ಸತ್ಯವ್ರತ ಶಾಸ್ತ್ರಿ
ಸತ್ಯವ್ರತ ಶಾಸ್ತ್ರಿ ಸಂಸ್ಕೃತದ ಒಬ್ಬ ವಿದ್ವಾಂಸರು. ಅವರು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿನ ಸಂಸ್ಕೃತ ಅಧ್ಯಯನದ ವಿಶೇಷ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರು. ಅವರು ಸಂಸ್ಕೃತದಲ್ಲಿ ಅನೇಕ ಕಾವ್ಯಕೃತಿಗಳನ್ನು ರಚಿಸಿದ್ದಾರೆ. ಥಾಯ್ಲೆಂಡ್ ನಲ್ಲಿನ ಹಿಂದೂ ದೇವಾಲಯಗಳು ಮತ್ತು ಸಂಸ್ಕೃತ ಶಾಸನಗಳು, ಕಾಳಿದಾಸ ಅಧ್ಯಯನ , ಯೋಗವಾಸಿಷ್ಠ ದ ವಿಮರ್ಶಾತ್ಮಕ ಕೃತಿ , ಆಗ್ನೇಯ ಏಷ್ಯಾದ ಸಂಸ್ಕೃತದ ಶಬ್ದಕೋಶ ಮತ್ತು ಆಗ್ನೇಯ ಏಷ್ಯಾದಲ್ಲಿ ರಾಮನ ಕಥೆ - ಇವು ಅವರ ಸದ್ಯದ ಸಂಶೋಧನೆಯ ಯೋಜನೆಗಳು . ಅವರು ೨೦೦೬ ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಯನ್ನು ಪಡೆದಿದ್ದಾರೆ.