ನಾವು ಕಂಡರಿಯದ ಸರ್.ಎಮ್.ವಿ

            ಸರ್.ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಕನ್ನಡಿಗರ ಪ್ರತಃ ಸ್ಮರಣೀಯರುಗಳಳಲ್ಲೊಬ್ಬರು. ಮ್ಯೆಸೂರು ಸಂಸ್ಥಾನದಲ್ಲಿ ದಿವಾನ, ಮುಖ್ಯ ಅಭಿಯಂತರ ರಂತಹ ಸ್ಥಾನಗಳನ್ನು ಅಲಂಕರಿಸಿ, ಪ್ರಬುದ್ಧತೆಯಿಂದ ನಿರ್ವಹಿಸಿದಂತವರು.ಹುಟ್ಟಿದ್ದು ೧೮೬೦ರ ಸೆಪ್ಟೆಂಬರ್ ೧೫ ರಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ. ತಾಯಿ ವೆಂಕಟ ಲಕ್ಷ್ಮಮ್ಮ ಹಾಗೂ ತಂದೆ ಶ್ರೀನಿವಾಸ ಶಾಸ್ತ್ರಿಗಳು.ಮುಂಬೈ ನಗರದಲ್ಲಿ ಲೋಕೋಪಯೋಗಿ ಇಲಖೆಯಲ್ಲಿ ಸೇವೆ ಸಲ್ಲಿಸಿ ಮುಂದೆ ಭಾರತೀಯ ನೀರಾವರಿ ಕಮಿಷನ್ ಸೇರಿ ಡಖನ್ ಪ್ರಸ್ಥಭೂಮಿಯಲೇ ಅತ್ಯುತ್ತಮ ನೀರಾವರಿ ವ್ಯವಸ್ಥೆ ಪರಿಚಯಿಸಿದರು. ಇವರನ್ನು ಅತಿಯಾಗಿ ಪ್ರಭಾವಿಸಿದ ಏಕೈಕ ವ್ಯಕ್ತಿ ಆರ್ಥ್ರರ್ ಕಟರ್.ತಮ್ಮ ಅಮೋಘ ಸೆವೆಯನ್ನು ಬ್ರಿಟೀಷ್ ಭಾರತದಲ್ಲದೇ ವಿದೇಶಗಳಲ್ಲಿಯೂ ನೀಡಿ ಮುಂದೆ ಸ್ವತಂತ್ರ್ಯ ಭಾರತಕ್ಕೂ ನೀಡಿದ್ದಾರೆ. ಇವರ ಜನಸೇವೆಯನ್ನು ಮನಗಂಡ ಅಂದಿನ ಸರ್ಕಾರ ಮೊಟ್ಟ ಮೋದಲು ನಿಸ್ವಾರ್ಥ ಜನಸೇವೆಯನ್ನು ಮನಗಂಡು "ಭಾರತ ರತ್ನ" ಪ್ರಶಸ್ಥಿ ನೀಡಿ ಗೌರವಿಸಿದೆ.

