ಶ್ರೀ. ನಾರಾಯಣ ಗುರು

ಭಾರತೀಯ ಸಾಮಾಜಿಕ ಸುಧಾರಕ

ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ 'ನಾರಾಯಣ ಗುರು,' ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, " ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು," ಎಂಬ ಸತ್ಯವಾಕ್ಯವನ್ನು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆಂದು.[][][][]

ನಾರಾಯಣ ಗುರು
ನಾರಾಯಣ ಗುರು 1967 stamp of India

೧೨ನೆ ಶತಮಾನದ ಬಸವಣ್ಣನ ಕಾಲದ ಕ್ರೌರ್ಯಕ್ಕಿಂತ ಇಮ್ಮಡಿ, ಮುಮ್ಮಡಿಯಾದ ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡಾದ ಕೇರಳದಲ್ಲಿ ೧೯ನೆ ಶತಮಾನದ ಅಂತ್ಯ ಮತ್ತು ೨೦ನೆ ಶತಮಾನದ ಆರಂಭದಲ್ಲಿ ನಡೆದಿತ್ತು. ಆಗಿನ ಕೇರಳದಲ್ಲಿ ಇಡೀ ಭಾರತದಲ್ಲಿಯೇ ಕಂಡರಿಯದ ಅಮಾನುಷ ವರ್ತನೆ ನಂಬೂದರಿ ಎಂಬ ಬ್ರಾಹ್ಮಣ ವರ್ಗದಿಂದ ಶೂದ್ರರ ಮೇಲೆ, ಅಸ್ಪ್ರಷ್ಯರ ಮೇಲೆ ಮತ್ತು ಸ್ತ್ರೀಯರ ಮೇಲೆ ನಡೆದಿತ್ತು. ಅಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ವಿಷ ವೃಕ್ಷವು ಇಡೀ ಶೂದ್ರ ಜನಸಮೂಹವನ್ನು ಉಸಿರುಗಟ್ಟಿ ಸಾಯುಸಿತ್ತಿರುವ ಘೋರ ಕ್ರೌರ್ಯದ ತುರಿಯಾವಸ್ಥೆಯಲ್ಲಿ `ಈಳವ' ಎಂಬ ಅಸ್ಪ್ರಶ್ಯ ಜಾತಿಯಲ್ಲಿ ನಾರಾಯಣ ಗುರು ಎಂಬ ಪವಿತ್ರಾತ್ಮನ ಜನ್ಮವಾಯಿತು. ಇಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ಕೊಳಕಿನಿಂದ ಸಮಾಜ ಕೊಳೆಯುತ್ತಿರುವಾಗ ನಾರಾಯಣ ಗುರುಗಳು ಅವತಾರ ಪುರುಷರಂತೆ, ಪ್ರವಾದಿಯಂತೆ ಜನ್ಮ ತಾಳುತ್ತಾರೆ. ಅನ್ಯ ಧರ್ಮಗಳನ್ನು ಖಂಡಿಸಿ ಅದ್ವೈತ ಮತ ಸ್ಥಾಪನಾಚಾರ್ಯರೆಂದು ಪ್ರಸಿದ್ಧಿ ಪಡೆದ ಶ್ರೀ ಶಂಕರಾಚಾರಾಚಾರ್ಯರು ತಮ್ಮ ಅದ್ವೈತ ಸಿದ್ಧಾಂತಕ್ಕೆ ಓರ್ವ ಹರಿಜನ ಗುರು ಎಂದು ಸ್ವೀಕರಿಸಿಕೊಂಡರೆ, ಕಾಲಕ್ರಮದಲ್ಲಿ ಅವರ ಹುಟ್ಟು ನಾಡಾದ ಕೇರಳವು ಜಾತಿಭೇದ ಮತ್ತು ಅಸ್ಪ್ರಶ್ಯತೆಯ ಹುಚ್ಚರ ಸಂತೆಯಾಯಿತು. ಅಂತಹ ಗೊಂದಲಮಯ ವಾತಾವರಣದಲ್ಲಿ ನಾರಾಯಣ ಗುರುಗಳ ಜನನವಾಯಿತು. ಈಳವ ಜಾತಿ ಕೇರಳದ ಅಸ್ಪ್ರಶ್ಯ ಜಾತಿಗಳಲ್ಲಿ ಒಂದಾಗಿದ್ದಿತು. ಕೇರಳದಲ್ಲಿ ಆ ಜಾತಿಯ ಜನ ೩೦% ಇದ್ದರು. ನಾರಾಯಣ ಗುರುಗಳು ಕೇವಲ ಈಳವ ಜಾತಿಯವರನ್ನಲ್ಲದೆ, ಸಮಸ್ತ ಅಸ್ಪ್ರಶ್ಯ, ನಿಮ್ನ ವರ್ಗದವರನ್ನು ಎಲ್ಲ ಸ್ತರಗಳಲ್ಲಿ ಮೇಲೆ ತರಲು ಮಾಡಿದ ಅವರ ಪ್ರಯತ್ನವನ್ನು ಅವರ ಬದುಕಿನ ಮಹತ್ಸಾಧನೆ ಎನ್ನಬಹುದು. ನಾರಾಯಣ ಗುರುಗಳನ್ನು ಒಂದು ನಿರ್ದಿಷ್ಟ ಜಾತಿಯ ಗುರುವೆಂದು ಭಾವಿಸುವುದು ಸಂಕುಚಿತ ಮನೋಭಾವದ ಪ್ರತೀಕವೆನಿಸುವುದು.

ಪ್ರಾಚೀನ ಮೌಲ್ಯಾದರ್ಶಗಳನ್ನು, ಸತ್ಯವನ್ನು, ಅರಸಿಕೊಂಡು ಹೋಗಿ ಮನೆಯನ್ನು ತ್ಯಜಿಸಿ, ತಪಸ್ಸು ಮಾಡುತ್ತ ಗುಡ್ಡ, ಗಿರಿ, ಬೆಟ್ಟ, ಕಂದರ, ದಟ್ಟಾರಣ್ಯ, ಗುಹೆ, ಪರ್ಣಶಾಲೆಗಳಲ್ಲಿದ್ದು ಅನೇಕ ವರ್ಷ ಸಾಧನೆ ಮಾಡಿದರು.

ಗುರುಗಳ ಸಮಾಧಿಯ ಬಳಿಕ ಥಿಯೋಸೊಫಿಕಲ್ ಸೊಸೈಟಿಯ ಅಧ್ಯಕ್ಷೆಯಾಗಿದ್ದ ಎನಿಬೆಸಂಟರು ಪತ್ರಿಕೆಯಲ್ಲಿ ಹೀಗೆ ಬರೆದಿದ್ದರು:` ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು. ಇತ್ತೀಚಿಗಿನ ಶತಮಾನದಲ್ಲಿ ಇಂತಹ ಗೌರವ, ಮಾನ್ಯತೆಗಳನ್ನು ಪಡೆದ ಸ್ವಾಮಿಗಳು ಯಾರೂ ಇರಲಿಲ್ಲ. ಯೋಗದಲ್ಲಿ ಅವರು ಪತಂಜಲಿ, ಜ್ನಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲಿ ಏಸು ಗಳೆಲ್ಲರಂತೆ ಇದ್ದರು. ಅವರೊಬ್ಬ ದೇವರ ಅವತಾರವೇ ಆಗಿದ್ದರು. ಭವಿಷ್ಯದಲ್ಲಿ ಅವರನ್ನು ದೇವರೆಂದು ಆರಾಧಿಸುವರು.

