(೧೯೪೫, ಜುಲೈ, ೮-೨೦೧೩, ಆಗಸ್ಟ್, ೮)

ಚಿತ್ರ:S Shetty.jpg
'ಡಾ. ಸಂಜೀವ ಶೆಟ್ಟಿ'

'ಡಾ.ಸಂಜೀವ ಶೆಟ್ಟಿಯವರು,[] ಕನ್ನಡ ಪ್ರಚಾರಕ,ಪರಿಚಾರಕ, ಸಾಹಿತಿಯಾಗಿ ಮುಂಬಯಿ ಮಹಾನಗರದ ವಿದ್ಯಾವಿಹಾರ್ ಉಪನಗರದ 'ಸೊಮೈಯ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ'ರಾಗಿ ಕೆಲಸಮಾಡಿ, ಸೇವಾನಿವೃತ್ತರಾದರು.

ಜನನ, ವಿದ್ಯಾಭ್ಯಾಸ, ಮತ್ತು ವೃತ್ತಿ ಜೀವನ

ಬದಲಾಯಿಸಿ

'ಸಂಜೀವ ಶೆಟ್ಟಿಯವರು, ದಕ್ಷಿಣ ಕನ್ನಡ ಜಿಲ್ಲೆಯ ಕುಬೆವೂರಿನ ರಾಯರ ಬೆಟ್ಟು ಮನೆಯ ಕಿಟ್ಟು ಶೆಟ್ಟಿ, ಹಾಗು ಸಾಧು ಕೆ. ಶೆಟ್ಟಿ ದಂಪತಿಗಳ ೬ ನೆಯ ಮಗನಾಗಿ ೧೯೪೫ ರ, ಜುಲೈ ೮ ರಲ್ಲಿ ಜನಿಸಿದರು. ಬಾಲ್ಯದಲ್ಲೇ ತಂದೆಯವರನ್ನು ಕಳೆದುಕೊಂಡರು. ತಾಯಿಯ ಆಶ್ರಯದಲ್ಲಿ ಮುದರಂಗಡಿ ಪಿಲಾರು ಪಾಪುಕಡೆ ಮನೆತನದ ಬಾಲಕ ಸಂಜೀವ ಶೆಟ್ಟಿಯವರ ವಿದ್ಯಾಭ್ಯಾಸ, ಕಿಲ್ಪಾಡಿ,ಕುಬೇವುರು ಹಾಗು ಮುಲ್ಕಿಯಲ್ಲಿ ನಡೆಯಿತು. ೮ ನೆಯ ತರಗತಿಯ ನಂತರ ೧೯೬೧ ರಲ್ಲಿ ಮುಂಬಯಿ ಮಹಾನಗರಕ್ಕೆ ಬಂದರು. ಪರೇಲ್ ಉಪನಗರದ 'ಕನ್ನಡ ಪ್ರೋಗ್ರೆಸಿವ್ ರಾತ್ರಿ ಶಾಲೆ'ಯಲ್ಲಿ ಕಲಿಕೆ ಆರಂಭಿಸಿದರು. ಹಗಲಿನಲ್ಲಿ ಹೋಟೆಲ್ ನಲ್ಲಿ ಕೆಲಸಮಾಡಿ ರಾತ್ರಿ ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸಿದರು. ಎಸ್.ಎಸ್.ಸಿ ಯ ನಂತರ, 'ನೇವಲ್ ಡಾಕ್ ಯಾರ್ಡ್ ವೆಪೆನ್ಸ್ ಡಿಪಾರ್ಟ್ ಮೆಂಟ್ ನ ಆಫೀಸಿ'ನಲ್ಲಿ ಸನ್.೧೯೬೬-೭೩ ರ ವರೆಗೆ ಕಾರಕೂನನಾಗಿ ದುಡಿದರು. ಅದೇ ಸಮಯದಲ್ಲಿ 'ವಿಲೇಪಾರ್ಲೆಯ ಕಾಲೇಜ್' ನಲ್ಲಿ ಕನ್ನಡ ಮತ್ತು ಅರ್ಥಶಾಸ್ತ್ರ ವನ್ನು ವಿಶೇಷ ಅಧ್ಯಯನವಾಗಿ ಆರಿಸಿಕೊಂಡು ಮುಂಬಯಿ ವಿ ವಿ ಯಿಂದ ೧೯೭೧ ರಲ್ಲಿ ಬಿ. ಎ. ಪದವಿ ಗಳಿಸಿದರು. ೧೯೭೩ ರಲ್ಲಿ ಎಮ್.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಗಳಿಸಿದರು. ೧೯೭೩ ರಲ್ಲಿ ನೇವಲ್ ಡಾಕ್ ಯಾರ್ಡ್ ಕಚೇರಿಗೆ ರಾಜಿನಾಮೆ ಸಲ್ಲಿಸಿ, ವಿದ್ಯಾವಿಹಾರ್ ನ, ಕೆ. ಜೆ. ಸೋಮಯ್ಯ ಕಾಲೇಜಿನ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ೧೯೮೦ ರ ವರೆಗೆ ಅರೆಕಾಲಿಕ ಉಪನ್ಯಾಸಕಾರರಾಗಿಯೂ ನಂತರ ಪೂರ್ಣಾವಧಿ ಉಪನ್ಯಾಸಕಾರರಾಗಿ ಬಢ್ತಿ ದೊರೆಯಿತು. ೧೯೭೩-೭೬ ರವರೆಗೆ 'ಅಂಧೇರಿಯ ಚಿನೈ ಕಾಲೇಜ್' ಮತ್ತು 'ದಾದರ್ ನ ಕೀರ್ತಿ ಕಾಲೇಜ್' ನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸಮಾಡಿದರು. ೧೯೯೪ ರಲ್ಲಿ ಮುಂಬಯಿ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದರು. 'ಲಕ್ಷ್ಮೀಶನ ಜೈಮಿನಿ ಭಾರತ ಕಥಾವಸ್ತು -ವಿವೇಚನೆ' ಎಂಬ ವಿಷಯವನ್ನು ಮಹಾ ಪ್ರಬಂಧಕ್ಕೆ ಆರಿಸಿಕೊಳ್ಳಲಾಗಿತ್ತು. ಇದನ್ನು ಮಾರ್ಗದರ್ಶನ ಮಾಡಿದ ಗುರುಗಳಲ್ಲಿ ಮೊದಲು 'ಡಾ ಬ್ಯಾತನಾಳರು'; ನಂತರ 'ಡಾ ತಾಳ್ತಜೆ ವಸಂತ ಕುಮಾರ್' ಸೇರಿದ್ದರು. ೧೯೮೯ ರಿಂದ ಮುಂಬಯಿ ವಿಶ್ವವಿದ್ಯಾಲಯದ 'ಎಮ್. ಫಿಲ್ ವಿದ್ಯಾರ್ಥಿಗಳಿಗೆ' ಹಾಗೂ ೧೯೯೧ ರಿಂದ 'ಪಿ. ಎಚ್. ಡಿ.. ವಿದ್ಯಾರ್ಥಿಗಳಿಗೆ 'ಮಾರ್ಗದರ್ಶನ ಮಾಡಿದರು.