ನಾವು ನಮ್ಮಲ್ಲಿರುವ ಎಷ್ಟೋ ಅಪ್ರತಿಮ ಚೇತನಗಳನ್ನ ಗುರುತಿಸುವುದೇ ಇಲ್ಲ. ಅಂಥವರುಗಳಲ್ಲಿ ಸರ್.ಎಮ್.ವಿ ಅವರೂ ಒಬ್ಬರು. ಏನಿದು? ವಿಶ್ವೇಶ್ವರಯ್ಯ ನಮಗೆ ಗೂತ್ತಿಲ್ಲವೆ? ಅವರನ್ನು ನಾವು ಗುರುತಿಸಿಲ್ಲವೆ? ಎಂದು ಅವಾಕ್ಕಾಗಿ ಕೇಳಬೇಡಿ.ನಾನು ಹೇಳಿದ್ದು, ನಾವು ಎಲ್ಲಾದಕ್ಕೂ, ಎಲ್ಲದನ್ನೂ, ಎಲ್ಲರನ್ನೂ ನೋಡುವಾಗ, ಗುರುತಿಸುವಾಗ ಅವರ ಧರ್ಮ, ಜಾತಿ, ಪಂಗಡಗಳ ಲೇಪಹಚ್ಚಿ ನೋಡುತ್ತೇವೆ. ಈ ಗುಣ ಸರ್.ಎಮ್ ರವರನ್ನೂ ಬಿಟಿಲ್ಲ. ಇವರನ್ನು ಜಾತಿಯ ಹೊರತಾಗಿ ನೋಡುವ ಅವಶ್ಯಕತೆ ಇದೆ. ಇತ್ತೀಚೆಗೆ ಮೈಸೂರು ವಿ.ವಿ ಯ ಸಿಂಡಿಕೇಟ್ ಸಭೆಯಲ್ಲಿ ವಿವಿಗೆ ನೂರೂ ವರ್ಷ ತುಂಬಿದ ಬೆನ್ನಲ್ಲೇ ಅದರ ಸ್ಥಾಪನೆಗೆ ದುಡಿದವರ ಪ್ರತಿಮೆಗಳನ್ನು ಸ್ಥಾಪಿಸುವ ನಿರ್ಧಾರ ತೆಗೆದು ಕೊಂಡಾಗಿತ್ತು. ಅದಕ್ಕೆ ಕೆಲವು ಪಕ್ಷದ ವಿದ್ಯಾರ್ಥಿಗಳ ವಿಶ್ವೇಶ್ವರಯ್ಯ ರವರ ಮೂರ್ತಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕೆಲವು ಬುದ್ದಿಜೇವಿಗಳು ಎನೆಸಿಕೊಂಡವರೂ ಸಾತ್ ನೀಡಿದ್ದಾರೆ. ಅವರ ವಿರೋಧಕ್ಕೆ, "ಸರ್.ಎಮ್.ವಿ ಅವರು ಮೀಸಲಾತಿ ವಿರೋಧಿ", ಆಗಿದ್ದರೆಂಬುದೇ ಕಾರಣ.ಆದರೆ, ನಿಡಿ ಏನೆಂಬುದರ ಅರಿವು ಯಾರಿಗೂ ಇರಲಿಲ್ಲವೇ? ಇಲ್ಲಾ ಏನೋ ಬೇಕೆಂದೇ ತಗಾದೆ ತೆಗೆದು, ವಿವಾದ ಸೃಷ್ಥಿಸಿದ್ದಾರೆಯೇ? ತಿಳಿಯನು. ವಿಶ್ವೇಶ್ವರಯ್ಯರು ಮೀಸಲಾತಿ ಜಾರಿಗೂಳಿಸಲು ಹೊರಟಾಗ, ಸರ್.ಎಮ್.ವಿ ದಿವಾನಗಿರಿಗೆ ರಾಜಿನಾಮೆ ನೇಡಿದ್ದೂ ನಿಜ. ಕಾರಣ, ಆಡಳಿತದಲ್ಲಿ ವಿದ್ಯೆ, ಬುದ್ಧಿಗೆ ಬದಲು ಮೀಸಲು ಮೂಲಕ ಮೀಡಿಯೊಕ್ರಿಟಿ ಗೆ ಅವಕಾಶ ಕೊಟ್ಟರೆ ಆಡಳಿತಯಂತ್ರ ಹಾಳಾಗುತ್ತದೆ, ಆದ್ದರಿಂದ ಹಿಂದುಳಿದವರಿಗೆ ಉಚಿತ ಊಟ, ವಸತಿ, ತರಬೇತಿ, ಶಿಕ್ಷಣ ನೀಡಿ ಉಳಿದವರೂಂದಿಗೆ ಸ್ವರ್ದಿಸುವಂತೆ ಮಾಡುವುದಾಗಿತ್ತು. ಇದು ಹೇಗೆ ಅವರನ್ನು ಜಾತಿ ವಿರೋಧಿ ಅನಿಸುತ್ತದೆ? ಹಾಗೆ ನೋಡಿದರೆ, ಡಾ.ಆಂಬೇಡ್ಕರ್ ರವರಿಗೂ ಮೀಸಲಾತಿ ಕೇವಲ ಹತ್ತು ವರ್ಷಗಳಿಗೆ ಮಾತ್ರ ಬೇಕಿತ್ತು. ಇಬ್ಬರ ಮನೋಭಿಲಾಷೆಯೂ ಒಂದು ರೀತಿಯಲ್ಲಿ ಒಂದೇ ಆಗಿತ್ತು. ಆದರೆ ಈ ವೋಟ್ ಬ್ಯಾಂಕ್ ರಾಜಕಾರಣ ಹಿಂದುಳಿದ ವರ್ಗದವರನ್ನು ಮೀಸಲಾತಿ ಎಂಬ ನಶೆಗೆ ಅಡಿಕ್ಟ ಆಗುವಂತೆ ಮಾಡಿದೆ. ಇದರ ಅರಿವು ವಿಶ್ವೇಶ್ವರಯ್ಯರಿಗಿತ್ತು. ಈ ರೀತಿ ಜಾತಿ ವಿಷಕುಡಿದು, ಅದಕ್ಕೆ ಬಲಿಯಾಗುವುದು ನಮ್ಮ ಜನಕ್ಕೇನು ಹೊಸದಲ್ಲ. ಹಿಂದೆಯು ಇತ್ತು, ಇಂದಿಗೂ ಇದೆ ಮುಂದೆ ಇರುವ ಸೂಚನೆಯನ್ನೂ ಕೊಡುತ್ತಿದೆ. ನಮ್ಮ ಜನ ಎಂಥವರೆಂದರೆ, ವಿಶ್ವಮಾನವತೆ ಸಾರಿದ ರಷ್ಟ್ರ ಕವಿ ಕುವೆಂಪು ರವರನ್ನೂ ಒಂದು ಸಮುದಾಯಕ್ಕೆ ಸೇರಿಸುತ್ತದೆ, ತ್ರಿವಿಧ ದಾಸೋಹಿ ಎಂದೆನಿಸಿದ ಶ್ರಿ ಶ್ರಿ ಶ್ರಿ. ಶಿವಕುಮಾರ ನಾಥ ಸ್ವಾಮೀಜಿಯನ್ನೂ ಮತ್ತೊಂದು ಜಾತಿಗೆ ಗುರುತಿನ ಚಿಹ್ನೆಯಂತೆ ಬಿಂಬಿಸುತ್ತದೆ. ಆದರೆ, ಇವರುಗಳು ಎಂದೂ ಜಾತಿಗೆ ಗಂಟುಬಿದ್ದವರಲ್ಲ. ಇದನ್ನು ಧರ್ಮಾಂದರು ತಮ್ಮದೇ ವಾದ ಮಂಡಿಸಿ, ಕರ್ಗಿಲ್ ಯುದ್ಧವನ್ನು ಗೆದ್ದು ಕೊಟ್ಟವರು ಕೇವಲ ನಮ್ಮ ಧರ್ಮದ ಯೋಧರು ಎಂದು ಆತ್ಮ ಸಾಕ್ಷಿಯೇ ಇಲ್ಲದ ಎದೆ ಮುಟ್ಟಿ ಹೇಳುತ್ತಾರೆ.ಇಂಥವರು ಎಂದಾದರೂ ಆರ್ಮಿ ಆಫೀಸರಗಳ ಫೇಸ್ ಬುಕ್ ನ ರಿಲಿಜಿನ್ ಎಂಬ ಕಾಲಮ್ ನೋಡಿದ್ದಾರೆಯೇ. ನಾನು ನೋಡಿರುವವರ ರಿಲಿಜಿನ್ ಕಾಲಮ್ ನಲ್ಲಿ "ಸೈನಿಕ ಧರ್ಮ", ಎಂದು ಇದ್ದದ್ದೇ ಹೆಚ್ಚು. ಭಾರತದ ಅಣು ಮಾನವ, ಅಥವಾ ನ್ಯೂಕ್ಲಿಯರ್ ಮಾನ್ಯ ಎ.ಪಿ.ಜೆ.ಅಬ್ದುಲ್ ಕಲಾಂ ಅಣು ಬಾಂಬ್ ತಯಾರುಮಾಡುವಾಗ ಅಥವಾ ಮಾಡಿದ ಮೇಲೆ ಇಡೀ ದೇಶವೇ ಜಾತಿ-ಧರ್ಮಗಳ ಮರೆತು ಸಂತಸ ಪಟ್ಟಿತ್ತು. ಏಕೆ ಕಲಾಂಗೆ ತಾವು ಕಂಡಹಿಡಿದ ಬಾಂಬ್ ಸ್ವಧರ್ಮೀಯರೇ ಹೆಚ್ಚೀರುವ ಪಾಕಿಸ್ಥಾನಕ್ಕೆ ಎಚ್ಚರಿಕೆಯ ರವಾಗೆ ಎಂಬುದು ತಿಳಿದಿರಲಿಲ್ಲವೇ? ಇವರನ್ನೂ ಒಂದು ಧರ್ಮಕ್ಕೆ ಸೇರಿದವರೆಂದು ಹೇಳಿ ಅವಮಾನಿಸುವುದಾದರೂ ಏಕೆ?