ನಾರಾಯಣರ ಜನನ, ಬಾಲ್ಯ ಮತ್ತು ಸಮಾಜ ಸೇವೆ

ಬದಲಾಯಿಸಿ

ಕೇರಳದ ತೀಯಾ ಸಮಾಜ ದವರಾದ ಮದನ್ ಆಸನ್ ಹಾಗೂ ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ಜನಿಸಿದರು. ಆಗ ಕೇರಳದಲ್ಲಿ ಅನೇಕ ಜಾತಿಪಂಥಗಳಿದ್ದವು. ಮೇಲ್ಜಾತಿ, ಕೆಳಜಾತಿ, ಅಸ್ಪೃಷ್ಯತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಎಲ್ಲೆಡೆ ಜನರ ಮನಸ್ಸನ್ನು ಹರಿದು ತಿನ್ನುತ್ತಿದ್ದವು. ಆಗ ರು ಪಣತೊಟ್ಟು ತಮ್ಮ ಜೀವನದ ಧ್ಯೇಯವೆಂದು ಶಪಥಮಾಡಿದರು. ದೇವರ ಹೆಸರಿನಲ್ಲಿ ಪ್ರಾಣಿಹತ್ಯೆ ಅವರಿಗೆ ಸರಿಬೀಳಲಿಲ್ಲ. ಹೀಗೆ ಸಮಾಜದ ವಿರೋಧಾಭಾಸಗಳಿಗೆ ಮುಟ್ಟುಗೋಲು ಹಾಕಲು ಅವರು ತೆಗೆದುಕೊಂಡ ಕ್ರಮಗಳು, ಆಂದೋಳನೆಗಳು ಅನನ್ಯ. ಕೆಳವರ್ಗದಲ್ಲಿ ಜನಿಸಿದ ಜನರಿಗೆ ದೇವಸ್ಥಾನಗಳಲ್ಲಿ ಅನುಮತಿಕೊಡಲು ಅವರು ಬೇಡಲಿಲ್ಲ. ಅಥವಾ ಹಿಂಸಾಚಾರದ ಚಳುವಳಿಗಳನ್ನೂ ನಡೆಸದೆ, ತಾವೇ ದೇವಾಲಯಗಳನ್ನು ಸ್ಥಾಪಿಸುವುದರಮೂಲಕ ಒಂದು ಹೊಸ-ಅನನ್ಯ-ಆಲೋಚನಾಕ್ರಮವನ್ನು ಹುಟ್ಟುಹಾಕಿದರು. ಕೇರಳದಾದ್ಯಂತವೂ ಸುಮಾರು ೬೦ ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿದರು.[][]

ಶಿವಗಿರಿಯಿಂದ ೪೫ ಕಿಲೋಮೀಟರ್ ಉತ್ತರಕ್ಕೆ ತಿರುವನಂತಪುರದಿಂದ ೧೨ ಕಿಲೋಮೀಟರ್ ದೂರದ ಉತ್ತರಪೂರ್ವ ಸೀಮೆಯಲ್ಲಿರುವ ಚೆಂಬಳಾಂತಿ ಗ್ರಾಮದಲ್ಲಿ ನಾರಾಯಣ ಗುರುಗಳು ಜನಿಸಿದರು. ಅವರು ಹುಟ್ಟಿ ಬೆಳೆದ ಮನೆಯನ್ನು ಇಂದಿಗೂ ಸುರಕ್ಷಿತವಾಗಿ ಕಾಯ್ದಿರಿಸಲಾಗಿದೆ. ನಾರಾಯಣ ಗುರು ಹುಟ್ಟಿದ್ದು 18-8-1854ರಂದು ಅವರ ಹೆತ್ತವರ ಕುರಿತಾಗಿ ಗುರು ನಟರಾಜರು ಈ ಕೆಳಗಿನ ವಿವರಗಳನ್ನು ಕೊಡುತ್ತಾರೆ: `` ಆ ಹಳ್ಳಿಯಲ್ಲಿ ೧೮೫೫ರ ಸುಮಾರಿಗೆ ಒಂದು ಕೃಷಿ ಕುಟುಂಬ ಬಾಳಿತ್ತು. ತಂದೆ ಮಾದನ್ ಆಶನ್. ಆಶನ್ ಕೇವಲ ಕೃಷಿಕರಷ್ಟೇ ಆಗಿರಲಿಲ್ಲ. ಅವರು ಖಗೋಲಶಾಸ್ತ್ರ, ಆಯುರ್ವೇದದಲ್ಲಿ ತಜ್ನರಾಗಿದ್ದರು. ಆಶನ್ ಎಂದರೆ ಆಚಾರ್ಯ ಎಂಬರ್ಥ. ವಾರಕ್ಕೊಮ್ಮೆ ಅವರ ಮನೆಯ ಚಾವಡಿಯಲ್ಲಿ ಹಳ್ಳಿಯ ಜನ ಮಾದನ್ ಆಶನ್ ಅವರ ರಾಮಾಯಣ, ಮಹಾಭಾರತ ಪ್ರವಚನವನ್ನು ಕೇಳಲು ನೆರೆಯುತ್ತಿದ್ದರು. ನಾರಾಯಣ ಗುರುವನ್ನು ಮುದ್ದಿನಿಂದ `ನಾಣು' ಎಂದು ಕರೆಯುತ್ತಿದ್ದರು.ಕೇರಳದಲ್ಲಿ ಸಾಂಪ್ರದಾಯಿಕ ಕಲಿಕೆ ಎಂದರೆ ಸಂಸ್ಕ್ರತವನ್ನು ಕಲಿಯುವುದಾಗಿತ್ತು. ನಾರಾಯಣ ಗುರು ಸುಲಭವಾಗಿ ಸಂಸ್ಕ್ರತ ಭಾಷೆ ಮತ್ತು ವ್ಯಾಕರಣವನ್ನು ಕಲಿತ. `ಸಿದ್ಧ ರೂಪಮ್',`ಬಾಲಪ್ರಭೋದಮ್', ಮತ್ತು ಅಮರ ಕೋಶವನ್ನು ಕಲಿತ. ನಾಣುವು ಸಂಸ್ಕ್ರತ ಮತ್ತು ಮಲೆಯಾಳಮ್ ಮಾತ್ರ ಚೆನ್ನಾಗಿ ಕಲಿತಿದ್ದನಲ್ಲದೆ ತಮಿಳನ್ನೂ ಚೆನ್ನಾಗಿ ಕಲಿತನು. ಸ್ವಪ್ರಯತ್ನದಿಂದ ತಮಿಳಿನ ಶ್ರೇಷ್ಠ ಗ್ರಂಥಗಳಾದ `ತೋಲ್ಕಾಪ್ಪಿಯನ್', `ನನ್ನುಲ್', `ಸಿಲಪ್ಪದಿಕಾರಮ್', `ಮನಿಮೇಕಲಮ್', `ತಿರುಕ್ಕುರಲ್', ಮತ್ತು `ತಿರುವಾಚಕಮ್', ಅಭ್ಯಸಿಸಿದನು.

ಮದುವೆ ಮತ್ತು ಸಂಸಾರ ತ್ಯಾಗ

ಬದಲಾಯಿಸಿ

ವಿಚಿತ್ರ ಎಂದರೆ ನಾಣು ಸ್ವಾಮಿಯ ಮನಸ್ಸನ್ನು ಅರಿಯದ ಸಂಬಂಧಿಕರು ಅವನಿಗೆ ಮದುವೆಯಾಗುವಂತೆ ಒತ್ತಾಯಿಸಿದರು. ನಾಣು ರಾಮಕೃಷ್ಣ ಪರಮಹಂಸರು ಶಾರದಾ ದೇವಿಯನ್ನು ಮದುವೆಯಾದಂತೆ ಮದುವೆಯಾದ್ರು. ಆ ಕಾಲದಲ್ಲಿ ವರನ ಸಹೋದರಿಯು ವಧುವಿಗೆ `ಪುತವಾ',ಅಂದ್ರೆ ವಧುವಿನ ಬಟ್ಟೆಗಳು, ಕೊಡುವ ಸಂಪ್ರದಾಯವಿತ್ತು. ನಾರಾಯಣ ಗುರುಗಳು ಮದುವೆಗೆ ತಾನೇ ಸ್ವತಃ ಹೋಗಲಿಲ್ಲ. ಮದುವೆ ೧೮೮೨ರ್ಲ್ಲಿ ಆಯಿತು. ಸಂಸಾರ್ ಬಂಧನವನ್ನು ಹರಿದುಕೊಂಡು ಹೋಗಲು ಮದುವೆ ಒಂದು ಅಡ್ಡಿಯಾಗಲಿಲ್ಲ. ಗುರು ಹೇಳಿದರು:``ನಾವು ಈ ಜಗತ್ತಿಗೆ ಯಾವುದೋ ಒಂದು ಉದ್ದೇಶಕ್ಕೆ ಬಂದಿದ್ದೇವೆ. ನನಗೆ ನನ್ನ ಕೆಲಸ ಮಾಡಲಿದೆ. ನಿನಗೆ ನಿನ್ನ ಕೆಲಸ ನಿರ್ವಹಿಸಲಿದೆ. ನನ್ನ ದಾರಿಯಲ್ಲಿ ನಾನು ಹೋಗುತ್ತೇನೆ. ನಿನ್ನ ದಾರಿಯಲ್ಲಿ ನೀನು ಹೋಗು. ಎಂದು ಹೆಂಡತಿಗೆ ಹೇಳಿ, ತಮ್ಮ ಹಳ್ಳಿಯನ್ನೂ, ತನ್ನ ಜನರನ್ನೂ ತ್ಯಜಿಸಿದರು.

