ಸತ್ಯಕ್ಕ
ಸತ್ತಕ್ಕ | |
---|---|
ಜನನ | ೧೧೬೦ |
ಅಂಕಿತನಾಮ | ಶಂಭುಜಕೇಶ್ವರ |
ಸತ್ಯಕ್ಕ
ಬದಲಾಯಿಸಿಒಬ್ಬ ಪ್ರಾಮಾಣಿಕ ಸತ್ಯಸಾಧಕಿ. ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿರಳಕೊಪ್ಪದ ಬಳಿ ಹಿರೆಜಾಂಬುರಿನಲ್ಲಿ ಜನಿಸಿದರು. ಸಂಸಾರದಿಂದ ದೂರವೇ ಉಳಿಯಲು ನಿರ್ಧರಿಸಿ, ಅವಿವಾಹಿತೆಯಾಗಿಯೇ ಉಳಿದು ಆಧ್ಯಾತ್ಮ ಸಾಧನೆಗೈದ ಶಿವಶರಣೆ. ತಾನು ಲಂಚ-ವಂಚನೆಗಳಿಗೆ ಕೈಯೊಡ್ಡದವಳೆಂದೂ, ದಾರಿಯಲ್ಲಿ ಬಿದ್ದ ಅನ್ಯರ ಒಡವೆ, ವಸ್ತುಗಳನ್ನು ಮುಟ್ಟುವುದಿಲ್ಲವೆಂದು ತನಗೆ ತಾನೇ ನಿರ್ಬಂಧ ವಿಧಿಸಿ ಕೊಂಡವಳು. ಶಿವನನ್ನು ಅಂತರಂಗದ ದೈವವೆಂದು ಪರಿಗಣಿಸಿ ಅವನೊಡನೆ ಸಂಭಾಷಣೆ ನಡೆಸುತ್ತಿದ್ದಳು. 'ಏಕೆನಗೆ ಕರುಣಿಸಲೊಲ್ಲದೆ ಕಾಡಿದೆ, ಏಕೆ ಹೇಳು ಎಲೆ ಲಿಂಗವೇ ? ತಾನು ಮಾಡಿದ ತಪ್ಪೇನು?' ಎಂದು ಶಿವನನ್ನೇ ಪ್ರಶ್ನಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಶಂಭುಜಕೇಶ್ವರ".
ಅರ್ಚನೆ ಪೂಜೆ ನೇಮವಲ್ಲ
ಮಂತ್ರ-ತಂತ್ರ ನೇಮವಲ್ಲ
ಧೂಪ-ದೀಪದಾರತಿ ನೇಮವಲ್ಲ
ಪರಸ್ತೀ-ಪರದೈವಗಳಿಗೆರಗದಿಪ್ಪುದೇ ನೇಮ
ಶಂಭುಜಕೇಶ್ವರನಲ್ಲಿ ಇವನ್ನು ಕಾಣಿರಣ್ಣಾ!
ಇವೇ ನಿತ್ಯನೇಮ