ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಯೇನೆಕಲ್ಲು

ಪೀಠಿಕೆ

ಬದಲಾಯಿಸಿ

ಇದು ದಕ್ಷಿಣಕನ್ನಡ ಜಿಲ್ಲೆಯ ಸುಪ್ರಸಿದ್ದ ದೇವಾಲಯ.ಮಂಗಳೂರಿನಿಂದ ೧೧೦ ಕಿಲೋಮೀಟರ್ ಹಾಗೂ ತಾಲೂಕು ಕೇಂದ್ರವಾದ ಸುಳ್ಯದಿಂದ ೫೦ ಕಿಲೋಮೀಟರ್ ದೂರದಲ್ಲಿದೆ.ನಾಗರಾಧನೆ ಇಲ್ಲಿನ ವಿಶೇಷತೆ.ಬಚ್ಚನಾಯಕನ ಗುಡಿ, ಅತಿಶಯ ಕ್ಷೇತ್ರ ಇಲ್ಲಿನ ಸ್ಥಳ ಸಾನಿದ್ಯಗಳು.

 
ಶ್ರೀ ಉಳ್ಳಾಕುಲು ಉಳ್ಳಾಳ್ತಿ ಹಾಗೂ ಬಚ್ಚನಾಯಕ ದೈವಸ್ಥಾನ

ದೇವಾಲಯದ ಪುರಾತನ ಇತಿಹಾಸ

ಬದಲಾಯಿಸಿ

ಹಿಂದೆ ಈ ಪ್ರದೇಶದಲ್ಲಿ ತಪಸ್ವಿಯೋರ್ವನಿಗೆ ಶಂಖಪಾಲನು ಪ್ರತ್ಯಕ್ಷಗೊಂಡು ಅವಿರ್ಭವಿಸಿನೆಂಬುದು ಇಲ್ಲಿನ ಪ್ರತೀತಿ. ಇದಲ್ಲದೇ ಜಾನಪದೀಯ ನಂಬುಗೆಯಲ್ಲಿ ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದಂತೆ ರೋಚಕ ಕಥೆಯೊಂದಿದೆ.ರಾಜಾಳ್ವಿಕೆಯ ಆ ದಿನಗಳಲ್ಲಿ ಯೇನೆಕಲ್ಲು ಪ್ರದೇಶವು ಪಂಜದ ಬಲ್ಲಾಳನ ಆಳ್ವಿಕೆಗೆ ಒಳಪಟ್ಟಿತ್ತು. ಪಂಜದ ಬಲ್ಲಾಳನು ಅಳಿಯಕಟ್ಟಿನ ಪ್ರಕಾರ ತನ್ನಿಬ್ಬರು ತಂಗಿಯಂದಿರಿಗೆ ತನ್ನ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳಲ್ಲಿ ಸ್ವಲ್ಪ ಭಾಗವನ್ನು ನೀಡಿದನು. ಇದರಲ್ಲಿ ಪಂಜ ಸೀಮೆಯು ಅಕ್ಕನ ಆಡಳಿತಕ್ಕೂ, ಯೇನೆಕಲ್ಲಿನ ಐದು ಪ್ರದೇಶಗಳು ತಂಗಿಯ ಆಡಳಿತಕ್ಕೂ ಸೇರಿತ್ತು.ಯೇನೆಕಲ್ಲಿನಿಂದ ಸುಮಾರು ೧೦ ಕಿಲೋಮೀಟರ್ ದೂರದಲ್ಲಿ ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ಸೀಮೆ ದೇವಸ್ಥಾನವಿದೆ. ಆ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವನ್ನು ಅವರಿಬ್ಬರು ಸೇರಿಕೊಂಡು ನಡೆಸುವುದು ಒಪ್ಪಂದವಾಗಿತ್ತು.ಆದ್ರೆ ಒಮ್ಮೆ ತಂಗಿಯ ಆಗಮನ ಸಮಯ ಮೀರಿತೆಂಬ ಕಾರಣದಿಂದ ಅಕ್ಕ ಕೊಡಿಯೇರಿಸಿ ಉತ್ಸವಕ್ಕೆ ಚಾಲನೆ ನೀಡಿದಳು. ಇದು ಅವರಿಬ್ಬರ ಮನಸ್ತಾಪಕ್ಕೆ ಕಾರಣವಾಯಿತು.ಅವಮಾನಿತಳಾಗಿ ತನ್ನ ಗಂಡನೊಂದಿಗೆ ಹಿಂದುರಿಗಿದ ತಂಗಿ ದೇವರ ಮೊರೆ ಹೋದಳು.ಮುಂದೊಂದು ದಿನ ಬೀಡಿನ ಸಮೀಪದ ಬಯಲ ಪೊದೆಯಲ್ಲಿ ಸಾಮಾನ್ಯವಾಗಿ ಬೆಳೆದ ಹುತ್ತವೊಂದಕ್ಕೆ ಬೀಡಿನ ಕಪಿಲೆ ಮೊಲೆಹಾಲೂಣಿಸುವುದನ್ನು ಪಂಜದ ಬಲ್ಲಾಳನು ಪ್ರತ್ಯಕ್ಷವಾಗಿ ಕಂಡನು.ನಂತರ ಈತ ಶಂಖಪಾಲ ಸ್ವಾಮಿಯನ್ನು ಯೇನೆಕಲ್ಲಿನಲ್ಲೇ ಪ್ರತಿಷ್ಠಾಪಿಸಿದನು ಎಂಬ ಪ್ರತೀತಿಯು ಇದೆ.