ಚಟ್ಟಾಂಬಿ ಸ್ವಾಮಿಕಲ್ ಮತ್ತು ದೈಕೋಡ್ ಅಯ್ಯಾವು

ಬದಲಾಯಿಸಿ

ಶ್ರೀ ನಾರಾಯಣ ಗುರುಗಳು ಕುಂಜನ್ ಪಿಳ್ಳೈ ಚಟ್ಟಾಂಬಿ ಸ್ವಾಮಿಕಲ್ ಅವರನ್ನು ಭೇಟಿಯಾದರು. ಅವರನ್ನು ಷಣ್ಮುಖದಾಸ್ ಎಂದೂ ಕರೆಯುತ್ತಿದ್ದರು. ಅವರಿಬ್ಬರೂ ವೇದಾಂತ ವಿಷಯವನ್ನು ಚರ್ಚಿಸಿದರು. ಅವರು ಚಟ್ಟಾಂಬಿಯವರನ್ನು ತನ್ನ ಗುರುಗಳನ್ನಾಗಿ ಸ್ವೀಕರಿಸಿದರು. ಚಟ್ಟಾಂಬಿ ಸ್ವಾಮಿಕಲ್ ನಾರಾಯಣ ಗುರುಗಳನ್ನು ದೈಕೋಡ್ ಅಯ್ಯಾಯುವಿಗೆ ಪರಿಚಯಿಸಿದರು.

ಅಯ್ಯಾವು ಸುಬ್ರಹ್ಮಣ್ಯ ದೇವರ ಆರಾಧಕರಾಗಿದ್ದರು. ಮತ್ತು ಯೋಗ ಗುರುಗಳಗಿದ್ದರು. ದೈಕೋಡ್ ನಾಣು ಆಶನ್ ರಿಗೆ ಏಕಾಂತ ಪ್ರದೇಶಕ್ಕೆ ಕೊಂಡೊಯ್ದು ಯೋಗವನ್ನು ಕಲಿಸಿದರು. ಈ ಯೋಗ ತರಬೇತಿಯಿಂದ ಪ್ರೇರೇಪಿತರಾಗಿ ನಗರ್ ಕೊಯಿಲ್ ಹತ್ತಿರದ ಮರತು ಮಲೈ ಬೆಟ್ಟವೊಂದರಲ್ಲಿ ಏಕಾಂತಕ್ಕಾಗಿ, ಧ್ಯಾನಕ್ಕಾಗಿ ಆಶ್ರಯ ಪಡೆದರು. ಅವರು ಗುಹೆಯೊಂದರಲ್ಲಿ ಆಳವಾದ ಧ್ಯಾನದಲ್ಲಿ ತೊಡಗಿದರು. ಕಾಡು ಪ್ರಾಣಿಗಳು ಅವರ ಮಿತ್ರರಾಗಿದ್ದವು. ಅವರು ಗಿಡ ಮೂಲಿಕೆಗಳ ಎಲೆಗಳನ್ನು ತಿಂದು ನೀರು ಕುಡಿದು ಬದುಕಿದರು. ಮರುತಮಲೈಯಲ್ಲಿ ಅವರಿಗೆ ಜ್ನಾನೋದಯವಾಯಿತು. ನಾರಾಯಣ ಗುರುಗಳಿಗೆ ಶಂಕರರ ವೇದಾಂತವು ಹೊಸತನದಿಂದ ಕೂಡಿದ್ದಂತೆ ಎನಿಸಿತು. ಮನುಷ್ಯನ ಜೀವನಕ್ಕೆ ಅವಶ್ಯವಾದ ನ್ಯಾಯ, ಮತ್ತು ಸಮಾನತೆಯ ಕುರಿತಾಗಿ ಅದ್ವೈತ ತತ್ವ ಇದೆ ಎಂದು ಕಂಡುಕೊಂಡರು. ಮನುಷ್ಯ ಮನುಷ್ಯರ ನಡುವೆ ಸಂಬಂಧಗಳ ಕುರಿತು ಸಮಾನತೆ, ನ್ಯಾಯ, ಸ್ವಾತಂತ್ರ್ಯವನ್ನು ಬಯಸುವ ಅದ್ವೈತ ನಾರಾಯಣ ಗುರುಗಳದಾಗಿತ್ತು. ಶ್ರೀ ನಾರಾಯಣ ಗುರುಗಳ ಅಧ್ಯಾತ್ಮಿಕ ಅನುಭಾವವು ಅವರ ರಚನೆಗಳಾದ `ಆತ್ಮೋಪದೇಶ ಶತಕಂ', ದಲ್ಲಿ ವ್ಯಕ್ತವಾಗಿದೆ.

ಸುಮಾರು ೬೦ ದೇವಾಲಯಗಳ ಸ್ಥಾಪನೆ

ಬದಲಾಯಿಸಿ

ನಾರಾಯಣ ಗುರುಗಳು ಅರುವಿಪ್ಪುರಂನಲ್ಲಿ ಆಳವಾಗಿ ಧ್ಯಾನಿಸುತ್ತ ಸ್ವಲ್ಪ ದಿನಗಳನ್ನು ಕಳೆದರು. ಇಲ್ಲಿ ಅವರು ಬೃಹತ್ ಸಮಾಜ ಕ್ರಾಂತಿಯ ಬೀಜವನ್ನು ಬಿತ್ತಿದರು. ಅವ್ರು ಬದುಕುತ್ತಿರುವ ಸಮಾಜವು ಜಾತಿ ಎಂಬ ರಾಕ್ಷಸನ ಬಲೆಯಲ್ಲಿ ಸಿಕ್ಕಿ ಬಿದ್ದಿತ್ತು. ಕೆಳ ಜಾತಿಯವರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ. ಅವರಿಗೆ ಅಲ್ಲಿ ಪೂಜೆ ಮಾಡುವ ಹಕ್ಕನ್ನು ನಿರಾಕರಿಸಲಾಗಿತ್ತು. ಶಿವರಾತ್ರಿಯ ದಿನ ಶ್ರೀ ನಾರಾಯಣ ಗುರುಗಳು ಅರುವಿಪ್ಪುರಂನಲ್ಲಿ ಎಲ್ಲ ವಿಜೃಂಭಣೆಯೊಂದಿಗೆ ಶಿವಮೂರ್ತಿಯನ್ನು ಪ್ರತಿಷ್ಟಾಪಿಸಿದರು.

