ಸದಸ್ಯರ ಚರ್ಚೆಪುಟ:ABHINANDAN M/ನನ್ನ ಪ್ರಯೋಗಪುಟ

ಸಂದೀಪ್ ಹೊಳ್ಳ 


ಮೂಲತಃ ಧರ್ಮಸ್ಥಳದ ಉಜಿರೆಯವರು. ದಿವಂಗತ ವಾಸುದೇವ ಹೊಳ್ಳಹಾಗೂ ಧನಲಕ್ಷ್ಮಿ ಹೊಳ್ಳ ದಂಪತಿಯ ಜ್ಯೇಷ್ಟ ಪುತ್ರ. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಉಜಿರೆಯ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯಲ್ಲಿ ವ್ಯಾಸಂಗಮಾಡಿದರು. ನಂತರ ತಮ್ಮ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಉಜಿರೆಯ ಎಸ್.ಡಿ.ಎಮ್ ಕಾಲೇಜಿನಲ್ಲಿ ಪೂರೈಸಿದರು. ಇವರು ಬಾಲ್ಯದಿಂದಲೂ ತಾನೊಬ್ಬ ಲೆಕ್ಕಪರಿಶೋಧಕನಾಗಬೇಕು ಎಂದು ಕನಸು ಕಂಡವರು. ಆದರೆ ಅಮ್ಮ ಕೊಡಿಸಿದ ಕ್ಯಾಮರ ಇವರಿಗಿದ್ದ ಛಾಯಚಿತ್ರಣದ ಗೀಳನ್ನು ಇನ್ನಷ್ಟು ಹೆಚ್ಚಿಸಿತು. ಈ ಗೀಳು ಸುಮ್ಮನೆ ಗೀಳಾಗಿಯೇ ಉಳಿಯಬಾರದೆಂದು ಯೋಚಿಸಿ, ಛಾಯಗ್ರಹಣದಲ್ಲಿ ಎನನ್ನಾದರು ಸಾಧಿಸಬೇಕೆಂಬ ಹೊಳಹು ಇವರಿಗೆ ಮೂಡಿತು. ಆ ಹೊಳಹನ್ನು ಬೆನ್ನೇರಿ ಅನೇಕ ಕಲ್ಲು, ಮುಳ್ಳುಗಳ ಹಾದಿಯನ್ನು ಸವೆಸಿದ ನಂತರ ಇಂದು ಒಬ್ಬ ಉತ್ತಮ ಛಾಯಚಿತ್ರಗಾರರಾಗಿದ್ದಾರೆ. ತಮ್ಮ ಕಿರಿಯವಯಸ್ಸಿನಲ್ಲಿಯೇ ಭಾರತದ  ಒಬ್ಬ ಉತ್ತಮ ಮದುವೆ ಛಾಯಚಿತ್ರಗ್ರಾಹಕ ಎಂದೆನಿಸಿಕೊಂಡಿದ್ದಾರೆ. ಇವರೆಲ್ಲಾ ಸಾಧನೆಗಳಿಗೆ ಬೆನ್ನೆಲುಬಾಗಿ, ಮಾರ್ಗದರ್ಶಕರಾಗಿ ನಿಂತವರು ಇವರ ಅಮ್ಮ ಹಾಗೂ ಗೆಳೆಯರು. ಇವರು ತೆಗೆದ ಮದುವೆ ಛಾಯಚಿತ್ರಗಳು ಹೊಳ್ಳ ಫೋಟೋಗ್ರಾಫಿ ಎಂದೇ ಪ್ರಸಿದ್ದಿ ಪಡೆದಿದೆ. ಅಲ್ಲದೆ ಇವರ ಮದುವೆ ಛಾಯಚಿತ್ರಗಳಿಗೆ ಇಲ್ಲಿಯವರೆಗೆ ಸುಮಾರು ಹಧಿನೆಂಟು ಅಂತರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಇದರಲ್ಲಿ ಹಧಿನೈದು ವೆಡಿಸನ್ ಪ್ರಶಸ್ತಿ, ಎರಡು ವೆಡ್ ಅವಾಡ್ಸ್೯ ಮತ್ತು ಒಂದು ವಲ್ಡ್೯ ಫೋಟೋಗ್ರಫಿ ಕಾಂಪಿಟೇಷನ್ ಪ್ರಶಸ್ತಿಗಳು ಸೇರಿವೆ. ಭಾರತದ ಅತಿ ದೊಡ್ಡ ಮದುವೆ ಛಾಯಚಿತ್ರ ಸ್ಪಧೆ೯ಯಲ್ಲಿ ವಗೀ೯ಯ ಹಂತದ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.  ಇವರು ಬೆಟರ್ ಪೊಟಾಗ್ರಾಫಿ ವೆಡ್ಡಿಂಗ್ ಪೋಟೋಗ್ರಾಫರ್ ಆಫ್ ದೀ ಇಯರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಯುನೈಟೆಡ್ ಕಿಂಗ್ ಡಮ್  ಮದುವೆ ಛಾಯಚಿತ್ರಗಳಿಗಾಗಿಯೇ 'ವೆಡಿಸನ್ ' ಎಂಬ ಮದುವೆ ಛಾಯಚಿತ್ರ ಸ್ಪಧೆ೯ಯನ್ನು ಏರ್ಪಡಿಸುತ್ತದೆ. ಈ ಸ್ಪಧೆ೯ಯಲ್ಲಿ ಸುಮಾರು ಪ್ರಪಂಚದ ಎಪ್ಪತ್ತನಾಲ್ಕು ದೇಶಗಳು ಸ್ಪಧಿ೯ಸಿದ್ದು ಅದರಲ್ಲಿ ಸಂದೀಪ್ ಹೊಳ್ಳರು ತೆಗೆದ ಛಾಯಚಿತ್ರವು ಬಹುಮಾನವನ್ನು ಪಡೆದಿದೆ. ಅಲ್ಲದೇ ಇವರು ವೆಡಿಸನ್ ಪ್ರಶಸ್ತಿ ಪಡೆದ ಭಾರತದ ಅತ್ಯಂತ ಕಿರಿಯ ಛಾಯಚಿತ್ರಗ್ರಾಹಕರಾಗಿದ್ದಾರೆ. ವೆಡಿಸನ್ ಅನ್ವಯ ಇವರು ಭಾರತದ ಛಾಯಚಿತ್ರ ಗ್ರಾಹಕರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.  

