಇಲ್ಲಿ ಕಾಣಬಹುದು.

ಬಾಹ್ಯ ಸಂಪರ್ಕಗಳು

   ಮೈಸೂರಿನ ಅರಮನೆಗಳು
   ಮುಖ್ಯ ಮೈಸೂರು ಅರಮನೆ
Return to the user page of "K B Alakananda Patel/sandbox".