ಮೇಲ್ಜಾತಿ ದೇವಸ್ಥಾನಗಳಿಗೆ ನಿರಾಕರಿಸಲ್ಪಟ್ಟ ಪ್ರವೇಶವು ಅರುವಿಪ್ಪುರಂನಲ್ಲಿ ಎಲ್ಲರಿಗೂ ಮುಕ್ತವಾಗಿ ತೆರೆಯಲ್ಪಟ್ಟಿತು. ಈ ಧಾರ್ಮಿಕ ಕ್ರಿಯೆಯು ಹಿಂದೂ ಸಮಾಜದಲ್ಲಿ ಧರ್ಮ ಪುನರ್ ಪ್ರತಿಷ್ಟಾಪನೆಗೆ ದಾರಿ ಮಾಡಿಕೊಟ್ಟಿತು. ನಂಬೂದರಿ ಬ್ರಾಹ್ಮಣರೊಬ್ಬರು `ನಿಮಗೆ ಮೂರ್ತಿ ಪ್ರತಿಷ್ಟಾಪನೆ ಮಾಡಲು ಯಾವ ಹಕ್ಕಿದೆ?' ಎಂದು ಕೇಳಿದಾಗ ನಾರಾಯಣ ಗುರುಗಳು ತಮಾಷೆಯಿಂದ ಉತ್ತರಿಸಿದರು: `ನಾನು ಕೇವಲ ಈಳವ ಶಿವನನ್ನು ಪ್ರತಿಷ್ಟಾಪಿಸಿದ್ದೇನೆ.' ಮತ್ತು ಈ ಧಾರ್ಮಿಕ ಕ್ರಿಯೆಯ ಸಮರ್ಥನೆಯನ್ನು ನೀಡಿದರು.ಇಡೀ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಈಗಾಗ್ಲೇ ಕೇವಲ ಬ್ರಾಹ್ಮಣರಿಗೆ ಮಾತ್ರ ಮೀಸಲಾದ ವಿಶೇಷ ಹಕ್ಕನ್ನು ಕೆಳ ಜಾತಿಯ ಸ್ವಾಮಿ ಪಡೆದುಕೊಂಡರು. ನಿಜವಾದ ಯೋಗಿಗೆ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡುವ ಅಧಿಕಾರ ಎಂದು ನಾರಾಯಣ ಗುರುಗಳು ಸ್ಥಾಪಿಸಿದರು. ಗುರುಗಳು ಹೇಳುತ್ತಾರೆ:``ಯಾವುದೇ ಧರ್ಮವಾಗಲಿ ಮನುಷ್ಯನನ್ನು ಒಳ್ಳೆಯವನನ್ನಾಗಿ ಮಾಡುವುದೇ ಧರ್ಮ. ಶಿವ ದೇವಸ್ಥಾನವನ್ನು ಸ್ಥಾಪಿಸಿದ ಮೇಲೆ `ಈ ದೇವಸ್ಥಾನವನ್ನು ಯಾವುದೇ ಜಾತಿ, ಮತ್, ಧರ್ಮದವರು, ಸ್ಮಾಜದ ಎಲ್ಲ ವರ್ಗದವರು ಲಾಭ ಪಡೆಯುವಂತಹ ಆದರ್ಶ ಸ್ಥಳವಾಗಬೇಕು.' ಎಂದು ಘೋಷಿಸಿದರು. ಇದು ಮನುಷ್ಯನ ಕಲ್ಯಾಣಕ್ಕಾಗಿ ಮತ್ತು ಬಿಡುಗಡೆಗಾಗಿ ಇರುವ ಅದ್ವೈತ ಧಾರ್ಮಿಕ ಮಾರ್ಗ. ಅರುವಿಪ್ಪುರಂನಲ್ಲಿ ಕೆಲವೇ ದಿನಗಳಲ್ಲಿ ಒಂದು ಆಶ್ರಮವಾಯಿತು. ೧೮೯೯ರಲ್ಲಿ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳಲು ಒಂದು ಸೊಸೈಟಿಯನ್ನು ಸ್ಥಾಪಿಸಲಾಯಿತು. ಆ ಮೇಲೆ ಅದು `ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಮ್' ಎಂಬ ಸಂಸ್ಥೆಯಾಗಿ ಪುನರ್ರಚನೆಗೊಂಡಿತು. ಅದನ್ನು ಸಂಕ್ಷಿಪ್ತವಾಗಿ ಎಸ್. ಎನ್. ಡಿ. ಪಿ. ಎಂದು ಕರೆಯಲಾಗುತ್ತದೆ.

ಹಾಗೆ ಅವರು ಶುರುಮಾಡಿದ ಮೊಟ್ಟಮೊದಲ, ಲಿಂಗ ಪ್ರತಿಷ್ಠಾಪನೆ ೧೮೮೮ ರಲ್ಲಿ, ಅರವೀಪುರಂ ಎಂಬ ಪ್ರದೇಶದಲ್ಲಿ ನಡೆಯಿತು. ೧೯೨೧ ರಲ್ಲಿ ಮತ್ತೊಂದು ಹೊಸ ವಿಧಾನವನ್ನು ಜನರ ಸಮ್ಮುಖದಲ್ಲಿ ತಂದರು. ಸಮಾಜದ ವರ್ಗಗಳನ್ನೆಲ್ಲಾ ಒಂದೆಡೆ ಸೇರಿಸಿ, 'ಮಿಶ್ರ ಭೋಜನ,' ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದ ವೀರಸಂತನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಸಹೋದರ ಸಮ್ಮೇಳನ ದ ಏರ್ಪಾಡಿನ ಮೂಲಕ ಸಾಧ್ಯವಾಯಿತು. ಅಸ್ಪೃಷ್ಯರನ್ನು ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಂಘಟಿಸಿ, ಪರೋಪಕಾರವೇ ತಮ್ಮ ಜೀವನದ ಧ್ಯೇಯವೆಂದು ಸಾರಿದರು. ಕೆಲವರು ಮತಾಂತರ, ಇದಕ್ಕೆ ಸಮಾಧಾನವೆನ್ನುವ ಮಾತಾಡಿದರು. ಆದರೆ, ನಾರಾಯಣರು, ಇದಕ್ಕೆ ಒಪ್ಪಲಿಲ್ಲ. ಆಲ್ವಾಯಿಯೆಂಬಲ್ಲಿ , ಫೆಬ್ರವರಿ, ೧೯೨೪ ರಲ್ಲಿ, ೨ ದಿನಗಳ ಸರ್ವಧರ್ಮಗಳ ಸಮ್ಮೇಳನ ವನ್ನು ಆಯೋಜಿಸಿದರು. ನಾರಾಯಣಗುರುಗಳಿಗೆ ಬ್ರಹ್ಮ ವಿದ್ಯಾಲಯವೆಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ, ಸರ್ವಧರ್ಮಗಳ ಬಗ್ಗೆ, ಅಧ್ಯಯನ ಮಾಡುವ ಒಂದು ಅಭಿಯಾನವನ್ನು ಪ್ರಾರಂಭಿಸಬೇಕೆಂಬ ಮಹದಾಶೆಯಿತ್ತು. ಆದರೆ, ಅದು, ಅವರ ಜೀವಿತದಲ್ಲಿ ಸಾಕಾರಗೊಳ್ಳಲಿಲ್ಲ. ಗುರುಗಳ ಮರಣದ ಬಳಿಕ, ಅವರ ಹಿಂಬಾಲಕರು ಆ ಕನಸನ್ನು ಸಾಕಾರಗೊಳಿಸಿದರು. ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸಮಾಡಿ ಅಪಾರ ಅನುಭವಗಳನ್ನು ಹೊಂದಿ ಹೋದೆಡೆಯಲ್ಲೆಲ್ಲಾ ವಿಶ್ವ ಮಾನವತ್ವವನ್ನು ಬೋಧಿಸಿದರು. ಸನ್ಯಾಸಿಗಳು, ಮಹರ್ಷಿಗಳ ಜೊತೆಗೆ ಸಂಪರ್ಕವನ್ನಿಟ್ಟುಕೊಂಡಿದ್ದರು. ಅವರು ಹೇಳುತ್ತಿದ್ದ ವಾಕ್ಯಗಳು ಇಂದಿಗೂ ಅತ್ಯಂತ ಅರ್ಥಗರ್ಭಿತವಾಗಿವೆ. " ದೇವರ ಸೇವೆಮಾಡಿದರೆ, ತನ್ನದೊಬ್ಬನದೇ ಏಳಿಗೆ, ಉದ್ಧಾರವಾಗಬಹುದು ; ಆದರೆ, ದೇಶ ಸೇವೆಮಾಡಿದರೆ, ಹಲವರ ಕಲ್ಯಾಣ ನಿಶ್ಚಯ" ಆದ್ದರಿಂದ ದೇಶಸೇವೆ, ಮತ್ತು ಈಶಸೇವೆಗಳ ಸಮನ್ವಯವೇ ನಮ್ಮ ಗುರಿಯಾಗಿರಬೇಕೆಂದು ತಮ್ಮ ಜೀವನದುದ್ದಕ್ಕೂ ಒತ್ತಿ-ಒತ್ತಿ ಹೇಳುತ್ತಿದ್ದರು.[][]

