ಶ್ರೀ ನೇಮಿನಾಥ ಸ್ವಾಮಿಯ ಮಂದಿರ
ಶ್ರೀ ನೇಮಿನಾಥ ಸ್ವಾಮಿಯ ಮಂದಿರ, ಹಿರಿಯಂಗಡಿ ಕರ್ನಾಟಕದ ಜಿನ ಬಸದಿಗಳಲ್ಲಿ ಒಂದಾಗಿದೆ. ನೇಮಿನಾಥ ಮಂದಿರವು ಕಾರ್ಕಳದಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಹೆಸರುವಾಸಿಯಾದ ಬಸದಿಯಾಗಿದೆ.ಇಲ್ಲಿ ಪೂಜಿಸಲ್ಪಡುವ ಮೂಲ ನಾಯಕರು ಶ್ರೀ ನೇಮಿನಾಥ ತೀರ್ಥಂಕರರು ಈ ಬಸದಿಯನ್ನು ಹೀರೆ ಬಸದಿಯಂತಲೂ ಕರೆಯುತ್ತಾರೆ.
ಸ್ಥಳ
ಬದಲಾಯಿಸಿಈ ಬಸದಿಯು ಕಾರ್ಕಳ ತಾಲೂಕು ಕಾರ್ಕಳ ಗ್ರಾಮ ಮತ್ತು ಹಿರಿಯಂಗಡಿ ಊರಿನಲ್ಲಿದೆ. ಇದರ ಹತ್ತಿರ ಪರ್ಬಲ ಗುಡ್ಡೆ ಇದೆ.ಈ ಬಸದಿಯ ಹತ್ತಿರದಲ್ಲಿ ಎಡ ಬಲ ಬಸದಿ ಎಂಬ ಇನ್ನೆರಡು ಬಸದಿಗಳಿವೆ. ಇವು ಶ್ರೀ ನೇಮಿನಾಥ ಮಂದಿರದಿಂದ ಸುಮಾರು ಇಪ್ಪತ್ತು ಮೀಟರ್ ದೂರದಲ್ಲಿದೆ. ಶ್ರೀ ನೇಮಿನಾಥ ಬಸದಿಯು ಕಾರ್ಕಳದ ಹೊಬಳಿಗೆ ಸಂಭಂದಿಸಿದ ಬಸದಿಯಾಗಿದೆ. ಆದ್ದರಿಂದ ಹೋಬಳಿ ಕುಟುಂಬದ ಕೆಲವರು ಬರುತ್ತಿರುತ್ತಾರೆ. ಇದು ತಾಲೂಕು ಕೇಂದ್ರದಿಂದ ಅಂದಾಜು ಎರಡು ಕಿಲೋ ಮೀಟರ್ ದೂರದಲ್ಲಿದೆ ಇದು ಕಾರ್ಕಳದ ಶ್ರೀ ಮಠಕ್ಕೆ ಸೇರಿರುವುದು ಇದು ಪೂರ್ಣ ಶಿಲಾಮಯ ಈಗ ಈ ಬಸದಿಯನ್ನು ಆಡಳಿತ ಮುಕ್ತೇಸರರು ಹಾಗು ಜೈನ ಧರ್ಮದ ಜೀರ್ಣೋದ್ದಾರ ಸಂಘದವರು ನಡೆಸಿಕೊಂಡು ಬರುತ್ತಿದ್ದಾರೆ.
