ಗಣಿಗಾರಿಕೆ ಅಂದರೆ ಉಪಯುಕ್ತ ಖನಿಜಗಳು ಅಥವಾ ಇತರ ಭೂವೈಜ್ಞಾನಿಕ ವಸ್ತುಗಳನ್ನು ಅಂದರೆ ಸಾಮಾನ್ಯವಾಗಿ ಅದಿರುಗಳು, ಲೋಹಗಳು ಅಥವಾ ಕಲ್ಲಿದ್ದಲ ಪದರ ಭೂಮಿಯಿಂದ ಹೊರತೆಗೆಯುವುದಾಗಿದೆ, .

ಗಣಿಗಾರಿಕೆಯಿಂದ ಸಿಗುವ ವಸ್ತುಗಳೆಂದರೆ ಕಚ್ಚಾ ಲೋಹಗಳು, ಅಮೂಲ್ಯವಾದ ಲೋಹಗಳು, ಕಬ್ಬಿಣ, ಯುರೇನಿಯಂ, ಕಲ್ಲಿದ್ದಲು, ವಜ್ರಗಳು, ಸುಣ್ಣಕಲ್ಲು, ತೈಲಶಿಲೆ, ಕಲ್ಲುಪ್ಪು ಮತ್ತು ಪೊಟ್ಯಾಶ್.

ಈ ವಸ್ತುಗಳನ್ನು ಕೃಷಿ ಮಾಡುವುದರ ಮೂಲಕ ಬೆಳೆಯಲು, ಅಥವಾ ಪ್ರಯೋಗಾಲಯ ಅಥವಾ ಕಾರ್ಖಾನೆಗಳಲ್ಲಿ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಸಾಮಾನ್ಯವಾಗಿ ಭೂಮಿಯಿಂದ ತೆಗೆಯುತ್ತಾರೆ.

ಗಣಿಗಾರಿಕೆಯ ವಿಶಾಲ ಅರ್ಥವೆಂದರೆ, ಯಾವುದೇ ನವೀಕರಣಗೊಳಿಸಲಾಗದ ಸಂಪನ್ಮೂಲವನ್ನು ಹೊರತೆಗೆಯುವುದು (ಉದಾಹರಣೆಗೆ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಅಥವಾ ನೀರು).

ಕಲ್ಲು ಮತ್ತು ಲೋಹಗಳ ಗಣಿಗಾರಿಕೆಗಳನ್ನು ಇತಿಹಾಸ-ಪೂರ್ವ ಕಾಲದಿಂದ ಮಾಡಲಾಗುತ್ತಿತ್ತು.

ಅದಿರು ಘಟಕಗಳನ್ನು ಅನ್ವೇಷಿಸುವುದು, ಸೂಚಿಸಿದ ಗಣಿಯ ಲಾಭದ ಸಂಭವನೀಯತೆಯನ್ನು ವಿಶ್ಲೇಷಿಸುವುದು, ಅಪೇಕ್ಷಿತ ವಸ್ತುಗಳನ್ನು ಹೊರತೆಗೆಯುವುದು ಮತ್ತು ಕೊನೆಯದಾಗಿ ಗಣಿಗಾರಿಕೆ ಕೆಲಸ ಮುಗಿದ ನಂತರ ಭೂಮಿಯನ್ನು ಬೇರೆ ಉಪಯೋಗಕ್ಕೆ ಬರುವಂತೆ ಉತ್ತಮ ಸ್ಥಿತಿಗೆ ತರುವುದು, ಆಧುನಿಕ ಗಣಿಗಾರಿಕಾ ಕಾರ್ಯವಿಧಾನ ಈ ಎಲ್ಲ ಕಾರ್ಯಗಳನ್ನು ಒಳಗೊಂಡಿದೆ. ಗಣಿಗಾರಿಕೆ ಕಾರ್ಯಾಚರಣೆ, ಗಣಿಗಾರಿಕಾ ಕೆಲಸ ನಡೆಯುತ್ತಿರುವಾಗ ಮತ್ತು ಇದು ಮುಗಿದ ವರ್ಷಗಳ ನಂತರ ಸಹ ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಇದರ ಪರಿಣಾಮವಾಗಿ ವಿಶ್ವದ ಸುಮಾರು ದೇಶಗಳು ಗಣಿ ಕಾರ್ಯಾಚರಣೆಯ ಋಣಾತ್ಮಕ ಪರಿಣಾಮಗಳನ್ನು ಸುಧಾರಿಸಲು ನಿಭಂದನೆಗಳನ್ನು ಅಳವಡಿಸಿಕೊಂಡಿವೆ.

ಸುರಕ್ಷತೆಯು ಬಹುಕಾಲದಿಂದಲೂ ಕೂಡ ಒಂದು ಆಸಕ್ತಿಯಾಗಿತ್ತು, ಆಧುನಿಕ ಆಚರಣೆಗಳು ಗಣಿಗಾರಿಕೆಗಳಲ್ಲಿ ಭದ್ರತೆಯನ್ನು ಗಮನಾರ್ಹವಾಗಿ ಸುಧಾರಿಸಿವೆ.

Return to the user page of "Joelgilson/sandbox".