ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ನಾಮಾಂಕಿತ ಕಟೀಲು ಮೇಳಗಳು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾ ತಂಡಗಳಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಯಾತ್ರಾ ಸ್ಥಳವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದೆ ಈ ಯಕ್ಷಗಾನ ತಂಡಗಳು. ಕಟೀಲು ಮೇಳವು ಒಟ್ಟು ಆರು ತಂಡಗಳನ್ನು ಹೊಂದಿದ್ದು ಪ್ರಸ್ತುತ ನಾಲ್ಕು ನೂರಕ್ಕೂ ಅಧಿಕ ರಂಗಕರ್ಮಿಗಳು, ಕಲಾವಿದರು ಹಾಗೂ ಇತರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ.

ಇತಿಹಾಸ

ಬದಲಾಯಿಸಿ

ಸುಮಾರು ೧೫೦ ವರ್ಷಗಳ ಇತಿಹಾಸವಿರುವ ಕಟೀಲು ಮೇಳ ೧೯೭೫ ನೇ ಇಸವಿಯಲಿ ವ್ಯವಸ್ಥಿತ ಎರಡನೇ ಮೇಳವನ್ನು ಪ್ರಾರಂಭಿಸಿತು. ೧೯೮೨ ರಲ್ಲಿ ಮೂರನೇ ಮೇಳ, ೧೯೯೩ ರಲ್ಲಿ ನಾಲ್ಕನೇ ಮೇಳ, ೨೦೧೦ರಲ್ಲಿ ಐದನೇ ಮೇಳ, ೨೦೧೩ ರಲ್ಲಿ ಆರನೇ ಮೇಳ ಪ್ರಾರಂಭಿಸಿತ್ತು. ಕಟೀಲು ಮೇಳಕ್ಕೆ ದಿನವೊಂದಕ್ಕೆ ೪-೫ ಹರಕೆಯಾಟಗಳ ಬುಕ್ಕಿಂಗ್ ನಡೆಯುತ್ತದೆ. ಕಟೀಲು ಮೇಳದಿಂದ ನಡೆಯುವ ಯಕ್ಷಗಾನ ಪ್ರದರ್ಶನದ ಉದ್ದೇಶ ಧನ ಸಂಪಾದನೆಯಾಗಿರದೆ, ಕರಾವಳಿ ಭಾಗದ ಆರಾಧನಾ ಕಲೆಯಾಗಿ ಪೌರಾಣಿಕ ಕಥಾನಕಗಳು ಪ್ರದರ್ಶನಗೊಳ್ಳುತ್ತವೆ.

ನಂಬಿಕೆ

ಬದಲಾಯಿಸಿ

ಸರ್ವಾಭೀಷ್ಟ ಸಿದ್ಧಿಗಾಗಿ ಆಟ ಆಡಿಸುವ ಭಕ್ತರು ಇದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಹಣ ಸಂಗ್ರಹಿಸಿ ಆಟ ಆಡಿಸುವ ಭಕ್ತರೂ ಇದ್ದಾರೆ. ಅಷ್ಟೆ ಅಲ್ಲದೆ ಇ೦ತಿಸ್ಟು ಆಟಗಳನ್ನು ನೋಡುತ್ತೆವೆ ಎ೦ದು ಹರಕೆ ಹೆಳುವ ಭಕ್ತರೂ ಇದ್ದಾರೆ. ಮುಸ್ಲಿಂ, ಕ್ರೈಸ್ತರೂ ಹರಿಕೆ ಆಟ ಆಡಿಸುತ್ತಾರೆ. ಕಟೀಲು ಮೇಳಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯುವಾಗ ಸಾಕ್ಷಾತ್ ದೇವಿಯೇ ರಂಗಸ್ಥಳದಲ್ಲಿ ಸನ್ನಿಹಿತಳಾಗುತ್ತಾಳೆಂಬ ನಂಬಿಕೆಯಿದೆ.

ತಿರುಗಾಟದ ಆರಂಭ

ಬದಲಾಯಿಸಿ

ಸಾಮಾನ್ಯವಾಗಿ ಕಾರ್ತಿಕ ದೀಪೋತ್ಸವದ ನಂತರ ಮೇಳದ ಪ್ರದರ್ಶನಗಳು ಪ್ರಾರಂಭವಾಗುತ್ತದೆ.

ಮೇಳದ ಬೆಲೆಬಾಳುವ ಸೊತ್ತುಗಳು

ಬದಲಾಯಿಸಿ

ಮೇಳದಲ್ಲಿ ಒಟ್ಟು 20ಕ್ಕೂ ಹೆಚ್ಚು ಚಿನ್ನದ, ಬೆಳ್ಳಿಯ ಕಿರೀಟಗಳು ಇವೆ. ಬೆಳ್ಳಿಯ ತೊಟ್ಟಿಲು 6 ಪ್ರತಿಮೇಳದಲ್ಲೂ ಬೆಳ್ಳಿಯ ಶಂಖ ಚಕ್ರ ಗದಾ ಬಾಣ ಬಿಲ್ಲುಗಳು ಇವೆ. ಮಳೆಗಾಲ ಪೂರ್ತಿ ವೇಷಭೂಷಣಗಳ ಪರಿಷ್ಕರಣೆಯ ಕೆಲಸವು ದೇವಳದ ವತಿಯಿಂದ ದೇವಸ್ಥಾನದಲ್ಲಿ ನಡೆಯುತ್ತದೆ.

ಪ್ರದರ್ಶನ ಕಾಣುವ ಪ್ರಸಂಗಗಳು

ಬದಲಾಯಿಸಿ

ಶ್ರೀ ದೇವಿ ಮಹಾತ್ಮೆ ಶ್ರೀ ದೇವೀ ಲಲಿತೋಪಾಖ್ಯಾನ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ತ್ರಿಜನ್ಮ ಮೋಕ್ಷ ದಶಾವತಾರ


[]

ಉಲ್ಲೇಖಗಳು

ಬದಲಾಯಿಸಿ