ಶಿವಗಿರಿ ಮತ್ತು ನಾರಾಯಣ ಗುರುಗಳು

ಬದಲಾಯಿಸಿ

ವರ್ಕಲ ಬೆಟ್ಟಗಳನ್ನು `ಶಿವಗಿರಿ' ಎಂದು ಕರೆಯಲಾಗುತ್ತದೆ. ವರ್ಕಲ ತ್ರಿವೇಂದ್ರಂನಿಂದ ಉತ್ತರಕ್ಕೆ ೨೦ ಮೈಲುಗಳ್ಷ್ಟು ದೂರವಿರುವ ಕರಾವಳಿ ತೀರದ ಪಟ್ಟಣವಾಗಿದೆ. ಷಿವಗಿರಿಯು ಶಿವ ಮತ್ತು ಶಕ್ತಿಗೆ ಅಂದರೆ ಶಾರದಾ ದೇವಿಗೆ ಅರ್ಪಿತವಾಗಿರುವ ಪವಿತ್ರ ಕ್ಷೇತ್ರ. ಗುರುಗಳು ದಕ್ಷಿಣ ಕಾಶಿಯಾದ ವರ್ಕಲಕ್ಕೆ ಬಂದು ೧೯೦೪ರಲ್ಲಿ ಧಾರ್ಮಿಕ ಮಠವೊಂದನ್ನು ಸ್ಥಾಪಿಸಿದರು. ಎಸ್. ಎನ್. ಡಿ. ಪಿ. ಸ್ಥಾಪಿಸಿದ ೧೮ ವರ್ಷಗಳ ನಂತರ ೧೯೧೨ರಲ್ಲಿ ಶಿವಗಿರಿಯಲ್ಲಿ ಶಾರದಾ ದೇವಸ್ಥಾನವನ್ನು ಸ್ಥಾಪಿಸಿದರು. ಗುರುಗಳಿಗೆ ಎಲ್ಲ ಸಮುದಾಯದಿಂದ ಶಿಷ್ಯರಿದ್ದರು. ಹರಿಜನರೂ ಕೂಡಾ ಗೀತೆಯ ಶ್ಲೋಕಗಳನ್ನು ಪಠಿಸಬಹುದಿತ್ತು. ಉಪನಿಷತ್ತುಗಳನ್ನು ಪಠಿಸಬಹುದಿತ್ತು; ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬಹುದಿತ್ತು. ಗುರುಗಳ ದೃಷ್ಟಿಯಲ್ಲಿ ಬಡವರ, ದುರ್ಬಲರ ಸೇವೆಯೇ ದೇವರ ಸೇವೆಯಾಗಿತ್ತು. ಎಸ್. ಎನ್. ಡಿ. ಪಿ. ಯನ್ನು ಬಸವಣ್ಣನ ಅನುಭವ ಮಟಪಕ್ಕೆ ಹೋಲಿಸಬಹುದಾಗಿದೆ.

ಗುರುಗಳು ಮತ್ತು ಅದ್ವೈತ ಆಶ್ರಮ

ಬದಲಾಯಿಸಿ

ಗುರುಗಳು ಶಿವಗಿರಿಯನ್ನು ಸ್ಥಾಪಿಸಿದ ಮೇಲೆ ಅಲವೇಯಿಗೆ ವಾಸ್ತವ್ಯವನ್ನು ಬದಲಾಯಿಸಿ ಅದನ್ನು ಪ್ರಧಾನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದರು. ಅವರ ಶ್ರೇಷ್ಠ ಗುರುಗಳಾದ ಶಂಕರಾಚಾರ್ಯರ ನೆನಪಿಗೆ ಅಲವೇಯಿಯಲ್ಲಿ ೧೯೧೩ರ್ಲ್ಲಿ ಅದ್ವೈತ ಆಶ್ರಮವನ್ನು ಸ್ಥಾಪಿಸಿದರು. ಅಲವೇಯಿ ಅದ್ವೈತ ಆಶ್ರಮವು ಸಂಸ್ಕೃತ ಮತ್ತು ಅದ್ವೈತ ತತ್ವ ಶಾಸ್ತ್ರವನ್ನು ಪ್ರಚಾರಪಡಿಸುವ ಮತ್ತು ಅಭ್ಯಸಿಸುವ ಕೇಂದ್ರವಾಯಿತು. ಗುರುಗಳು ೧೯೧೨ರಷ್ಟೊತ್ತಿಗೆ ತಮ್ಮ ಮುಖ್ಯ ಕಚೇರಿಯನ್ನು ಬದಲಾಯಿಸಿದರು. ಅವರು ಇನ್ನೂ ಮುಂದೆ ಉತ್ತರಕ್ಕೆ ಅಲೆದಾಡಿದರು. ಹಲವಾರು ತಾಸುಗಳ ಪ್ರವಾಸದ ನಂತರ ಕೇಪ್ ಕೊಮೋರಿನಿಂದ ಮಂಗಳೂರವರೆಗೆ ಅವರು ಎಲ್ಲವರಿಂದ ಗುರು ಎಂದು ಗೌರವಿಸಲ್ಪಟ್ಟರು. ಅವರು ಅಲವೇಯಿಯನ್ನು ತಮ್ಮ ವಾಸ ಸ್ಥಾನವನ್ನಾಗಿ ಮಾಡಿಕೊಡರು. ನದೀ ತೀರದಲ್ಲಿ ಒಣಗಿದ ತಾಳೆ ಗರಿಗಳಿಂದ ಮಾಡಿದ ಸರಳ ಮಾಡಿನಡಿಯಲ್ಲಿ ಅವರು ಪುನ್ಃ ಧ್ಯಾನದಲ್ಲಿ ಮಗ್ನರಾದರು.