ಇತಿಹಾಸ
ಬದಲಾಯಿಸಿಈ ಬಸದಿಯನ್ನು ಭೈರವ ಅರಸರು ಕಟ್ಟಿಸಿದ್ದರೆಂದು ಹೇಳುತ್ತಾರೆ ಆದರೆ ಅವರಿಗಿಂತ ಹಿಂದೆ ಒಂಬೈನೂರು ವರ್ಷಗಳಷ್ಟು ಹಿಂದೆ ಕಟ್ಟಿದ ಪ್ರಾಚೀನ ಬಸದಿಯಾಗಿದೆ. ಇದು ಇತ್ತೀಚೆಗೆ ೨೯೧೨ ರಲ್ಲಿ ಜೀರ್ಣೋದ್ದಾರ ಕಾರ್ಕಳ ಜೈನ ಮಠಾದೀಶರಿಗೆ ಪಟ್ಟಾಭೀಷೇಕ ಇದೆ ನೇಮಿನಾಥ ಮಂದಿರದ ಭದ್ರ ಮಂಟಪದಲ್ಲಿ ವಿಶೇಷವಾಗಿ ಸೂಕ್ತ ವಿಧಿ ವಿದಾನಗಳಿಂದ ನಡೆಯುವುದು ಪದ್ಧತಿ. ಇಲ್ಲಿಯ ಶಿಲಾಶಾಸನವು ಹಿಂದಿ, ಪ್ರಾಕೃತ ಹಾಗೂ ಹಳೆಗನ್ನಡದಲ್ಲಿದೆ. ಬಸದಿಗೆ ಮೆಗಿನ ನೆಲೆಯಿದ್ದು ಅಲ್ಲಿ ಶ್ರೀ ಆದಿನಾಥ ತೀರ್ಥಂಕರರ ಪೂಜೆ ನಡೆಯುತ್ತದೆ.ಕಾರ್ಕಳದದಲ್ಲಿ ಶ್ರೀ ನೇಮೀಶ್ವರ ಸ್ವಾಮಿ ಬಸದಿಯ ಎದುರಿಗೆ ಇರುವಣಂತಹ ಉತ್ತುಂಗ ಮಾನಸ್ತಂಭವು ಕ್ರ.ಶ ೧೪೫೩- ೬೫ ರ ಅವಧಿಯಲ್ಲಿ ನಿಲ್ಲಿಸಲಾಗಿತ್ತು. ವಿಶಾಲವೂ ಎತ್ತರವೂ ಆದ ನಾಲ್ಕು ಹಂತದ ಪೀಠದ ಮೇಲೆ ಚಿತ್ತಾಕರ್ಷಕವಾಗಿ ಕಡೆಯಲ್ಪಡುವ ಏಕಶಿಲಾ ಸ್ತಂಭ ನಿಂತಿದೆ. ಇದಕ್ಕೆ ಅವರದ್ದೆ ಆದ ಇತಿಹಾಸವಿದ್ದು ೬೦೦ ವರ್ಷಗಳ ಹಿಂದೆ ಈ ಸ್ತಂಭವು ಮೂಡಬಿದ್ರೆಗೆ ಹೋಗಬೇಕಿತ್ತು. ಆದರೆ ಕಾರ್ಕಳದ ರಾಜ ಪಾಂಡ್ಯಪ್ಪರಸ ( ಪಾಂಡ್ಯರಸ) ಹಾಗೂ ಮೂಡಬಿದ್ರೆಯವರಿಗೂ ಚರ್ಚೆ ನಡೆದು. ಒಂದು ಒಪ್ಪಂದಕ್ಕೆ ಬರುತ್ತಾರೆ. ಆದೆನೆಂದರೆ ಕಾರ್ಕಳದಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಸಾಣೂರು ಎಂಬ ಹೊಳೆಯನ್ನು ದಾಟಿ ಹೋಗಬೇಕು. ಒಂದು ವೇಳೆ ಕಲ್ಲು ಸಾಣೂರು ಹೊಳೆಯನ್ನು ದಾಟಿದರೆ ಅದು ಮೂಡಬಿದ್ರೆಗೆ ಹೋಗುತ್ತದೆ ಇಲ್ಲವಾದಲ್ಲಿ ಅದು ಕಾರ್ಕಳದಲ್ಲೇ ಉಳಿಯುತ್ತದೆ ಎಂಬ ಉಪ್ಪಂದಕ್ಕೆ ಬರಲಾಯಿತು. ಅದರ ಅನುಸಾರ ಈ ಸ್ತಂಭವನ್ನು ಕಬ್ಬಿಣದ ಚಕ್ರಗಳನ್ನು ಉಪಯೋಗಿಸಿ ದೂಡಿಕೊಂಡು ಹೋಗಲಾಯಿತು ಆದರೆ, ಬೆಳಗಾಗುದರ ಒಳಗೆ ಅದು ಸಾಣೂರು ಹೊಳೆಯನ್ನು ದಾಟಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಸ್ತಂಭ ಕಾರ್ಕಳದಲ್ಲಿಯೇ ಉಳಿಯಿತು. ಮಾನಸ್ತಂಭದ ತುದಿಯಲ್ಲಿ ಶ್ರೀ ನೇಮಿನಾಥ ಚತುರ್ಮುಖ ಬಿಂಬ ನಾಲ್ಕು ದಿಕ್ಕಿಗೂ ದರ್ಶನ ನೀಡುವಂತೆ ಇರಬೇಕು ಎಂದಾಗಿತ್ತು. ಇಲ್ಲಿ ನಾಲ್ಕು ಕಿರುಕಂಬಗಳ ಒಂದು ಸಣ್ಣ ಮಂಟಪವಿದ್ದು ಅದರಲ್ಲಿ ಜಿನಮೂರ್ತಿಗಳನ್ನು ನಾಲ್ಕು ದಿಕ್ಕಿಗೂ ದರ್ಶನ ನೀಡುವಂತೆ ಇರಿಸಲಾಗಿದೆ. ಇದೊಂದು ಏಕಶಿಲಾ ಸ್ತಂಭವಾಗಿದ್ದು, ಮೇಲಿನ ಚೌಕಾಕಾರದ ಮಂಟಪವನ್ನು ಇನ್ನೊಂದು ಕಲ್ಲು ಬಳಸಿ ಭೈರವರಸನ ಕಾಲದಲ್ಲಿ ನಿರ್ಮಾಣ ಮಾಡಲಾಯಿತು ಎನ್ನುತ್ತಾರೆ. ಐತಿಹಾಸಿಕಸುಂದರ ಕಲೆಗಳನ್ನು ಹೊಂದಿರುವ ಮಾನಸ್ತಂಭ ಕೆಲವು ಪ್ರಮುಖ ಜೈನ ಬಸದಿಗಳಲ್ಲಿ ಇರುತ್ತದೆ. ಮಾನಸ್ತಂಭವು ಸಮವಸರಣದ ಪ್ರತೀಕ. ಇದು ದೇವನಿರ್ಮಿತವಾದ ಸಮವಸರಣ ಎಂದು ಹೇಳಲಾಗುತ್ತದೆ. ತೀರ್ಥಂಕರರು ಮೋಕ್ಷಕ್ಕೆ ಹೋಗುವಾಗ ಕೇವಲ ಜ್ಞಾನ ಪ್ರಾಪ್ತವಾದ ನಂತರ ಸಮವಸರಣದ ಧಾರ್ಮಿಕ ಸಭೆಯಲ್ಲಿ ಭಕ್ತಾಧಿಗಳಿಗೆ ನಾಲ್ಕು ದಿಕ್ಕುಗಳಲ್ಲಿ ದರ್ಶನವನ್ನು ನೀಡುವ ವಿಶಿಷ್ಟ ಸಿದ್ದಿ ಹೊಂದಿದವರಾಗುತ್ತಿದ್ದರು. ಆದ್ದರಿಂದ ಸಮವಸರಣ ಎಂದರೆ ಕೇವಲ ತೀರ್ಥಂಕರರ ಧಾರ್ಮಿಕ ಸಭೆ ಎಂದರ್ಥ ಅಲ್ಲ.ಇಲ್ಲಿ ನಾಲ್ಕು ಸುತ್ತ ಭಕ್ತಾಧಿಗಳು ಶಿಷ್ಯಗಣದವರುಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುಳಿತಿರುತ್ತಿದ್ದರು. ಸಭೆಯಮಧ್ಯ ಭಾಗದಲ್ಲಿ ಕಮಲ ಪೀಠದ ಮೇಲೆ ತೀರ್ಥಂಕರರು ಆಸೀನರಿದ್ದು ಧರ್ಮ ಬೋದನೆಯನ್ನು ಮಾಡುತ್ತಿದ್ದರು. ಕೆಲವರು ನಾನೊಬ್ಬನೆ ಜ್ಞಾನಿ ಎಂಬ ಅಹಂಕಾರದಿAದ ಸಮವಸರಣಕ್ಕೆ ಬರಬಹುದು.. ಆದರೆಆ ಸ್ತಂಭವನ್ನು ನೋಡಿ ಕೂಡಲೇ ಅವರ ಅಹಂಕಾರ ಇಳಿದುಹೋಗುತ್ತದೆ. ಇದರ ಮುಂದೆ ನಾನೇನು ಅಲ್ಲ. ನಾನು ಸಣ್ಣವನು ಅನ್ನುವಂತಹ ಭಾವನೆ ಬರುತ್ತದೆ.
