ಸತ್ಯವಾಣಿ ಮುತ್ತು (೧೫ ಫೆಬ್ರವರಿ ೧೯೨೩ - ೧೧ ನವೆಂಬರ್ ೧೯೯೯) [] ಒಬ್ಬ ಭಾರತೀಯ ಮಹಿಳಾ ರಾಜಕಾರಣಿ ಮತ್ತು ತಮಿಳುನಾಡಿನ ಚೆನ್ನೈನ ಪ್ರಭಾವಿ ನಾಯಕಿಯಾಗಿದ್ದರು. ಅವರು ತಮಿಳುನಾಡಿನ ವಿಧಾನಸಭೆಯ ಸದಸ್ಯೆಯಾಗಿದ್ದರು, ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಸಚಿವೆಯಾಗಿದ್ದರು. ಅವರು ದ್ರಾವಿಡ ಮುನ್ನೇತ್ರ ಕಜ಼ಗಂ ಸದಸ್ಯರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ತಮ್ಮದೇ ಆದ ಪಕ್ಷವಾದ ತಜ್ತಪಟ್ಟೋರ್ ಮುನ್ನೇತ್ರ ಕಜ಼ಗಂ ಅನ್ನು ಪ್ರಾರಂಭಿಸಿದ್ದರು. ನಂತರ ಅಣ್ಣಾ ದ್ರಾವಿಡ ಮುನ್ನೇತ್ರ ಕಜ಼ಗಂ ಸೇರಿದ್ದರು. ೧೯೯೦ ರ ದಶಕದ ಅಂತ್ಯದಲ್ಲಿ ಅವರು ಮತ್ತೆ ಡಿಎಂಕೆಗೆ ಸೇರಿದರು.

ಸತ್ಯವಾಣಿ ಮುತ್ತು
ಜನನ15 February 1923
ವೃತ್ತಿರಾಜಕಾರಣಿ

ವಿಧಾನ ಸಭೆಯ ಸದಸ್ಯೆ

ಬದಲಾಯಿಸಿ

ದ್ರಾವಿಡ ಮುನ್ನೇತ್ರ ಕಜ಼ಗಂ (ಡಿಎಂಕೆ) ೧೯೪೯ ರಲ್ಲಿ ಪ್ರಾರಂಭವಾದಾಗಿನಿಂದ ಅವರು ಅದರ ಸದಸ್ಯರಾಗಿದ್ದರು. ೧೯೫೩ ರಲ್ಲಿ ಕುಲ ಕಲ್ವಿ ತಿಟ್ಟಂ ವಿರುದ್ಧ ಡಿಎಂಕೆಯ ಪ್ರತಿಭಟನೆಯನ್ನು ಮುನ್ನಡೆಸಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು. ೧೯೫೯-೫೮ ರ ಅವಧಿಯಲ್ಲಿ ಅವರು ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿದ್ದರು. ಅವರು ಅಣ್ಣೈ (ಲಿ. ತಾಯಿ) ನಿಯತಕಾಲಿಕದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. [] ಅವರು ೧೯೫೭ ಮತ್ತು ೧೯೭೭ಮತ್ತು ೧೯೮೪ ರ ನಡುವಿನ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಪೆರಂಬೂರ್ ಮತ್ತು ಉಲುಂದೂರ್‌ಪೇಟೆ ಕ್ಷೇತ್ರಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ೧೯೫೭ ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಪೆರಂಬೂರ್ ಕ್ಷೇತ್ರದಿಂದ ಮೂರು ಬಾರಿ ಗೆದ್ದರು. ೧೯೬೭ ಮತ್ತು ೧೯೭೧ ರ ಚುನಾವಣೆಗಳಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಅಭ್ಯರ್ಥಿಯಾಗಿದ್ದರು. [] [] [] ಅವರು ೧೯೬೨ ರ ಚುನಾವಣೆಯಲ್ಲಿ ಪೆರಂಬೂರ್ ಮತ್ತು ೧೯೭೭ ರ ಚುನಾವಣೆಯಲ್ಲಿ ಉಲುಂದೂರುಪೇಟೆ ಕ್ಷೇತ್ರದಿಂದ ಸೋತರು. [] []

ಚುನಾವಣಾ ಇತಿಹಾಸ

ಬದಲಾಯಿಸಿ
ಚುನಾವಣೆ ಕ್ಷೇತ್ರ ವಿಜೇತ ಮತಗಳು ಪಾರ್ಟಿ ರನ್ನರ್ ಅಪ್ ಮತಗಳು ಪಾರ್ಟಿ ಸ್ಥಿತಿ
೧೯೫೭ ಪೆರಂಬೂರ್ ೧) ಪಕ್ಕಿರಿಸ್ವಾಮಿ ಪಿಳ್ಳೈ
೩) ಸತ್ಯವಾಣಿ ಮುತ್ತು
೩೪,೫೭೯