 
ಅತಿಶಯ ಕ್ಷೇತ್ರ

ದೇವಾಲಯದ ಪುರಾತನ ಮೂರ್ತಿಶಿಲ್ಪ ಹಾಗೂ ವಿಗ್ರಹಗಳು

ಬದಲಾಯಿಸಿ

ಬದಿವನ ಎಂಬಲ್ಲಿ ತಲಕಾಡು ಗಂಗರ ರಾಜಾಲಾಂಛಣದಿಂದ ಕೂಡಿದ್ದ ದಂಬೆಕಲ್ಲು ಇದೆ.ನಡುಗಲ್ಲು ಎಂಬಲ್ಲಿ ಸ್ತಂಭಕಲ್ಲು ಇದ್ದು ಈಗ ಇಲ್ಲವಾಗಿದೆ.ಅಲ್ಲದೇ ಕಡಮಕಲ್ಲು ಎಂಬ ಊರಿನಲ್ಲಿಯೂ ಸ್ತಂಭಕಲ್ಲೊಂದಿದ್ದು ಇದು ಸುಬ್ರಹ್ಮಣ್ಯ ಗ್ರಾಮವನ್ನು ವಿಭಜಿಸುವ ತಲಕಾಡಿನ ಗಂಗರ ರಾಜ್ಯಾವಿಸ್ತಾರದ ಕಲ್ಲುಗಳು ಎಂಬುದಾಗಿ ಪ್ರಸಿದ್ಧವಾಗಿದೆ.ಈ ದೇವಾಲಯದ ಪೂರ್ವಕ್ಕೆ ಮುತ್ಲಾಜೆ-ಕಲ್ಕುದಿ ಬೈಲಿನ ಎತ್ತರದ ಭೂತೊಳೆ ಗುಡ್ಡದ ತುತ್ತತುದಿಯಲ್ಲಿ ಲಿಂಗಮುದ್ರೆಯಿದೆ.ಈ ಕಲ್ಲಿನಲ್ಲಿ ಸೂರ್ಯ-ಚಂದ್ರರ ಸಾಕ್ಷಿಯಾಗಿ ಶಿವಲಿಂಗದ ಉಬ್ಬು ಚಿತ್ರಣವಿದೆ.ಪಶ್ಚಿಮಕ್ಕೆ ಬಾನಡ್ಕ,ಎಣ್ಣೆಮಜಲು ಕಾಡಿನ ಮಧ್ಯದಲ್ಲಿ ಬೀರಿಕಾಡು ಎಂಬಲ್ಲಿಯೂ ಇದೇ ಶಿವಲಿಂಗದ ಮುದ್ರೆಯಿದೆ.ನೈರುತ್ಯಕ್ಕೆ ನವಿಲುಮುದ್ರೆಯಿದ್ದು ಇದರಲ್ಲಿ ಸೂರ್ಯ-ಚಂದ್ರರ ಸಾಕ್ಷಿಯಲ್ಲಿ ಬರಹವಿದ್ದು,ಚಿ|ರಾ||ರಾಜದೇವರಾಜ ಋಷಿ ಪೀಠಂ ಎಂಬ ಶಿಲಾಫಲಕವಿದೆ.ಈಗ ಇದು ಅಧ್ಯಯನಕ್ಕೆ ಪೂರಕವಾಗಿ ಮಂಗಳೂರು ವಿವಿ ಯಲ್ಲಿದೆ. ಈಗಿನ ಪರ್ಲ.ಹೊಸಂಗಡಿಯಲ್ಲಿ ಜೈನರ ಬಸದಿ ಹಾಗೂ ಪಾರ್ಶ್ವನಾಥನ ವಿಗ್ರಹದಲ್ಲಿ ಐದು ಹಡೆಯ ಸರ್ಪ ಹಾಗೂ ಮೌನ ವ್ರತಸ್ಥ ಶಿಲಾವಿಗ್ರಹವು ಇದೆ.ಉಜಿರ್ಕೋಡಿ ಎಂಬಲ್ಲಿ ಮಂಟಮೆ ಎಂದು ಕರೆಯಲ್ಪಡುವ ಕಟ್ಟೆಯೊಂದಿದ್ದು,ಹಿಂದಿನ ಕಾಲದ ನ್ಯಾಯ ತೀರ್ಮಾನದ ಕಟ್ಟೆಯಂತೆ ಕಂಡುಬರುತ್ತದೆ.

