ಶ್ರೀ ಕ್ಷೇತ್ರಪಾಲ ಸ್ವಾಮಿ ಮಂದಿರ, ಸ್ವಾದಿ

ಶ್ರೀ ಕ್ಷೇತ್ರಪಾಲ ಸ್ವಾಮಿ ಮಂದಿರ ಸ್ವಾದಿಯ ಶ್ರೀ ಪಾಶ್ರ್ವನಾಥ ಸ್ವಾಮಿ ಮತ್ತು ಆದಿನಾಥ ಸ್ವಾಮಿ ಬಸದಿಗಳ ಪರಿಸರದಲ್ಲೇ ಶ್ರೀ ಆದಿನಾಥ ಸ್ವಾಮಿ ಬಸದಿಯ ಬಲಭಾಗದಲ್ಲಿ ಇದೆ.

ಇತಿಹಾಸ

ಬದಲಾಯಿಸಿ

ಈ ಮಂದಿರವನ್ನು 1996ರಲ್ಲಿ ಜೀರ್ಣೋದ್ಧಾರಗೊಳಿಸಿ, ಸಿಮೆಂಟ್ನಿಂದ ಸುಂದರವಾಗಿ ನಿರ್ಮಿಸಲಾಗಿದೆ. ಇದನ್ನು ಕೂಡಾ ಪೂಜ್ಯ ಶ್ರೀ ಭಟ್ಟಾರಕರು ನಡೆಸಿಕೊಂಡು ಬರುತ್ತಿದ್ದಾರೆ. ಇದು ಇಲ್ಲಿಯ ಜೈನ ಬಸದಿಗಳಷ್ಟೇ ಪ್ರಾಚೀನವಾದುದು. ಯಾಕೆಂದೆರೆ ಬಸದಿಗಳ ಆವೆಣ ಹಾಗೂ ಸಮಗ್ರ ಕ್ಷೇತ್ರದ ರಕ್ಷಣೆಗಾಗಿ ಕ್ಷೇತ್ರಪಾಲನನ್ನು ಆಗಲೇ ಪ್ರತಿಷ್ಠಾಪಿಸುವ ಅಗತ್ಯವಿದೆ. ಅಂದಿನಿಂದ ಇಂದಿನವರೆಗೂ ಜೈನರೂ, ಜೈನೇತರರೂ ಈತನನ್ನು ಆರಾಧಿಸುತ್ತಾ ಬಂದಿದ್ದಾರೆ. ಸಾಮಾನ್ಯವಾಗಿ ಬಂದು ಜತೆ ತೆಂಗಿನಕಾಯಿಗಳನ್ನು ಸಮರ್ಪಿಸಿ ಪ್ರಾರ್ಥನೆ ಮಾಡಿಕೊಳ್ಳುವುದು ಇಲ್ಲಿಯ ಪದ್ಧತಿ.[]

