ಸದಸ್ಯರ ಚರ್ಚೆಪುಟ:Dechamma dechu/sandbox

                                              ಅಧಿಕ ಉಪ್ಪು ಸೇವನೆಯಿಂದ ಮೂಳೆಗಳು ದುರ್ಬಲ


ನಮ್ಮ ದೇಹಕ್ಕೆ ಉಪ್ಪಿನ ಅಗತ್ಯತೆ ಏನು ಮತ್ತು ಎಷ್ಟು ಉಪ್ಪ ತಿನ್ನಬೇಕು ಎನ್ನುವುದರ ಬಗ್ಗೆ ತಿಳಿದುಕೊಂಡಿರಲೇಬೇಕು... ಇಲ್ಲವೆಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚಿನ ಅಧ್ಯಯನದ ಪ್ರಕಾರ ಉಪ್ಪು ಸೇವನೆಯಲ್ಲಿ ವ್ಯತ್ಯಾಸ ಹೆಚ್ಚಾಗಿ ಕಾಯಿಲೆಗೆ ತುತ್ತಾಗುತ್ತಿರುವುದು ಹೆಚ್ಚಾಗಿದೆ. ಹಾಗಾಗಿ, ಈಗಿನ ಜನರೇಷನ್ ರುಚಿಗೆ ತಕ್ಕಷ್ಟು ಉಪ್ಪು ಎನ್ನುವುದನ್ನು ಬಿಟ್ಟು ಆರೋಗ್ಯಕ್ಕೆ ತಕ್ಕಷ್ಟು ಹಿತಮಿತವಾಗಿ ಉಪ್ಪು ಬಳಕೆ ಮಾಡುವುದನ್ನು ಆರಂಭಿಸಿಬೇಕು. ತಮ್ಮ ದೇಹಕ್ಕೆ ಅತಿಯಾಗಿ ಉಪ್ಪು ಬೇಡ, ಆದರೆ ಅಗತ್ಯ ಪ್ರಮಾಣದಲ್ಲಿ ನಮ್ಮ ದೇಹ ಉಪ್ಪು ಪ್ರಮಾಣವನ್ನು ಬಯಸೇ ಬಯಸುತ್ತದೆ. ದೇಹದಲ್ಲಿನ ಅನಗತ್ಯ ತ್ಯಾಜ್ಯ ಬೆವರಿನ ರೂಪದಲ್ಲಿ ಹೊರ ಹೋಗ ಬೇಕು ಅಂದ್ರೆ ಅಗತ್ಯ ಪ್ರಮಾಣದಲ್ಲಿ ಉಪ್ಪು ಸೇವನೆ ಇರಲೇಬೇಕು. ರಕ್ತ ಚಲನೆಗೂ ಉಪ್ಪಿಗೂ ನೇರ ಸಂಬಂಧವಿದೆ. ದೇಹದಲ್ಲಿನ ಸೋಡಿಯಂ ಅಧಿಕಗೊಂಡಾಗ ರಕ್ತದೊತ್ತಡ ಬರುತ್ತದೆ. ಅದೇ ಕಾರಣಕ್ಕೆ ರಕ್ತದೊತ್ತಡ ಇರುವವರು ಉಪ್ಪನ್ನು ಸೇವಿಸಬೇಡಿ ಎಂದು ಹೇಳುತ್ತಾರೆ. ನಾಲಿಗೆ ಮೇಲೆ ಉಪ್ಪು ಬಿದ್ದಾಗ ಎಂಜಲು ಒಣಗಿ ನೀರು ಸೇವಿಸಬೇಕು ಎಂದೆನಿಸುತ್ತದೆ. ಹಾಗಾಗಿ, ದೇಹದಲ್ಲಿ ಸೋಡಿಯಂ ಅಂಶ ಅಧಿಕವಾದಾಗ ಸಹಜವಾಗಿ ನೀರಿನ ಅಂಶ ಕುಗ್ಗುತ್ತದೆ. ಆಗ ನೀರು ಕುಡಿಯಬೇಕು ಎನಿಸುವುದು ಸಹಜ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ನಿಶಕ್ತಿ.. ಇತರೆ ಸಮಸ್ಯೆಗಳು ಕಾಡಬಹುದು. ಹಾಗಾದ್ರೆ ಉಪ್ಪಿನ ಸೇವನೆ ಯಾವ ವಯಸ್ಸಿನಲ್ಲಿ ಹೇಗಿರಬೇಕೆಂದರೆ.... ವಯೋಮಾನದ ಆಧಾರದ ಮೇಲೆ ಹೇಳಬೇಕಾದರೆ... 51 ವರ್ಷಕ್ಕಿಂತ ಸಣ್ಣವರು ಒಂದು ದಿನಕ್ಕೆ 2300 ಮಿಲಿಗ್ರಾಂನಷ್ಟು ಉಪ್ಪನ್ನು ಸೇವಿಸಬಹುದು. 51 ವರ್ಷಕ್ಕಿಂತ ದೊಡ್ಡವರು 1500 ಮಿಲಿಗ್ರಾಂ ಉಪ್ಪಿನ ಸೇವನೆಯನ್ನು ಮಾಡಬಹುದು. ದಿನಕ್ಕೆ 4 ರಿಂದ 5 ಗ್ರಾಂ ಉಪ್ಪು ದೇಹ ಸೇರಬೇಕಂತೆ. ಆದರೆ ಅಧ್ಯಯನದ ಪ್ರಕಾರ ಭಾರತೀಯರು ಸೇವಿಸುತ್ತಿರುವ ಪ್ರಮಾಣ ಹೆಚ್ಚಾಗಿದೆಯಂತೆ. ಇಷ್ಟೇ ಅಲ್ಲದೇ, ಅಧಿಕ ಉಪ್ಪು ಸೇವನೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಅಧಿಕ ಉಪ್ಪಿನಿಂದ ಹೃದಯಕ್ಕೂ ತೊಂದರೆಯಾಗುತ್ತೆ. ಜಾಸ್ತಿ ಉಪ್ಪು ಸೇವಿಸಿದರೇ ಮುಖದ ಕಾಂತಿಯು ಹಾಳಾಗುತ್ತದೆ.

Return to the user page of "Dechamma dechu/sandbox".