ನಾರಾಯಣ ಗುರುಗಳು ಮತ್ತು ಸಾಮಾಜಿಕ ಸುಧಾರಣೆಗಳು

ಬದಲಾಯಿಸಿ

ಅಧ್ಯಾತ್ಮಿಕ ಸಾಧನೆಯಾದ ಬ್ರಹ್ಮನ್- ಆತ್ಮನ್ ಸಾಕ್ಷಾತ್ಕಾರದ ನಂತರವೂ ಗುರುಗಳು ಮಾನವ ಜನಾಂಗದ ಉನ್ನತಿಗಾಗಿ ಸಮಾಜ ಸೇವೆಯನ್ನು ಕೈಗೆತ್ತಿಕೊಂಡರು. ಎಸ್. ಎನ್. ಡಿ. ಪಿ. ಯ ಯೋಗಂ ಸಂಸ್ಥೆಯು ಶಿಕ್ಷಣ ಮತ್ತು ಗುರುಗಳ ಸಿದ್ಧಾಂತವಾದ ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಇವುಗಳ ಮೂಲಕ ಮಾನವ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯುವುದು, ಉತ್ತಮಿಸುವುದು, ವಿಶೇಷವಾಗಿ ಮೂಲ್ಭೂತಮಾನವ ಹಕ್ಕುಗಳ ಸಂರಕ್ಷಣೆಗಾಗಿ ಅಸ್ಪ್ರಶ್ಯತಾ ನಿರ್ಮೂಲ ಮಾಡುವುದು ಈ ಮುಂತಾದ ಗುರಿಗಳನ್ನು ಇಟ್ಟುಕೊಂಡಿತ್ತ್ರು. ಮೊದಲನೆಯದಾಗಿ ತನ್ನು ಆಧ್ಯಾತ್ಮಿಕ ಜ್ನಾನವನ್ನು ಶ್ರೀಮಂತಗೊಳಿಸಿಕೊಳ್ಖುವುದು ಮತ್ತು ಅದನ್ನು ಜನರ ಕಲ್ಯಾಣಭಿವೃದ್ಧಿಗಾಗಿ ಬಳಸಿಕೊಳ್ಳುವುದು. ಎರಡನೆಯ ಹೆಜ್ಜೆಯೆಂದರೆ ಜನರೊಂದಿಗೆ ವ್ಯಕ್ತಿಗತ ಸಂಪರ್ಕವನ್ನು ಹೊಂದಿರುವುದು. ನೊಂದ ಜನರ ಹೃದಯಗಳನ್ನು ಸಾಂತ್ವನದ ಮಾತುಗ್ಳಿಂದ ತಣಿಸುವುದು, ಅವರ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು. ಕೊನೆಯದಾಗಿ ಅವರ ಚಟುವಟಿಕೆಗಳು: ಎಸ್. ಎನ್. ಡಿ. ಪಿ. ಯೋಗಮ್ ಮತ್ತು ಅಧ್ಯಾತ್ಮಿಕ ಅರಸುವಿಕೆಯಲ್ಲಿ ತೊಡಗಿರುವ ಶಿಷ್ಯರ ಆಮಂತ್ರಣಕ್ಕೆ ಸೀಮಿತಗೊಂಡವು. ೧೮೮೪ ರಿಂದ ೧೯೦೪ರವರೆಗೆ ಗುರುಗಳು ಅರುವಿಪ್ಪುರಮ್‌ನಲ್ಲಿ ವಾಸ್ತವ್ಯ ಹೂಡಿದರು. ಈ ಅವಧಿಯಲ್ಲಿಯೇ ಎಸ್. ಎನ್. ಡಿ. ಪಿ. ಯೋಗಮ್ ಸ್ಥಾಪನೆಯಾಯಿತು. ಯೋಗಮ್ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತುಳಿತಕ್ಲೂಳಗಾದ ಜನರ ಶಕ್ತಿಶಾಲಿ ದನಿಯಾಯಿತು. ಗುರುಗಳು ದುರ್ಬಲ ವರ್ಗದವರ ಏಳ್ಗೆಗೆ ಅದರಲ್ಲೂ ಹರಿಜನರ ಏಳ್ಘೆಗಾಗಿ ಸಮಾಜ ಸುಧಾರಕರಿಗೆ ಸರಿಯಾದ ನಿರ್ದೇಶನಗಳನ್ನು ನೀಡಿ ಉನ್ನತ ಆದರ್ಶಗಳನ್ನು ಪ್ರಚಾರ ಮಾಡಲು ಪ್ರೇರಣೆ ನೀಡಿದರು. ಬೋಡಕರಿಗೆ ಶಿಕ್ಷಣ, ಧರ್ಮ, ನೀತಿ ತತ್ವಗಳು ನೀತಿ, ನಿಯಮಗಳು, ಪದ್ಧತಿಗಳು ಉದ್ದಿಮೆ ಇವುಗಳ ಬಗ್ಗೆ ಒತ್ತು ನೀಡುವಂತೆ ಸೂಚಿಸಲಾಯಿತು. ಗುರುಗಳ ಸ್ಂದೇಶ ಹೀಗಿದೆ:` ಶಿಕ್ಷಣ ಪ್ಡೆಯಿರಿ; ನೀವು ಸ್ವತಂತ್ರರಾಗುತ್ತೀರಿ. ಸಂಘಟಿತರಾಗಿರಿ; ನೀವು ಬಲಿಷ್ಟರಾಗುತ್ತೀರಿ. ಔದ್ಯೋಗಿಕವಾಗಿಉದ್ದಿಮೆಗಳನ್ನು ಸ್ಥಾಪಿಸಿ; ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಗುರುಗಳು ತಾವು ಉದ್ದೇಶಿಸಿರುವ ಸಮಾಜ ಸುಧಾರಣೆ ಜನರಿಗೆ ತಲುಪುವಂತೆ `ವಿವೇಕೋದಯಮ್' ಎಂಬ ಮಾಸಿಕ ಪತ್ರಿಕೆಯನ್ನು ಹೊರತರುವಂತೆ ಸೂಚಿಸಿದರು. ೧೬ನೆ ಒಕ್ಟೋಬರ್ ೧೯೦೫ ರಂದು ಪರವುರ್ ನ್ ಸಭಯಲ್ಲಿ ಅಧ್ಯಕ್ಷತೆ ವಹಿಸಿ ಮದುವೆಯ ಸಮಾರಂಭಕ್ಕೆ ಕೆಲ್ವು ಹೊಸ ನಡೆಗಳನ್ನು ಪರಿಚಯಿಸಿದರು. ಮತ್ತು `ತಾಳಿಕೆಟ್ಟು', `ತಿರ್ಂಡು ಕಲ್ಯಾಣಮ್', ಅಂತಹ ಕೆಟ್ಟ ಸಾಂಪ್ರ್ದಾಯಗಳನ್ನು ನಿರ್ಮೂಲನೆ ಮಾಡುವಂತೆ ಕರೆ ಕೊಟ್ಟರು.

ತಾಳಿಕೆಟ್ಟು ಅಥವಾ ಮಿನ್ನು ಕೆಟ್ಟು ಅಥವಾ ಕೆಟ್ಟು ಕಲ್ಯಾಣಮ್ ಇದು ಹಿಂದುಳಿದ ವರ್ಗದವರಲ್ಲಿ ದುಂದು ವೆಚ್ಚಕ್ಕೆ ದಾರಿ ಮಾಡಿಕೊಡುವ ಅರ್ಥವಿಲ್ಲದ ಕೆಟ್ಟ ಸಂಪ್ರದಾಯ. ಇಂಥ ಹಲವಾರು ಸಂಪ್ರದಾಯಗಳ್ಲ್ಲಿ ತಾಳಿ ಕಟ್ಟುವ ಆಚರಣೆಯೂ ಒಂದು. ಒಂದು ಹೆಣ್ಣು ಮಗುವಿಗೆ ಸುಮಾರು ೫ ವರ್ಷ ತುಂಬಿದಾಗ ಪ್ರಾಯಕ್ಕೆ ಬರುವ ಮೊದಲೆ ಮಾಡುವ ಅಣಕು ಮದುವೆ ಇದಾಗಿದ್ದು, ಹುಡುಗಿಯ ಕೊರಳಿಗೆ ಒಬ್ಬ ಹುಡುಗ, ಕೆಲವೊಮ್ಮೆ ಯಾರಾದರೂ ಯುವಕನೊಬ್ಬ ತಾಳಿ ಕಟ್ಟುತ್ತಾನೆ. ಭವಿಷ್ಯದಲ್ಲಿ ಮದುವೆ ಮಾಡುತ್ತೇವೆ ಎಂಬುದರ ಸಂಕೇತವಾದ ಈ ಅಣಕು ಮದುವೆಗೆ ಯ್ವುದೇ ಕಾನೂನಿನ ಆಧಾರವಿಲ್ಲ. ಹೀಗೆ ತಾಳಿ ಕಟ್ಟಿದವನೇ ಮದುವೆಯಾಗುತ್ತಾನೆ ಎಂಬ ನಿಯಮವೇನೂ ಇಲ್ಲ. ನಿಜವಾದ ಮದುವೆಗೆ ಮಾಡುವಂತೆ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ.