ವಿನ್ಯಾಸ
ಬದಲಾಯಿಸಿಬಸದಿಯಲ್ಲಿ ಬ್ರಹ್ಮ ದೇವರ ಹಾಗೂ ಕುಷ್ಮಾಂಡಿನಿ ದೇವಿಯ ಮೂರ್ತಿಗಳಿವೆ. ಬಸದಿಯ ಎದುರು ಮಾನಸ್ತಂಭವಿದೆ. ಈ ಮೂರು ಬಸದಿಗಳಿಗೆ ಒಂದೇ ಮಾನಸ್ತಂಭ ಇದು ೬೧ ವರೆ ಅಡಿ ಎತ್ತರವಿದೆ.ಇದು ಇಲ್ಲಿಯ ಪ್ರಮುಖ ವಿಶೇಷತೆ. ನೇಮಿನಾಥ ಮಂದಿರದ ಒಳಗಡೆ ಕ್ಷೇತ್ರಪಾಲ ಹಾಗೂ ಬೈರವ ಕ್ಷೇತ್ರಪಾಲ ಸನ್ನಿದಿಗಳವೆ. ಅಹಂಕಾರಿಯ ಗರ್ವ ಮಾನಸ್ತಂಭದ ಎದುರು ನಿಂತರೆ ಮಾಯವಾಗುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ. ಮಂದಿರದ ಒಳಗಡೆ ಕೂಡಮಣೆತ್ತಾಯ ದೈವದ ಸಾನಿಧ್ಯವಿದೆ. ಅಂಗಳದಲ್ಲಿ ದಾಸವಾಳ ಗುಲಾಬಿ ಇತ್ಯಾದಿ ಹೂವಿನ ಗಿಡಗಳಿದ್ದು ಹೂವುಗಳನ್ನು ಪೂಜೆಗೆ ಬಳುತ್ತಾರೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡ-ಬಲ ಬದಿಗಳಲ್ಲಿರುವ ಗೋಪುರವನ್ನು ಭಕ್ತಾಧಿಗಳು ಹಾಗೂ ವಾದ್ಯದವರು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಹಿಂದೆ ಈ ಬಸದಿಯಲ್ಲಿ ಶೃಇ ವೀರನಂದಿ ಮುನಿಗಳು ಒಂದು ವರ್ಷ ವಾಸ್ತವ್ಯವಿದ್ದು, ಇವರಿಂದ ದೀಕ್ಷೆ ಪಡೆದ ಒಬ್ಬ ಶಿಷ್ಯರು ಇದ್ದರು. ಇವರಿಗೆ ಪ್ರತ್ಯೇಕವಾಗಿ ಮುನ್ಯಾಸೊ ಎಂಬ ಕೋಣೆ ಇತ್ತು. ಇಲ್ಲಿರುವ ಕಂಬಗಳಲ್ಲಿರುವ ಶಿಲ್ಪಾಕಲಾಕೃತಿಗಳು ಅಳಿದು ಹೋಗಿವೆ, ಬಸದಿಯ ಪ್ರವೇಶ ದ್ವಾರದ ಎರಡು ಬದಿಗಳಲ್ಲಿ ದ್ವಾರ ಪಾಲಕರ ಶಿಲಾಮೂರ್ತಿಗಳಿವೆ. ಕಿರೀಟದಾರಿಯಾದ ಈ ಮೂರ್ತಿಗಳಿಗೆ ಎರಡು ಕೈಗಳು ತುಂಬಾ ಅಲಂಕಾರಿಕ ಆಭರಣಗಳನ್ನು ಹಾಕಿಕೊಂಡಿದ್ದಾರೆ. ಒಂದು