೨೭,೬೩೮
ಐ‌ಎನ್‌ಡಿ



ಐ‌ಎನ್‌ಡಿ
೨) ಟಿ.ಎಸ್.ಗೋವಿಂದಸ್ವಾಮಿ



೪) ಟಿ. ರಾಜಗೋಪಾಲ್ (ಎಸ್‌ಸಿ )
೩೧,೮೦೬



೨೩,೬೮೨
ಐ‌ಎನ್‌ಸಿ



ಐ‌ಎನ್‌ಸಿ
ಗೆಲುವು
೧೯೬೨ ಪೆರಂಬೂರ್ ಡಿ.ಸುಲೋಚನಾ ೪೦,೪೫೧ ಐ‌ಎನ್‌ಸಿ ಸತ್ಯವಾಣಿ ಮುತ್ತು ೩೨,೮೦೯ ಡಿಎಂಕೆ ಸೋಲು
೧೯೬೭ ಪೆರಂಬೂರ್ ಸತ್ಯವಾಣಿ ಮುತ್ತು ೪೦,೩೬೪ ಡಿಎಂಕೆ ಡಿ.ಸುಲೋಚನಾ ೩೩,೬೭೭ ಐ‌ಎನ್‌ಸಿ ಗೆಲುವು
೧೯೭೧ ಪೆರಂಬೂರ್ ಸತ್ಯವಾಣಿ ಮುತ್ತು ೪೯,೦೭೦ ಡಿಎಂಕೆ ಡಿ.ಸುಲೋಚನಾ ೩೭,೦೪೭ ಎನ್‌ಸಿ‌ಒ ಗೆಲುವು
೧೯೭೭ ಉಲುಂದೂರುಪೇಟೆ ವಿ.ತುಲಕ್ಕನಂ ೨೬,೭೮೮ ಡಿಎಂಕೆ ಸತ್ಯವಾಣಿ ಮುತ್ತು ೧೯,೨೧೧ ಎಡಿಎಂಕೆ ಸೋಲು
೧೯೮೭ ಪೆರಂಬೂರ್ ಪರಿತಿ ಇಳಮವಝುತಿ ೫೩,೩೨೫ ಡಿಎಂಕೆ ಸತ್ಯವಾಣಿ ಮುತ್ತು ೪೬,೧೨೧ ಎಡಿಎಂಕೆ ಸೋಲು

ತಮಿಳುನಾಡು ಸಚಿವರು

ಬದಲಾಯಿಸಿ

ಅವರು ೧೯೬೭ ರಿಂದ ೧೯೬೯ ರವರೆಗೆ ತಮಿಳುನಾಡಿನ ಸಿಎನ್ ಅಣ್ಣಾದೊರೈ ಆಡಳಿತದ ಅವಧಿಯಲ್ಲಿ ಹರಿಜನ ಕಲ್ಯಾಣ ಮತ್ತು ಮಾಹಿತಿ ಸಚಿವರಾಗಿ ಸೇವೆ ಸಲ್ಲಿಸಿದರು. [] ಅವರು ಮತ್ತೆ ೧೯೭೪ ರವರೆಗೆ ಎಂ. ಕರುಣಾನಿಧಿ ಆಡಳಿತದಲ್ಲಿ ಹರಿಜನ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು. []

ತಜ್ತಪಟ್ಟೋರ್ ಮುನ್ನೇತ್ರ ಕಜ಼ಗಂ

ಬದಲಾಯಿಸಿ

ಅವರು ೧೯೭೪ ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ದ್ರಾವಿಡ ಮುನ್ನೇತ್ರ ಕಜ಼ಗಂ ತೊರೆದರು. ಸಿಎನ್ ಅಣ್ಣಾದೊರೈ ಅವರ ಮರಣದ ನಂತರ ಹರಿಜನರನ್ನು ಡಿಎಂಕೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಮತ್ತು ಹೊಸ ನಾಯಕ ಎಂ.ಕರುಣಾನಿಧಿ ಅವರು ಹರಿಜನರ ವಿರುದ್ಧ ಪೂರ್ವಾಗ್ರಹ ಹೊಂದಿದ್ದರು ಎಂದು ಅವರು ಹೇಳಿದ್ದಾರೆ. [] "ಅಂಬೇಡ್ಕರ್‌ರ ನಂತರ ಹರಿಜನರ ಹಕ್ಕುಗಳಿಗಾಗಿ ಹೊಸ ಪಕ್ಷವನ್ನು ರಚಿಸುವ ಸಮಯ ಬಂದಿದೆ. ಯಾರೂ ಕಡ್ಜಲಗಳನ್ನು ನಿಜವಾದ ಶ್ರದ್ದೆಯಿಂದ ಪರಿಗಣಿಸಿಲ್ಲ.ನಾವು ಹೊಸ ಪಕ್ಷ ಕಟ್ಟಬೇಕು, ವಿರೋಧ ಬೆಂಚಿನಲ್ಲಿ ಕೂರಬೇಕು. ಪರಿಶಿ‍‍‍‍‍‌ಷ್ಟ ಜಾತಿಯ ಹಕ್ಕುಗಳಿಗಾಗಿ ಹೋರಾಡಬೇಕು. ನಾವು ಅವಮಾನ ಮತ್ತು ಶೋ‍‍‍‍‍‍‍‍‍‍‍‍‍‍‍‍‍‍‍‍‍ಷಣೆಯ ಮುಂದುವರಿಕೆಗೆ ಅವಕಾಶ ನೀಡಬಾರದು" ಎಂಬುದು ಅವರ ನಿಲುವಾಗಿತ್ತು.