ತಾಳಿ ಕಟ್ಟಿದ ನಂತರ ಹುಡುಗ ಅವನ ಪಾಡಿಗೆ ತನ್ನ ಜೊತೆಗಾರರೊಂದಿಗೆ ಹೋಗುತ್ತಾನೆ. ಆ ಹುಡುಗನಿಗೆ ಹುಡುಗಿಯ ಕಡೆಯವರು ಬೇಕಾದಷ್ಟು ಹಣ್, ಹೊಸ ಬಟ್ಟೆ, ತೆಂಗಿನ ಕಾಯಿಗಳನ್ನು ಕೊಡುತ್ತಾರೆ. ಹಬ್ಬದ ವಾತಾವರಣ, ಭೂಇ ಭೋಜನ, ಉಡುಗೊರೆ ಮುಂತಾದ ಕಾರ್ಯಕ್ರಮಗಳೆಲ್ಲ ವೈಭವದಿಂದಲೆ ನಡೆಯುತ್ತವೆ. ಹುಡುಗಿ ತನ್ನ ತವರು ಮನೆಗೆ ಹೋದಾಗ ತಾಳಿಯನ್ನು ತೆಗೆಯುತ್ತಾರೆ. ಮುಂದೆ ಋತುಮತಿಯಾದ ಬಳಿಕ ವರನನ್ನು ಹುಡುಕಿ ಮೊದ್ಲು ತಾಳಿ ಕಟ್ಟಿದವನೂ ಆಗಬಹುದು, ವ್ಯವಸ್ಥಿತವಾದ ನಿಜ ಮದುವೆಯನ್ನು ಏರ್ಪಡಿಸುತ್ತಾರೆ. ಈ ಅರ್ಥಹೀನ, ಲಜ್ಜಾಸ್ಪದ ಆಚರಣೆಗಳನ್ನು ಗುರುಗಳು ವಿರೋಧಿಸಿದರು. ಶ್ರೀಮ್ಂತ ಮತ್ತು ಸಂಪ್ರದಾಯಸ್ಥರು ಇದು ಪ್ರತಿಷ್ಟೆಯ ಪ್ರಶ್ನೆ, ನಿಲ್ಲಿಸಿದರೆ ಸಮಾಜಕ್ಕೆ ಕೇಡುಂಟಾಗುತ್ತದೆ ಎಂಬ ವಾದವನ್ನು ಮುಂದಿಟ್ಟರೂ, ಕೇಳ್ದೇ ಗುರುಗಳು ಹೋರಾಟವನ್ನು ಮುಂದುವರಿಸಿದರು. ಎಸ್. ಎನ್. ಡಿ. ಪಿ. ಯೋಗಂ ನ ಮುಖವಾಣಿಯಾದ `ವಿವೇಕೋದಯಂ' ಪತ್ರಿಕೆಯ ಎಲ್ಲ ಸಂಚಿಕೆಗಳಲ್ಲೂ ಈ ಆಚರಣೆಯಿಂದಾಗುವ ಕೆಡುಕುಗಳನ್ನು ಪ್ರಕಟಿಸುತ್ತಲೇ ಬಂದರು. ೧೯೦೬ರಲ್ಲಿ ಚೇರ್ತಲ ತಾಲೂಕಿನ ದೊಡ್ಡ ಶ್ರೀಮಂತನೂ, ಗುರುಗಳ ಭಕ್ತನೂ ಆಗಿದ್ದ ಕೊಚ್ಚು ರಾಮನ್ ವೈದ್ಯರ್ ಎಂಬವರ ಕುಟುಂಬದವರಲ್ಲಿ ಓರ್ವ ಹುಡುಗಿಗೆ ತಾಳಿ ಕಟ್ಟುವ ಸಮಾರಂಭದ ಬಗ್ಗೆ ತಿಳಿದ ಗುರುಗಳು ಬಧಕಗಳ ಬಗ್ಗೆ ವವರಿಸಿ, ಈಗ ಇದನ್ನು ತ್ಯಜಿಸುವುದರಿಂದ ನಮ್ಮವರೆ ಮನಸ್ಸಿಗೆ ನೋವಾದರೂ ಮುಂದಿನ ಪೀಳಿಗೆ ಇದರ ಫಲವನ್ನು ಸಂತೋಷದಿಂದ ಅನುಭವಿಸಲಿ ಎಂದು ಪತ್ರ ಬರೆದರು. ಪತ್ರವನ್ನೋದಿದ ಕೊಚ್ಚು ರಾಮನ್ ವೈದ್ಯರು ತಾನು ಏರ್ಪಡಿಸಲು ನಿರ್ಧರಿಸಿದ ಸಮಾರಂಭವನ್ನು ರದ್ದುಪ್ಡಿಸಿದರು. ಹೀಗೆ ಒಬ್ಬ ವ್ಯಕ್ತಿಯ ಶಾಂತವಾದ ಕೆಲವು ಹಿತೋಪದೇಶದಿಂದ ಸಮಾಜದಲ್ಲಿ ಇಂತಹ ಪರಿವರ್ತನೆ ಯಾಗುವುದಾದರೆ, ಈ ಮಹಾಮಹಿಮನ ಅಸಾಮಾನ್ಯ ಶಕ್ತಿಯ ಅರಿವು ಯಾರಿಗಾದರೂ ಆಗದಿರಲು ಸಾಧ್ಯವೇ? ಅಂತೆಯೇ ಅಳಿಯ ಸಂತಾನ ಪದ್ಧತಿಯ ಬಾಧಕಗಳನ್ನು ವಿವರಿಸಿ ಅದನ್ನು ತಡೆಹಿಡಿದ ಖ್ಯಾತಿ ಇವರದು. ಸೀಮಂತ ಕಾರ್ಯಕ್ರಮದಲ್ಲಿ ಆಗುವ ದುಂದು ವೆಚ್ಚಕ್ಕೆ ತಡೆ ಹ್ಶಾಕಿದರು. ವಿವಾಹ ವಿಚ್ಛೇದನ ಹಾಗೂ ಪುನರ್ರವಿವಾಹ ಅನಿವಾರ್ಯವಾದಲ್ಲಿ ಮಾಡಿಕೊಳ್ಳಬಹುದು ಎಂದರು. ಬಹು ಪತ್ನಿತ್ವ ಹಾಗೂ ಬಹು ಪತಿತ್ವ ಸಮಾಜಕ್ಕೆ ಹಿತವಲ್ಲ ಎಂದು ಅದಕ್ಕೂ ತಡೆಹಾಕಿದರು. ಸರಳ ವಿವಾಹಕ್ಕೆ ಒತ್ತು ನೀಡಿದರು. ಅಂತ್ಯ ಕ್ರಿಯೆಯಲ್ಲಿ ಮಾಡುವ ದುಂದು ವೆಚ್ಚಕ್ಕೆ ವಿರೋಧ ವ್ಯಕ್ತ ಪ್ಡಿಸಿದರು. ಹೊಸ ದೇವಸ್ಥಾನಗಳ ನಿರ್ಮಾಣವನ್ನು ವಿರೋಧಿಸಿದರು.

ಮಹಿಳಾ ಶೋಷಣೆಯ ದುಷ್ಟ ಪದ್ಧತಿಯನ್ನು ನಿಲ್ಲಿಸಿದ ಒಂದು ಸನ್ನಿವೇಶ

ಬದಲಾಯಿಸಿ

ಈಳವ ಮತ್ತಿತರ ನಿಮ್ನ ವರ್ಗದ ಸ್ತ್ರೀಯರು ಎದೆ ಭಾಗವನ್ನು ಕುಪ್ಪಸದಿಂದ ಮುಚ್ಚದೆ, ಉಚ್ಚ ಜಾತಿಯವರು ಎದುರಾದಾಗ, ಸೆರಗು ಸರಿಸಿ, ಅವರಿಗೆ ಗೌರವ ತೋರಿಸುವ ಕೆಟ್ಟ ಸಂಪ್ರದಾಯವಿತ್ತು. ಇದೊಂದು ಹೆಣ್ಣಿನ ಶೋಷಣೆಯ ನಿಕೃಷ್ಟ ಪದ್ಧತಿಯೆಂದು, ಗುರುಗಳು ಆ ಕ್ರಮವನ್ನು ನಿಲ್ಲಿಸಲು ಅಪ್ಪಣೆ ಕೊಟ್ಟಿದ್ದರು. ಹೀಗೆ ಗುರುಗಳು ತಾವು ಬೋಡಿಸಿದ ವಿಷಯಗಳನ್ನೆಲ್ಲಾ ಸ್ವತಹ್ ಆಚರಿಸುತ್ತಿದ್ದರು. ತಾವು ಪ್ರತಿಷ್ಟಾಪಿಸಿದ ದೇವಸ್ಥಾನಗಳ ಬಾಗಿಲು ಮಾನವರೆಲ್ಲರಿಗೂ ತೆರೆದಿರಬೇಕೆಂಬುದೇ ಅವರ ಇಚ್ಛೆಯಾಗಿರುತ್ತಿತ್ತು. ಅಂತರ್ಧರ್ಮೀಯ ವಿವಾಹಕ್ಕೂ ಗುರುಗಳು ಪ್ರೋತ್ಸಾಹಿಸಿದ್ದರು.