ಕೈಯನ್ನು ಹೂವಿನೊಂದಿಗೆ ಅರ್ಧಕ್ಕೆ ಮೇಲೆ ಎತ್ತಿ ಹಿಡಿದಂತೆ ಹಾಗೂ ಇನ್ನೊಂದು ಕೈಯನ್ನು ತೊಡೆಯ ಮೇಲೆ ಇರುವಂತೆ ತೋರಿಸಲಾಗಿದೆ. ಈ ದ್ವಾರ ಪಾಲಕರ ಎಡ ಕಾಲು ಒಂದು ಹಾವಿನ ಹೆಡೆ ಮುಟ್ಟಿರುವುದನ್ನು ಗಮನಿಸಬಹುದು. ತುಳುನಾಡಿನಲ್ಲಿ ಅತ್ಯುನ್ನತವಾಗಿ ಸುಮಾರು ೬೧ ವರೆ ಅಡಿ ಎತ್ತರವಿರುವ ಈ ಮಾನಸ್ತಂಭವು ೧೦ ಅಡಿ ಎತ್ತರದ ಪೀಠದ ಮೇಲೆ ತಲೆಯೆತ್ತ ನಿಂತಿದೆ. ಇದು ಬಸದಿಯ ಬಲಪೀಠಕ್ಕಿಂತ ಪೂರ್ವ ದಿಕ್ಕಿಗಿದೆ. ಇದರ ಪಶ್ಚಿಮ ದಿಕ್ಕಿಗೆ ಲೋಹದ ಧ್ವಜಾರೋಹಣ ಸ್ತಂಭ ಅಥವಾ ಕೊಡಿಮರವನ್ನು ನಾವು ಕಾಣಬಹುದು. ಕಂಬದ ತಳಭಾಗದಲ್ಲಿ ಬಲಪೀಠಕ್ಕಿಂತ ಮೇಲೆ ಪಶ್ಚಿಮ ಮೈ ಎದುರು ಮುಖ ಮಾಡಿರುವ ಮಕರ ಮೃಗಗಳಿವೆ. ಇನ್ನೊಂದು ಮೈಮೇಲೆ ಸುಂದರವಾದ ರೆಕ್ಕೆಗಲನ್ನೊಳಗೊಂಡು ಒಂದರ ಕುತ್ತಿಗೆಯನ್ನು ಇನ್ನೊಂದು ಸುತ್ತಿಕೊಂಡಿರುವAತಹ ಹಂಸದ ಆಕೃತಿಗಳು ಪೂರ್ವ ಮೈ ಮೇಲೆ ಎದುರು ಬದುರು ಮುಖ ಮಾಡಿಕೊಂಡಿರುವ ಸಿಂಹ ಮುಖದ ಮೃಗಗಳ ಆಕೃತಿ ಇದೆ. ದಕ್ಷಿಣ ದಿಕ್ಕಿನಲ್ಲಿ ಎದುರು ಬದುರು ಮುಖ ಮಾಡಿರುವ ಕುಕ್ಕುಟ ಸರ್ಪ ಹಾಗೂ ಅದರ ಕೆಳಗಡೆ ಲಜ್ಜಾ ಮೂರ್ತಿಯ ಆಕೃತಿ ಇದೆ. ಇದೇ ದಿಕ್ಕಿನಲ್ಲಿ ಮೇಲ್ಗಡೆ ಹೋಂದಂತೆ ಒಂದು ರೇಖಾ ಯಂತ್ರದ ಆಕೃತಿ ಅದಕ್ಕಿಂತ ಮೇಲಕ್ಕೆ ಆಭರಣಗಳು ಅದಕ್ಕಿಂತ ಮೇಲೆ ಮಧ್ಯದಲ್ಲಿ ಅಲಂಕೃತವಾದ ಕುಳಿತುಕೊಂಡಿರುವ ನಂದಿಯನ್ನು ಕಾಣಬಹುದು. ಅದರ ಮೇಲ್ಗಡೆ ಅರಳಿದ ಕಮಲ ಅದರ ಮೇಲ್ಗಡೆ ಮಂಟಪದ ಮಧ್ಯದಲ್ಲಿರುವ ಖಡ್ಗಾಸನ ಜಿನ ಬಿಂಬವನ್ನು