ಶ್ರೀಮತಿ ಯಶೋದಮ್ಮ
ಶ್ರೀಮತಿ ಯಶೋದಮ್ಮ ಸಿದ್ಬಟ್ಟೆಯವರು ಮಲೆನಾಡಿನ ಮಗಳಾಗಿ ಹುಟ್ಟಿ,ಬಯಲು ಸೀಮೆಯ ಸೂಸೆಯಾಗಿ ಬಂದವರು.ಇವರು ಬೀದರಿನ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭಾಷಾ ಸಹಾಯಕರಾಗಿ ಸೇವೆ ಸಲ್ಲಿಸಿ,ಈಗ ನಿವೃತ್ತರಾಗಿರುತ್ತಾರೆ..ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮಾಡಿ ಬಿ.ಎಡ್ ಮುಗಿಸಿರುತ್ತಾರೆ. ಇವರ ಅತ್ಯುತ್ತಮ ಶೈಕ್ಷಣಿಯ ಸೇವೆಯನ್ನು ಗಮನಿಸಿದ ಕರ್ನಾಟಕ ಸರಕಾರ "ರಾಷ್ಟ್ರಪ್ರಶಸ್ತಿ"ಯನ್ನಿತ್ತು ಸನ್ಮಾನಿಸಿದೆ.ಇವರು ಬೀದರ್ ಜಿಲ್ಲೆಗೆ "ರಅಷ್ಟ್ರಪ್ರಶಸ್ತಿ"ಯನ್ನು ತಂದು ಪ್ರಥಮ ಮಹಿಳೆಯಾಗಿರುವುದು ಹೆಮ್ಮೆಯ ಸಂಗತಿಯಗಿದೆ. ಯಶೋದಮ್ಮ ಸೆದ್ಬಟ್ಟೆಯವರು ಮೊದಲಿನಿಂದಲೂ ಕಥೆ, ಕವನ ,ಹರಟೆಗಳನ್ನು ಬರೆಯುತ್ತಾ ಬಂದಿರುತ್ತಾರೆ. ಇವರು ಅತ್ತುತ್ತಮವಾಗಿ ಯಾಗಿದ್ದಾರೆ. ನೂರಾರು ವಿಷಯಗಳ ಮೇಲೆ ಉಪನ್ನಾಯ ನೀಡಿ ಬೀದರ ಜನತಿಯ ಮೆಚ್ಚುಇಗೆಗೆ ಪಾತ್ರರಾಗಿದ್ದಾರೆ. ಇವರು ಮೊದಲಿನಿಂದಲೂ ಕನ್ನಡಪರ ಕೆಲಸಕ್ಕಾಗಿ ಸದಾ ಸ್ಪಂದಿಸುವ ಅಪರೂಪದ ಮಹಿಳೆಯಾಗಿದ್ದಾರೆ. ಇವರು ಒಂದು ಹೆಣ್ಣನ್ನು ಕೇಂದ್ರವಾಗಿರಿಸಿಕೊಂಡು ಬರೆದ "ಮಂಗಳಾ","ವಿಶ್ವಮೇಘ" ಸಾಮಾಜಿಕ ಕಾದಂಬರಿಗಳು ಎಲ್ಲರ ಮೆಚ್ಚುಗೆ ಗಳಿಸಿವೆ. "ಪ್ರಗತಿಯ ಪಥದಲ್ಲಿ ಭಾರತೀಯ ನಾರಿ" ಎಂಬ ಲೇಖನಘಳ ಕೃತಿಯನ್ನು ಪ್ರಕಟಿಸಿರುತ್ತಾರೆ. ಇತರ ಹಲವಾರು ಲೇಖನಗಳು ಬೇರೆ ಬೇರೆ ಸಂಘ ಸಂಸ್ಥೆಗಳ ಪುಸ್ತಕಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ. ಗುಲ್ಬರ್ಗ ಆಕಾಶವಾಣಿ ಕೇಮದ್ರದಿಂದ ಇವರ ಹಲವಾರು ಚಿಂತನೆಗಳು, ರೇಡಿಯೋ ಭಾಷಣಗಳು ಪ್ರಸಾರಗೊಂಡಿವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಅವಿರತ ಕನ್ನಡ ಸೇವೆಯನ್ನು ಗಮನಿಸಿ, ಸುಕ್ಷೇತ್ರ ಹಾರಕೂಡದಲ್ಲಿ ನಡೆದ, ಬೀದರ್ ಜಿಲ್ಲೆಯ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಿ ಗೌರವ ಸಲ್ಲಿಸಿರುತ್ತದೆ. ಜಿಲ್ಲೆಯ ಪ್ರಥಮ ಮಹಿಳಾ ಅಧ್ಯಕ್ಷರಾಗಿರುತ್ತಾರೆ. ಕನ್ನಡ ಸಾಹಿತ್ಯ ಅಕಾಡೆಮಿಯವರು ರಾಯಚೂರು,ಗುಲ್ಬರ್ಗ, ಬೀದರ್ ನಲ್ಲಿ ನಡೆಸಿದ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ಇತ್ತೀಚೆಗೆ ಅಮೆರಿಕ ದೇಶದ ಪ್ಲೋರಿಡಾ ರಾಜ್ಯದ ಆರಲಂಡೊದಲ್ಲಿ ನಡೆದ "ಅಕ್ಕ ವಿಶ್ವಕನ್ನಡ ಸಮ್ಮೇಳನ"ದಲ್ಲಿ ಭಾಗವಹಿಸಿ, ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿವೆ.