ಶ್ರೀ ಲಕ್ಷ್ಮಿ ಮಯ್ಯ

ಕನ್ನಡದ ಕಿರುತೆರೆಯ, ಪಾಂಡುರಂಗ ವಿಠಲ ಜನಪ್ರಿಯ ಧಾರಾವಾಹಿಯ ಪಲ್ಲು ಪಾತ್ರದ ಶ್ರೀಲಕ್ಷ್ಮಿ ಮಯ್ಯ,, ಮೂಲತಃ ಕರಾವಳಿಯ ಕುಂದಾಪುರದವರು.

ಜನನ ಹಾಗೂ ಪರಿವಾರ

ಬದಲಾಯಿಸಿ

'ಶ್ರೀ ಲಕ್ಷ್ಮಿ ಮಯ್ಯ' ನವರ ತಂದೆ, 'ಆಡುಗೆ ಕಂಟ್ರಾಕ್ಟರ್ ಕೃಷ್ಣ ಮಯ್ಯ',, ತಾಯಿ 'ವಸಂತಿ ಮಯ್ಯ.' ತಂದೆ ತಾಯಿಯವರ ಜೊತೆ ಬೆಂಗಳೂರಿಗೆ ಬಂದು ಈಗಾಗಲೇ ೮-೧೦ ವರ್ಷವಾಗಿದೆ. 'ಬಿಕಾಂ ಪರೀಕ್ಷೆ' ಆಗಿದೆ. ಶಾಲಾ ಕಾಲೇಜ್ ಗಳಲ್ಲೇ ಭಾಷಣ ಸ್ಪರ್ಧೆಯಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. 'ಭೂಕೈಲಾಸ ನಾಟಕದ ನಾರದನ ಪಾತ್ರ'ದ ಬಹುದೊಡ್ಡ ಡೈಲಾಗ್ ಅವರಿಗೆ ಪ್ರಿಯವಾಯಿತು. ೧೬ ನೆಯ ವಯಸ್ಸಿನಲ್ಲಿ ನಿರೂಪಣೆ ಮಾಡುವ ಅವಕಾಶವೂ ಸಿಕ್ಕಿತು. 'ಮುತ್ತೈದೆ ಎನ್ನುವ ಧಾರಾವಾಹಿ'ಯಲ್ಲಿ ಪ್ರಥಮವಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡರು. ’ಪಡುವಾರಹಳ್ಳಿ ಪಾಂಡವರು’ ಎಂಬ ಹಾಸ್ಯ ಧಾರವಾಹಿಯಲ್ಲೂ ಅಭಿನಯಿಸಿ 'ಸೈ' ಎನ್ನಿಸಿಕೊಂಡರು.

ಪಲ್ಲು ಪಾತ್ರ

ಬದಲಾಯಿಸಿ

ಸುಮಾರು ೨ ವರ್ಷದಿಂದ ಆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲು ಆಪಾತ್ರವನ್ನು ಬೇರೆಯವರು ನಿರ್ವಹಿಸುತ್ತಿದ್ದರು. ಪ್ರತಿದಿನವೂ ಒಂದು ಕಥಾ ಪ್ರಸಂಗಕ್ಕೆ ಹೊಂದಿಕೊಳ್ಳಬೇಕು. ಬಜಾರಿ, ಕಳ್ಳಿ,, ಹುಚ್ಚಿಯಾಗಿ ಕಾಣಿಸಿಕೊಳ್ಳುವ ಅವಕಾಶವಿದೆ. ಇಂತಹ ಹಲವಾರು ಪಾತ್ರಗಳನ್ನು ಮಾಡುವ ಅವಕಾಶ; ಹೊಸ ಹೊಸ ಅನುಭವಗಳು, ಸವಾಲುಗಳು ಇದರ ಜೊತೆಗೆ ಸೇರಿವೆ. ವಿಠಲನ ಜೊತೆ ಮದುವೆಯಾಗಿದೆ. ಮಗು ತರಹ 'ಪಲ್ಲು ಪಾತ್ರ' ಮಾಡಬೇಕಾಗುತ್ತದೆ. ಮಕ್ಕಳು ಅದನ್ನೇ ಇಷ್ಟಪಡುತ್ತಾರೆ. ಚಿತ್ರೀಕರಣದ ಸಮಯದಲ್ಲೂ ಅವರು ಮಗುವಿನ ತರಹವೇ ವರ್ತಿಸುತ್ತಾರೆ. ನಿರ್ದೇಶಕ, 'ಮುನಿಸರ್' ಓನಾಮದಿಂದ ಎಲ್ಲಾ ಹೇಳಿ ಕಲಿಸುತ್ತಾರೆ. ಪ್ರೇಕ್ಷಕರನ್ನು ನಗಿಸುವಕೆಲಸ ಬಹಳ ಮುದಕೊಡುತ್ತದೆ.

'ಪಲ್ಲು ಪಾತ್ರದ ಅನುಭವ'

ಬದಲಾಯಿಸಿ

ಮೊದಲು ನಾವು ಆರಿಸಿಕೊಂಡ ಯಾವುದೇ ಪಾತ್ರದಲ್ಲಿ ನಾವು ಒಳಹೊಕ್ಕು ಅದನ್ನು ಅನುಭವಿಸಿದಾಗಲೇ ಪ್ರೇಕ್ಷಕರಿಗೆ ಅದನ್ನು ಸಮರ್ಥವಾಗಿ ತೋರಿಸಿಕೊಡಬಹುದು, ಎನ್ನುವುದು 'ಶ್ರೀಲಕ್ಷ್ಮಿ ಮಯ್ಯ,' ರವರ ಅಭಿಪ್ರಾಯ. ನಟಿಸಬೇಕಾದ ಪಾತ್ರವನ್ನು ಹಚ್ಚಿಕೊಳ್ಳುವುದು ಅತಿ ಅನಿವಾರ್ಯ. ಮುಂದೆ ಬೇರೆ ತರಹದ ಸೀರಿಯಸ್ ಪಾತ್ರವನ್ನೇನಾದರೂ ಮಾಡುವ ಅವಕಾಶಬಂದರೆ, ಅದಕ್ಕೆ ತಕ್ಕ ಹಾಗೆ ವರ್ತಿಸುವ ಮಾನಸಿಕ ಸಿದ್ಧತೆ ಈಗ ನಡೆಯುತ್ತಿದೆ. ಹಾಸ್ಯ ಒಂದು ತರಹದ ತಾಯಿ ಬೇರಿನ ತರಹ. ದುಖಃದ ಪಾತ್ರ, ಖಳ ನಾಯಕಿ. ಮೊದಲಾದ ಪಾತ್ರಗಳಿಗೆ, ಈಗ ನಿರ್ವಹಿಸುತ್ತಿರುವ ಹಾಸ್ಯದ ಪಾತ್ರ, ದಾರಿಯ ತರಹವಾಗಿದೆ.