ಕಾನಬಹುದು. ಅದಕ್ಕಿಂತ ಮೇಲ್ಗಡೆ ಕಮಲ ದಳಗಳ ಸುತ್ತು ಪಟ್ಟಿಗೆ ಅದಕ್ಕಿಂತ ಮೇಲ್ಗಡೆ ಕಳಶ ಅದರ ಮೇಲ್ಭಾಗದ ನಾಲ್ಕೂ ಅಂಕಣಗಳಲ್ಲಿ ಚಿತ್ರಿಕೆಗಳಿವೆ. [೧] ಪಶ್ಚಿಮ ದಿಕ್ಕಿನ ತಳಭಾಗದಲ್ಲಿ ಕಮಲ ಪುಷ್ಪಗಳು, ಮಕರಗಳು, ವೃತ್ತಾಕಾರದ ಯಂತ್ರಗಳು, ಅಲಂಕಾರ ಪಟ್ಟಿ, ಮೇಲ್ಗಡೆ ಹೋಂದಂತೆ ಗರುಡ ಮಂಟಪದ ಮಧ್ಯದಲ್ಲಿ ಇರುವಂತಹ ಜಿನಬಿಂಬ ಇನ್ನೂ ಮೇಲಿನ ಅಂಕಣಗಳಲ್ಲಿ ಅಲಂಕಾರಿಕ ಕೆತ್ತನೆಗಳಿವೆ ಉತ್ತರ ದಿಕ್ಕಿನ ತಳಭಾಗದಲ್ಲಿ ಹೂಗಳಿಂದ ಕೂಡಿದ ಹಂಸ ಅದರ ಮೇಲ್ಭಾಗದಲ್ಲಿ ರೇಖಾಕೃತಿ ಯಂತ್ರ, ಅದರ ಮೇಲ್ಗಡೆ ಅರಳಿದ ಕಮಲ, ಅದರ ಮೇಲ್ಗಡೆ ಮಂಟಪದಲ್ಲಿರುವ ಜಿನಬಿಂಬ ಮತ್ತು ಅದರ ಮೇಲ್ಭಾಗದಲ್ಲಿ ನಾಲ್ಕೂ ಅಂಕಣಗಳಲ್ಲಿ ಅಲಂಕಾರಿ ಚಿತ್ರಿಕೆಗಳಿವೆ. ಪೂರ್ವ ಮೈಮೇಲೆ ಅರಳಿದ ಕಮಲ ಮೇಲೆ ಹೇಳಿರುವ ಕಾಲ್ಪನಿಕ ಮೃಗಗಳು ಅದರ ಮೇಲ್ಭಾಗದಲ್ಲಿ ಪುಷ್ಪಗಳಿಂದ ಕೂಡಿದ ರೇಖಾ ಯಂತ್ರದ ಆಕೃತಿ ಅದರ ಮೇಲ್ಗಡೆ ಅಲಂಕಾರಿಕ ಪಟ್ಟಿ ಅದರ ಮೇಲ್ಗಡೆ ಕಮಲ ಮತ್ತು ಸಿಂಹ, ಅದರ ಮೇಲ್ಗಡೆ ಮಂಟಪದಲ್ಲಿನ ಜಿನಬಿಂಬ ಮತ್ತು ಅಲಂಕಾರಿಕ ಕೆತ್ತನೆಗಳನ್ನು ಕಾಣಬಹುದು. ಕೆಳಗೆ, ಪೀಠದ ಮೇಲೆ ಗಮನಿಸಬೇಕಾದ ವಿಷಯವೆಂದರೆ ನಾಲ್ಕೂ ದಿಕ್ಕಿನ ಮೂಲೆಗಳಲ್ಲಿ ಆನೆಗಳು ಈ ಪೀಠದವನ್ನುಆಧರಿಸಿ ಕೊಂಡಿರುವಂತೆ ತೋರಿಸಲಾಗಿದೆ. ಮತ್ತೆ ಮೂರು ಅಂಕಣದ ಮೇಲ್ಗಡೆ ಸುತ್ತಲೂ ಹೂವಿನಲಂಕಾರದ ಒಂದು ಪಟ್ಟಿ ಇದೆ. ನೆಲದಿಂದಮೇಲ್ಗಡೆಯವರೆಗೆ ಒಟ್ಟು ಹದಿನೆಂಟು ಹಂತಗಳನ್ನು ನಾವು ಇಲ್ಲಿ ಗಮನಿಸಬಹುದು.