ವಿಶ್ವೇಶ್ವರಯ್ಯನವರ ಹಿರಿಮೆ

ಡಾ.ರಾಮ ಮನೋಹರ ಲೋಹಿಯಾ ರವರು, ಸರ್.ಎಮ್.ವಿ ರವರನ್ನು ಹೀಗೆ ಸಬೋಧಿಸಿದ್ದಾರೆ. "ವಿಶ್ವೇಶ್ವೆರಯ್ಯನವರು ದೇಶದಲ್ಲೇ ಅತ್ಯುನ್ನತ ಯಂತ್ರಶಿಲ್ಪಿ ಯಾಗಿದ್ದಾರೆ. ಗಾಂಧೀಜಿಯವರ ನಂತರ ಎರಡನೆಯ ಮಹಾ ವ್ಯಕ್ತಿಯಾಗಿ ಗಣಿಸಲ್ಪಡಬಹುದಾದ ವ್ಯಕ್ತಿಯವರು",ಎಂದಿದ್ದಾರೆ. ಸರ್.ಎಮ್.ವಿ ರವರಿಗೆ ಮೈಸೂರು ಸಂಸ್ಥಾನದಿಂದ ಮುಖ್ಯ ಇಂಜಿನಿಯರ್ ಸ್ಥಾನಕ್ಕೆ ಆಹ್ವಾನ ಬಂದಾಗ ಅದನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಅವರು ಇರಲಿಲ್ಲ.

Return to the user page of "Gowthami gowthu/sandbox".