ತುಳುನಾಡಿನಲ್ಲಿ ಮಳೆಗಾಲದಲ್ಲಿ ಉಪಯೋಗಿಸುವ ಪ್ರಸಿದ್ಧ ಖಾದ್ಯ ಗಳಲ್ಲಿ ಒಂದು ಸಂಡಿಗೆ ಮೆಣಸು ಮುಖ್ಯ ವಾದದ್ದು.ಸಂಡಿಗೆ ಮಾಡಲು ಖಾರ ಕಡಿಮೆ ಇರುವ ಮೆಣಸನ್ನು ಉಪಯೋಗಿಸುತ್ತಾರೆ. ಖಾರ ಬಹಳ ಕಡಿಮೆ ಇರುವ ಮೆಣಸು ಇದ್ದುದರಿಂದ ಮನೆಯಲ್ಲಿ ಮಕ್ಕಳಿಗೂ ಈ ಮೆಣಸು ಇಷ್ಟ ಪಟ್ಟು ತಿನ್ನುತ್ತಾರೆ. ಊರಿನ ಮೆಣಸು , ಸಂಡಿಗೆ [] ಮೆಣಸು ಮಾಡಲು ಚೆನ್ನಾಗಿ ಬರುತ್ತದೆ.ಮಜ್ಜಿಗೆ ಸೇರಿಸಿ ಮಾಡುವ ಒಂದು ಖಾದ್ಯ.

ಬೇಕಾಗುವ ಸಾಮಗ್ರಿಗಳು

ಬದಲಾಯಿಸಿ
  • ಹಸಿಮೆಣಸು - 1/2 kg (ಖಾರ ಕಡಿಮೆ ಇದ್ದರೆ ಒಳ್ಳೆಯದು)
  • ಉಪ್ಪು - ರುಚಿಗೆ ತಕ್ಕಷ್ಟು
  • ಗಟ್ಟಿ ಮೊಸರು ಅಥವಾ ದಪ್ಪ ಮಜ್ಜಿಗೆ - 2 ಕಪ್ (ಅಂದಾಜು)
  • ಉದ್ದಿನಬೇಳೆ - 2 ಟೀ ಚಮಚ
  • ಮೆಂತ್ಯ - 4 ಅಥವಾ 5 ಕಾಳುಗಳು
  • ಜೀರಿಗೆ - 1/2 ಟೀ ಚಮಚ
  • ಇಂಗು - 1/4 ಟೀ ಚಮಚ
  • ನಿಂಬೆರಸ (ಬೇಕಿದ್ದರೆ) - ರುಚಿಗೆ ತಕ್ಕಷ್ಟು
  • ನೀರು - ಸ್ವಲ್ಪ

ಸಂಡಿಗೆ ಮೆಣಸಿನಕಾಯಿ ತಯಾರಿಸುವ ವಿಧಾನ

ಬದಲಾಯಿಸಿ

ಹಸಿಮೆಣಸನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಂಡು.ಒಂದೊಂದೇ ಹಸಿಮೆಣಸನ್ನು ತೆಗೆದುಕೊಂಡು ಚಾಕುವಿನಿಂದ ಮೆಣಸಿನ ಮಧ್ಯಭಾಗದಲ್ಲಿ ಮಾತ್ರ ಸೀಳು ಮಾಡಿಕೊಳ್ಳಿ. ಹೀಗೆ ಸೀಳುವುದರಿಂದ ಮಜ್ಜಿಗೆ ಮಿಶ್ರಣವನ್ನು ಹೀರಿಕೊಳ್ಳಲು ಸುಲಭವಾಗುತ್ತದೆ. ಒಂದು ಪಾತ್ರೆಯಲ್ಲಿ 4 - 5 ಕಪ್ ಅಥವಾ ಎಲ್ಲ ಹಸಿಮೆಣಸು ಮುಳುಗುವಷ್ಟು ನೀರು ಹಾಕಿಕೊಂಡು . ನೀರು ಬಿಸಿಯಾಗಿ ಕುದಿಯತೊಡಗಿದಾಗ ಇದಕ್ಕೆ ಸೀಳಿದ ಹಸಿಮೆಣಸನ್ನು ಹಾಕಿ ಕೈಯಾಡಿಸಿ. ಅರ್ಧ ನಿಮಿಷದ ನಂತರ ನೀರನ್ನು ಬಸಿದು, ಹಸಿಮೆಣಸನ್ನು ಒಣ ಬಟ್ಟೆ ಅಥವಾ ಪೇಪರ್ ಟವೆಲ್ ಮೇಲೆ 15 ನಿಮಿಷ ಹರವಿ. ಹಸಿಮೆಣಸನ್ನು ಒಂದು ಪ್ಲೇಟ್ ನಲ್ಲಿ ಹರವಿ ಮೇಲಿನಿಂದ ಒಂದು ತೆಳ್ಳಗಿನ ಬಟ್ಟೆ ಮುಚ್ಚಿ ಎರಡು ದಿನ ಬಿಸಿಲಿನಲ್ಲಿ ಒಣಗಿಸಿ, ನಂತರ ಮಜ್ಜಿಗೆಮಜ್ಜಿಗೆಯಲ್ಲಿ ನೆನೆಸಿ.