ಅನಾವರಣ
ಬದಲಾಯಿಸಿಪ್ರಾರ್ಥಾನ ಮಂಟಪದಲ್ಲಿ ಮೂರು ಮೂರು ಕಂಬಗಳಂತೆ ೧೨ ಕಂಬಗಳಿರುವ ಮಂಟಪವಿದೆ. ಇಲ್ಲಿ ಜಯಘಂಟೆಯನ್ನು ತೂಗು ಹಾಕಲಾಗಿದೆ. ಗರ್ಭಗುಡಿಯು ಈ ತೀರ್ಥಂಕರರ ಮಂಟಪದ ಮುಂದಿದೆ. ಗರ್ಭಗುಡಿಯ ಬಳಿಯಲ್ಲಿ ಗಣಧರ ಪಾದ ಶ್ರುತ ಬ್ರಹ್ಮ ದೇವರ ಮೂರ್ತಿಗಳಿವೆ.
ವಿಧಿ ವಿಧಾನ
ಬದಲಾಯಿಸಿಗರ್ಭ ಗುಡಿಯಲ್ಲಿರುವ ಗಣಧರ ಶ್ರುತ ಬ್ರಹ್ಮ ದೇವರ ಮೂರ್ತಿಗಳಿಗೆ ಬೆಳಗ್ಗೆ ಮತ್ತು ರಾತ್ರಿ ಪೂಜೆ ನಡೆಯುತ್ತದೆ. ಈ ಬಸದಿಯಲ್ಲಿ ಗೋ ಮೇದಾ ಯಕ್ಷ ಮತ್ತು ಕೂಷ್ಮಾಂಡಿನಿ ಯಕ್ಷಿಯನ್ನು ಪೂಜಿಸಲಾಗುತ್ತದೆ. ಇಲ್ಲಿರುವ ಜಿನಬಿಂಬಗಳ ಪೀಠಗಳ ಮೇಲೆ ಹಲವಾರು ಬರವಣಿಗೆ ಇದೆ. ಆದರೆ ಅದು ಸ್ಪಷ್ಟವಾಗಿ ಕಾಣುವುದಿಲ್ಲ. ಮೂಲ ನಾಯಕ ಶ್ರೀ ನೇಮಿನಾಥ ಸ್ವಾಮಿ ಮೂರ್ತಿ ಕಪ್ಪು ಶಿಲೆ ಇದ್ದು ೫೨ ಇಂಚು ಎತ್ತರವಿದ್ದು ರ‍್ಯಂಕಾಸನ ಭಂಗಿಯಲ್ಲಿದೆ. ದಿನವೂ ಮೂಲ ಸ್ವಾಮಿಗೆ ಜಲಾಭಿಷೇಕ , ಪಂಚಾಮೃತಾಭಿಷೆಕ ಮಾಡಲಾಗುತ್ತಿದೆ. ರಥೋತ್ಸವ, ಪಾಲ್ಗುಣ ಶುಧ್ಧ ಪೌರ್ಣಮಿಗೆ ವಿಶೇಷ ಪೂಜರಗಳನ್ನು ಮಾಡಲಾಗುತ್ತದೆ. ಕಾಯಿಲೆಯಾದರೆ ಮಕ್ಕಳಾಗದಿದ್ದರೆ ಇಲ್ಲಿಯ ಕೂಷ್ಮಾಂಡಿನಿ ದೇವಿಗೆ ವಿಶೇಷ ಹರಕೆಗಳನ್ನು ಹೇಳುತ್ತಾರೆ.