ಕರ್ನಾಟಕದಲ್ಲಿ ಹಬ್ಬಗಳಲ್ಲಿ ಮಾಡುವ ಒಂದು ಬಗೆಯ ಸಿಹಿ ತಿಂಡಿ.[]

ಬೇಕಾಗುವ ಪದಾರ್ಥಗಳು

ಬದಲಾಯಿಸಿ
  • ಚಿರೋಟಿ ರವೆ -
  • ಕೊಬ್ಬರಿ(ಹಸಿ ಕಾಯಿತುರಿ)
  • ಬೆಲ್ಲ
  • ಮೈದಾಹಿಟ್ಟು ಸ್ವಲ್ಪ
  • ಕರಿಯಲು ಎಣ್ಣೆ

ತಯಾರಿಸುವ ವಿಧಾನ

ಬದಲಾಯಿಸಿ

ಮೊದಲಿಗೆ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಅದಕ್ಕೆ ಮೈದಾಹಿಟ್ಟು ಮತ್ತು ತುಪ್ಪವನ್ನು ಸುರಿದು ಚೆನ್ನಾಗಿ ಕಲಸಬೇಕು. ಈ ಮಿಶ್ರಣಕ್ಕೆ ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಂಡು, ಚೆನ್ನಾಗಿ ನಾದಬೇಕು. ಹತ್ತರಿಂದ ಹದಿನೈದು ನಿಮಿಷದವರೆಗೆ ಹಿಟ್ಟನ್ನು ನೆನೆಯಲು ಬಿಡಬೇಕು. ನಂತರ ಚಪಾತಿಯಂತೆ ಲಟ್ಟಿಸಿಕೊಂಡು ನಂತರ ಅದರಲ್ಲಿ ಹೂರಣವನ್ನು ಇಟ್ಟು , ಹಿಟ್ಟಿನ ತುದಿಯಿಂದ ಮುಚ್ಚಿ ಮತ್ತೆ ಅದನ್ನು ಲಟ್ಟಿಸಿ, ಗುಂಡನೆಯ ಆಕಾರಕ್ಕೆ ಬಂದಾಗ ಎಣ್ಣೆಯಲ್ಲಿ ಹಾಕಿ, ಗರಿಗರಿಯಾಗಿ, ಕೆಂಪು ಬಣ್ಣ ಬರುವರೆಗೂ ಕರಿಯಬೇಕು.

ಹೂರಣ ತಯಾರಿಸುವ ವಿಧಾನ

ಬದಲಾಯಿಸಿ

ಕಾಯಿತುರಿ ಹಾಗೂ ನುಣ್ಣಗೆ ಜಜ್ಜಿಕೊಂಡ ಬೆಲ್ಲವನ್ನು ಒಂದು ಬಾಣಲೆಯಲ್ಲಿ ಹಾಕಿ ಹುರಿದುಕೊಂಡು, ಬೆಲ್ಲ ಕೆಂಪಾಗಾದ ಬಳಿಕ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬೇಕು. ಈ ಮಿಶ್ರಣಕ್ಕೆಹೂರಣ ಎನ್ನುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. http://kannada.oneindia.com/festivals/ugadi/2009/0325-sajjappa-sweet-recipe.html ,ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಸಜ್ಜಪ್ಪ ,kannada.oneindia.com ,
"https://kn.wikipedia.org/w/index.php?title=ಸಜ್ಜಪ್ಪ&oldid=1049182" ಇಂದ ಪಡೆಯಲ್ಪಟ್ಟಿದೆ