ಸ್ಥಳ ಸಾನಿಧ್ಯಗಳು

ಬದಲಾಯಿಸಿ

ಈ ಪ್ರದೇಶದಲ್ಲಿ ನಾಗರಾಧನೆಗೆ ವಿಶೇಸವಾದ ಪ್ರಾಶಸ್ತ್ಯವಿದೆ.ದೇವಸ್ಥಾನಕ್ಕೆ ಸಂಬಂಧಪಟ್ಟಿರುವ ನಾಗಸ್ಥಾನ ದೇವಾಸ್ಥಾನದ ವಾಯುವ್ಯ ದಿಕ್ಕಿನಲ್ಲಿಯೂ, ಮದುವೆ ಬದುವಿನಲ್ಲಿಯೂ ಇದೆ.ದೈವಸ್ಥಾನಕ್ಕೆ ಸಂಬಂಧಪಟ್ಟ ನಾಗಸ್ಥಾನ ದಕ್ಷಿಣದಿಕ್ಕಿನಲ್ಲಿಯೂ ಇದೆ.

ಅತಿಶಯ ಕ್ಷೇತ್ರ

ಬದಲಾಯಿಸಿ

ದೇವರಮೀನು,ಮಹಾಶಿರ ಹೀಗೆ ಹಲವು ತೆರನಾದ ಮೀನುಗಳು ಕಣ್ಮನವನ್ನು ಸೆಳೆಯುತ್ತವೆ.ಇದನ್ನು ಕಾಪುಕಾಯ ಎಂತಲೂ ದೇವರಗುಂಡಿ ಎಂತಲೂ ಕರೆಯುತ್ತಾರೆ.

ಬಚ್ಚನಾಯಕ ಹಾಗೂ ಉಳ್ಳಾಕುಲು ಉಳ್ಳಾಳ್ತಿ ದೈವಸ್ಥಾನ

ಬದಲಾಯಿಸಿ

ವಿಶೇಷ ಪೂಜೆಗಳು

ಬದಲಾಯಿಸಿ

ಧನುಪೂಜೆ

ಬದಲಾಯಿಸಿ

ಇದು ಧನುಮಾಸದಲ್ಲಿ ನಡೆಯುವ ಪೂಜೆ. ಹಿಂದೆ ವನಶಾಸ್ತವು ಪೂಜೆ, ವನಪೂಜೆ ನಡೆಯುತ್ತಿತ್ತು.

ಕೆಡ್ಡೆಸ

ಬದಲಾಯಿಸಿ

ಇದು ಮೂರು ದಿನಗಳ ಕಾಲ ನಡೆಯುತ್ತದೆ. ವಿಶೇಷವಾಗಿ ಭೂಮಿ ತಾಯಿಯನ್ನು ಆರಾಧಿಸಲಾಗುತ್ತದೆ.ಮೂರು ದಿನದ ನೇಮ ,ಮೂರು ದಿನದ ಆಯನ,ಮೂರು ದಿನದ ಬೇಟೆ ಇಲ್ಲಿ ಹಿಂದೆ ನಡೆಯುತ್ತಿತ್ತು.