ನಾರಾಯಣ ಗುರುಗಳ 'ಜನ್ಮ-ದಿನ,' ದಬಗ್ಗೆ, ಅವರ ಭಕ್ತಾದಿಗಳ ಭಿನ್ನಾಭಿಪ್ರಾಯಗಳು

ಬದಲಾಯಿಸಿ

ಮಲಯಾಳಂ ಪಂಚಾಂಗದ ಪ್ರಕಾರ, ಶೀ ನಾರಾಯಣ ಗುರುಗಳು, 'ಕೊಲ್ಲಂ ವರ್ಷ', ೧೦೩೦, ಸಿಂಹಮಾಸ, ಶತಭಿಷಾ ನಕ್ಷತ್ರದಂದು ಜನಿಸಿದರೆಂಬುದನ್ನು, ಬಹುತೇಕ ಜನ ಒಪ್ಪುತ್ತಾರೆ. ಈ ಪವಿತ್ರದಿನವನ್ನು ಇಂಗ್ಲೀಷ್ ಕ್ಯಾಲೆಂಡರಿಗೆ, ಪರಿವರ್ತಿಸಿದಾಗ ಆದಿನವನ್ನು ೨೬-೦೮-೧೯೫೪ ಎಂದು ಗುರುತಿಸುವ ಮೂಲಕ ವ್ಯತ್ಯಾಸ ಕಾಣಿಸುತ್ತದೆ. ಕೆಲವರು, ೨೬-೦೮-೧೯೫೪ ಎಂದು ಹೇಳುವುದರ ಮೂಲಕ, ೧೮೫೪ ರಲ್ಲಿ ಜನಿಸಿದರೆಂದು ಖಾತ್ರಿಮಾಡುತ್ತಾರೆ. ೧೮-೦೯-೧೯೫೪ ಎಂದು ಬಹುಶಃ ಅವರ 'ನಾಮಕರಣದ ದಿನ,' ವನ್ನು ಹೇಳುತ್ತಾರೆ. ಮಂಗಳೂರಿನ ಪತ್ರಿಯೊಂದರಲ್ಲಿ ೨೮-೦೮-೧೯೫೫ ಎಂದು ಬರೆಯಲ್ಪಟ್ಟಿದೆ. ನಾರಾಯಣ ಗುರುಗಳ ೨೮-೦೮-೧೯೫೫ 'ಇಲ್ ಲ್ಯು ಸ್ಟ್ರೇಟೆಡ್ ವೀಕ್ಲಿ,' ಪತ್ರಿಕೆ ದಾಖಲಿಸಿದೆ. ಮಲಯಾಳಂ ಭಾಶೆಯ ಹಿರಿಯಪಂಡಿತರೂಬ್ಬರ ಪ್ರಕಾರ, ೧೮೫೬ ಸರಿಯೆಂದು ಹೇಳಿದ್ದಾರೆ. ಹೀಗೆ ೧೯೫೪, ೧೯೫೫, ೧೯೫೬ ಎಂಬ ಮೂರು ಉಲ್ಲೇಖಗಳಿವೆ. ಗುರುಗಳು ಬದುಕಿದ್ದಾಗಲೇ ಅವರ ೬೦ ನೇ ವರ್ಷವನ್ನು ೧೯೧೬ ರಲ್ಲಿ, ಆಚರಿಸಿದ್ದರು. ಆದ್ದರಿಂದ ಅದು ೧೯೫೬ ರೇ ಇರಬಹುದೆನ್ನುವುದು ಸಾಮಾನ್ಯ ಪ್ರಜ್ಞೆಯ ಸಂಕೇತವಾಗಿದೆ.[]

ಶ್ರೀ ನಾರಾಯಣ ಗುರು (ಸುಮಾರು 1856 - 20 ಸೆಪ್ಟೆಂಬರ್ 1928) ಎಂದು ಕರೆಯಲ್ಪಡುವ ನಾರಾಯಣ ಗುರು, ಭಾರತದ ಸಾಮಾಜಿಕ ಸುಧಾರಣಾಧಿಕಾರಿಯಾಗಿದ್ದರು. ನಾರಾಯಣನು ಅರುಪುಪುರಾಮ್ಗೆ ಭೇಟಿ ಕೊಟ್ಟನು, ಅಲ್ಲಿ ಅವನು ಮತ್ತು ಅವರ ಅನುಯಾಯಿಗಳು 1888 ರಲ್ಲಿ ಶಿವನಿಗೆ ಅರ್ಪಿಸಿದ ದೇವಾಲಯವನ್ನು ನಿರ್ಮಿಸಿದರು,
ನವೆಂಬರ್ 1922 ರಲ್ಲಿ ಶಿವಗಿರಿಯ ನಂತರದ ಆಶ್ರಮದಲ್ಲಿ ರವೀಂದ್ರನಾಥ್ ಟ್ಯಾಗೋರ್ ನಾರಾಯಣ ಗುರುವನ್ನು ಭೇಟಿಯಾದರು. ನಂತರ ನಾರಾಯಣ ಗುರುವಿಗೆ, "ಸ್ವಾಮಿ ನಾರಾಯಣ ಗುರುಕ್ಕಿಂತ ಆಧ್ಯಾತ್ಮಿಕವಾಗಿ ಹೆಚ್ಚಿನವನಾಗಿದ್ದೇನೆ ಅಥವಾ ಆಧ್ಯಾತ್ಮಿಕ ಸಾಧನೆಯೊಂದಿಗೆ ಅವನೊಂದಿಗೆ ಸಮಾನವಾಗಿರುವ ಒಬ್ಬ ವ್ಯಕ್ತಿಯನ್ನು ನಾನು ಎಂದಿಗೂ ಕಾಣಲಿಲ್ಲ".
(1922 ರಲ್ಲಿ ರವೀಂದ್ರನಾಥ್ ಟ್ಯಾಗೋರ್ ನಾರಾಯಣ ಗುರುವನ್ನು ಭೇಟಿಯಾದರು. ದಿ20 ಸೆಪ್ಟೆಂಬರ್ 1928 ಸ್ವರ್ಗಸ್ಥರಾದರು, ಎಂದ ಮೇಲೆ ಅದರ ನಂತರ ಶ್ರೀ ನಾರಾಯಣ ಗುರು ೧೮-೦೯-೧೯೫೪ ಅಥವಾ ೨೬-೦೮-೧೯೫೪ರಲ್ಲಿ ಹುಟ್ಟಿದರು ಎನ್ನುವುದು ಅರ್ಥವಿಲ್ಲದ ಹೇಳಿಕೆ)
[೧೦]

ಉಲ್ಲೇಖಗಳು

ಬದಲಾಯಿಸಿ
  1. Pullapilly, Cyriac K. (1976). "The Izhavas of Kerala and their Historic Struggle for Acceptance in the Hindu Society". In Smith, Bardwell L. (ed.). Religion and social conflict in South Asia. International studies in sociology and social anthropology. Vol. 22. BRILL. pp. 24–46. ISBN 978-90-04-04510-1.
  2. Pullapilly, Cyriac K. (1976). "The Izhavas of Kerala and Their Historic Struggle for Acceptance in the Hindu Society". In Smith, Bardwell L. (ed.). Religion and Social Conflict in South Asia. Leiden: BRILL. pp. 35–36. ISBN 9789004045101.
  3. Ramachandran, V. K. (1997). "On Kerala's Development Achievements". In Drèze, Jean; Sen, Amartya (eds.). Indian development: selected regional perspectives. Delhi and New York: Oxford University Press. p. 309. ISBN 0-19-829204-X.
  4. Younger, Paul (2002). Playing host to deity : festival religion in the South Indian tradition. New York: Oxford University Press. p. 127. ISBN 0-19-514044-3.
  5. "Elavumthitta - the birthplace of Sivagiri pilgrimage". The Hindu. 4 January 2013. Retrieved 19 October 2014.
  6. Bhattacharya, Sabyasachi (31 December 2011). "The Other Tagore". Frontline. No. Volume 28 - Issue 27. Retrieved 9 February 2015. {{cite news}}: |issue= has extra text (help)
  7. "Stamps 1947-2000". Postage Stamps. India Post. Archived from the original on 21 ಜನವರಿ 2021. Retrieved 7 June 2015.
  8. "All registered stamps issued by Sri Lanka: LK032.09". Universal Postal Union. Retrieved 12 May 2015.
  9. "Kerala Gazette" (PDF). General Administration (Coordination) Department, Government of Kerala. Archived from the original (PDF) on 6 ಫೆಬ್ರವರಿ 2015. Retrieved 9 February 2015.
  10. http://www.frontline.in/static/html/fl2827/stories/20120113282702200.htm