ಕೃತಿಗಳು

ಬದಲಾಯಿಸಿ
  • ಮನ ಮಿಡಿಯುತ್ತಿದೆ,
  • ತರಂಗ,
  • ಚುಟುಕು ಮಲ್ಲಿಗೆ
  • ಹಸಿದವರು
  • ಸ್ನೇಹದ ನೆಲದಲ್ಲಿ
  • ಫ್ಯಾಶನ್
  • ಚುಟುಕು ರಶ್ಮಿ,

ಇತ್ಯಾದಿ ಕವನ ಸಂಕಲನಗಳನ್ನೂ,'ಸಮುದಾಯದ ಆತಂಕ', 'ಚರಿತ್ರೆಯ ವಾಸ್ತವಿಕತೆ'ಗಳನ್ನು ಬಯಲಿಗೆಳೆದು, ಜನಪರ ಆಶಯಗಳನ್ನು ತಮ್ಮ ಸಂಕಲನಗಳಲ್ಲಿ ವ್ಯಕ್ತಪಡಿಸಿದ್ದಾರೆ.

  • ಬರೆ ನೆರಳು (ಕತೆಗಳು),
  • ಅಭಿವ್ಯಕ್ತಿ (ಪ್ರಬಂಧ),
  • ಕೃತಿ ರಶ್ಮಿ (ವಿಮರ್ಶಾತ್ಮಕ ಲೇಖನಗಳು)
  • 'ಸಾಧಕರು' (ಸಂಶೋಧನೆ)
  • ಇವರ ಬದುಕಿನ ಕುರಿತಂತೆ 'ಚೇತನ' ಇನ್ನಿತರ ರಚನೆಗಳು ಹೊರಬಂದಿವೆ.

