ಸಂಡೂರು
ಸಂಡೂರು, 'ಬಳ್ಳಾರಿ' ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರದಲ್ಲಿ ಹೊಸಪೇಟೆ ತಾಲ್ಲೂಕು, ಪೂರ್ವದಲ್ಲಿ ಬಳ್ಳಾರಿ ತಾಲ್ಲೂಕು ಮತ್ತು ಆಂಧ್ರ ಪ್ರದೇಶ. ಆಗ್ನೇಯದಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ನೈಋತ್ಯ ಮತ್ತು ದಕ್ಷಿಣದಲ್ಲಿ ಕೂಡ್ಲಿಗಿ, ಪಶ್ಚಿಮದಲ್ಲಿ ಹೊಸಪೇಟೆ ತಾಲ್ಲೂಕು ಸುತ್ತುವರಿದಿವೆ. ತೋರಣಗಲ್ಲು, ಸಂಡೂರು, ಚೋರನೂರು-ಇವು ಹೋಬಳಿಗಳು. ಈ ಸಂಡೂರು ಬಿಸಿಲು ಸೀಮೆಯ ಮಲೆನಾಡು. ದೊರದಲ್ಲಿ ನೋಡಿದಾಗ ಕಲಾವಿದನ ಕುಂಚದಲ್ಲಿ ಚಿತ್ರೀಸಲದ ಪರ್ವತ ಶ್ರೇಣಿಗಳು ಅಪಾರವಾದ ಕಬ್ಬಿಣ ಅದಿರನ್ನು ತನ್ನ ಗರ್ಭದಲ್ಲಿ ತುಂಬಿ ಕೊಂಡಿರುವ ಬೆಟ್ಟ ಗುಡ್ಡಗಳು ಇದರ ಪಕ್ಕಕೆ ಹರಿಯುವ ನದಿ ಹಳ್ಳ ಕೊಳ್ಳಗಳ ನಿನಾದ ಇಷ್ಟೆಲ್ಲ ಪ್ರಕೃತಿ ಸೌಂದರ್ಯದ ಗಣಿಯೇ ಸಂಡೂರು. ಸೌಂದರ್ಯ ಮಯ ಸೃಷ್ಟಿಯ ನಡುವೆ ಶ್ರೀ ಕುಮಾರಸ್ವಾಮಿ ಹಾಗೂ ಶ್ರೀ ಪಾರ್ವತಿ ದೇವಿ ದೇವಾಲಯಗಳಿವೆ. ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳು ಇವೆ.
ಸಂಡೂರು
ಸಂಡೂರು | |
---|---|
ಪಟ್ಟಣ | |
Population (2001) | |
• Total | ೨೭,೬೧೪ |
ಭೌಗೋಳಿಕತೆ
ಬದಲಾಯಿಸಿಈ ತಾಲ್ಲೂಕಿನ ಸಂಡೂರು ಬೆಟ್ಟಗಳು ಅವುಗಳ ಸುತ್ತಲಿನ ವನಸಿರಿಯಿಂದ ಕೂಡಿದ ಬೇತೋಹಾರಿ ನಿಸರ್ಗಸೌಂದರ್ಯದಿಂದ, ಹಾಗೂ ,ಖನಿಜ ಸಂಪತ್ತಿನಿಂದ ಪ್ರಸಿದ್ಧವಾಗಿವೆ. ಸುಂದರ ಬೆಟ್ಟಗಳಿಂದ ಕೂಡಿದ ಸುಂದರ ನಾಡು ಈ 'ಸಂಡೂರು'. ಇಲ್ಲಿನ ಬೆಟ್ಟಗಳು ಮಲೆನಾಡಿನ ಬೇಟ್ಟಗಳಿಗೆ ಹೋಲುತ್ತವೆ. 'ಬಿಸಿಲು ಸೀಮೆಯ ಮಲೆನಾಡು'. ದೂರದಿಂದ ನೋಡಿದಾಗ ಕಲಾವಿದನ ಕುಂಚದಲ್ಲಿ ಚಿತ್ರೀಸಲದ ಪರ್ವತಗಳು ಅಪಾರವಾದ ಕಬ್ಬಿಣ ಅದಿರುರನ್ನು ತನ್ನ ಗರ್ಭದಲ್ಲಿ ತುಂಬಿಟ್ಟು ಕೊಂಡಿರುವ ನದಿ, ಹಳ್ಳ ಜುಳು ಜುಳು ನಿನಾದ ಇಷ್ಟೆಲ್ಲ ಪ್ರಕೃತಿ ಸೌಂದರ್ಯದ ಗಣಿಯೇ ಸಂಡೂರು. ಆದರೆ ಕಬ್ಬಿಣ ಅದಿರನ್ನು ಆಗೆಯುವುದರರಿಂದ ಪ್ರಕೃತಿ ನಾಶವಾಗಿದೆ.
