ಸಂಪುಟವು ಒಂದು ಭೌತಿಕ ಪುಸ್ತಕ. ಇದನ್ನು ಮುದ್ರಿಸಿರಬಹುದು ಅಥವಾ ಕೈಯಿಂದ ಬರೆದಿರಬಹುದು. ಈ ಪದವನ್ನು ಸಾಮಾನ್ಯವಾಗಿ ದೊಡ್ಡ ಸಂಗ್ರಹದ ಭಾಗವಾದ ಒಂದು ಒಂಟಿ ಪುಸ್ತಕವನ್ನು ಗುರುತಿಸಲು ಬಳಸಲಾಗುತ್ತದೆ. ಸಂಪುಟಗಳನ್ನು ಸಾಮಾನ್ಯವಾಗಿ ಅಂಕೆಗಳಿಂದ ಅನುಕ್ರಮವಾಗಿ ಗುರುತಿಸಲಾಗುತ್ತದೆ, ಉದಾ. "ಸಂಪುಟ ೩", ಸಾಮಾನ್ಯವಾಗಿ "ಸಂ." ಎಂದು ಸಂಕ್ಷೇಪಿಸಲಾಗುತ್ತದೆ.[]

ಹಲವು ಸಂಪುಟಗಳಲ್ಲಿ ವಿಭಾಗಿಸಲಾದ ಮೊನೊಗ್ರಾಫ್‍ಗಳು

ಸಂಪುಟಗಳನ್ನು ನೇರವಾಗಿ ಪ್ರಕಟಿಸಬಹುದು, ಅಥವಾ ಅವನ್ನು ರಟ್ಟುಹಾಕಿದ ಪ್ರಕಾಶನಗಳಿಂದ ಸೃಷ್ಟಿಸಬಹುದು. ಉದಾಹರಣೆಗೆ, ಒಂದು ನಿಯತಕಾಲಿಕಕ್ಕೆ ಚಂದಾದಾರವಾಗುವ ಮತ್ತು ಅದನ್ನು ಸಂರಕ್ಷಿಸಿಡಲು ಬಯಸುವ ಒಂದು ಗ್ರಂಥಾಲಯವು ಸಂಚಿಕೆಗಳ ಸಮೂಹವನ್ನು ತೆಗೆದುಕೊಂಡು ಒಂದು ಸಂಪುಟದಲ್ಲಿ ರಟ್ಟುಹಾಕಿ ಇಡುತ್ತದೆ.[][] ಪ್ರಕಾಶಕನು ಕೂಡ ಹಿಂದೆ ಪ್ರಕಟಿಸಿದ ಸಂಚಿಕೆಗಳಿಂದ ಪ್ರತ್ಯೇಕವಾಗಿ ಒಂದು ಸಂಪುಟವನ್ನು ಪ್ರಕಟಿಸಬಹುದು; ಇದು ಚಿತ್ರವಿರುವ ಕಾದಂಬರಿಗಳಿಗೆ ಸಾಮಾನ್ಯವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. "All Experts Questions and Answers – Journalism". All Experts. Archived from the original on 2010-02-02. Retrieved 2012-11-06.
  2. BUNN, R. M. (January 1962). "BINDING OF PERIODICALS IN THE NATIONAL LENDING LIBRARY". Journal of Documentation. 18 (1): 20–24. doi:10.1108/eb026312. ISSN 0022-0418. {{cite journal}}: no-break space character in |first= at position 3 (help)
  3. SIDNEY DITZION, LEVERETT NORMAN (1956). "Problems of Periodical and Serial Binding" (PDF). Archived from the original (PDF) on 2020-11-30. Retrieved 2019-12-23. {{cite journal}}: Cite journal requires |journal= (help)
"https://kn.wikipedia.org/w/index.php?title=ಸಂಪುಟ&oldid=1128572" ಇಂದ ಪಡೆಯಲ್ಪಟ್ಟಿದೆ