ಹಲವಾರು ಸಂಘ-ಸಂಸ್ಥೆಗಳ ಸಂಪರ್ಕದಲ್ಲಿ

ಬದಲಾಯಿಸಿ

'ಕನ್ನಡ ಪ್ರಚಾರ ಸಮಿತಿಯ ಸಂಸ್ಥಾಪಕ'ರಾಗಿ ,'ಚುಟುಕು ಸಾಹಿತ್ಯ ಪರಿಷತ್ತು' (ಮಹಾರಾಷ್ಟ್ರ ಘಟಕದ ಸಂಸ್ಥಾಪಕ ಅಧ್ಯಕ್ಷರಾಗಿ), 'ಕನ್ನಡ ಸಾಹಿತ್ಯ ಸಂಗಮದ ಸ್ಥಾಪಕರಲ್ಲೋಬ್ಬರಾಗಿ', ಸೃಜನಶೀಲ ಕವಿಯಾಗಿ, 'ಸಮಾಜ ಸೇವಕ'ನಾಗಿ, ೮ ವರ್ಷಗಳ ಕಾಲ 'ಬಂಟರ ವಾಣಿ ಪತ್ರಿಕೆ'ಯ ಸಂಪಾದಕರಾಗಿ ದುಡಿದಿದ್ದಾರೆ. 'ಕನ್ನಡ ಪ್ರಚಾರಕ,' 'ಜನಪರ ಕಾಳಜಿಯ ಸಮರ್ಥ ಬರಹಗಾರ'. ಅನ್ಯಾಯದ ವಿರುದ್ಧ ದನಿ ಎತ್ತುವ ಸ್ವಭಾವದವರಾಗಿದ್ದರು.

 
'ಪ್ರೊ. ಭವಾನಿಯವರು, ಪ್ರೊ. ಸಂಜೀವ ಶೆಟ್ಟಿಯವರನ್ನು ಗೌರವಿಸುತ್ತಿರುವುದು'

ಖ್ಯಾತ ಶಿಕ್ಷಣ ತಜ್ಞ, ಹಿರಿಯ ಸಾಹಿತಿ, ಮುಂಬಯಿನ ಉಪನಗರವಾದ 'ವಿದ್ಯಾವಿಹಾರ್' ನ 'ಕೆ.ಜೆ.ಸೋಮಯ್ಯ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯ'ದ 'ಕನ್ನಡ ವಿಭಾಗದ ಮಾಜೀ ಮುಖ್ಯಸ್ಥ' ರಾಗಿ ಕೆಲಸಮಾಡಿ ನಿವೃತ್ತರಾಗಿರುವ, 'ಡಾ. ಸಂಜೀವ ಶೆಟ್ಟಿ'ಯವರಿಗೆ, 'ಮುಂಬಯಿನ ಸೇವಾಭಾರತಿ ಸಂಸ್ಥೆ'ಯವರು ತಮ್ಮ 'ರಜತಮಹೋತ್ಸವ ಸಂದರ್ಭ'ದಲ್ಲಿ, 'ಜೀವನದ ಸಾಧನೆಯ ಕಾವ್ಯ ಭಾರತಿ ಪ್ರಶಸ್ತಿ' ಯನ್ನು ಡಿಸೆಂಬರ್, ೭ ರಂದು ಮಂಗಳವಾರ ಸಾಯಂಕಾಲ, ೩ ಗಂಟೆಗೆ 'ಮೀರಾರೋಡ್ ಪೂರ್ವ'ದಲ್ಲಿರುವ ಬಿ- ೩೦೬ 'ಐರೈಸಾ ಅಪಾರ್ಟ್ಮೆಂಟ್', 'ಆರ್.ಬಿ.ಕೆ. ಶಾಲೆ'ಯ ಪಕ್ಕದಲ್ಲಿ 'ಕನಕೀಯ ಪೋಲೀಸ್ ಸ್ಟೇಷನ್' ನ ಹತ್ತಿರ, ಪ್ರದಾನಮಾಡಲಾಯಿತು.

ಡಾ. ಸಂಜೀವಶೆಟ್ಟರು, ಅವಿವಾಹಿತರು. ತಮ್ಮ ಸೋದರಿಯ ಕುಟುಂಬದ ಜೊತೆ ವಾಸಿಸುತ್ತಿದ್ದರು. ೬೮ ವರ್ಷ ಪ್ರಾಯದ ಶಿಕ್ಷಣ ತಜ್ಞ, ಡಾ ಸಂಜೀವ ಶೆಟ್ಟಿಯವರು ಅಲ್ಪಕಾಲ ಅಸೌಖ್ಯದಿಂದ ನರಳುತ್ತಿದ್ದು ಮೀರಾ ರೋಡ್ ನ 'ಉಮ್ರಾವ್ ಆಸ್ಪತ್ರೆ'ಯಲ್ಲಿ ಸನ್. ೨೦೧೩ ರ, ಆಗಸ್ಟ್ ೮ ರ ಬೆಳಿಗ್ಯೆ, ನಿಧನರಾದರು. ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ, 'ಮೀರಾ ರೋಡ್ ನ ಚಿತಾಭೂಮಿ'ಯಲ್ಲಿ ನೆರೆವೇರಿತು.

ಉಲ್ಲೇಖಗಳು

ಬದಲಾಯಿಸಿ

<References >/