ಬಸದಿಯ ಅಂಗಳದ ಎಡ ಮೂಲರಯಲ್ಲಿ ಕ್ಷೇತ್ರ ಪಾಲಕನ ಸನ್ನಿಧಿ ಇದೆ. ಇಲ್ಲಿ ತ್ರಿಶೂಲ, ನಾಗರ ಕಲ್ಲು ಇತ್ಯಾದಿಗಳಿವೆ ಇದನ್ನು ಒಂದು ಪೀಠದ ಮೇಲಿಟ್ಟು ಪ್ರತಿಷ್ಟಾಪಿಸಲಾಗಿದೆ. ಈ ಕ್ಷೇತ್ರಪಾಲಕನ ಮಹಿಮೆ, ಸಕ್ತಿ ಆಗಾಧವಾದುದು. ಶರೀರದಲ್ಲಿ ಆವೇಶವಿದ್ದವರು ತೀರ್ಥ ದ್ನಾನ ಮಾಡಿದರೆ ಗುಣಮುಖವಾಗುತ್ತದೆ ಎಂಬುದು ಇಲ್ಲಿನ ಮಹಿಮೆ. ಬಸದಿಯ ಸುತ್ತಲೂ ಮುರಕಲ್ಲಿನ ಪ್ರಾಕಾರ ಗೋಡೆ ಇದೆ. ಬಸದಿಗೆ ಸರಕಾರದಿಂದ ತಸ್ತಿಕ್ ಹಣ ವರ್ಷಕೊಮ್ಮೆ ಸಿಗುತ್ತದೆ. ಈ ಬಸದಿಗೆ ಆಚಾರ್ಯ ವಿದ್ಯಾನಂದ ಮುನಿ,ತರುಣಸಾಗರ್ , ಮಹಾವೀರ ಸಾಗರ್ ಎಂಬ ಮುನಿಪುಂಗವರ ಬೇಟಿ ನೀಡಿದ್ದಾರೆ. ಕ್ಷೇತ್ರದಲ್ಲಿ ಛತ್ರ, ನೀರಿನ ಸರಬರಾಜಿನ ಎಲ್ಲಾ ಅನುಕೂಲತೆ ಇದೆ. ಈ ಬಸದಿಗೆ ಹೋಬಳಿ ಕುಟುಂಬದ ೪೨ ಮಂದಿ ಅಕ್ಕಿಯೇ ಮೂಲ ಆದಾಯದ ಮೂಲವಾಗಿದೆ. ಹೀಗೆ ಕಾರ್ಕಳದ ಈ ನೇಮಿನಾಥ ಮಂದಿರವು ತ್ಯಾಗ, ಅಹಿಂಸೆಗಳ ಕೇಂದ್ರವಾಗಿ, ರಾಜ ಮಹಾರಾಜರಿಂದ ಘೋಷಿತವಾಗಿ ಶ್ರಾವಕ ಬಂಧು ಶ್ರದ್ಧೆಯ ನೆಲೆಯಾಗಿ ಕರ್ನಾಟಕದಾದ್ಯಂತ ಪ್ರಸಿದ್ಧವಾಗಿದೆ. ಮಾನಸ್ತಂಭ.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಥ.ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೩ ed.). ಮಂಜುಶ್ರೀ ಪ್ರಿಂಟರ್ಸ್. p. ೨೯-೩೧.