ಶ್ರೀ ಮಹಾವೀರ ಸ್ವಾಮಿ ಬೆಟ್ಕೇರಿ ಬಸದಿ
ಸ್ಥಳ
ಬದಲಾಯಿಸಿಬೆಟ್ಕೇರಿ ಬಸದಿಯಲ್ಲಿ ಪೂಜಿಸಲ್ಪಡುವ ಮೂಲನಾಯಕ ಭಗವಾನ್ ಶ್ರೀ ಮಹಾವೀರ ಸ್ವಾಮಿ. ಈ ಬಸದಿ ಮೂಡಬಿದಿರೆ ಜೈನರ ಪೇಟೆಯ ಪೂರ್ವದಿಕ್ಕಿನಲ್ಲಿದೆ. ಇದರ ಸಮೀಪ ಹಿರೇ ಬಸದಿ ಇದೆ. ಅಲ್ಲಿಂದ ಈ ಬಸದಿಯ ದೂರವು 1 ಕಿ.ಮೀ. ಇಲ್ಲಿ ಬರುವ ಕುಟುಂಬಗಳು ಹತ್ತಿರದ ಶ್ರಾವಕ ಮನೆಯವರು ಮಾತ್ರ. ಈ ಬಸದಿಯು ಮೂಡಬಿದಿರೆಯ ಶ್ರೀ ಮಠಕ್ಕೆ ಸೇರಿದೆ. ಇದು ಯಾರಿಂದ ಕಟ್ಟಲ್ಪಟ್ಟಿದೆ ಎಂಬುದು ತಿಳಿದು ಬಂದಿಲ್ಲ. ಯಾವದೇ ರೀತಿಯು ಐತಿಹಾಸಿಕ ಪೂರವೆಯು ಈ ಬಸದಿಯಲ್ಲಿ ಕಂಡುಬರುವುದಿಲ್ಲ. ಆದರೆ ಕೋಣಾಜೆ ಗ್ರಾಮದವರು ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಇತರರಂತೆ ನಡೆಸುತ್ತಾರೆ. ಇಲ್ಲಿ ಮಹಾವೀರ ತೀರ್ಥಂಕರರ ಪೂಜೆಯು ಶ್ರಾದ್ದ ಭಕ್ತಿಗಳಿಂದ ನಡೆಯುತ್ತದೆ. ಪದ್ಮಾವತಿ ಅಮ್ಮನವರ ಮೂರ್ತಿ ಇದೆ. ಅದೇ ರೀತಿ ಬ್ರಹ್ಮ ದೇವನ ಮೂರ್ತಿಯು ಕಂಡು ಬರುವುದಿಲ್ಲ.
ಪ್ರಾಂಗಣ
ಬದಲಾಯಿಸಿಬಸದಿಯ ಬಳಿ ಎರಡು ಪಾರಿಜಾತ ಹೂವಿನ ಗಿಡಗಳು ಕಂಡುಬರುತ್ತದೆ. ಜೊತೆಗೆ ಬಸದಿಯ ಅಂಗಳದಲ್ಲಿ ದಾಸವಾಳ, ನಂದಿಬಟ್ಟಲು ಗಿಡಗಳಿವೆ. ಬಸದಿಯ ಎದುರು ಭಾಗದಲ್ಲಿ ಇರುವ ಗೋಪುರವನ್ನು ಜನರು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಇಲ್ಲಿಯ ಗೋಎಡಯ ಮೇಲೆ ದ್ವಾರಪಾಲಕರ ಚಿತ್ರಗಳು, ದ್ವಾರಪಾಲಕರ ಕಲ್ಲಿನ ಮೂರ್ತಿಗಳು ಕಂಡುಬರುತ್ತದೆ. ಬೇರೆ ಯಾವುದೇ ಚಿತ್ರಗಳಿಲ್ಲ. ಇಲ್ಲಿ ಪ್ರಾಥನಾ ಮಂಟಪದಲ್ಲಿ ನಾಲ್ಕು ಕಂಬಗಳು ಕಂಡುಬರುತ್ತದೆ. ಇಲ್ಲಿ ಜಯಘಂಟೆ , ಜಾಗಟೆಗಳನ್ನು ತೂಗಿಹಾಕಲಾಗಿದೆ.
ಮಂಟಪ
ಬದಲಾಯಿಸಿತೀರ್ಥಂಕರರ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥಮಂಟಪ ಎಂದು ಕರೆಯುತ್ತಾರೆ. [೧]
ಪೂಜೆ
ಬದಲಾಯಿಸಿಈ ಬಸದಿಯಲ್ಲಿ ಪೂಜೆಗೊಳ್ಳುವ ಯಕ್ಷ ಯಕ್ಷಿಯರು ಧರಣೇಂದ್ರ ಮತ್ತು ಪದ್ಮಾವತಿ ದೇವಿ. ಮಾತ ಪದ್ಮಾವತಿ ದೇವಿಯ ಮೂರ್ತಿಹಿದ್ದು ಪೂಜೆ ನಡೆಯುತ್ತದೆ. ಈ ದೇಢವಿಗೆ ಸೀರೆ ಉಡಿಸಿ ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ನಡೆಸಲಾಗುತ್ತದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವು ಕಂಡುಬರುತ್ತದೆ. ಈ ಬಸದಿಯಲ್ಲಿ ಅಮ್ಮನವರ ಎದುರು ಹೂವು ಹಾಕಿ ನೋಡುವ ಕ್ರಮವು ಇಲ್ಲ. ಈ ಬಸದಿಯಲ್ಲಿ ದಿನದಲ್ಲಿ ಬೆಳಗ್ಗೆ , ಮಧ್ಯಾಕ್ನ ಮತ್ತು ಸಾಯಂಕಾಲ ಹೀಗೆ ಬಾರಿಯ ಬದಲು ಒಮ್ಮೆ ಮಾತ್ರ ಪೂಜೆ ನಡೆಯುತ್ತದೆ.
ಶಿಲಾಕೃತಿಗಳು
ಬದಲಾಯಿಸಿಈ ಬಸದಿಯ ಬಲ ಭಾಗದಲ್ಲಿ ತ್ರಿಶೂಲ, ಮೂರ್ತಿಗಳು, ನಾಗರಕಲ್ಲು, ಇತ್ಯಾದಿಗಳು ಇವೆ. ಅವುಗಳನ್ನು ಒಂದು ಪೀಠದ ಮೇಲೆ ಸ್ಥಾಪಿಸಲಾಗಿದೆ. ಬಸದಿಯ ಸುತ್ತಲೂ ಪ್ರಾಕಾರ ಗೋಡೆ ಇದೆ. ಇದು ಮುರಕಲ್ಲಿನಿಂದ ನಿರ್ಮಿತಗೊಂಡಿದೆ.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. pp. ೧೨೧.