ಇಷ್ಟೆಲ್ಲಾ ಪ್ರಶಸ್ತಿಗಳನ್ನು ಪಡೆದಿರುವ ಇವರ ಛಾಯಗ್ರಹಣಕಲಿಕೆಗೆ ಯಾವುದೇ ಗುರುಗಳಿಲ್ಲ . ಬದಲಿಗೆ ಕಲಿಯುವ ಹಂಬಲ ಸೂಕ್ಷ್ಮಗ್ರಹಿಕೆ ಮತ್ತು ಸಾಧನೆಯಮನಸ್ಥಿತಿ ಇವರನ್ನು ಬೆಳೆಸುತ್ತಿದೆ. ಆದರೆ ಪ್ಯಾಷನ್ ಫೋಟೋಗ್ರಾಫಿಯಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿರುವ ತರುಣ್ ಕಿಹ್ವಲ್ ತಮಗೆ ಸ್ಪೂತಿ೯ ಎಂದು ಹೇಳುತ್ತಾರೆ. ಸಂದೀಪ್ ಹೊಳ್ಳರು ಬಾಲ್ಯದಲ್ಲಿ ಬಿಡಿಸುತ್ತಿದ್ದ ತಮ್ಮ ಕಲ್ಪನೆಯ ಚಿತ್ರಗಳನ್ನು ಇಂದು ತಮ್ಮ ಕ್ಯಾಮರ ಕಣ್ಣಲ್ಲಿ ನೋಡಲು ಬಯಸುತ್ತಾರೆ. ಅಲ್ಲದೇ ವನ್ಯಜೀವಿ ಛಾಯಾಚಿತ್ರಣದಲ್ಲಿ ಬಹಳಷ್ಟು ಆಸಕ್ತಿಹೊಂದಿದ್ದಾರೆ. ಅದರಲ್ಲಿಯೂ ಇವರಿಗೆ ಉರಗಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆಹಿಡಿಯುವುದೆಂದರೆ ಬಹಳ ಇಷ್ಟ. ಮುಂದೆ ವನ್ಯಜೀವಿ ಛಾಯಗ್ರಹಣ ಸ್ಪಧೆ೯ಯಲ್ಲಿ ಭಾಗವಹಿಸುವ ಇಚ್ಛೆ ಹೊಂದಿದ್ದಾರೆ. ಜನರಿಗೆ ಪ್ರೀತಿ ವಿಶ್ವಾಸ ನೀಡುವುದರ ಜೊತೆಗೆ ನಗುಮುಖದ ಸೇವೆಯನ್ನು ನೀಡುವ ಸಲುವಾಗಿ ತಮ್ಮ ಗೆಳೆಯ ವಿವೇಕ್ ಗೌಡ ಜೊತೆಯಾಗಿ ಬ್ಲಿಂಕ್ ಫಿಲ್ಮ್ಸ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದ್ದಾರೆ. ಇದರ ಮೂಲಕ ಜನರ ಅಮೂಲ್ಯ ಕ್ಷಣಗಳನ್ನು ಛಾಯಚಿತ್ರದ ಮೂಲಕ ಜೀವನ ಪರ್ಯಂತ ಕಾಪಾಡುವ ಉದ್ದೇಶವನ್ನು ಹೊಂದಿದ್ದಾರೆ.

ಸಂದಿಪ್ ಕೋಟ್ ಜನರ, ಸುಖ-ದುಃಖಗಳನ್ನು ನಮ್ಮ ಕ್ಯಾಮರ ಕಣ್ಣಲ್ಲಿ ಸೆರೆಹಿಡಿದು ಅವರ ಮುಖದಲ್ಲಿ ನಗು ಮೂಡಿಸಲು ಒಬ್ಬ ಛಾಯಗ್ರಾಹಕನಿಗೆ ಮಾತ್ರ ಸಾಧ್ಯ.ಅಲ್ಲದೇ ಛಾಯಗ್ರಾಹಕನು ತೆಗೆದ ಚಿತ್ರಗಳು ಜನರ ಕಣ್ಣಲ್ಲಿ ಸುಂದರ ನೆನಪಾಗಿ ಉಳಿದಾಗ ಛಾಯಗ್ರಾಹಕನು ಸಾರ್ಥಕ ನೆನಿಸುತ್ತಾನೆ. ಹಾಗಾಗಿ ಛಾಯಗ್ರಹಣವೂ ಕಲೆ ಇದ್ದಂತೆ.

Start a discussion about ಸದಸ್ಯ:ABHINANDAN M/ನನ್ನ ಪ್ರಯೋಗಪುಟ

Start a discussion
Return to the user page of "ABHINANDAN M/ನನ್ನ ಪ್ರಯೋಗಪುಟ".