ಆಚರಣೆಗಳು
ಬದಲಾಯಿಸಿ- ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ.
- ಬೊಮ್ಮಘಟ್ಟ ದಲ್ಲಿ ರಥೋತ್ಸವ: ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದದಶಮಿಯಂದು ರತೋತ್ಸವ ಇರುತ್ತದೆ.
- ಚಿಕ್ಕಕೇರಿಯಾಗಿನಹಳ್ಳಿ : ಶ್ರೀ ಬೇವಿನಹಳ್ಳಿ ದುರುಗಮ್ಮ ದೇವಿಯ ಜಾತ್ರೆ ಪ್ರತಿ ವರ್ಷ ಆಚರಿಸುತ್ತಾರೆ ನೂರಾರು ಭಕ್ತಾದಿಗಳು ಪಾಲ್ಗೊಂಡುತ್ತಾರೆ.
ಸೊಂಡೂರು ಭೂ ಹೋರಾಟ
ಬದಲಾಯಿಸಿಸಂಡೂರಿನ ಇತಿಹಾಸ ಮತ್ತು ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ಉಪಯುಕ್ತವಾಗುವ ಹೊಸತೊಂದು ಪುಸ್ತಕ, ೨೦೦೮ ರಲ್ಲಿ 'ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ'ದಿಂದ ಪ್ರಕಟವಾಗಿದೆ. ಆ ಪುಸ್ತಕದ ಹೆಸರು 'ಸೊಂಡೂರು ಭೂ ಹೋರಾಟ'. ಈ ಕೃತಿಯನ್ನು 'ಡಾ. ಅರುಣ್ ಜೋಳದ ಕೂಡ್ಲಿಗಿ' ಸಂಶೋಧನೆ ಮಾಡಿ ಬರೆದಿದ್ದಾರೆ. ಇದು ಕರ್ನಾಟಕದ ಸಮಾಜವಾದಿ ಹೋರಾಟಗಾರರ ಇತಿಹಾಸವನ್ನೂ ಕೂಡ ದಾಖಲಿಸುತ್ತದೆ. ಕರ್ನಾಟಕದಲ್ಲಿ ರೈತ ಹೋರಾಟ ಎಂದರೆ ಕೇವಲ ಕಾಗೋಡು ಸತ್ಯಗ್ರಹವನ್ನು ಮಾತ್ರ ಉಲ್ಲೇಖ ಮಾಡುತ್ತೇವೆ. ಆದರೆ ೧೯೭೩ ರಲ್ಲಿ 'ಸಂಡೂರಿನಲ್ಲಾದ ರೈತರ ಹೋರಾಟ' ಅಸಾಮಾನ್ಯವಾದುದು. ೧೩ ಸಾವಿರ ಎಕರೆ ಭೂಮಿಯನ್ನು ರೈತರು ಈ ಹೋರಾಟದಿಂದ ಪಡೆದರು. ಈ ಹೋರಾಟದಲ್ಲಿ ಹಿರಿಯ ಸಮಾಜವಾದಿ ನಾಯಕ, 'ಜಾರ್ಜ ಫರ್ನಾಂಡೀಸ್' ಮುಂತಾದವರು ಪಾಲ್ಗೊಂಡಿದ್ದರು. ಇದು 'ಸಂಡೂರು ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖವಾದ ಪ್ರಮುಖ ಘಟನೆಯಾಗಿದೆ'. ಈ ಸಮಗ್ರ ದಾಖಲೆಯನ್ನು 'ಅರುಣ್ ಜೋಳದ ಕೂಡ್ಲಿಗಿ'ಯವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಪ್ರಸಿದ್ಧ ವ್ಯಕ್ತಿಗಳು
ಬದಲಾಯಿಸಿಲೇಖಕ ವಸುಧೇಂದ್ರ
ಬದಲಾಯಿಸಿ'ವಸುಧೇಂದ್ರ', ಮೂಲತಃ ಸಂಡೂರಿನವರು. ವಸುಧೇಂದ್ರರವರು ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಾರರಾಗಿ, ಪ್ರಬಂಧಕಾರರಾಗಿ, ಕಾದಂಬರಿಕಾರರಾಗಿ, ಪ್ರಕಾಶಕರಾಗಿ ಗಮನ ಸೆಳೆಯುತ್ತಿದ್ದಾರೆ.
ಸಂಡೂರ್ ಶ್ರೀಕಾಂತ
ಬದಲಾಯಿಸಿ'ಸಂಡೂರಿನವರಾದ ಶ್ರೀಕಾಂತ' ರವರು 'ಸೃಜನ್' ಎನ್ನುವ ಹೆಸರಲ್ಲಿ ಕಲಾಕೃತಿಗಳನ್ನು ನಿರ್ಮಿಸುತ್ತಾ ಹೆಚ್ಚು ಪ್ರಸಿದ್ದವಾದವರು.