ಮಜ್ಜಿಗೆ ತಯಾರಿಕೆ

ಬದಲಾಯಿಸಿ

ಎರಡನೇ ದಿನ ಈ ಕೆಳಗಿನಂತೆ ಮಜ್ಜಿಗೆ ತಯಾರಿಸಿಕೊಂಡು ಉದ್ದಿನಬೇಳೆಉದ್ದಿನ ಬೇಳೆ, ಮೆಂತ್ಯ, ಇಂಗು ಮತ್ತು ಜೀರಿಗೆಯನ್ನು ಪರಿಮಳ ಬರುವಂತೆ ಹುರಿದು ನುಣ್ಣಗೆ ಪುಡಿಮಾಡಿಕೊಂಡು ಈ ಮಸಾಲೆ ಪುಡಿಯನ್ನು ಮೊಸರಿಗೆ ಸೇರಿಸಿ. ಮೊಸರನ್ನು ಮಿಕ್ಸಿಯಲ್ಲಿ ಎರಡು ನಿಮಿಷ ತಿರುವಿಕೊಂಡು.ತಯಾರಾದ ದಪ್ಪನೆಯ ಮಜ್ಜಿಗೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.ಮೊಸರು ಹುಳಿ ಇದ್ದಷ್ಟು ಉತ್ತಮ; ಹುಳಿ ಕಡಿಮೆ ಇದ್ದರೆ ಸ್ವಲ್ಪ ನಿಂಬೆರಸ ಸೇರಿಸಿ. ಎರಡು ದಿನ ಬಿಸಿಲಿನಲ್ಲಿ ಒಣಗಿಸಿದ ಹಸಿಮೆಣಸನ್ನು ಎರಡನೇ ದಿನ ಸಂಜೆ ಮಜ್ಜಿಗೆ ಮಿಶ್ರಣದಲ್ಲಿ ನೆನೆಸಿ. ಮಾರನೇದಿನ ಬೆಳಿಗ್ಗೆ ಮೆಣಸನ್ನು ಮಜ್ಜಿಗೆಯಿಂದ ತೆಗೆದು ಪ್ಲೇಟ್ ನಲ್ಲಿ ಹರವಿ, ತೆಳ್ಳಗಿನ ಬಟ್ಟೆ ಮುಚ್ಚಿ ಬಿಸಿಲಿನಲ್ಲಿ ಒಣಗಿಸಿ. ಮಜ್ಜಿಗೆಯನ್ನು ಹಾಗೇ ಇಡಿ. ಸಂಜೆ ಪುನಃ ಮೆಣಸನ್ನು ಮಜ್ಜಿಗೆ ಮಿಶ್ರಣದಲ್ಲಿ ನೆನೆಸಿಡಿ. ಮಜ್ಜಿಗೆ ಮಿಶ್ರಣ ಖಾಲಿಯಾಗುವವರೆಗೂ ಹೀಗೇ ಮಾಡಿ. ಮಜ್ಜಿಗೆಯೆಲ್ಲ ಖಾಲಿಯಾಗಿ ಮೆಣಸು ಒಣಗಿ ಗರಿಗರಿಯಾಗುವವರೆಗೂ ಚೆನ್ನಾಗಿ ಒಣಗಿಸಿ. ತಯಾರಾದ ಸಂಡಿಗೆ ಮೆಣಸನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವರ್ಷಗಟ್ಟಲೆ ಚೆನ್ನಾಗಿರುತ್ತದೆ.

ಮೆಣಸನ್ನು ಕರಿಯುವ ಬಗೆ

ಬದಲಾಯಿಸಿ

ಒಂದು ಚಿಕ್ಕ ಬಾಣಲೆಯಲ್ಲಿ 3 - 4 ಚಮಚ ಎಣ್ಣೆ ಬಿಸಿಮಾಡಿ ಇದಕ್ಕೆ 5 - 6 ಸಂಡಿಗೆ ಮೆಣಸು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿಯಬೇಕು. ಅನ್ನ - ಮೊಸರಿನೊಡನೆ ಸಂಡಿಗೆ ಮೆಣಸು ಬಹಳ ರುಚಿಯಾಗಿರುತ್ತದೆ.

ಉಲ್ಲೇಖ

ಬದಲಾಯಿಸಿ
  1. Kalluraya, Smitha (ಮೇ 4, 2016). "SANDIGE MENASU ( BALAKA) / SUNDRIED CURD CHILLIES / MOR MILAGAI".