ಪೂಜಾ ವಿಧಾನ

ಬದಲಾಯಿಸಿ

ಇಲ್ಲಿ ಕ್ಷೇತ್ರಪಾಲರಾಗಿ ಆರಾಧಿಸಲ್ಪಡುವವರು ಶ್ರೀ ಬ್ರಹ್ಮದೇವರು.ಬಂದು ಶಿಲಾಫಲಕದ ಮೇಲೆ ಉಬ್ಬುಶಿಲ್ಪವಾಗಿ ಮೂಡಿಬಂದಿದ್ದಾರೆ. ಕೈಗಳನ್ನು ಕೆಳಗೆಚಾಚಿ ಬಲಗೈಯಲ್ಲಿ ಗದೆಯೊಂದನ್ನು ಹಿಡಿದುಕೊಂಡು ಚಲಿಸುವ ಭಂಗಿಯಲ್ಲಿದ್ದಾರೆ. ತಲೆಯ ಮೇಲೆ ಚಿಕ್ಕದೊಂದು ಭಂಗಿಯಲ್ಲಿದ್ದಾರೆ. ತಲೆಯ ಮೇಲೆ ಚಿಕ್ಕದೊಂದು ಕಿರೀಟವಿದೆ. ದೃಢತೆ ಮತ್ತು ವೀರತ್ವವನ್ನು ಅಭಿವ್ಯಕ್ತಿಗೊಳಿಸುವ ಮುಖ. ಸಾಮಾನ್ಯ ರೂಢಯಂತೆ ಕಾಲಬಳಿಯಲ್ಲಿ ಕೆಲವು ಗುಂಡು ಕಲ್ಲುಗಳಿವೆ. ಪ್ರತಿದಿನ ಪಂಚಾಮೃತ ಅಭಿಷೇಕವನ್ನು ಮಾಡಿ, ಹುಗಳಿಂದ ಅಲಂಕಾರ ಮಾಡಿ ಪೂಜೆ ನಡೆಸಲಾತ್ತದೆ. ಪ್ರತಿ ಅಮಾವಾಸ್ಯೆಯಂದ ತೈಲಾಭಿಷೇಕವನ್ನು ನಡೆಸಲಾಗುತ್ತದೆ. ಆಗ, ಹಿಂದೆ ಹೇಳಿದ್ದ ಹರಕೆಯನ್ನೂ ಸಂದಾಯ ಮಾಡಲಾಗುತ್ತದೆ ಹಾಗೂ ಹೊಸ ಹರಕೆಯನ್ನೂ, ಪ್ರಾರ್ಥನೆಗಳನ್ನೂ ಮನಾಡಲಾಗುತ್ತದೆ. ಪ್ರತಿದಿನ ಪೂರ್ವಾಹ್ನ ಪೂಜೆ, ಸಾಯಂಕಾಲ ವಿಶೇಷ ಮಂಗಳಾರತಿಯನ್ನು ಮಾಡಲಾಗುತ್ತದೆ. ನವರಾತ್ರಿಯ ವಿಜಯದಶಮಿಯಂದು ರಥೋತ್ಸವವನ್ನೂ ಕೈಗೊಳ್ಳಲಾಗುತ್ತದೆ. ಕ್ಷೇತ್ರಪಾಲರಾಗಿ ಇಲ್ಲಿ ಬ್ರಹ್ಮದೇವರೇ ಆರಾಧಿಸಲ್ಪಡುವುದರಿಂದ ಶ್ರೀ ಸ್ವಾದಿ ಮಠಕ್ಕೆ ಭೇಟಿ ನೀಡುವ ಎಲ್ಲ ಧರ್ಮ ಹಾಗೂ ವರ್ಗಗಳ ಭಕ್ತಾದಿಮಾನಿಗಳೂ, ಮುನಿ, ಸಾಧಕ, ಭಟ್ಟಾರಕ, ಶ್ರಾವಕರೂ ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ವಿಶೇಷವಾದ ಆಕಾಂಕ್ಷೆಗಳಿದ್ದರೆ ಸಾರ್ವಜನಿಕರು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸುತ್ತಾರೆ.

ತಂಗುವ ವ್ಯವಸ್ಥೆ

ಬದಲಾಯಿಸಿ

ದೂರದಿಂದ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವರ ವಾಸ್ತವ್ಯ, ಊಟೋಪ ಚಾರಗಳಿಗೆ ವ್ಯವಸ್ಥೆಯಾಗಬೇಕು. ಆದುದರಿಂದ ಇಲ್ಲಿ ಒಂದು ಸುಸಜ್ಜಿತ ಅತ್ಯಾಧುನಿಕ ರೀತಿಯ ಅತಿಥಿಗೃಹವಾಗಬೇಕು. ಕರ್ನಾಟಕ ಸರಕಾರದ ವತಿಯಿಂದ ಶ್ರೀ ಮಠದ ಬಳಿಯಲ್ಲಿ ಈಗ ಒಂದು ಅತಿಥಿಗೃಹ ನಿರ್ಮಾಣವಾಗುತ್ತಿದೆ. ಒಂದು ತ್ಯಾಗಿ ನಿವಾಸವೂ ನಿರ್ಮಾಣವಾತ್ತಿದೆ. ಆಹಾರ ತಯಾರು ಮಾಡುವ ಪಾಕಶಾಲೆ ನಿರ್ಮಾಣವಾಗಬೇಕು. ಇದು ಸಮಾಜದ ಬೇಡಿಕೆಯಾಗಿರುವುದರಿಂದ ಇದಕ್ಕೆ ಸರಕಾರ-ಸಮಾಜದ ಸಗಾಯ ಸಹಕಾರಗಳು ಬೇಕು.

ಉಲ್ಲೇಖಗಳು

ಬದಲಾಯಿಸಿ
  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೫೦.