ಅವರು ತಜ್ತಪಟ್ಟೋರ್ ಮುನ್ನೇತ್ರ ಕಜ಼ಗಂ ಅನ್ನು ರಚಿಸಿದ್ದರು. ೧೯೭೭ ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರ ಪಕ್ಷವನ್ನು ಅಣ್ಣಾ ದ್ರಾವಿಡ ಮುನ್ನೇತ್ರ ಕಜ಼ಗಂನೊಂದಿಗೆ ಅದನ್ನು ವಿಲೀನಗೊಳಿಸಲಾಯಿತು. []

ಕೇಂದ್ರ ಸಚಿವೆ

ಬದಲಾಯಿಸಿ

ಅವರು ೩ ಏಪ್ರಿಲ್ ೧೯೭೮ ರಿಂದ ೨ ಏಪ್ರಿಲ್ ೧೯೮೪ ರವರೆಗೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪ್ರತಿನಿಧಿಯಾಗಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ೧೯ ಆಗಸ್ಟ್ ೧೯೭೯ ರಿಂದ ೨೩ ಡಿಸೆಂಬರ್ ೧೯೭೯ ರವರೆಗೆ ಚೌಧರಿ ಚರಣ್ ಸಿಂಗ್ ಸಚಿವಾಲಯದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ಎ. ಬಾಲಾ ಪಜಾನೋರ್ ಜೊತೆಗೆ ಅವರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಮೊದಲ ಇಬ್ಬರು ಕಾಂಗ್ರೆಸ್ಸೇತರ ದ್ರಾವಿಡ ಪಕ್ಷಗಳಾದ ತಮಿಳುನಾಡಿನ ರಾಜಕಾರಣಿಗಳಾಗಿದ್ದರು. [೧೦]

ಪುಸ್ತಕ

ಬದಲಾಯಿಸಿ
 
ಸತ್ಯವಾಣಿ ಮುತ್ತು ಅವರ ನನ್ನ ಆಂದೋಲನಗಳು ಪುಸ್ತಕದ ಮುಖಪುಟ

ಸತ್ಯವಾಣಿ ಮುತ್ತು ಅವರು ತಮ್ಮ ಹೋರಾಟಗಳನ್ನು "ಮೈ ಆಜಿಟೇಶನ್ಸ್" ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಇದನ್ನು ಮೊದಲು ೧೯೮೨ ರಲ್ಲಿ ಮದ್ರಾಸ್‌ನಲ್ಲಿ ದಿ ಜಸ್ಟೀಸ್ ಪ್ರೆಸ್ ಬಿಡುಗಡೆ ಮಾಡಿದೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Thirunavukkarasu, Ka (1999). Dravida Iyakka Thoongal (in ತಮಿಳು). Nakkeeran pathippakam.
  2. "1957 Madras State Election Results, Election Commission of India" (PDF). Election Commission of India. Retrieved 1 December 2009.
  3. "1967 Tamil Nadu Election Results, Election Commission of India" (PDF). Election Commission of India. Retrieved 1 December 2009.
  4. "1971 Tamil Nadu Election Results, Election Commission of India" (PDF). Election Commission of India. Retrieved 1 December 2009.
  5. "1962 Madras State Election Results, Election Commission of India" (PDF). Election Commission of India. Retrieved 1 December 2009.
  6. "1977 Tamil Nadu Election Results, Election Commission of India" (PDF). Election Commission of India. Retrieved 1 December 2009.
  7. India, a reference annual. Publications Division, Ministry of Information and Broadcasting. 1968. p. 447.
  8. ೮.೦ ೮.೧ Duncan Forrester (1976). "Factions and Filmstars: Tamil Nadu Politics since 1971". Asian Survey. 16 (3): 283–296. doi:10.2307/2643545. JSTOR 2643545.
  9. "Nedunchezhiyan dies of heart failure". The Hindu. 13 January 2000. Archived from the original on 5 December 2010. Retrieved 1 December 2009.{{cite news}}: CS1 maint: unfit URL (link)
  10. "The Swing Parties". Indian Express. 15 May 2009. Retrieved 1 December 2009.